ದಸರಾ ವೇಳೆ ನಾಡಬಂದೂಕಿನಲ್ಲಿ ಗುಂಡು ಹಾರಿಸಿದ್ದ ನಂಜೇಗೌಡ : FIR ದಾಖಲು

Kannadaprabha News   | Asianet News
Published : Oct 17, 2021, 10:06 AM ISTUpdated : Oct 17, 2021, 10:15 AM IST
ದಸರಾ ವೇಳೆ ನಾಡಬಂದೂಕಿನಲ್ಲಿ ಗುಂಡು ಹಾರಿಸಿದ್ದ ನಂಜೇಗೌಡ : FIR ದಾಖಲು

ಸಾರಾಂಶ

ನಾಡ ಬಂದೂಕಿನಲ್ಲಿ ಶಾಸಕರು ಗುಂಡು ಹಾರಿಸಿದ್ದ ಪ್ರಕರಣ ಮಾಲೂರು ಶಾಸಕ‌ ಕೆ.ವೈ ನಂಜೇಗೌಡ ಸೇರಿದಂತೆ ಮತ್ತಿಬ್ಬರ ವಿರುದ್ದ FIR ದಾಖಲು

ಕೋಲಾರ (ಆ.17): ನಾಡ ಬಂದೂಕಿನಲ್ಲಿ (Gun) ಶಾಸಕರು (MLA) ಗುಂಡು ಹಾರಿಸಿದ್ದ (Firing) ಪ್ರಕರಣಕ್ಕೆ ಮಾಲೂರು ಶಾಸಕ‌ ಕೆ.ವೈ ನಂಜೇಗೌಡ (KY Nanjegowda) ಸೇರಿದಂತೆ ಮತ್ತಿಬ್ಬರ ವಿರುದ್ದ FIR ದಾಖಲು ಮಾಡಲಾಗಿದೆ. 

ಪರವಾನಿಗೆ ಇಲ್ಲದ ನಾಡ ಬಂದೂಕಿನಲ್ಲಿ ಗುಂಡು ಹಾರಿಸಿದ್ದ‌ ಆರೋಪದಡಿ ಶಾಸಕ‌ ನಂಜೇಗೌಡ ವಿರುದ್ಧ FIR ದಾಖಲು ಮಾಡಲಾಗಿದೆ. ಮಾಲೂರು (Maluru) ತಾಲೂಕಿನ ಕೊಮ್ಮನಹಳ್ಳಿ‌ ಗ್ರಾಮದಲ್ಲಿ ದಸರಾ (Dasara) ವಿಜಯದಶಮಿಯಂದು (Vijayadashami) ಗಾಳಿಯಲ್ಲಿ ಗುಂಡು ಹಾರಿಸಿ‌ದ್ದರು. 

ಗಾಳಿಯಲ್ಲಿ ಗುಂಡು ಹಾರಿಸಿದ ಕಾಂಗ್ರೆಸ್‌ ಶಾಸಕ..!

ವಿಜಯದಶಮಿ (Vijayadashami) ಹಬ್ಬದ ಪ್ರಯುಕ್ತ 4 ಬಾರಿ ಗಾಳಿಯಲ್ಲಿ ಗುಂಡು ಹಾರಿಸಿದ್ದ ನಂಜೇಗೌಡರ ನಡೆ ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಇದೀಗ ಮಾಸ್ತಿ ಪೋಲೀಸ್ ಠಾಣೆಯಲ್ಲಿ‌‌ (Police Station) ಸಶಸ್ತ್ರ ಮೀಸಲು‌ ಕಾಯ್ದೆಯನ್ವಯ ಪ್ರಕರಣ (Case) ದಾಖಲು ಮಾಡಲಾಗಿದೆ.

ನಂಜೇಗೌಡ ಸಹೋದರ ಪರವಾನಿಗೆ ಹೊಂದಿದ್ದ ನಾಡ ಬಂದೂಕನ್ನು ಉಪಯೋಗಿಸಿಕೊಂಡು ಗುಂಡು ಹಾರಿಸಿದ್ದಾರೆ. ಘಟನಾ ಸಂಬಂಧ ಬಂದೂಕು ಬೇರೊಬ್ಬರಿಗೆ ನೀಡಿದ್ದಕ್ಕೆ  ಈರಪ್ಪ ಹಾಗೂ ಸಂಬಂಧಿ ರಾಮಮೂರ್ತಿ ವಿರುದ್ಧವೂ ಪ್ರಕರಣ ದಾಖಲು ಮಾಡಲಾಗಿದೆ.

ಕೊಮ್ಮನಹಳ್ಳಿಯಲ್ಲಿ ಸಂಪ್ರದಾಯ

ದಸರಾ ಹಬ್ಬದ ಪ್ರಯುಕ್ತ ಕೊಮ್ಮನಹಳ್ಳಿಯಲ್ಲಿ ಸಂಪ್ರದಾಯದಂತೆ ಶಾಸಕ ಕೆ.ವೈ.ನಂಜೇಗೌಡರು ಗ್ರಾಮದ ಬನ್ನಿಮರಕ್ಕೆ ಪೂಜೆ ಸಲ್ಲಿಸಿದ ನಂತರ ಬಿಲ್ಲು ಬಾಣ ಬಿಟ್ಟು ಬನ್ನಿ ಕಡಿದರು. ಇದಕ್ಕೂ ಮುನ್ನ ನಾಡಬಂದೂಕಿಗೆ ಪೂಜೆ ಸಲ್ಲಿಸಿ ಗಾಳಿಯಲ್ಲಿ ಗುಂಡು ಹಾರಿಸಿ ಗ್ರಾಮದ ಚನ್ನರಾಯಸ್ವಾಮಿ ಉತ್ಸವಕ್ಕೆ ಚಾಲನೆ ನೀಡಿದರು.

 ಗ್ರಾಮದಲ್ಲಿ ಹಿಂದಿನಿಂದಲೂ ಈ ರೀತಿ ಬಂದೂಕು ಹಾರಿಸುವ ಸಂಪ್ರದಾಯ ನಡೆದು ಬಂದಿದೆ ಎಂದು ಶಾಸಕರು ತಿಳಿಸಿದ್ದಾರೆ.

ನಂತರ ಉತ್ಸವದಲ್ಲಿ ಪಾಲ್ಗೊಂಡು ರಾಜಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಈ ಸಂದರ್ಭದಲ್ಲಿ ಪ್ರತಿ ಮನೆಯಿಂದ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಲಾಯಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಡೆಲಿವರಿ ಬಾಯ್ಸ್‌ಗೆ ಲಿಫ್ಟ್ ಬಳಸಬೇಡಿ ಎಂದ ಮೇಘನಾ ಫುಡ್ಸ್; ಪೋಸ್ಟರ್ ವೈರಲ್‌ ಆಗ್ತಿದ್ದಂತೆ ಕ್ಷಮೆಯಾಚನೆ
ದರ್ಶನ್ ಗ್ಯಾಂಗ್‌ನಿಂದ ಕೊಲೆಗೀಡಾದ ರೇಣುಕಾಸ್ವಾಮಿಗೆ ಸತ್ತಮೇಲೂ ನೆಮ್ಮದಿಯಿಲ್ಲ! ಸಮಾಧಿ ಧ್ವಂಸಗೈದ ಡೆವಿಲ್ ಗ್ಯಾಂಗ್‌!