ಕೆಲಸ ಮಾಡದೆಯೂ ಚೀನಾಕ್ಕಿಂತ ಎತ್ತರಕ್ಕೆ ಬೆಳೆಯಬಹುದೆಂಬುದು ಕೆಲವರ ಭಾವನೆ ತಪ್ಪಲ್ಲ: ನಾರಾಯಣಮೂರ್ತಿ

By Kannadaprabha News  |  First Published May 16, 2024, 9:34 AM IST

ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ತಮ್ಮ ಆಲೋಚನೆಗಳನ್ನು ವ್ಯಕ್ತಪಡಿಸಲು ಅವಕಾಶವಿದೆ. ನನ್ನ ಹೇಳಿಕೆ ಬಗ್ಗೆ ಅನೇಕ ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಾವು ಕೆಲಸ ಮಾಡುವ ಅಗತ್ಯ ಇಲ್ಲದೇ ಇರಬಹುದು. ಆದರೂ, ಚೀನಾಗಿಂತ ಎತ್ತರಕ್ಕೆ ಬೆಳೆಯಬಹುದು. ಹಾಗಾಗಿ, ಒಬ್ಬರ ಅಭಿಪ್ರಾಯ ಸರಿ, ಮತ್ತೊಬ್ಬರದ್ದು ತಪ್ಪು ಎನ್ನಲಾಗದು. ನನಗಿಂತ ಸಾಕಷ್ಟು ಕಿರಿಯರಾಗಿರುವವರ ಅಭಿಪ್ರಾಯಗಳು ನಿಜವೂ ಆಗಬಹುದು: ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ 
 


ಬೆಂಗಳೂರು(ಮೇ.16):  ಕೆಲಸ ಮಾಡದೆಯೂ ಚೀನಾಕ್ಕಿಂತ ಎತ್ತರಕ್ಕೆ ನಾವು ಬೆಳೆಯಬಹುದು ಎಂದು ನನಗಿಂತ ಕಿರಿಯರಾದ ಕೆಲವರಿಗೆ ಅನಿಸಿರಬಹುದು ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ತಮ್ಮ ಟೀಕಾಕಾರರಿಗೆ ಟಾಂಗ್ ನೀಡಿದ್ದಾರೆ. 

ದೇಶದ ಆರ್ಥಿಕತೆಗೆ ವೇಗ ನೀಡಲು ಭಾರತದ ಯುವಜನತೆ ವಾರಕ್ಕೆ 70 ತಾಸು ಕೆಲಸ ಮಾಡಲು ಸಿದ್ಧರಾಗಬೇಕು ಎಂದು ಈ ಹಿಂದೆ ನಾರಾಯಣಮೂರ್ತಿ ಅವರು ನೀಡಿದ ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿರುವ ಕುರಿತು ಬುಧವಾರ ನಗರದಲ್ಲಿ ಪತ್ರಕರ್ತರ ಕೇಳಿದ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದರು. 

Tap to resize

Latest Videos

50 ವರ್ಷಗಳ ಹಿಂದಿನ 120 ಗಂಟೆಗಳ ಹಸಿವಿನ ಕರಾಳ ಅನುಭವ ಹಂಚಿಕೊಂಡ ಇನ್ಫೋಸಿಸ್ ನಾರಾಯಣ ಮೂರ್ತಿ

ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ತಮ್ಮ ಆಲೋಚನೆಗಳನ್ನು ವ್ಯಕ್ತಪಡಿಸಲು ಅವಕಾಶವಿದೆ. ನನ್ನ ಹೇಳಿಕೆ ಬಗ್ಗೆ ಅನೇಕ ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಾವು ಕೆಲಸ ಮಾಡುವ ಅಗತ್ಯ ಇಲ್ಲದೇ ಇರಬಹುದು. ಆದರೂ, ಚೀನಾಗಿಂತ ಎತ್ತರಕ್ಕೆ ಬೆಳೆಯಬಹುದು. ಹಾಗಾಗಿ, ಒಬ್ಬರ ಅಭಿಪ್ರಾಯ ಸರಿ, ಮತ್ತೊಬ್ಬರದ್ದು ತಪ್ಪು ಎನ್ನಲಾಗದು. ನನಗಿಂತ ಸಾಕಷ್ಟು ಕಿರಿಯರಾಗಿರುವವರ ಅಭಿಪ್ರಾಯಗಳು ನಿಜವೂ ಆಗಬಹುದು ಎಂದು ಹೇಳಿದರು.

click me!