ಏಕಾಂತದಲ್ಲಿದ್ದ ಹಳೇ ವಿಡಿಯೋ ವೈರಲ್‌; ವಿದ್ಯಾರ್ಥಿಗಳಿಬ್ಬರ ಆತ್ಮಹತ್ಯೆ!

By Kannadaprabha News  |  First Published Jul 30, 2023, 4:55 AM IST

ರಡು ತಿಂಗಳ ಹಿಂದಿನ ಹಳೆ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆದ್ದರಿಂದ ಮನನೊಂದ ವಿದ್ಯಾರ್ಥಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದಲ್ಲಿ ವರದಿಯಾಗಿದೆ.


ದಾವಣಗೆರೆ ಜು.(30): ಎರಡು ತಿಂಗಳ ಹಿಂದಿನ ಹಳೆ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆದ್ದರಿಂದ ಮನನೊಂದ ವಿದ್ಯಾರ್ಥಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದಲ್ಲಿ ವರದಿಯಾಗಿದೆ.

ನಗರದ ಕಾಲೇಜೊಂದರ ಮಹಡಿ ಮೇಲೆ ಓರ್ವ ವಿದ್ಯಾರ್ಥಿನಿ ಹಾಗೂ ವಿದ್ಯಾರ್ಥಿ ಅನೋನ್ಯವಾಗಿದ್ದ ದೃಶ್ಯವನ್ನು ಪಕ್ಕದ ಮತ್ತೊಂದು ಕಟ್ಟಡದಲ್ಲಿ ಕೆಲವು ಕಿಡಿಗೇಡಿಗಳು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು. ಎರಡು ತಿಂಗಳ ಹಿಂದಿನ ಅದೇ ವಿಡಿಯೋ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆದ್ದರಿಂದ ತೀವ್ರ ನೊಂದ ವಿದ್ಯಾರ್ಥಿನಿ ಶುಕ್ರವಾರ ಆತ್ಮಹತ್ಯೆಗೆ ಶರಣಾಗಿದ್ದಳು.

Tap to resize

Latest Videos

ಈ ವಿಚಾರ ತಿಳಿದ ವಿದ್ಯಾರ್ಥಿಯೂ ತಡರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಉಭಯ ವಿದ್ಯಾರ್ಥಿಗಳ ಪಾಲಕರು ಈ ಬಗ್ಗೆ ಪೊಲೀಸ್‌ ಠಾಣೆಗಳಲ್ಲಿ ಪ್ರತ್ಯೇಕ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

News Hour: ಉಡುಪಿ ವಿಡಿಯೋಕಾಂಡ, ತನಿಖೆಯಂತೂ ಶುರುವಾಯ್ತು, ತಾರ್ಕಿಕ ಅಂತ್ಯ ಸಿಗುತ್ತಾ?

ದಾವಣಗೆರೆಯಲ್ಲಿ ಹುಡುಗಿ ಮತ್ತು ಹುಡುಗನ ಆತ್ಮಹತ್ಯೆಗೆ ಸಂಬಂಧಿಸಿದಂತೆ ಉಭಯ ಕಡೆಯವರ ಪಾಲಕರು ಪ್ರತ್ಯೇಕವಾಗಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿ, ವಿಚಾರಣೆ ನಡೆಸಲಾಗುತ್ತಿದೆ.

ಡಾ.ಕೆ.ಅರುಣ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

click me!