ಯೋಗ ಮಾಡುವವರ ರೀತಿ ಮೋದಿ ಸುತ್ತ ಕುಳಿತಿದ್ದ ಭದ್ರತಾ ಸಿಬ್ಬಂದಿ!

By Kannadaprabha News  |  First Published Jun 22, 2022, 5:35 AM IST
  •  ಮೈಸೂರಲ್ಲಿ ಮೋದಿ ಯೋಗ ಮಾಡುವ ವೇಳೆಯೂ ಭಾರೀ ಭದ್ರತೆ
  • ಎಸ್‌ಪಿಜಿ, ಸ್ಥಳೀಯ ಪೊಲೀಸರ ಸರ್ಪಗಾವಲಿನಲ್ಲಿ ಮೋದಿ ಯೋಗ 
  • ಭದ್ರತಾ ಅಧಿಕಾರಿಗಳು ಕೂಡ  ಯೋಗ ಟೀ ಶರ್ಚ್‌ ಹಾಕಿ ಯೋಗಪ್ರದರ್ಶನ

 ಮೈಸೂರು (ಜೂನ್ 22): ಮೈಸೂರಿನ ಅರಮನೆ ಆವರಣದಲ್ಲಿ ಮಂಗಳವಾರ ನಡೆದ 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ಮೋದಿ ಅವರಿಗೆ ಎಸ್‌ಪಿಜಿ, ಸ್ಥಳೀಯ ಪೊಲೀಸರ ಸರ್ಪಗಾವಲು ಹಾಕಲಾಗಿತ್ತು.

ಜನರ ನಡುವೆ ಕೂತು ಮೋದಿ ಯೋಗಪ್ರದರ್ಶನ ಮಾಡಿದರೂ ಅವರ ಸುತ್ತ ನಾಲ್ವರು ಎಸ್‌ಪಿಜಿ ಅಧಿಕಾರಿಗಳು, ಇಬ್ಬರು ಮಹಿಳಾ ಎಸ್‌ಐಗಳು, ರಾಜ್ಯ ಪೊಲೀಸ್‌, ಗುಪ್ತಚರ ವಿಭಾಗದ ಕೆಲ ಪೊಲೀಸರ ಕಾವಲು ಹಾಕಲಾಗಿತ್ತು. ಅವರು ಕೂಡ ಯೋಗ ಟೀ ಶರ್ಚ್‌ ಹಾಕಿ ಯೋಗಪ್ರದರ್ಶನ ನೀಡಿದರು. ಹೀಗಾಗಿ ಬಹುತೇಕರಿಗೆ ಮೋದಿಯವರ ಸುತ್ತ ಕೂತಿದ್ದವರು ಭದ್ರತಾ ಸಿಬ್ಬಂದಿ ಎಂಬ ಸಣ್ಣ ಅರಿವೂ ಇರಲಿಲ್ಲ.

Latest Videos

undefined

ಅರಮನೆಗೂ ಬಿಗಿಭದ್ರತೆ: ಮೋದಿ ಉಪಸ್ಥಿತಿ ಹಿನ್ನೆಲೆಯಲ್ಲಿ ಅರಮನೆ ಸುತ್ತಮುತ್ತ ಕೂಡ ಬಿಗಿ ಪೊಲೀಸ್‌ ಬಂದೋಬಸ್‌್ತ ಮಾಡಲಾಗಿತ್ತು. ಮೊದಲಿಗೆ ಯೋಗ ಪಾಸ್‌ ಪರಿಶೀಲನೆ, ನಂತರ ದೇಹ ತಪಾಸಣೆ, ನಂತರ ಎರಡು ಹಂತದಲ್ಲಿ ಲೋಹಶೋಧಕ ಯಂತ್ರದ ಮೂಲಕ ತಪಾಸಣೆ ನಡೆಸಿಯೇ ಎಲ್ಲರಿಗೆ ಪ್ರವೇಶ ನೀಡಲಾಯಿತು.

ಅರಮನೆ ಆವರಣವನ್ನು 53 ಬ್ಲಾಕ್‌ಗಳಾಗಿ ವಿಂಗಡಿಸಲಾಗಿತ್ತು. ಒಟ್ಟಾರೆ 15 ಸಾವಿರ ಮಂದಿಗೆ ಪ್ರವೇಶಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಪ್ರಧಾನಿ ಬರುವ ಮುನ್ನಾ ಅಂದರೆ ಒಂದು ತಾಸು ಮುಂಚಿತವಾಗಿ ಪ್ರವೇಶ ದ್ವಾರ ಬಂದ್‌ ಮಾಡಿದ್ದರಿಂದ ಕೆಲವರು ಒಳಬರಲಾಗದೆ ಪರದಾಡಿದರು.

Assam Floods; ಆಸ್ಸಾಂನ ಭೀಕರ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 82ಕ್ಕೇರಿಕೆ 

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರಮೋದಿ ಅವರು ಮಂಗಳವಾರ ವಿಶ್ವವಿಖ್ಯಾತ ಮೈಸೂರು ಅರಮನೆ ಆವರಣದಲ್ಲಿ ಸಹಸ್ರಾರು ಯೋಗಪಟುಗಳ ನಡುವೆ ಯೋಗ ಪ್ರದರ್ಶನ ನೀಡಿದರು.

ಕೋವಿಡ್‌ ಬಳಿಕ ನಡೆಯುತ್ತಿರುವ 8ನೇ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಯೋಗ ಪ್ರದರ್ಶಿಸಿ ಇತಿಹಾಸದ ಪುಟಗಳಲ್ಲಿ ಈ ಅವಿಸ್ಮರಣೀಯ ದಿನವನ್ನು ದಾಖಲಿಸಿದರು.

ಬೆಳಗ್ಗೆ 6.30ಕ್ಕೆ ಅರಮನೆ ಆವರಣ ಪ್ರವೇಶಿಸಿದ ಪ್ರಧಾನಿ ನರೇಂದ್ರಮೋದಿ 6.34ಕ್ಕೆ ವೇದಿಕೆಯನ್ನೇರಿದರು. 7 ಗಂಟೆ ಸುಮಾರಿಗೆ ಆರಂಭವಾದ ಯೋಗ ಪ್ರದರ್ಶನವು 8.15ಕ್ಕೆ ಕೊನೆಗೊಂಡಿತು. ಅಂದರೆ ಸುಮಾರು 1 ಗಂಟೆ 15 ನಿಮಿಷಗಳವರೆಗೆ ಪ್ರಧಾನಿಗಳು ಯೋಗ ಪ್ರದರ್ಶನ ನೀಡಿದರು.

ವೇದಿಕೆ ಕಾರ್ಯಕ್ರಮ ಮುಗಿಯುತ್ತಲೇ ಕೆಳಗಿಳಿದು ಬಂದ ಮೋದಿ ಅವರು ಸಾರ್ವಜನಿಕರ ನಡುವೆ ಕುಳಿತು ಯೋಗ ಪ್ರದರ್ಶಿಸಿದರು. ಪ್ರಧಾನಿ ಸಾರ್ವಜನಿಕರತ್ತ ಆಗಮಿಸುತ್ತಲೇ ಎಲ್ಲರೂ ಎದ್ದು ನಿಂತು ಮೋದಿ ‘ಮೋದಿ ಮೋದಿ...’ ಎಂದು ಕೂಗತೊಡಗಿದರು. ಎಲ್ಲರತ್ತ ಕೈಬಿಸಿ ಯೋಗ ಪ್ರದರ್ಶನಕ್ಕೆ ಅಣಿಯಾದರು.

ಯೋಗ ದಿನಕ್ಕೆ ಪ್ರಧಾನಿ ಮೋದಿ ಮೈಸೂರನ್ನು ಆಯ್ಕೆ ಮಾಡಿದ್ದು ಯಾಕೆ?

ಮೊದಲಿಗೆ ಪ್ರಾರ್ಥನೆ, ನಂತರ ಚಲನಕ್ರಿಯೆ, ಭುಜದ ವ್ಯಾಯಾಮ, ತಾಡಾಸನ, ವೃಕ್ಷಾಸನ, ಪಾದಹಸ್ತಾಸನ, ಅರ್ಧಚಕ್ರಾಸನ, ತ್ಕಿರೋಣಾಸನ, ಸಮದಂಡಾಸನ, ಭದ್ರಾಸನ, ವಜ್ರಾಸನ, ಅರ್ಧ ಉಷ್ಟಾ್ರಸನ, ಉಷ್ಟಾ್ರಸನ, ಶಶಂಕಾಸನ, ಉತ್ಥಾನ ಮಂಡೂಕಾಸನ, ವಕ್ರಾಸನ, ಮಕರಾಸನ, ಸರಳ ಭುಜಂಗಾಸನ, ಭುಜಂಗಾಸನ, ಶಲಭಾಸನ, ಸೇತುಬಂಧಾಸನ, ಉತ್ತಾನ ಪಾದಾಸನ, ಅರ್ಧ ಹಲಾಸನ, ಪವನಮುಕ್ತಾಸನ, ಶವಾಸನ, ಕಪಾಲಭೂತಿ, ನಾಡಿಶೋಧನ ಪ್ರಾಣಾಯಾಮ, ಶೀತಲೀ ಪ್ರಾಣಾಯಾಮ, ಭ್ರಾಮರೀ ಪ್ರಾಣಾಯಾಮ, ಧ್ಯಾನದ ಬಳಿಕ ಶಾಂತಿಮಂತ್ರ ಪಠಿಸಿ ಯೋಗ ಪ್ರದರ್ಶನಕ್ಕೆ ತೆರೆ ಎಳೆಯಲಾಯಿತು.

ಯೋಗ ಪ್ರದರ್ಶನದ ಬಳಿಕ ಸಾರ್ವಜನಿಕರಿಗೆ ಹಸ್ತಲಾಘವ ನೀಡಿದ ಪ್ರಧಾನಿಗಳು ಎಲ್ಲರತ್ತ ಕೈಬೀಸಿ, ಅರಮನೆ ಎದುರಿನ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಆಯೋಜಿಸಿದ್ದ ಯೋಗ ಕುರಿತಾದ ಡಿಜಿಟಲ್‌ ವಸ್ತುಪ್ರದರ್ಶನ ವೀಕ್ಷಿಸಿದರು.

ಬಳಿಕ ಅರಮನೆಗೆ ಹಿಂದಿರುಗಿ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್‌ ಮತ್ತು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರೊಂದಿಗೆ ಉಪಾಹಾರ ಸೇವಿಸಿ ವಿಮಾನ ನಿಲ್ದಾಣದ ಮೂಲಕ ದೆಹಲಿಗೆ ಹಿಂದಿರುಗಿದರು.

ಈ ವೇಳೆ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋತ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಆಯುಷ್‌ ಸಚಿವ ಸಬರವಾಲ್‌ ಸೋನಾವಾಲ್‌, ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌, ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌, ಸಂಸದ ಪ್ರತಾಪ ಸಿಂಹ ಇದ್ದರು.

ಅಭಿಮಾನಿಯಿಂದ ದೀರ್ಘದಂಡ ನಮಸ್ಕಾರ: ಪ್ರಧಾನಿ ನರೇಂದ್ರಮೋದಿ ಅವರು ಸಾರ್ವಜನಿಕರತ್ತ ಹಸ್ತಲಾಘವ ಮಾಡುತ್ತಿರುವಾಗಲೇ ಅಭಿಮಾನಿಯೊಬ್ಬ ಮೋದಿ ಅವರ ಕಾಲಿಗೆ ದೀರ್ಘದಂಡ ನಮಸ್ಕಾರ ಮಾಡಿದ ಪ್ರಸಂಗ ನಡೆಯಿತು. ಸಾರ್ವಜನಿಕರ ನೂಕುನುಗ್ಗಲಿನ ನಡುವೆಯೂ ಯುವಕನೋರ್ವ ಮಧ್ಯ ಪ್ರವೇಶಿಸಿ ಪ್ರಧಾನಿ ಕಾಲಿಗೆ ಎರಗಿದ.

click me!