ಕರ್ನಾಟಕ ಸರ್ಕಾರ ಅಡಕೆಯನ್ನು ಮಾದಕ ವಸ್ತು ಪಟ್ಟಿಗೆ ಸೇರಿಸಿದ್ದು ಇದೀಗ ಈ ಬಗ್ಗೆ ಸ್ಪಷ್ಟನೆಯನ್ನು ನೀಡಿದೆ. ಅಡಕೆ ಒಂದು ಮಾದಕ ವಸ್ತುವೆ ಅಲ್ಲ. ಶೀಘ್ರ ಪಟ್ಟಿಯಿಂದ ಹೊರಕ್ಕಿಡುವುದಾಗಿ ಸಚಿವರೇ ಸ್ಪಷ್ಟಪಡಿಸಿದ್ದಾರೆ.
ಶಿರಸಿ (ಫೆ.01): ಅಡಕೆ ಮಾದಕ ವಸ್ತು ಅಲ್ಲವೇ ಅಲ್ಲ. ಈ ಕುರಿತು ಈಗಾಗಲೇ ಗೃಹ ಸಚಿವರೂ ಸ್ಪಷ್ಟನೆ ನೀಡಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ. ಸುಧಾಕರ್ ಹೇಳಿದರು.
ಸರ್ಕಾರದ ವೆಬ್‌ಸೈಟ್‌ನಲ್ಲೇ ಅಡಕೆಯನ್ನು ಮಾದಕವಸ್ತುಗಳ ವಿಭಾಗದಡಿ ಪಟ್ಟಿ ಮಾಡಿದ್ದ ವಿಚಾರಕ್ಕೆ ಸಂಬಂಧಿಸಿ ನಗರದಲ್ಲಿ ಭಾನುವಾರ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಅಡಕೆ ಮಾದಕ ವಸ್ತು ಅಲ್ಲ. ಆದರೆ, ಅದರೊಂದಿಗೆ ಬೆರೆಸಿ ತಿನ್ನುವ ವಸ್ತು ಸರಿಯಿರಬೇಕು. ಅಡಕೆಯ ಕುರಿತು ಈಗಾಗಲೇ ಬೊಮ್ಮಾಯಿ ಅವರೇ ಸ್ಪಷ್ಟನೆ ನೀಡಿದ್ದಾರೆ. ಹೀಗಾಗಿ ಅಡಕೆಯನ್ನು ಮಾದಕವಸ್ತುಗಳ ಪಟ್ಟಿಯಿಂದ ತೆಗೆಯಲು ಕ್ರಮ ಕೈಗೊಳ್ಳಲಾಗಿದೆ ಎಂದರು.
undefined
ಸರ್ಕಾರಿ ವೆಬ್‌ಸೈಟ್‌ನಲ್ಲೇ ಅಡಕೆಗೆ ಡ್ರಗ್ಸ್ ಪಟ್ಟ! ...
ಸರ್ಕಾರದ ಕೃಷಿ ಮಾರಾಟ ವಾಹಿನಿ ವೆಬ್ಸೈಟ್ನಲ್ಲಿ ಅಡಕೆಯನ್ನು ಮಾದಕವಸ್ತುಗಳ ವಿಭಾಗದಡಿ ಪಟ್ಟಿ ಮಾಡಲಾಗಿತ್ತು. ಈ ಕುರಿತು ‘ಸರ್ಕಾರಿ ವೆಬ್‌ಸೈಟ್‌ನಲ್ಲೇ ಅಡಕೆಗೆ ಡ್ರಗ್ಸ್ಪಟ್ಟ’ ಎಂಬ ಶೀರ್ಷಿಕೆಯಲ್ಲಿ ವರದಿ ಪ್ರಕಟಿಸಿತ್ತು. ಸರ್ಕಾರದ ಈ ಕ್ರಮಕ್ಕೆ ಅಡಕೆ ಬೆಳೆಗಾರರಿಂದ ತೀವ್ರ ಆಕ್ರೋಶವೂ ವ್ಯಕ್ತವಾಗಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕರಾವಳಿ ಮತ್ತು ಮಲೆನಾಡು ಶಾಸಕರು ಸದನದಲ್ಲಿ ಪ್ರಸ್ತಾಪಿಸಿ ಸರಿಪಡಿಸುವಂತೆ ಒತ್ತಾಯಿಸಿದ್ದರು.