ಓಣಂ ವಿಶೇಷ: ಕರ್ನಾಟಕದಿಂದ ಕೇರಳಕ್ಕೆ ಕೆಎಸ್‌ಆರ್‌ಟಿಸಿ ಹೆಚ್ಚುವರಿ ಬಸ್ ವ್ಯವಸ್ಥೆ

By Suvarna News  |  First Published Sep 3, 2022, 1:51 PM IST

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಓಣಂ ಹಬ್ಬದ ಸಂದರ್ಭದಲ್ಲಿ ಕೇರಳಕ್ಕೆ ವಿಶೇಷ ಸೇವೆಗಳ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಯೋಜಿಸಿದೆ


ಬೆಂಗಳೂರು, (ಸೆಪ್ಟೆಂಬರ್.03): ಇದೇ ಸೆಪ್ಟೆಂಬರ್ 8ರಂದು  ಓಣಂ ಹಬ್ಬ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಿದೆ.

೦6.೦9.2022 ಮತ್ತು 7.0922 ರಂದು  ಬೆಂಗಳೂರಿನಿಂದ ಹೆಚ್ಚುವರಿ ಬಸ್ಸುಗಳ ವಿಶೇಷ ವ್ಯವಸ್ಥೆ ಇರಲಿದ್ದು, ಕೇರಳದ ಕಣ್ಣೂರು, ಕೋಯಿಕೋಡ್, ಎರ್ನಾಕುಲಂ, ಪಾಲಕ್ಕಾಡ್, ಶಿರೂರ್, ಕೊಟ್ಟಾಯಂ, ತಿರುವನಂತಪುರಂ ಮುಂತಾದ ಸ್ಥಳಗಳಿಗೆ ಬಸ್ ಗಳು ಸಂಚರಿಸಲಿವೆ. ಮೈಸೂರು ರಸ್ತೆ ಬಸ್ ನಿಲ್ದಾಣ ಹಾಗು ಶಾಂತಿನಗರ ಬಸ್‌ ನಿಲ್ದಾಣದಿಂದ ಹೆಚ್ಚುವರಿ ಬಸ್‌ಗಳು ಓಡಾಡಲಿವೆ.

Tap to resize

Latest Videos

ಕೇರಳದ ಓಣಂ ಸ್ಪೆಷಲ್ ಡಿಶ್ ಅವಿಯಲ್ ಮಾಡೋದು ಹೇಗೆ ?

ಇನ್ನು  ಪ್ರಯಾಣಿಕರ ಅನುಕೂಲಕ್ಕಾಗಿ ಮುಂಗಡವಾಗಿ ಬುಕ್ಕಿಂಗ್ ಸೌಲಭ್ಯ ನೀಡಲಾಗಿದೆ.ಇ-ಟಿಕೆಟ್ ಬುಕಿಂಗ್‌ನ್ನು Www.ksrtc.karnataka.gov.in ವೆಬ್ ಸೈಟ್ ಮುಖಾಂತರ ಟಿಕೆಟ್ ಮಾಡಲು ಸೂಚನೆ ನೀಡಲಾಗಿದೆ.

ನಾಲ್ಕು ಹಾಗು ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೇಟು ಕಾಯ್ದಿರಿಸಿದಲ್ಲಿ ಶೇ. 5ರಷ್ಟು ರಿಯಾಯಿತಿ ನೀಡಲಾಗುತ್ತಿದೆ.  ಹೋಗುವ & ಬರುವ ಪ್ರಯಾಣದ ಟಿಕೇಟ್‌ ಅನ್ನು ಒಟ್ಟಿಗೆ ಕಾಯ್ದಿರಿಸಿದಾಗ ಬರುವ ಪ್ರಯಾಣ ದರದಲ್ಲಿ ಶೇಕಡ 10 ರಷ್ಟು ರಿಯಾಯಿತಿ ಕೊಡಲಾಗಿದೆ.

ಓಣಂ ಸೀಸನ್‌ನಲ್ಲಿ ಹೆಚ್ಚಿನ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಖಾಸಗಿ ಬಸ್‌ಗಳು ಟಿಕೆಟ್ ದರವನ್ನು ಹೆಚ್ಚಿಸುವ ಸಾಧ್ಯತೆಗಳಿವೆ.ಇದಕ್ಕೆ ಬಡ ಪ್ರಯಾಣಿಕರಿಗೆ ಕಷ್ಟವಾಗಲಿದೆ. ಇದನ್ನ ಅರಿತ ಕೆಎಸ್‌ಆರ್‌ಸಿ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಿದೆ.

click me!