ಅವೈಜ್ಞಾನಿಕ ಬೆಳೆವಿಮೆ ಪರಿಹಾರ: ಬೆಳೆಗೆ ಖರ್ಚಾಗಿದ್ದು 15 ಸಾವಿರ ರು, ವಿಮೆ ಸಿಕ್ಕಿದ್ದು 960ರೂ!

By Kannadaprabha News  |  First Published Aug 2, 2023, 10:55 AM IST

ಯಾದಗಿರಿ ಜಿಲ್ಲೆಯಲ್ಲಿ ಅವೈಜ್ಞಾನಿಕ ಬೆಳೆವಿಮೆ ಪರಿಹಾರ ನೀಡಲಾಗಿದ್ದು, ಬೆಳೆಗೆ ಖರ್ಚಾಗಿದ್ದು 15000 ರು, ವಿಮೆ ಸಿಕ್ಕಿದ್ದು 960 ರು. ಇದರಿಂದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ವರದಿ: ಆನಂದ್‌ ಎಂ. ಸೌದಿ

ಯಾದಗಿರಿ (ಜು.2): ಒಂದು ಎಕರೆ ಹತ್ತಿ ಬಿತ್ತನೆಗೆ 15 ಸಾವಿರ ರು.ವೆಚ್ಚ ಮಾಡಿದ್ದರೂ ಬೆಳೆ ವಿಮೆ ಮಾಡಿಸಿದ ರೈತನಿಗೆ ಪರಿಹಾರವಾಗಿ ದೊರೆತಿದ್ದು .960 ರೂ! ಬೆಳೆ ವಿಮೆ ಪರಿಹಾರ ನೀಡುವ ವಿಚಾರದಲ್ಲಿ ಇನ್ಶೂರೆನ್ಸ್‌ ಕಂಪನಿಗಳು ಈ ರೀತಿ ಅವೈಜ್ಞಾನಿಕ ನಿರ್ಧಾರದಿಂದಾಗಿಯೇ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಫಸಲ್‌ ಬೀಮಾ ಯೋಜನೆಯ ಲಾಭ ಪಡೆಯಲು ರೈತರು ಹಿಂದೇಟು ಹಾಕುವಂತಾಗುತ್ತಿದೆ.

Tap to resize

Latest Videos

undefined

ಯಾದಗಿರಿ ಜಿಲ್ಲೆ ವಡಗೇರಾ ತಾಲೂಕಿನ ರೈತ ಶರಣಬಸವ (ಸರ್ವೆ ನಂ.394/4) ಅವರು ಕಳೆದ ಬಾರಿ ತಮ್ಮ ಒಂದು ಎಕರೆ ಹತ್ತಿ ಬೆಳೆಗೆ ವಿಮೆ ಮಾಡಿಸಿದ್ದರು. ಇದಕ್ಕಾಗಿ .870ಗಳ ಪ್ರಿಮೀಯಂ (ಕಂತು) ಹಣವನ್ನೂ ತುಂಬಿದ್ದರು. 1 ಎಕರೆ ಬಿತ್ತನೆಗೆ .15 ಸಾವಿರ ಖರ್ಚಾಗಿತ್ತು. ಆದರೆ, ಅತಿವೃಷ್ಟಿಯಿಂದಾಗಿ ಆಗ ಹತ್ತಿ ಬೆಳೆ ನಾಶವಾಗಿದ್ದಾಗ, ವಿಮೆ ಕಂಪನಿಯವರೇ .17,402 ಹಾನಿ ಅಂದಾಜಿಸಿದ್ದರು. ಆದರೆ, ಪರಿಹಾರ ಕೈಸೇರಿದಾಗ ಮಾತ್ರ ರೈತನಿಗೆ ಆಘಾತವಾಗುವುದೊಂದು ಬಾಕಿ.

ಟೊಮ್ಯಾಟೋಗೆ ಫುಲ್ ಡಿಮ್ಯಾಂಡಪ್ಪೋ.. ಡಿಮ್ಯಾಂಡ್..! : ಬಂಡಾವಳ ಹಾಕಿದ್ದು 3 ಲಕ್ಷ ..ಲಾಭಗಳಿಸಿದ್ದು 30 ಲಕ್ಷ..!

.870 ಪ್ರೀಮಿಯಂ ತುಂಬಿದ್ದ ಶರಣ ಬಸವ ಅವರಿಗೆ ಬೆಳೆ ಪರಿಹಾರ ಬಂದಿದ್ದು ಕೇವಲ .960. ಅಂದರೆ ಪ್ರೀಮಿಯಂ ತುಂಬಿದ್ದ ಹಣಕ್ಕಿಂತ ಕೇವಲ .110 ಹೆಚ್ಚುವರಿ ಮಾತ್ರ ಅವರಿಗೆ ಪರಿಹಾರ ನೀಡಲಾಗಿದೆ. ಇನ್ಶೂರೆನ್ಸ್‌್ಸ ಕಂಪನಿ ಸಂಪರ್ಕಿಸಿದರೆ, ಮಾನದಂಡಗಳ ಪ್ರಕಾರ ಇಷ್ಟೇ ಬರೋದು ಎಂದು ಹೇಳಿ ಸಮಜಾಯಿಷಿ ನೀಡಿ, ಮುಂದಿನ ದಿನಗಳಲ್ಲಿ ನೋಡೋಣ ಎಂದು ಸಾಗಹಾಕಿದ್ದಾರೆ.

ವಿಮೆ ಪರಿಹಾರದಲ್ಲಿ ಅನೇಕ ರೈತರಿಗೆ ಇಂಥ ಅನುಭವಗಳಾಗಿವೆ. ವಿಮಾ ಕಂಪನಿಯ ಅಡ್ಡಾದಿಡ್ಡಿ ನಿಯಮಗಳು ರೈತರಿಗೆ ಫಸಲ್‌ ಬೀಮಾ ಮೇಲಿನ ಭರವಸೆಯನ್ನೇ ಹಾಳುಗೆಡಹುವಂತೆ ಮಾಡಿದೆ. ಈ ಸಾಲಿನಲ್ಲಿ ಬೆಳೆ ವಿಮೆ ಮಾಡಿಸುವಂತೆ ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ಮನವೊಲೈಸುವ ಯತ್ನಕ್ಕಿಳಿದಿದ್ದಾರಾದರೂ ರೈತರಲ್ಲಿ ಗೊಂದಲ ಇನ್ನೂ ಪರಿಹಾರವಾಗಿಲ್ಲ.

ಬೆಂಗ​ಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ನಿಷೇಧದ ಮೊದಲ ದಿನವೇ 137 ಕೇಸ್‌, 68,500 ರು.ದಂಡ ವಸೂಲಿ

ಈ ಬಗ್ಗೆ ತಮ್ಮನ್ನು ಸಂಪರ್ಕಿಸಿದ ಕನ್ನಡಪ್ರಭಕ್ಕೆ ತಿಳಿಸಿದ ವಿಮೆ ಪ್ರತಿನಿಧಿ ಬನಶಂಕರ್‌, ಕೆಲವೊಮ್ಮೆ ಹಾನಿಯಾದ ವರದಿ ದಾಖಲಿಸುವಲ್ಲಿ ಅಥವಾ ರೈತರು ತಿಳಿಸುವಲ್ಲಿ ವಿಳಂಬವಾಗುತ್ತದೆ ಮತ್ತು ತಂತ್ರಾಂಶಗಳ ಆಧಾರದಲ್ಲಿ ಪಟ್ಟಿಜೋಡಿಸುವಿಕೆ ಗೊಂದಲದಿಂದ ಹೀಗಾಗಿರುತ್ತದೆ ಎಂದು ಸ್ಪಷ್ಟನೆ ನೀಡಿದರು.

ಕಳೆದ ಮುಂಗಾರಿನಲ್ಲಿ ಜಿಲ್ಲೆಯಲ್ಲಿ 13,810 ರೈತರು, 2.10 ಲಕ್ಷ ರು.ಗಳ ಬೆಳೆ ವಿಮೆ ಮಾಡಿಸಿದ್ದರು. 7619 ರೈತರಿಗೆ ಒಟ್ಟಾರೆ 3.69 ಲಕ್ಷ ರು. ಪರಿಹಾರ ನೀಡಲಾಗಿತ್ತು. ಈ ವರ್ಷ ರೈತರಿಗೆ ವಿಮೆ ಬಗ್ಗೆ ನಂಬಿಕೆ ಮೂಡುತ್ತಿಲ್ಲವಾದ್ದರಿಂದ ನೋಂದಣಿ ಕಡಮೆಯಾಗುವ ಸಾಧ್ಯತೆ ಇದೆಯೆಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

ಹತ್ತಿ ಬೆಳೆ ವೀಕ್ಷಿಸಿದ್ದ ಅವರೇ (ಕಂಪನಿ) .17.042 ಹಾನಿ ಎಂದು ಅಂದಾಜಿಸಿದ್ದರು. ಆದರೆ, ನಂತರದಲ್ಲಿ ತುಂಬಿದ ಪ್ರೀಮಿಯಂ ಹಣಕ್ಕಿಂತ ಕೇವಲ .110 ಹೆಚ್ಚುವರಿ ಪರಿಹಾರ ನೀಡಿದ್ದಾರೆ. ಯಾವ ಆಧಾರದ ಮೇಲೆ ಇಷ್ಟುಕಡಿಮೆ ಪರಿಹಾರ ನೀಡಲಾಗಿದೆ ಎಂದು ವಿಮೆ ಅಧಿಕಾರಿಗಳನ್ನು ಅನೇಕ ಬಾರಿ ಕೇಳಿದರೂ ಪ್ರತಿಕ್ರಿಯಿಸುತ್ತಿಲ್ಲ.

- ಶರಣು ಇಟಗಿ, ವಡಗೇರಾ ಗ್ರಾಮಸ್ಥ

click me!