ಬಲಾತ್ಕಾರ, ಹನಿಟ್ರ್ಯಾಪ್: ಮುನಿರತ್ನ ಬಳಿ ಇದ್ದ ಅಶ್ಲೀಲ ವಿಡಿಯೋ ನಾಶ?

By Kannadaprabha NewsFirst Published Sep 24, 2024, 8:17 AM IST
Highlights

ಬಿಬಿಎಂಪಿ ಗುತ್ತಿಗೆದಾರನಿಗೆ ಜಾತಿ ನಿಂದನೆ ಹಾಗೂ ಜೀವ ಬೆದರಿಕೆ ಪ್ರಕರಣದ ಬಳಿಕ ಮುನಿರತ್ನ ತಪ್ಪಿಸಿಕೊಂಡಿದ್ದರು. ಆ ವೇಳೆ ತಮ್ಮ ಬಳಿ ಇದ್ದ ಕೆಲವು ಅಶ್ಲೀಲ ವಿಡಿಯೋ, ಆಡಿಯೋ ಹಾಗೂ ಭಾವಚಿತ್ರಗಳನ್ನು ನಾಶ ಮಾಡಿರುವ ಶಂಕೆ ಇದೆ ಎಂದು ಮೂಲಗಳು ಹೇಳಿವೆ. 

ಬೆಂಗಳೂರು(ಸೆ.24):  ಅತ್ಯಾಚಾರ ಹಾಗೂ ಹನಿಟ್ರ್ಯಾಪ್ ಆರೋಪ ಹಿನ್ನೆಲೆಯಲ್ಲಿ ತಮ್ಮ ಬಳಿ ಇದ್ದ ಕೆಲ ಅಶ್ಲೀಲ ವಿಡಿಯೋಗಳನ್ನು ರಾಜರಾ ಜೇಶ್ವರಿ ನಗರದ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ನಾಶಗೊಳಿಸಿರಬಹುದು ಎಂಬ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. 

ಬಿಬಿಎಂಪಿ ಗುತ್ತಿಗೆದಾರನಿಗೆ ಜಾತಿ ನಿಂದನೆ ಹಾಗೂ ಜೀವ ಬೆದರಿಕೆ ಪ್ರಕರಣದ ಬಳಿಕ ಮುನಿರತ್ನ ತಪ್ಪಿಸಿಕೊಂಡಿದ್ದರು. ಆ ವೇಳೆ ತಮ್ಮ ಬಳಿ ಇದ್ದ ಕೆಲವು ಅಶ್ಲೀಲ ವಿಡಿಯೋ, ಆಡಿಯೋ ಹಾಗೂ ಭಾವಚಿತ್ರಗಳನ್ನು ನಾಶ ಮಾಡಿರುವ ಶಂಕೆ ಇದೆ ಎಂದು ಮೂಲಗಳು ಹೇಳಿವೆ. 

Latest Videos

ಸದನದ ಸದಸ್ಯತ್ವದಿಂದ ಮುನಿರತ್ನ ಅಮಾನತ್ತಿಗೆ ಸಭಾಧ್ಯಕ್ಷರಿಗೆ ಸಚಿವ ಎಚ್.ಕೆಪಾಟೀಲ ಆಗ್ರಹ!

ಶಾಸಕರ ವಿರುದ್ಧ ಹನಿಟ್ರ್ಯಾಪ್ ಆರೋಪಕ್ಕೆ ಅಸಲಿ ವಿಡಿಯೋಗಳು ಪ್ರಮುಖ ಪುರಾವೆಗಳಾಗುತ್ತವೆ. ಹೀಗಾಗಿ ಅಸಲಿ ವಿಡಿಯೋಗಳಿಗೆ ತನಿಖೆ ಆರಂಭಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಎಸ್‌ಐಟಿಗೆ ಅಧಿಕಾರಿ-ಸಿಬ್ಬಂದಿ ನಿಯೋಜನೆ: ಮುನಿರತ್ನ ವಿರುದ್ದದ ಪ್ರಕರಣಗಳ ತನಿಖೆಗೆ ರಚನೆಯಾಗಿರುವ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಮೂವರು ಡಿವೈಎಸ್ಪಿಗಳು ಸೇರಿದಂತೆ 25 ಮೆ ಮಂದಿ ಅಧಿಕಾರಿ-ಸಿಬ್ಬಂದಿ ಯನ್ನು ನಿಯೋಜಿಸಿ ಪೊಲೀಸ್ ಇಲಾಖೆ ಆದೇಶಿಸಿದೆ.

ಸಿಸಿಬಿಎಸಿಪಿಎಚ್.ಎನ್.ಧರ್ಮೇಂದ್ರ, ಚಿಕ್ಕಬಳ್ಳಾಪುರ ಸಿಇಎನ್ ಡಿವೈಎಸ್ಪಿ ರವಿಕುಮಾರ್, ಕೇಂದ್ರ ವಲಯ ಐಜಿಪಿ ಕಚೇರಿಯ ಡಿವೈಎಸ್ಪಿ ಕವಿತಾ, ವಿಜಯಪುರ ಠಾಣೆ ಇನ್ಸ್‌ಪೆಕ್ಟರ್‌ಸುನೀಲ್‌, ಐಎಸ್‌ಡಿ ಇನ್ಸ್‌ಪೆಕ್ಟರ್ ಬಾಲರಾಜ್ ಹಾಗೂ ಡಿಎಸ್‌ಬಿ ವಿಭಾಗದ ಇನ್ಸ್‌ಪೆಕ್ಟರ್ ಅವಿನಾಶ್ ಸೇರಿದಂತೆ 25 ಪೊಲೀಸರು ಎಸ್‌ಐಟಿ ತಂಡ ಸೇರಿದ್ದಾರೆ. 

ಈಗಾಗಲೇ ಎಸ್‌ಐಟಿ ತಂಡಕ್ಕೆ ಎಡಿಜಿಪಿ ಬಿ.ಕೆ.ಸಿಂಗ್ ಸಾರಥ್ಯವಿದ್ದು, ಕೇಂದ್ರ ವಲಯದಐಜಿಪಿ ಲಾಬೂರಾಮ್, ರೈಲ್ವೆ ಎಸ್ಪಿ ಡಾ.ಎಸ್.ಕೆ.ಸೌಮ್ಯಲತಾ ಹಾಗೂ ಎಸ್ಪಿ ಸಿ.ಎ.ಸೈಮನ್ ಸದಸ್ಯರಾಗಿದ್ದಾರೆ. 

ಮುನಿರತ್ನ ಸುತ್ತ ಚಕ್ರವ್ಯೂಹ: ಜಡ್ಜ್‌ ಮುಂದೆ ಕಣ್ಣೀರಿಡುತ್ತಾ ರಾಜೀನಾಮೆ ಸುಳಿವು ನೀಡಿದ ಶಾಸಕ

ಇಂದು ಮುನಿರತ್ನ ಎಸ್‌ಐಟಿ ವಶ: 

ಅತ್ಯಾಚಾರ ಪ್ರಕರಣದಲ್ಲಿ ಮುನಿರತ್ನ ಅವರನ್ನು ವಶಕ್ಕೆ ನೀಡುವಂತೆ ಕೋರಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಎಸ್‌ಐಟಿ ಸೋಮವಾರ ಮನವಿ ಮಾಡಿದೆ. ಈ ಬಗ್ಗೆ ಅರ್ಜಿ ವಿಚಾರಣೆ ನಡೆಸಿ ಮಂಗಳವಾರ ನ್ಯಾಯಾಲಯ ಆದೇಶಿಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.

ಮುನಿರತ್ನ ಜಾಮೀನು ಅರ್ಜಿ ವಿಚಾರಣೆ ನಾಳೆ

ಬೆಂಗಳೂರು: ಮುನಿರತ ಜಾಮೀನು ಅರ್ಜಿ ವಿಚಾರಣೆಯನ್ನು ಸೆ.25ಕ್ಕೆ (ಬುಧವಾರ) ಜನಪ್ರತಿನಿ ಧಿಗಳ ವಿಶೇಷ ನ್ಯಾಯಾಲಯ ಮುಂದೂಡಿದೆ. ಸೋಮವಾರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಸರ್ಕಾರಿ ಅಭಿಯೋಜ ಕರು ಆಕ್ಷೇಪಣೆ ಸಲ್ಲಿಸಲು ಅವಕಾಶ ಕೋರಿದ್ದರಿಂದ ಅರ್ಜಿಯ ವಿಚಾರಣೆಯನ್ನು ಮುಂದೂಡಿಕೆ ಮಾಡಿತು. ಸರ್ಕಾರಿ ಅಭಿಯೋಜಕರು, ಸಂತ್ರಸ್ತೆಗೆ ನೊಟೀಸ್ ಜಾರಿ ಮಾಡಬೇಕಿರುವ ಜತೆಗೆ ಆರೋಪಿಯ ಜಾಮೀನು ಅರ್ಜಿಯ ಕುರಿತು ಕೂಲಂಕಷವಾಗಿ ಗಮನಿಬೇಕಿದೆ. ಇದಕ್ಕಾಗಿ ಆಕ್ಷೇ ಪಣೆ ಸಲ್ಲಿಸಲು ಸಮಯಾವಕಾಶ ಬೇಕಾಗಿದೆ. ಈ ಹಿನ್ನೆಲೆಯಲ್ಲಿ ಜಾಮೀನು ಅರ್ಜಿಯನ್ನು ಮುಂದೂ ಡಿಕೆ ಮಾಡಬೇಕಿದೆ ಎಂದು ಮನವಿ ಮಾಡಿದರು.

click me!