'ಸಿಎಂ ಅನುಮತಿ ಇಲ್ಲದೇ ವರ್ಗಾವಣೆ ಇಲ್ಲ'

By Kannadaprabha NewsFirst Published Mar 5, 2021, 8:19 AM IST
Highlights

ಸೂಚನೆ ಪಾಲಿಸದೇ ಜಾರಿಗೊಳಿಸಿದ ವರ್ಗಾವಣೆ ಕುರಿತು ಸಂಬಂಧಪಟ್ಟ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳೇ ಜವಾಬ್ದಾರರು| ಮುಖ್ಯಮಂತ್ರಿಗಳ ಕಚೇರಿಯಿಂದ ಆದೇಶ| 

ಬೆಂಗಳೂರು(ಮಾ.05): ಆಡಳಿತಾತ್ಮಕವಾಗಿ ಅಗತ್ಯ ಇರುವ ಖಾಲಿ ಸ್ಥಾನಗಳನ್ನು ಭರ್ತಿ ಮಾಡುವುದಕ್ಕೆ ಹೊರತುಪಡಿಸಿ ಬೇರೆ ಯಾವುದೇ ವರ್ಗಾವಣೆಗಳನ್ನು ಮುಖ್ಯಮಂತ್ರಿಗಳ ಅನುಮತಿ ಪಡೆಯದೆ ವರ್ಗಾವಣೆ ಮಾಡುವಂತಿಲ್ಲ ಎಂದು ಮುಖ್ಯಮಂತ್ರಿಗಳ ಕಚೇರಿಯಿಂದ ಆದೇಶಿಸಲಾಗಿದೆ.

ಸಾಮಾನ್ಯ ವರ್ಗಾವಣೆಗಳನ್ನು ಸಹ ಇಲಾಖಾ ಮಟ್ಟದಲ್ಲಿ ಮಾಡದೆ, ಪ್ರತಿಯೊಂದು ವರ್ಗಾವಣೆಗೂ ಮುಖ್ಯಮಂತ್ರಿಯವರಿಗೆ ಕಡತದಲ್ಲಿ ಸಲ್ಲಿಸಿ, ಆದೇಶ ಪಡೆದ ನಂತರವೇ ಮಾಡಬೇಕು. 

ಐಪಿಎಸ್ ಅಧಿಕಾರಿಗಳ ವರ್ಗಾವಣೆ: ಯತ್ನಾಳ್ ಹೇಳಿದ್ದು ಸತ್ಯವಾಯ್ತು...!

ಒಂದು ವೇಳೆ ಈ ಸೂಚನೆ ಪಾಲಿಸದೇ ಜಾರಿಗೊಳಿಸಿದ ವರ್ಗಾವಣೆ ಕುರಿತು ಸಂಬಂಧಪಟ್ಟ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳೇ ಜವಾಬ್ದಾರರಾಗುತ್ತಾರೆ’ ಎಂದು ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ ಸೂಚಿಸಿದ್ದಾರೆ.
 

click me!