ಕೆಎಂಎಫ್ ನಿಂದ ಡೈರಿ ಮಿಲ್ಕ್‌ಗೆ ಕಾಂಪಿಟೇಷನ್ ನಂದಿನಿ ಬ್ರಾಂಡ್ ಚಾಕಲೇಟ್, ಮಕ್ಕಳ ಪೌಷ್ಠಿಕ ಆಹಾರ

Published : Aug 02, 2023, 09:59 AM IST
ಕೆಎಂಎಫ್ ನಿಂದ ಡೈರಿ ಮಿಲ್ಕ್‌ಗೆ ಕಾಂಪಿಟೇಷನ್ ನಂದಿನಿ ಬ್ರಾಂಡ್ ಚಾಕಲೇಟ್, ಮಕ್ಕಳ ಪೌಷ್ಠಿಕ ಆಹಾರ

ಸಾರಾಂಶ

ಕೆಎಂಎಫ್ ಇನ್ನಷ್ಟು ಉತ್ಕೃಷ್ಟ ಆಗಲಿದೆ. ಜನಮನ್ನಣೆ ಹಾಗೂ ನಂಬಿಕೆ ಗಳಿಸಿರುವ ನಂದಿನಿ ಯಿಂದ ಇನ್ನಷ್ಟು ಆರೋಗ್ಯಕರ ಉತ್ಪನ್ನಗಳು ಹೊರಬರಲಿದೆ. ಇನ್ಮುಂದೆ ನಂದಿನಿ ಬ್ರಾಂಡ್ ನಲ್ಲೂ ಚಾಕೊಲೇಟ್  ಸಿಗಲಿದೆ.

ಬೆಂಗಳೂರು (ಜು.2): ಕೆಎಂಎಫ್ ಇನ್ನಷ್ಟು ಉತ್ಕೃಷ್ಟ ಆಗಲಿದೆ. ಜನಮನ್ನಣೆ ಹಾಗೂ ನಂಬಿಕೆ ಗಳಿಸಿರುವ ನಂದಿನಿ ಯಿಂದ ಇನ್ನಷ್ಟು ಆರೋಗ್ಯಕರ ಉತ್ಪನ್ನಗಳು ಹೊರಬರಲಿದೆ. ಇನ್ಮುಂದೆ ನಂದಿನಿ ಬ್ರಾಂಡ್ ನಲ್ಲೂ ಚಾಕೊಲೇಟ್  ಸಿಗಲಿದೆ. ಲಂಡನ್ ಮೂಲದ ಮಾರುಕಟ್ಟೆ ಸಂಶೋಧನಾ ಗುಂಪಿನ ಸರ್ವೇ ಪ್ರಕಾರ ದಿನದಿಂದ ದಿನಕ್ಕೆ ಕರ್ನಾಟಕ ಮೂಲದ ನಂದಿನಿ ಹೆಚ್ಚು ಜನ ಮನ್ನಣೆ ಗಳಿಸುತ್ತಿದೆ. ಸಂಶೋಧನಾ ಗುಂಪು ದೇಶದಲ್ಲಿ ಅತಿ ಹೆಚ್ಚು ಬಳಸುವ ಬ್ರಾಂಡ್ ನ ಪಟ್ಟಿ  ಬಿಡುಗಡೆ ಮಾಡಿದ್ದು, ಆದ್ರಲ್ಲಿ ಪಾರ್ಲೆ- ಜಿ ಮೊದಲ ಸ್ಥಾನವನ್ನ ಗಿಟ್ಟಿಸಿಕೊಂಡಿದ್ದರೆ. ಅಮೂಲ್ ಕಳೆದ ವರ್ಷದ 2 ನೇ ಸ್ಥಾನದಿಂದ ಈ ವರ್ಷ 3 ನೇ ಸ್ಥಾನಕ್ಕೆ ಕುಸಿದಿದೆ. ಇನ್ನು ನಂದಿನಿ ಬ್ರಾಂಡ್ ಕಳೆದ ವರ್ಷದ 7 ನೇ ಸ್ಥಾನದಿಂದ ಈ ವರ್ಷ 6 ನೇ ಸ್ಥಾನಕ್ಕೆ ಏರಿಕೆಯಾಗಿದೆ. 

ಈಗಾಗಲೇ ದೇಶದಲ್ಲಿ  ತನ್ನ ಚಾಪು ಮೂಡಿಸುತ್ತಿರುವ ನಂದಿನಿ,  ಚಾಕೊಲೇಟ್ ಫೀಲ್ಡ್ ಗೂ ಎಂಟ್ರಿಯಾಗುತ್ತಿದೆ. ಈ ಬಗ್ಗೆ  ಕೆಎಂಎಫ್ ಯೋಜನೆ ರೆಡಿಮಾಡಿಕೊಂಡಿದೆ. ಆರೋಗ್ಯಕರ ನಂದಿನಿ ಚಾಕೊಲೇಟ್  ಸದ್ಯದಲ್ಲೇ ಮಾರುಕಟ್ಟೆಗೆ  ಎಂಟ್ರಿ ಕೊಡಲಿವೆ. ಈ ಹಿಂದೆ ಕೆಎಂಎಫ್ ನಂದಿನಿ ಹಾಲು,ತುಪ್ಪ ಹಾಗೂ ಮೊಸರು ಸೇರಿದಂತೆ ಹಾಲಿನ ಉತ್ಪನ್ನಗಳಲ್ಲಿ ಮಾತ್ರ ಹೆಸರುಗಳಿಸಿತ್ತು.

ಇಂದಿನಿಂದ ಹಾಲು, ಮೊಸರು ದರ ಏರಿಕೆ; ಪರಿಷ್ಕೃತ ದರ ಇಲ್ಲಿದೆ

ಸದ್ಯ ಚಾಕೊಲೇಟ್ ಕ್ಷೇತ್ರದಲ್ಲಿ ಡೈರಿ ಮಿಲ್ಕ್ ಒಂದೇ ದೊಡ್ಡ ಹೆಸರು ಗಳಿಸಿದೆ. ಈ ಡೈರಿ ಮಿಲ್ಕ್ ಗೆ ಕಾಂಪಿಟೇಷನ್ ನೀಡಲು ಫಿಲ್ಡ್ ಗೆ ಎಂಟ್ರಿ ಕೊಡಲಿದೆ ನಂದಿನಿ ಚಾಕೊಲೇಟ್.  ಜೊತೆಗೆ ಮಕ್ಕಳ ಪೌಷ್ಠಿಕ ಆಹಾರವೂ ಲಾಂಚ್ ಆಗಲಿದೆ. ಇದರ ಜೊತೆಗೆ ದೇಸಿ ಹಸುಗಳ ತುಪ್ಪ.  ಹೀಗೆ ಕೆಎಂಎಫ್ ಮಕ್ಕಳ ಸೆಗ್ಮೆಂಟ್‌ ಪ್ರಾಡೆಕ್ಟ್ ಗೆ ಲಗ್ಗೆ ಇಡಲು ತೀರ್ಮಾನಿಸಿದೆ. ಈ ಮೂಲಕ ನಂದಿನಿ ಬ್ರಾಂಡ್ ಗೆ ಇನ್ನಷ್ಟು ಬೇಡಿಕೆ ಹೆಚ್ಚು ಮಾಡಲು ಕೆಎಂಎಫ್ ಹೊರಟಿದೆ.

ನಂದಿನಿ ಹೊಸ ಪ್ರಾಡಕ್ಟ್ ಗಳು ಯಾವುವು?
ಪನ್ನಿರ್ ನಿಪ್ಪಟ್ಟು- ಇದ್ರಲ್ಲಿ 60 % ಪನ್ನಿರ್ ಇರಲಿದೆ
ಫೀನಟ್ ಚಿಕ್ಕಿ
ಕಡಲೆ ಮಿಠಾಯಿ
ಸ್ಪೇಷಲ್ ಮಿಲ್ಕ್ ಬರ್ಫಿ
ಬೆಲ್ಲದ ಪೇಡಾ
ಚಾಕೋಲೆಟ್ ಬಿಸ್ಕೆಟ್
ಬ್ಲಾಕ್ ಕರೆಂಟ್ ಚಾಕೋಲೇಟ್
ಆರೆಂಜ್ ಚಾಕೋಲೆಟ್
ಬ್ಲೂಬೆರಿ ಚಾಕೋಲೆಟ್

ಇನ್ನು ಮಕ್ಕಳಿಗಾಗಿ ನಂದಿನಿಯಲ್ಲಿ ಪೌಷ್ಟಿಕ ಆಹಾರ  ದೊರಕಲಿದೆ. ಬೊರ್ಮಿಟಾ ಹಾರ್ಲಿಕ್ಸ್ ರೀತಿಯಲ್ಲೇ ಮಕ್ಕಳಗಾಗಿ ಮಾಲ್ಟ್ ನಂತಹ ಹಲವು ಉತ್ಪನ್ನಗಳು ಸಿಗಲಿದೆ. ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಿಸುವ ಜೊತೆಗೆ ಮಕ್ಕಳ ಆಹಾರದ ಮಾರುಕಟ್ಟೆಯಲ್ಲೂ ಕೆಎಂಎಫ್ ತನ್ನ ಚಾಪು ಮೂಡಿಸಲಿದೆ.

ತಿರುಪತಿಗೆ ನಂದಿನಿ ತುಪ್ಪ ಪೂರೈಕೆ ಸ್ಥಗಿತ, ಬಿಜೆಪಿ-ಕಾಂಗ್ರೆಸ್ ಆರೋಪ ಪ್ರತ್ಯಾರೋಪಕ್ಕೆ ಹುರುಳೇ ಇಲ್ಲ!

ವಂದೇ ಭಾರತ್‌ ಟ್ರೈನ್ ಗೆ ಲಗ್ಗೆ ಇಡಲಿದೆ ನಂದಿನಿ:
ಪ್ರಧಾನಿ ಮೋದಿ ಅವರ ಕನಸಿನ ವಂದೇ ಭಾರತ್ ಟ್ರೈನ್ ಗೆ ಲಗ್ಗೆ ಇಡೋಕೆ ನಂದಿನಿ ತಯಾರಾಗಿದೆ. ವಂದೇ ಭಾರತ್ ಟ್ರೈನ್ ನಲ್ಲಿ ನಂದಿನಿ ಪ್ರಾಡಕ್ಟ್ ಗಳ ಪೂರೈಕೆಗೆ ಕೆಎಂಎಫ್ ಚಿಂತನೆ ನಡೆಸಿದೆ. ಲಸ್ಸಿ, ಮಜ್ಜಿಗೆ, ಪೇಡಾ, ನಂದಿನಿ ಕೋಲ್ಡ್ ಹಾಲು, ಪ್ಲೇವರ್ಡ್ ಡ್ರಿಂಕ್ ಸೇರಿದಂತೆ ನಂದಿನ ಉತ್ಪನ್ನಗಳ ಮಾರಾಟಕ್ಕೆ ಪ್ಲ್ಯಾನ್ ಮಾಡಿದೆ. ಅಭಾವದ ನಡುವೆಯೂ ವಂದೇ ಭಾರತ್ ಟ್ರೈನ್ ಗೆ ನಂದಿನಿ ಉತ್ಪನ್ನ ಪೂರೈಕೆಗೆ ಚಿಂತನೆ ಮಾಡಿದೆ. ಸದ್ಯ ಪ್ರತಿ ದಿನ 20% ರಷ್ಟು ಹಾಲಿನ ಅಭಾವವನ್ನು ಕೆಎಂಎಫ್ ಎದುರಿಸುತ್ತಿದೆ. ಹೀಗಾಗಿ ಈ ಅಭಾವ ತಪ್ಪಿಸಲು ಸದ್ಯ ಉತ್ಪಾದನೆ ಹೆಚ್ಚಳಕ್ಕೆ ಕೆಎಂಎಫ್ ಚಿಂತನೆ ನಡೆಸಿದೆ.   ಹಾಲು ಉತ್ಪಾದನೆ ಹೆಚ್ಚಳವಾದ್ರೆ ವಂದೇ ಭಾರತ್ ಗೆ ಪ್ರಾಡಕ್ಟ್ ಗಳ ಸಫ್ಲೈಗೆ ಪ್ರಸ್ತಾವನೆ ಸಾಧ್ಯತೆ ಇದೆ. ಈ ಸಂಬಂಧ ಕೇಂದ್ರ ರೈಲ್ವೇ ಇಲಾಖೆಗೆ ಸವಿಸ್ತಾರ ಪ್ರಸ್ತಾವನೆ ಸಲ್ಲಿಸಲು ಕೆಎಂಎಫ್ ಮುಂದಾಗಿದೆ.

ಕೆಎಂಎಫ್ ಪ್ಲ್ಯಾನ್ ಏನು?

  • ಸದ್ಯ ರಾಜ್ಯದಲ್ಲಿ ಪ್ರತಿ ದಿನ ಸುಮಾರು 75-85 ಲಕ್ಷ ಲೀಟರ್ ಹಾಲು ಉತ್ಪಾದನೆ
  • ಈ ಪೈಕಿ 8 ರಿಂದ 9 ಲಕ್ಷ ಲೀಟರ್ ಹಾಲಿಂದ ಇತರೆ ಉತ್ಪನ್ನಗಳ ತಯಾರಿ
  • ಉತ್ಪನ್ನಗಳ ಬಳಕೆಯ ಹಾಲಿನ ಪ್ರಮಾಣ ಏರಿಸಲು ಚಿಂತಿಸಿರುವ ಕೆಎಂಎಫ್
  • 9 ರಿಂದ 11 ಅಥವಾ 12 ಲಕ್ಷ ಲೀಟರ್ ಬಳಕೆಗೆ ಚಿಂತನೆ
  • ಹೀಗಾದರೆ ನಂದಿನಿ ಪ್ರಾಡಕ್ಟ್ ಗಳ ಮಾರ್ಕೆಟ್ ಅನ್ನು ಮತ್ತಷ್ಟು ವಿಸ್ತಾರಗೊಳಿಸಲು ಸಹಾಯ
  • ಈಗಾಗಲೇ ದೇಶದ ಮಾರುಕಟ್ಟೆಯಲ್ಲಿ ಅಜಾನುಭಾಹು ಆಗಿರುವ ನಂದಿನಿ
  • ವಂದೇ ಭಾರತ್ ರೈಲಿಗೂ ಸಪ್ಲೈ ಮಾಡಿ ಆಧಿಪತ್ಯ ಸ್ಥಾಪಿಸಲು ಕೆಎಂಎಫ್ ಸಿದ್ಧತೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗ್ರಾಪಂ ಅಧ್ಯಕ್ಷರೂ ಮತ್ತು ಹಸಿರು ಪೆನ್ನೂ...!
ಜಾಸ್ತಿ ಬೇಡ ಎರಡೇ ಮಕ್ಕಳನ್ನಷ್ಟೇ ಮಾಡಿಕೊಳ್ಳಿ: ನವದಂಪತಿಗಳಿಗೆ ಸಿಎಂ ಸಲಹೆ