ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ 10 ಕಿ.ಮೀ.ಗೆ ಒಂದು ಸ್ಪೀಡ್‌ ಡಿಟೆಕ್ಟರ್‌: ಸಿಎಂ ಸಿದ್ದರಾಮಯ್ಯ

By Kannadaprabha NewsFirst Published Jul 30, 2023, 7:00 AM IST
Highlights

ಹೆದ್ದಾರಿ ಕಾಮಗಾರಿ ಅವೈಜ್ಞಾನಿಕತೆಯಿಂದ ಕೂಡಿಲ್ಲ. ಆತುರಾತುರವಾಗಿ ಕೆಲಸ ಮಾಡಿದ್ದಾರೆ. ಸವೀರ್‍ಸ್‌ ರಸ್ತೆಗಳನ್ನು ಅಭಿವೃದ್ಧಿಪಡಿಸಿಲ್ಲ. ಬೈಪಾಸ್‌ ರಸ್ತೆಗಳನ್ನು ಬಲವರ್ಧನೆಗೊಳಿಸಬೇಕಿತ್ತು. ಇನ್ನೂ ಹಲವು ಸೌಕರ್ಯಗಳನ್ನು ಕಲ್ಪಿಸಿಕೊಡುವಲ್ಲಿ ಎಡವಿದ್ದಾರೆ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ 

ಮಂಡ್ಯ(ಜು.30): ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಆರಂಭವಾದಾಗ ‘ಸ್ಪೀಡ್‌ ಡಿಟೆಕ್ಟರ್‌’ ಅಳವಡಿಸಿರಲಿಲ್ಲ. ಅತಿ ವೇಗವಾಗಿ ವಾಹನಗಳು ಸಂಚರಿಸಿದ್ದರಿಂದ ವಾಹನಗಳ ಅಪಘಾತ ಹೆಚ್ಚಾಗಿತ್ತು. ಸ್ಪೀಡ್‌ ಡಿಟೆಕ್ಟರ್‌ ಅಳವಡಿಕೆ ಬಳಿಕ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಎರಡನೇ ಬಾರಿ ಸಿಎಂ ಆದ ಬಳಿಕ ಇದೇ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ಸಿದ್ದರಾಮಯ್ಯ, ನಗರದ ಹೊರವಲಯದ ಶಶಿಕಿರಣ ಕನ್ವೆನ್‌ನ್ಷನ್‌ ಹಾಲ್‌ ಬಳಿ ಅಳವಡಿಸಿರುವ ಸ್ಪೀಡ್‌ ಡಿಟೆಕ್ಟರ್‌ಗೆ ಚಾಲನೆ ನೀಡಿ, ಡೆಮೋ ವೀಕ್ಷಿಸಿದರು. ಬಳಿಕ, ಹೆದ್ದಾರಿ ಪರಿಶೀಲನೆ ನಡೆಸಿದರು.

Latest Videos

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಆಗಸ್ಟ್‌ 1ರಿಂದ ಬೈಕ್‌, ಆಟೋಗಳ ಸಂಚಾರ ನಿರ್ಬಂಧ

ಈ ವೇಳೆ, ಸುದ್ದಿಗಾರರೊಂದಿಗೆ ಮಾತನಾಡಿ, ಹೆದ್ದಾರಿ ಕಾಮಗಾರಿ ಅವೈಜ್ಞಾನಿಕತೆಯಿಂದ ಕೂಡಿಲ್ಲ. ಆತುರಾತುರವಾಗಿ ಕೆಲಸ ಮಾಡಿದ್ದಾರೆ. ಸವೀರ್‍ಸ್‌ ರಸ್ತೆಗಳನ್ನು ಅಭಿವೃದ್ಧಿಪಡಿಸಿಲ್ಲ. ಬೈಪಾಸ್‌ ರಸ್ತೆಗಳನ್ನು ಬಲವರ್ಧನೆಗೊಳಿಸಬೇಕಿತ್ತು. ಇನ್ನೂ ಹಲವು ಸೌಕರ್ಯಗಳನ್ನು ಕಲ್ಪಿಸಿಕೊಡುವಲ್ಲಿ ಎಡವಿದ್ದಾರೆ ಎಂದರು.

ಸ್ಪೀಡ್‌ ಅಳವಡಿಕೆ ಬಳಿಕ ಅಪಘಾತಗಳ ಸಂಖ್ಯೆ ಕಡಿಮೆಯಾಗಿದೆ. ಜೂನ್‌ ತಿಂಗಳಲ್ಲಿ 20 ಅಪಘಾತಗಳು ಸಂಭವಿಸಿದ್ದರೆ, ಜುಲೈ ತಿಂಗಳಲ್ಲಿ ಕೇವಲ 5 ಅಪಘಾತಗಳು ಸಂಭವಿಸಿವೆ. ಅಪಘಾತಗಳು ಸಂಭವಿಸುವುದನ್ನು ತಡೆಯುವುದಕ್ಕಾಗಿಯೇ ಸ್ಪೀಡ್‌ ಡಿಟೆಕ್ಟರ್‌ಗಳನ್ನು ಅಳವಡಿಸಲಾಗಿದೆ. ಹೆದ್ದಾರಿಯಲ್ಲಿ ಸದ್ಯ ಎರಡು ಕಡೆ ಸ್ಪೀಡ್‌ ಡಿಟೆಕ್ಟರ್‌ ಅಳವಡಿಸಲಾಗಿದೆ. ಮುಂದೆ 10 ಕಿಲೋಮೀಟರ್‌ಗೆ ಒಂದರಂತೆ ಇದನ್ನು ಅಳವಡಿಸಲಾಗುವುದು ಎಂದರು.

151 ಕೋಟಿ ರು.ಗೆ ಪ್ರಸ್ತಾವನೆ:

ಹೆದ್ದಾರಿಯಲ್ಲಿ ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣದವರೆಗೆ ಸವೀರ್‍ಸ್‌ ರಸ್ತೆ ಅಭಿವೃದ್ಧಿಪಡಿಸುವುದು, ಬೈಪಾಸ್‌ ರಸ್ತೆಗಳನ್ನು ಬಲವರ್ಧನೆಗೊಳಿಸುವುದಕ್ಕಾಗಿ 151 ಕೋಟಿ ರು.ಗಳ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ. ಆಗಸ್ಟ್‌-ನವೆಂಬರ್‌ ವೇಳೆಗೆ ಅನುಮತಿ ದೊರಕಲಿದ್ದು, ನಂತರ ಕಾಮಗಾರಿಗಳು ಆರಂಭವಾಗಲಿವೆ ಎಂದು ಹೇಳಿದರು.

ಟೋಲ್‌ ಸಂಗ್ರಹಿಸುವವರು ನಾವಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಸಂಗ್ರಹ ಮಾಡುತ್ತಾರೆ. ಹೆದ್ದಾರಿ ಸಮಸ್ಯೆ ನಿವಾರಣೆಗೆ ಸಂಬಂಧಿಸಿದಂತೆ ಶೀಘ್ರದಲ್ಲೇ ದೆಹಲಿಗೆ ತೆರಳಲಿದ್ದೇನೆ. ಅಲ್ಲಿ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ, ರಾಷ್ಟ್ರೀಯ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಿದ್ದೇನೆ ಎಂದು ಹೇಳಿದರು.

ಬೆಂ-ಮೈ ಹೈವೇಯಲ್ಲಿ ನಿಯಮ ಉಲ್ಲಂಘನೆ: ಪೊಲೀಸರಿಂದ 1 ಲಕ್ಷ ದಂಡ ವಸೂಲಿ

ಆಗ ಅಪಘಾತಗಳನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಾಗಲಿದೆ. ಈ ಬಗ್ಗೆ ಪೊಲೀಸ್‌ ಅಧಿಕಾರಿಗಳು ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದವರೊಂದಿಗೆ ಸಭೆ ಮಾಡಿದ್ದಾರೆ. ನಾನೂ ಸಹ ಮುಂದಿನ ದಿನಗಳಲ್ಲಿ ಸಭೆ ನಡೆಸುತ್ತೇನೆ ಎಂದು ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಅಪಘಾತಗಳು ಸಂಭವಿಸಿದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳನ್ನು ತ್ವರಿತವಾಗಿ ಜಾರಿಗೊಳಿಸುವಂತೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ತಿಳಿಸಿದ್ದಾರೆ. 

click me!