'ಶಿವಮೊಗ್ಗ ಸ್ಫೋಟದಲ್ಲಿ ಸತ್ತವರು ಕಾರ್ಮಿಕರಲ್ಲ.. ಸಮಾಜ ದ್ರೋಹಿಗಳು: ಪರಿಹಾರ ಕೊಡ್ಬೇಡಿ'

By Suvarna News  |  First Published Feb 1, 2021, 7:05 PM IST

ಶಿವಮೊಗ್ಗ ತಾಲೂಕಿನ ಹುಣಸೋಡು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್​ನಲ್ಲಿ ಆಯನೂರು ಮಂಜುನಾಥ್ ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ. 


ಬೆಂಗಳೂರು, (ಫೆ.01): ಈ ಅಕ್ರಮ ಗಣಿ ಇಷ್ಟು ವರ್ಷ ಯಾಕೆ ಗಮನಕ್ಕೆ ಬಂದಿಲ್ಲ? ಇದರ ಹೊಣೆ ಯಾರು ಹೊತ್ತುಕೊಳ್ಳಬೇಕು ಎಂದೂ ಆಯನೂರು ಮಂಜುನಾಥ್ ವಿಧಾನಪರಿಷತ್​ನಲ್ಲಿ ಪ್ರಶ್ನೆ ಮಾಡಿದ್ದಾರೆ.

ಇದು ಇತ್ತೀಚೆಗೆ ನಡೆಯುತ್ತಿರುವ ದಂಧೆ ಅಲ್ಲ. ಎಲ್ಲ ಸರಕಾರಗಳು ಇದ್ದ ಸಂದರ್ಭದಲ್ಲೂ ಅವ್ಯಾಹತವಾಗಿ ನಡೆದುಕೊಂಡು ಬಂದಿದೆ. ಜಿಲ್ಲೆಯ ಪೊಲೀಸ್ ಅಧಿಕಾರಿಗಳು, ಅರಣ್ಯಾಧಿಕಾರಿಗಳು, ಕಂದಾಯ ಸೇರಿದಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ಗಮನಕ್ಕೆ ಈ ಅಕ್ರಮ ಗಣಿ ಇಷ್ಟು ವರ್ಷ ಯಾಕೆ ಗಮನಕ್ಕೆ ಬಂದಿಲ್ಲ? ಇದರ ಹೊಣೆ ಯಾರು ಹೊತ್ತುಕೊಳ್ಳಬೇಕು? ಎಂದು ಪ್ರಶ್ನಿಸಿದರು.

Tap to resize

Latest Videos

ಮಲೆನಾಡಿನಲ್ಲಿ ಮಹಾದುರಂತ, ಮೃತರ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ ಘೋಷಿಸಿದ ಸಿಎಂ

'ಸ್ಪೋಟದಲ್ಲಿ ತೀರಿಹೋದವರು ಕಾರ್ಮಿಕರಲ್ಲ'
ಈ ಸ್ಪೋಟದಲ್ಲಿ ತೀರಿಹೋದವರು ಕಾರ್ಮಿಕರಲ್ಲ.. ಯಾರೋ ಎಂಜಲು ಕಾಸು ತಿಂದು ಇಂತಹ ಅಕ್ರಮಕ್ಕೆ ಅವಕಾಶ ನೀಡಿ, ನಾವೆಲ್ಲಾ ಜೀವ ತ್ಯಾಗ ಮಾಡಬೇಕಿತ್ತಾ? ಈ ಸ್ಪೋಟದಲ್ಲಿ ತೀರಿ ಹೋದವರು ಕಾರ್ಮಿಕರಲ್ಲ. ಈ ಸ್ಪೋಟದಲ್ಲಿ ತೀರಿಹೋದವರು ಪಾಲುದಾರರು. ಹೀಗಾಗಿ ಇವರಿಗೆ ಪರಿಹಾರ ನೀಡಬೇಡಿ. ಇವರೆಲ್ಲಾ ಸಮಾಜ ದ್ರೋಹಿಗಳು ಎಂದು ಸದನದಲ್ಲಿ ಆಕ್ರೋಶಭರಿತವಾಗಿ ಮಾತನಾಡಿದರು.

ಕ್ರಷರ್ ನಡೆಸೋಕೆ ನಾವು ಪರ್ಮಿಶನ್ ಕೊಟ್ಟಿಲ್ಲ ಅಂತಾರೆ. ಹಾಗಾದರೆ ಈಗಲೂ ಅಲ್ಲಿ ನಡೆಯುತ್ತಾ ಇದೆಯಲ್ಲ. ಈ ಐದು ಇಲಾಖೆಯ ಅಧಿಕಾರಿಗಳನ್ನು ( ಕಂದಾಯ-ಪರಿಸರ-ಗಣಿ-ಗೃಹ-ಅರಣ್ಯ) ತನಿಖೆಗೆ ಒಳಪಡಿಸಬೇಕು. ಗೃಹ ಇಲಾಖೆ ಏನ್ ಮಾಡ್ತಿದೆ? ಇದನ್ನು ಪಕ್ಷದ ದೃಷ್ಟಿಯಿಂದ ನೋಡೊದು ಬೇಡ, ಎಲ್ಲರ ಕಾಲದಲ್ಲೂ ಇದು ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

click me!