ಕರ್ನಾಟಕದಲ್ಲಿ ಅನಾಥ ಮಕ್ಕಳಿಗೆ ಒಬಿಸಿ ಪ್ರವರ್ಗ -1 ಮೀಸಲಾತಿ: ಸರ್ಕಾರಕ್ಕೆ ವರದಿ ಸಲ್ಲಿಕೆ

Published : Aug 02, 2023, 12:12 PM IST
ಕರ್ನಾಟಕದಲ್ಲಿ ಅನಾಥ ಮಕ್ಕಳಿಗೆ ಒಬಿಸಿ ಪ್ರವರ್ಗ -1 ಮೀಸಲಾತಿ: ಸರ್ಕಾರಕ್ಕೆ ವರದಿ ಸಲ್ಲಿಕೆ

ಸಾರಾಂಶ

ಕರ್ನಾಟಕ ರಾಜ್ಯದಲ್ಲಿರುವ ಎಲ್ಲ ಅನಾಥ ಮಕ್ಕಳಿಗೆ ರಾಜ್ಯ ಸರ್ಕಾರದಿಂದ ಹಿಂದುಳಿದ ವರ್ಗದ ಪ್ರವರ್ಗ-1 ಮೀಸಲಾತಿ ನೀಡುವುದಕ್ಕೆ ಚಿಂತನೆ ಮಾಡಲಾಗಿದೆ.

ಬೆಂಗಳೂರು (ಆ.02): ಕಾಂಗ್ರೆಸ್‌ ಸರ್ಕಾರ ಈಗ ಮತ್ತೊಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ರಾಜ್ಯದಲ್ಲಿರುವ ಅನಾಥ ಮಕ್ಕಳು ಶಿಕ್ಷಣ ಪಡೆಯುವಾಗ ಮತ್ತು ಉದ್ಯೋಗಕ್ಕೆ ಮೀಸಲಾತಿ ಕೇಳಿದಾಗ ತಾವು ಯಾವ ವರ್ಗಕ್ಕೆ ಸೇರಿದವರು ಎಂಬ ಗೊಂದಲ ಎದುರಿಸುತ್ತಿದ್ದರು. ಈಗ ರಾಜ್ಯ ಸರ್ಕಾರ ಅನಾಥ ಮಕ್ಕಳಿಗೆ ಗುಡ್‌ ನ್ಯೂಸ್‌ ನೀಡಲು ಮುಂದಾಗಿದೆ. ಎಲ್ಲ ಅನಾಥ ಮಕ್ಕಳನ್ನು ಇತರೆ ಹಿಂದುಳಿದ ವರ್ಗ (ಒಬಿಸಿ) ವರ್ಗಕ್ಕೆ ಸೇರಿಸಬೇಕು ಎಂದು ಹಿಂದುಳಿದ ವರ್ಗದಿಂದ ಸರ್ಕಾಕ್ಕೆ ವರದಿ ಸಲ್ಲಿಕೆ ಮಾಡಲಾಗಿದೆ. 

ರಾಜ್ಯದಲ್ಲಿರುವ ಅನಾಥ ಮಕ್ಕಳ ಮೀಸಲಾತಿ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಿರುವ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ರಾಜ್ಯದಲ್ಲಿರುವ ಅನಾಥ ಮಕ್ಕಳನ್ನ ಅತೀ ಹಿಂದುಳಿದ ವರ್ಗ ಎಂದು ಪರಿಗಣಿಸುವಂತೆ ವರದಿ ನೀಡಿದ್ದಾರೆ. ರಾಜ್ಯದಲ್ಲಿ ಜಾರಿಯಲ್ಲಿರುವ ಪ್ರವರ್ಗ-1 ಅಡಿ ಅನಾಥ ಮಕ್ಕಳಿಗೆ ಮೀಸಲಾತಿ ನೀಡಬೇಕು. ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇ.1 ರಷ್ಟು ಮೀಸಲಾತಿ ನೀಡುವಂತೆ ವರದಿ ಸಲ್ಲಿಕೆ ಮಾಡಿದ್ದಾರೆ. ಈ ಮೂಲಕ ಅನಾಥ ಮಕ್ಕಳಿಗೆ "ಅನಾಥ ಮಕ್ಕಳು ಪ್ರಮಾಣ ಪತ್ರ" ನೀಡಲು ಮನವಿ ಮಾಡಿದ್ದಾರೆ. ಜೊತೆಗೆ, ಇದೇ ಪ್ರಮಾಣ ಪತ್ರವನ್ನ ಮೀಸಲಾತಿ ನೀಡುವ ವೇಳೆ ಪರಿಗಣಿಸಲು ವರದಿಯ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. 

ಮೊಬೈಲ್‌ ಚಾರ್ಜರ್ ಶಾಕ್‌ ತಾಗಿ 8 ತಿಂಗಳ ಮಗು ಸಾವು

ರಾಜ್ಯದಲ್ಲಿ 5,280 ಮಕ್ಕಳು: ರಾಜ್ಯದಲ್ಲಿ 30 ಜಿಲ್ಲೆಗಳಿಂದ 150 ನೋಂದಾಯಿತ ಅನಾಥ ‌ಮಕ್ಕಳ ಸಂಸ್ಥೆಗಳಿವೆ. ಪ್ರಸ್ತುತ ರಾಜ್ಯದಲ್ಲಿ ಒಟ್ಟು 5,280 ಅನಾಥ ಮಕ್ಕಳಿದ್ದಾರೆ. ತಂದೆ ತಾಯಿ ಪೋಷಕರಿಲ್ಲದ 635 ಮಕ್ಕಳಿದ್ದಾರೆ. ಇದರಲ್ಲಿ 120 ಮಕ್ಕಳು ಯಾವ ಜಾತಿಗೆ ಸೇರಿದ್ದಾರೆ ಎಂಬ ಮಾಹಿತಿ ಇಲ್ಲ. ಯಾವ ಜಾತಿಯೂ ಇಲ್ಲದ ಇಂತಹ ಮಕ್ಕಳನ್ನ ಅತೀ ಹಿಂದುಳಿದ ವರ್ಗಕ್ಕೆ ಸೇರಿಸಲು ವರದಿಯಲ್ಲಿ ಮನವಿ ಮಾಡಲಾಗಿದೆ. ಈಗಾಗಲೇ ಜಾತಿ ಇರುವ ಅನಾಥ ಮಕ್ಕಳಿಗೆ ಅದೇ ಜಾತಿಯಲ್ಲಿ ಮುಂದುವರೆಸಲು ಅವಕಾಶ ನೀಡಬೇಕು. ಈವರೆಗೆ ಯಾವುದೇ ಜಾತಿ ಇಲ್ಲದ ಮಕ್ಕಳು ಸಾಮಾನ್ಯ ವರ್ಗದಲ್ಲಿ ಸ್ಪರ್ಧೆ ಮಾಡಬೇಕಾದ ಪರಿಸ್ಥಿತಿ ಇದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಈ ಅನಾಥ ಮಕ್ಕಳಿಗೆ ಪ್ರವರ್ಗ-1 ರ ಅಡಿಯಲ್ಲಿ ತರಲು ವರದಿ ನೀಡಲಾಗಿದೆ. 

91 ಬಾಲಕಿಯರ ಮೇಲೆ ಅತ್ಯಾಚಾರ, 15 ವರ್ಷಗಳಿಂದ ರೇಪ್ ಮಾಡುತ್ತಿದ್ದ ಮಕ್ಕಳ ಕಲ್ಯಾಣ ಸಿಬ್ಬಂದಿ ಅರೆಸ್ಟ್!

ಸಚಿವ ಸಂಪುಟ ಮುಂದಿಟ್ಟು ತೀರ್ಮಾಣ: ಈಗಾಗಲೇ ಸರ್ಕಾರ ಈ ವರದಿ ಒಪ್ಪಿಕೊಂಡಿದೆ. ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಿರುವ ಸರ್ಕಾರ. ಈ ವರದಿಯನ್ನು ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಲ್ಲಿ ರಾಜ್ಯದಲ್ಲಿರುವ ಎಲ್ಲ ಅನಾಥ ಮಕ್ಲೀಗೂ ಕೂಡ ನ್ಯಾಯ ಸಿಗಲಿದೆ. ಇನ್ನು ಯಾವುದೇ ಮೂಲ ಸೌಕರ್ಯಗಳೂ ಇಲ್ಲದೇ ಅಭ್ಯಾಸ ಮಾಡಿಯೂ ಸಾಮಾನ್ಯ ವರ್ಗದವರ ಜೊತೆಗೆ ಸ್ಪರ್ಧೆ ಮಾಡಿ ಸರ್ಕಾರಿ ಹುದ್ದೆ ಅಥವಾ ಇತರೆ ಸೌಲಭ್ಯಗಳನ್ನು ಪಡೆದುಕೊಳ್ಳಲು ಅಸಾಧ್ಯ ಆಗುತ್ತಿತ್ತು. ಆದ್ದರಿಂದ, ಸರ್ಕಾರ ಒಬಿಸಿ ಪ್ರವರ್ಗ -1 ಮೀಸಲಾತಿಯನ್ನು ಅನಾಥ ಮಕ್ಕಳಿಗೆ ಕಲ್ಪಿಸಿ ಕೊಡುತ್ತಿರುವುದು ಸ್ವಾಗತಾರ್ಹವಾಗಿದೆ ಎಂದು ಕೇಳಿಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ರೇಸಲ್ಲಿ ಡಿಕೆಶಿ ಒಬ್ಬರೇ ಇಲ್ಲ, ಎಚ್‌ಕೆ, ಪರಂ, ಎಂಬಿಪಾ ಕೂಡ ಅರ್ಹ ಇದ್ದಾರೆ: ಕೆ.ಎನ್‌.ರಾಜಣ್ಣ
ಸಿಸೇರಿಯನ್‌ ಹೆರಿಗೆ ಹೆಚ್ಚಳ ಏಕೆ ಎಂದು ತಿಳಿಯಲು ಆಡಿಟ್‌: ಸಚಿವ ದಿನೇಶ್‌ ಗುಂಡೂರಾವ್