ಮೈಸೂರು : ಅ.10 ರಂದು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಕಾರ್ಯಕ್ರಮ

By Kannadaprabha NewsFirst Published Oct 8, 2021, 1:40 PM IST
Highlights
  • ದಸರಾ ಮಹೋತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ ಅವಕಾಶ ಮಾಡಿಕೊಡುವ ಉದ್ದೇಶ
  •  ಅ. 10 ರಂದು ‘ಸೂರ್ಯೋದಯದಿಂದ ಸೂರ್ಯಸ್ತದವರೆಗೆ’ ಎಂಬ ಶೀರ್ಷಿಕೆಯಡಿ ಹೆಚ್ಚುವರಿ ಕಾರ್ಯಕ್ರಮ

 ಮೈಸೂರು (ಅ.08):  ದಸರಾ (Dasara) ಮಹೋತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ (Local artists) ಅವಕಾಶ ಮಾಡಿಕೊಡುವ ಉದ್ದೇಶದಿಂದ ಅ. 10 ರಂದು ‘ಸೂರ್ಯೋದಯದಿಂದ ಸೂರ್ಯಸ್ತದವರೆಗೆ’ ಎಂಬ ಶೀರ್ಷಿಕೆಯಡಿ ಹೆಚ್ಚುವರಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಹಕಾರ ಹಾಗೂ ಮೈಸೂರು (Mysuru) ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ (ST Somashekar) ಹೇಳಿದರು.

ಚಾಮುಂಡಿಬೆಟ್ಟದಲ್ಲಿ (Chamunduhill) ಗುರುವಾರ  ಮಾತನಾಡಿದ ಅವರು, ಕಳೆದ ವರ್ಷದಂತೆ ಈ ಬಾರಿಯು ಸಾಂಸ್ಕೃತಿಕ ಕಾರ್ಯಕ್ರಮಗಳು ಅರಮನೆ ವೇದಿಕೆಗೆ ಸೀಮಿತವಾಗಿವೆ. ಆದರೆ ಹೆಚ್ಚಿನ ಕಲಾವಿದರಿಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ (Cultural Programs) ಸಂಖ್ಯೆಯನ್ನು ಸ್ವಲ್ಪ ಹೆಚ್ಚಿಸಲಾಗಿದೆ. ಅರಮನೆ ವೇದಿಕೆಯಲ್ಲಿ ನವರಾತ್ರಿಯ (Navratri) 7 ದಿನ ಸಂಜೆ ವೇಳೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾದ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುವರು ಎಂದರು.

ವಾಕಿಂಗ್ ಸ್ಟಿಕ್ ಹಿಡಿದು ವೇದಿಕೆ ಏರಿದ ಕೃಷ್ಣರ ಹಳೆಯ ಮೈಸೂರು ನಂಟು ಮೆಲುಕು

ಕಲೆ, ಸಂಸ್ಕೃತಿಯಲ್ಲಿ ಕರ್ನಾಟಕ (karnataka) ಅತ್ಯಂತ ಶ್ರೀಮಂತವಾಗಿದೆ. ಕಲೆ ಸಾಹಿತ್ಯಕ್ಕೆ ರಾಜ, ಮಹಾರಾಜರ ಕಾಲದಿಂದಲೂ ಈ ನಾಡಿನಲ್ಲಿ ಪೋ›ತ್ಸಾಹ ನೀಡಲಾಗಿದೆ. ಈ ಸಂಪ್ರದಾಯವನ್ನು ನಮ್ಮ ಸರ್ಕಾರವೂ ಮುಂದುವರಿಸುತ್ತದೆ ಎಂದರು.

ನವರಾತ್ರಿಯ ಎಲ್ಲಾ ದಿನಗಳು ಮೈಸೂರು ಜಗಮಗಿಸಬೇಕು. ಜನರು ಓಡಾಡುವಾಗ ದೀಪಾಲಂಕಾರವನ್ನು ನೋಡಿ ಸಂಭ್ರಮಿಸಬೇಕು ಎಂಬುದು ನಮ್ಮ ಉದ್ದೇಶ. ಜನರು ರಸ್ತೆಗಳಲ್ಲಿ ಓಡಾಡುವಾಗ, ವಾಹನಗಳಲ್ಲಿ ಸಂಚರಿಸುವಾಗ ದೀಪಾಲಂಕಾರವನ್ನು ನೋಡಿ ಖುಷಿಪಡುವುದರಿಂದ ಇಲ್ಲಿ ಗುಂಪುಗೂಡುವ ಸಂದರ್ಭ ಕಡಿಮೆ. ಆದ್ದರಿಂದ ದೀಪಾಲಂಕಾರವನ್ನು ಎಂದಿನ ಅದ್ಧೂರಿತನದಲ್ಲೇ ಮಾಡಲಾಗಿದೆ. ಜನರು ಗುಂಪುಗೂಡದೇ ದೀಪಾಲಂಕಾರವನ್ನು ನೋಡಿ ಸಂತಸಪಡಬೇಕು ಎಂದು ಅವರು ಮನವಿ ಮಾಡಿದರು.

ಮೈಸೂರು ದಸರಾ: ಯದುವೀರ್‌ 7ನೇ ಖಾಸಗಿ ದರ್ಬಾರ್‌

ಮೈಸೂರು ಸ್ವಚ್ಛ ನಗರಿ ಎಂಬ ಖ್ಯಾತಿ ಹೊಂದಿದ್ದು ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಮೈಸೂರಿನ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ಅನೇಕ ಕನಸುಗಳನ್ನು ಕಂಡಿದ್ದು ಅವುಗಳನ್ನು ನನ್ನೊಂದಿಗೆ ಚರ್ಚಿಸಿದ್ದಾರೆ. ಕೆಲವೇ ದಿನಗಳಲ್ಲಿ ವಿಶೇಷ ಗಮನವನ್ನು ಹರಿಸಿ ಹತ್ತು ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನವನ್ನು ಬಿಡುಗಡೆ ಮಾಡಲು ಒಪ್ಪಿದ್ದಾರೆ ಎಂದರು.

ಕೊರೋನಾ ಮೈಮರೆಯಬೇಡಿ:

ಕೊರೊನಾ (Corona) ಮೊದಲ ಮತ್ತು ಎರಡನೇ ಅಲೆಯಿಂದ ನಾವು ಸಾಕಷ್ಟುಪಾಠಗಳನ್ನು ಕಲಿತಿದ್ದೇವೆ. ಕೊರೊನಾ ಪಾಸಿಟಿವಿಟಿ ದರ ಈಗ ಕಡಿಮೆಯಾಗಿದ್ದರೂ ಸಹ ಸಂಪೂರ್ಣವಾಗಿ ಹೋಗಿಲ್ಲ. ಹಾಗಾಗಿ ಕೊರೊನಾ ವಿಚಾರದಲ್ಲಿ ನಾವು ಮೈಮರೆಯುವಂತಿಲ್ಲ.

ಮಹಿಷನ ಉಪಟಳ ಹಾಗೂ ಅಟ್ಟಹಾಸವನ್ನು ಹುಟ್ಟಡಗಿಸಿ ಶಿಷ್ಟರಕ್ಷಣೆಯ ಸಲುವಾಗಿ ಸಮಸ್ತ ದೇವತೆಗಳ ಶಕ್ತಿ ಸಂಚಯಿಸಿಕೊಂಡು ಶಕ್ತಿಸ್ವರೂಪಿಣಿಯಾಗಿ ಜನ್ಮ ತಳೆದು ಮಹಿಷಾಸುರನ ಸಂಹಾರ ಮಾಡಿದ ಬೆಟ್ಟದ ತಾಯಿ ಚಾಮುಂಡೇಶ್ವರಿಯು ತನ್ನ ಕೃಪಾ ದೃಷ್ಟಿಬೀರಿ ಮಹಾಮಾರಿ ಕೊರೋನಾದಿಂದ ಕಂಗೆಟ್ಟಿರುವ ನಾಡ ಜನತೆಯನ್ನು ಸಂರಕ್ಷಿಸಿ ಸಮಸ್ತರಿಗೂ ಸರ್ವ ಸನ್ಮಂಗಳವನ್ನುಂಟು ಮಾಡಲಿ. ಪ್ರವಾಹ, ಪ್ರಕೋಪ, ಮುಂತಾದ ಗಂಡಾಂತರಗಳಿಂದ ಜೀವ ಹಾಗೂ ಜೀವನವನ್ನು ಕಾಪಾಡಿ ನಾಡು ನೆಮ್ಮದಿಯಿಂದ ನಡೆಯುವಂತಾಗಲು ಅನುಗ್ರಹಿಸಲೆಂದು ಅವರು ಪ್ರಾರ್ಥಿಸಿದರು.

click me!