
ಬೆಂಗಳೂರು (ಸೆ.19) ಭಕ್ತರು ಹಾಗೂ ಅರ್ಚಕರ ತೀವ್ರ ವಿರೋಧದ ನಡುವೆಯೂ ಪವಿತ್ರ ದೇವಸ್ಥಾನದಲ್ಲಿ ವ್ಯೂ ಪಾಯಿಂಟ್ ಕಾಮಗಾರಿ ನಡೆಸುತ್ತಿರುವ ಘಟನೆ ಬೆಂಗಳೂರಿನ ಹನಮಂತನಗರದಲ್ಲಿ ನಡೆದಿದೆ.
ಧಾರ್ಮಿಕ ದತ್ತಿ ಇಲಾಖೆ ಅಧೀನದಲ್ಲಿರುವ ಕುಮಾರಸ್ವಾಮಿ ದೇವಸ್ಥಾನ. ಹೊಸ ಸರ್ಕಾರ ಬಂದ ಬಳಿಕ ಹಿಂದಿನ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿ ಮಾಡದಂತೆ ಆದೇಶ ಇದ್ದರೂ ಮುಂದುವರಿಸಿರುವ ಕಾಮಗಾರಿ. ಕೇವಲ ದುಡ್ಡು ಮಾಡಲು ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಇದರ ಹಿಂದೆ ಸ್ಥಳೀಯ ಶಾಸಕ ರವಿ ಸುಬ್ರಹ್ಮಣ್ಯ ಕುಮ್ಮಕ್ಕು ಇದೆ ಎಂದು ಆರೋಪ ಕೇಳಿಬಂದಿದೆ.
ತಮಿಳನಾಡಿಗೆ ನೀರು ಬಿಡೋಕೆ ಇಷ್ಟ ಇಲ್ಲ;ಸುಪ್ರೀಂ ಕೋರ್ಟ್ ನೀರು ಬಿಡಿ ಅಂದ್ರೆ ನಾವೇನು ಮಾಡೋಕಾಗುತ್ತೆ? ಡಿಕೆಶಿ
ಸುಮಾರು 9 ಕೋಟಿ ರೂಪಾಯಿ ವೆಚ್ಚದಲ್ಲಿ ಏಪ್ರಿಲ್ ತಿಂಗಳಲ್ಲಿ ಶುರು ಆಗಿದ್ದ ಕಾಮಗಾರಿ. ಸ್ಥಳೀಯ ಶಾಸಕ ರವಿ ಸುಬ್ರಮಣ್ಯ ಅವರ ಮನವಿ ಮೇರೆಗೆ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಆದರೆ ವ್ಯೂ ಪಾಯಿಂಟ್ ಕಾಮಗಾರಿಯಿಂದ ದೇಗುಲದ ಪಾವಿತ್ರ್ಯಗೆ ಧಕ್ಕೆಯಾಗಲಿದೆ ಎಂದು ಅರ್ಚಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೆ ಕಾಮಗಾರಿ ಶುರು ಆಗುವ ಒಂದು ತಿಂಗಳ ಮುನ್ನವೇ ಕಾಮಗಾರಿ ನಡೆಸದಂತೆ ಭಕ್ತಾದಿಗಳ ಸಹಿಯೊಂದಿಗೆ ಮುಜರಾಯಿ ಇಲಾಖೆಗೆ ಪತ್ರ ಬರೆದಿದ್ದರು. ಆಕ್ಷೇಪದ ಬಳಿಕವೂ ಮುಂದುವರಿಯುತ್ತಿರೋ ಕಾಮಗಾರಿ. ದೇಗುಲದ ಇಓ ನಾರಾಯಣ ಸ್ವಾಮಿ ಸಹ ಗುತ್ತಿಗೆದಾರ ಜೊತೆ ಶಾಮೀಲಾಗಿ ಭ್ರಷ್ಟಾಚಾರದ ಮಾಡಿದ್ದಾರೆಂದು ಆರೋಪಿಸಲಾಗಿದೆ.
ಸಾಮಾಜಿಕ ಹೋರಾಟಗಾರ ಶಂಕರ್ ಗುಹಾ ದ್ವಾರಕನಾಥ್ ನೇತೃತ್ವದಲ್ಲಿ ಭಕ್ತಾದಿಗಳಿಂದ ಕಾಮಗಾರಿ ಸ್ಥಗಿತಗೊಳಿಸಲಾಯಿತು. ದೇಗುಲದ ಆವರಣದಲ್ಲಿ ಇದ್ದ ಜೆಸಿಬಿ ಮತ್ತು ಕಾರ್ಮಿಕರನ್ನು ಹೊರಗೆ ಕಳುಹಿಸಿದ ಶಂಕರ್ ಗುಹಾ ದ್ವಾರಕನಾಥ್. ಯಾವುದೇ ಕಾರಣಕ್ಕೂ ಕಾಮಗಾರಿ ನಡೆಸದಂತೆ ತಾಕೀತು ಮಾಡಿದ ಭಕ್ತರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ