ಬೆಂಗಳೂರು (ಜೂನ್.22): ಇತ್ತೀಚಿಗೆ ಬೆಂಗಳೂರಿನಲ್ಲಿ (bengaluru) ಪಾಕಿಸ್ತಾನ (Pakistan) ಮೂಲದ ಭಯೋತ್ಪಾದಕ ಸಂಘಟನೆ ‘ಹಿಜ್ಬುಲ್ ಮುಜಾಹಿದ್ದೀನ್’ನ ಜಮ್ಮು-ಕಾಶ್ಮೀರದ ಕಮಾಂಡರ್ ತಾಲಿಬ್ ಹುಸೇನ್ ಬಂಧನ ಬೆನ್ನಲ್ಲೇ ಈಗ ಪಾಕಿಸ್ತಾನದ ಗುಪ್ತಚರ ಅಧಿಕಾರಿಗಳ ದೂರವಾಣಿ ಕರೆಗಳು ಸ್ಥಳೀಯವಾಗಿ ಸಂಪರ್ಕ ಹೊಂದಿರುವ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ.
ಪಾಕಿಸ್ತಾನ ಸೇರಿದಂತೆ ಅಂತಾರಾಷ್ಟ್ರೀಯ ಕರೆಗಳನ್ನು (ಐಎಸ್‌ಡಿ) ಸ್ಥಳೀಯ ಕರೆಗಳಾಗಿ ಪರಿವರ್ತಿಸುತ್ತಿದ್ದ ಕೇರಳ ಮೂಲದ ಶರಾಫುದ್ದೀನ್‌ನನ್ನು ಭಾರತೀಯ ಸೇನಾ ಗುಪ್ತದಳ (ದಕ್ಷಿಣ) ತಂಡ ಹಾಗೂ ಸಿಸಿಬಿ ( Central Crime Branch) ಜಂಟಿ ಕಾರ್ಯಾಚರಣೆ ನಡೆಸಿ ಚಿಕ್ಕ ಬಾಣಾವರದಲ್ಲಿ ಬಂಧಿಸಿದ್ದು, ಆರೋಪಿಯಿಂದ 58 ಎಲೆಕ್ಟ್ರಾನಿಕ್ ಡಿವೈಸ್ ಮತ್ತು 2,144 ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ತಿಂಗಳ ಅವಧಿಯಲ್ಲಿ ಐಎಸ್‌ಡಿ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತನೆ ಮಾಡುವ ದಂಧೆಯಲ್ಲಿ ಕೇರಳದ (kerala) ಎರಡನೇ ತಂಡ ಪತ್ತೆಯಾಗಿದೆ.
VIJAYANAGARA; ಕೆಲಸಕ್ಕೂ ಮುನ್ನ ಯೋಗ ಮಾಡಿದ ನರೇಗಾ ಕಾರ್ಮಿಕರು
‘ಕೇರಳದ ಶರಾಫುದ್ದೀನ್ ಹಲವು ಐಎಸ್‌ಡಿ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತಿಸಿದ್ದಾನೆ. ಅದರಲ್ಲಿ ಪಾಕಿಸ್ತಾನದ ಗುಪ್ತದಳ ಕರೆಗೆ ಒಂದು ಸಿಮ್ ಬಾಕ್ಸ್ ಬಳಕೆಯಾಗಿರುವುದು ಪತ್ತೆಯಾಗಿದೆ’ ಎಂದು ಸೇನಾ ಗುಪ್ತದಳ ಪತ್ರಿಕಾ ಪ್ರಕಟಣೆಯಲ್ಲಿ ಖಚಿತಪಡಿಸಿದೆ. ಆದರೆ ಬೆಂಗಳೂರಿನ ಜಂಟಿ ಪೊಲೀಸ್ ಆಯುಕ್ತ (ಅಪರಾಧ) ರಮಣ ಗುಪ್ತ ಅವರು, ಪಾಕಿಸ್ತಾನದ ಗುಪ್ತಚರ ಕರೆಗಳ ಪರಿವರ್ತನೆ ಬಗ್ಗೆ ತನಿಖೆ ನಡೆಸಬೇಕಿದೆ ಎಂದಿದ್ದಾರೆ.
ಹೇಗೆ ವರ್ತನೆ?: ‘ಐಎಸ್‌ಡಿ ಕರೆಗಳನ್ನು ಆ್ಯಪ್ ಅಥವಾ ಇಂಟರ್‌ನೆಟ್‌ನಲ್ಲಿ ಸ್ವೀಕರಿಸುತ್ತಿದ್ದ ಆರೋಪಿ, ಬಳಿಕ ಅವುಗಳನ್ನು ಸಿಮ್ ಬಾಕ್ಸ್ ಡಿವೈಸ್, ಪಿಆರ್‌ಐ ಮತ್ತು ಎಸ್‌ಐಪಿ ಟ್ರಂಕ್‌ಕಾಲ ಡಿವೈಸ್‌ಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ. ಆ ಮೂಲಕ ಸ್ಥಳೀಯ ಕರೆಗಳನ್ನಾಗಿ ಪರಿವರ್ತನೆ ಮಾಡಿ ಸಂಬಂಧಪಟ್ಟವರಿಗೆ ಸಂಪರ್ಕ ಕಲ್ಪಿಸುತ್ತಿದ್ದ’ ಎಂದು ಅಧಿಕಾರಿಗಳು ಹೇಳಿದ್ದಾರೆ.
ಶತಶೃಂಗ ಪರ್ವತದಲ್ಲಿ ಯೋಗ ಮಾಡಿ ದಾಖಲೆ ಸೃಷ್ಠಿಸಿದ ಕೋಲಾರ
‘ಸಿಮ್ ಬಾಕ್ಸ್ ಡಿವೈಸ್‌ಗಳಿಗೆ ಐಎಸ್‌ಡಿ ಕರೆಗಳನ್ನು ವರ್ಗಾಯಿಸಿ ಇಂಟರ್‌ನೆಟ್ ಕರೆಗಳನ್ನಾಗಿ ಪರಿವರ್ತಿಸುತ್ತಿದ್ದರು. ಈ ಕರೆಗಳು ಬಹಳ ತಾಂತ್ರಿಕತೆ ಬಳಸಿ ಮಾಡುತ್ತಿದ್ದರಿಂದ ಮೂಲ ಕರೆಗಳು ಎಲ್ಲಿಂದ ಬಂದಿವೆ ಎಂಬುದು ಸುಲಭವಾಗಿ ಪತ್ತೆಹಚ್ಚುವುದು ಕಷ್ಟವಾಗುತ್ತದೆ. ಆದರೆ ಆ ಕರೆಗಳನ್ನು ಸ್ವೀಕರಿಸುವವರ ಸ್ಥಳೀಯ ಮೊಬೈಲ್ ನಂಬರ್‌ಗಳು ಪತ್ತೆಯಾಗುತ್ತಿದ್ದವು. ಆದರೆ ನಿರ್ದಿಷ್ಟ ವಿಳಾಸ ಮತ್ತು ಸ್ಥಳ ಸಿಗುತ್ತಿರಲಿಲ್ಲ. ಈ ಕರೆಗಳು ಯಾವುದೇ ನಿಯಂತ್ರಣಕ್ಕೂ ಒಳಪಡುತ್ತಿರಲಿಲ್ಲ. ಕೇಂದ್ರ ಸರ್ಕಾರದ ಆದಾಯದಲ್ಲಿ ಕಡಿತವಾಗಿ ಟೆಲಿಕಾಂ ಕಂಪನಿಗಳಿಗೆ ನಷ್ಟವಾಗುತ್ತಿತ್ತು’ ಎಂದು ಹೇಳಿದ್ದಾರೆ.
Chamarajnagara; ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಗಾಗಿ ರೈತ ಸ್ನೇಹಿ ಆ್ಯಪ್
ದೇಶದ ಗೌಪ್ಯ ಮಾಹಿತಿ ಸೋರಿಕೆ?: ಈ ಕರೆಗಳ ದಂಧೆಯಲ್ಲಿ ದೇಶದ ಗೌಪ್ಯ ಮಾಹಿತಿ ಸೋರಿಕೆಯಾಗಿರುವ ಬಗ್ಗೆ ಅನುಮಾನವಿದೆ. ಇತ್ತೀಚಿಗೆ ಐಎಸ್‌ಡಿ ಅನುಮಾನಾಸ್ಪದ ಕರೆಗಳ ಮೇಲೆ ಕೇಂದ್ರ ಸಂವಹನ ಮತ್ತು ದೂರಸಂಪರ್ಕ ಭದ್ರತೆ ಸಚಿವಾಲಯ ನಿಗಾವಹಿಸಿದೆ. ಅಂತೆಯೇ ಇತ್ತೀಚಿಗೆ ಬೆಂಗಳೂರಿನ ಚಿಕ್ಕಸಂದ್ರ, ಸಿದ್ದೇಶ್ವರ ಲೇಔಟ್ ಹಾಗೂ ಭುವನೇಶ್ವರ ನಗರ ಸೇರಿದಂತೆ ನಾಲ್ಕು ಕಡೆ ಐಎಸ್‌ಡಿ ಕರೆಗಳ ಮೇಲೆ ದೂರಸಂಪರ್ಕ ಸಚಿವಾಲಯಕ್ಕೆ ಶಂಕೆ ಮೂಡಿತ್ತು. ಈ ಮಾಹಿತಿ ಮೇರೆಗೆ ಸೇನಾ ಗುಪ್ತದಳ ಕಾರ್ಯಾಚರಣೆಗಿಳಿಸಿದಾಗ ಶರಾಫುದ್ದೀನ್ ಬಗ್ಗೆ ಮಾಹಿತಿ ಸಿಕ್ಕಿತು. ಬಳಿಕ ಸಿಸಿಬಿ ( Central Crime Branch) ಪೊಲೀಸರ ಜತೆ ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಸೇನಾ ಗುಪ್ತದಳ (Indian defence installations) ಪ್ರಕಟಣೆಯಲ್ಲಿ ಹೇಳಿದೆ.