
ಬೆಂಗಳೂರು (ಆ.3): ಪ್ರವಾಹ ಸಂತಸ್ತರ ಮನೆಗಳು ಪುನಃ ಹಾನಿಯಾದರೆ ಪರಿಹಾರಕ್ಕೆ ಪರಿಗಣಿಸುವ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಿದ್ದು, ಸಿ ಕೆಟಗರಿಯಲ್ಲಿ ಪರಿಹಾರ ಪಡೆದಿರುವ ಮನೆಗಳು ಹಾನಿಯಾಗಿದ್ದರೆ ಮಾತ್ರ ಪರಿಗಣಿಸಬಹುದು ಎಂದು ತಿಳಿಸಿದೆ. ಈ ಬಗ್ಗೆ ಕೆಲವು ಜಿಲ್ಲಾಧಿಕಾರಿಗಳು ಸ್ಪಷ್ಟನೆ ಕೋರಿರುವುದರಿಂದ ಮಂಗಳವಾರ ಈ ಆದೇಶ ಹೊರಡಿಸಲಾಗಿದೆ. ಕಳೆದ 2019, 2020 ಮತ್ತು 2021ನೇ ಸಾಲಿನಲ್ಲಿ ಅತಿವೃಷ್ಟಿ/ ಪ್ರವಾಹದಿಂದ ಎ (ಸಂಪೂರ್ಣ ಹಾನಿ) ಅಥವಾ ಬಿ (ಬಹುತೇಕ ಹಾನಿ) ಕೆಟಗರಿಯಲ್ಲಿ ಪರಿಹಾರ ಪಡೆದಿರುವ ಸಂತ್ರಸ್ತರ ಮನೆ ಮತ್ತೆ 2022ನೇ ಸಾಲಿನಲ್ಲಿ ಹಾನಿಯಾದರೆ ಪರಿಹಾರ ಪಡೆಯಲು ಅರ್ಹರಿರುವುದಿಲ್ಲ. ಆದರೆ, 2019, 2020ನೇ ಸಾಲಿನಲ್ಲಿ ಅಲ್ವಸ್ವಲ್ಪ ಮನೆ ಹಾನಿಯಾದ ಸಿ ಕೆಟಗರಿಯಲ್ಲಿ ಸರ್ಕಾರದಿಂದ 50 ಸಾವಿರ ರು. ಪರಿಹಾರ ಪಡೆದಿರುವ ಮನೆಗಳು ಪುನಃ 2022ನೇ ಸಾಲಿನಲ್ಲಿ ಅತಿವೃಷ್ಟಿಯಿಂದ ಹಾನಿಯಾದರೆ ಎ, ಬಿ ಮತ್ತು ಸಿ ಕೆಟಗರಿಯಲ್ಲಿ ಪರಿಹಾರ ಪಾವತಿಸಬಹುದು ಎಂದು ಸರ್ಕಾರ ಹೇಳಿದೆ. ವಾಸದ ಮನೆಗೆ ನಿಯಮಾನುಸಾರ ಪರಿಹಾರ ಪಾವತಿಯಾಗಲಿದೆ. ಆದರೆ, ಜಮೀನಿನಲ್ಲಿ ನಿರ್ಮಿಸಿರುವ ಮನೆಗಳು, ಗೋಮಾಳಗಳಲ್ಲಿನ ಮನೆಗಳು ಅನಧಿಕೃತವಾಗಿದ್ದರೆ ಅಫಿಡವಿಡ್ ಪಡೆದು ಒಂದು ಲಕ್ಷ ರು. ಪಾವತಿಸಬಹುದು. ಇನ್ನು, ವಸತಿ ಯೋಜನೆಯಡಿ ನಿರ್ಮಿಸಿಕೊಂಡು ನೆಲೆಸಿರುವ ಮನೆಗಳು ಪ್ರವಾಹದಿಂದ ಹಾನಿಯಾದರೆ ಸರ್ಕಾರಿ ಆದೇಶದಂತೆ ಎ, ಬಿ ಮತ್ತು ಸಿ ಕೆಟಗರಿಯಲ್ಲಿ ಪರಿಹಾರ ಒದಗಿಸಬೇಕು ಎಂದು ತಿಳಿಸಲಾಗಿದೆ.
ಅಪಾಯಕ್ಕೆ ಆಹ್ವಾನಿಸುತ್ತಿದೆ ಶಿವಾನಂದ ವೃತ್ತದ ಬಳಿಯ ಒಳಚರಂಡಿ ಸಾರ್ವಜನಿಕರ ತೀವ್ರ ಆಕ್ರೋಶ : ನಗರದ ಶಿವಾನಂದ ವೃತ್ತದ ಬಳಿಯ ಬೆಂಗಳೂರು ಕೆಫೆ ಹೋಟೆಲ್ ಸಮೀಪದಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿ ಜಾಗ ಅಪಘಾತಕ್ಕೆ ಆಹ್ವಾನ ನೀಡಿದಂತಿದೆ. ರೇಸ್‌ಕೋರ್ಸ್ ರಸ್ತೆ ಮಾರ್ಗವಾಗಿ ಶೇಷಾದ್ರಿಪುರದ ಕಡೆಗೆ ಸಾಗುವ ಈ ರಸ್ತೆಯಲ್ಲಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಇಲ್ಲಿನ ರೈಲ್ವೆ ಅಂಡರ್ ಬ್ರಿಡ್ಜ್ ಮೂಲಕ ವಾಹನಗಳ ಸಂಚಾರವಿದ್ದು, ಬ್ರಿಡ್ಜ್ ಕಿರಿದಾಗಿದೆ. ಅಲ್ಲದೇ ಮೇಲ್ಸೇತುವೆಯ ಇಳಿಜಾರಿನ ಕಾಮಗಾರಿಯು ಇನ್ನೂ ಪ್ರಗತಿಯಲ್ಲಿದ್ದು ವಾಹನ ಸಂಚಾರಕ್ಕೆ ಮುಕ್ತವಾಗಿಲ್ಲ.
ಹಾಗಾಗಿ ವಾಹನಗಳು ಮೇಲ್ಸೇತುವೆಯ ಕೆಳಗಿನ ಇಕ್ಕಟ್ಟಾದ ರಸ್ತೆಯಲ್ಲೇ ಸಂಚರಿಸುವುದು ಅನಿವಾರ್ಯ. ಪರಿಸ್ಥಿತಿ ಹೀಗಿರುವಾಗ ಬೆಂಗಳೂರು ಕೆಫೆ ಸಮೀಪ ನಡೆಯುತ್ತಿರುವ ಒಳಚರಂಡಿ ಕಾಮಗಾರಿಯಿಂದಾಗಿ ಚರಂಡಿ ಮೇಲ್ಭಾಗವನ್ನು ಮುಚ್ಚದೆ ಹಾಗೆಯೇ ಬಿಡಲಾಗಿದೆ. ಜೊತೆಗೆ ಕೇವಲ ಮೂರು ಬ್ಯಾರಿಕೇಡ್‌ಗಳನ್ನು ನೆಪ ಮಾತ್ರಕ್ಕೆ ಇಟ್ಟಿದ್ದು ಸ್ವಲ್ಪ ಯಾಮಾರಿದರೂ ವಾಹನಗಳು ಅಥವಾ ಪಾದಚಾರಿಗಳು ಈ ಚರಂಡಿಯಲ್ಲಿ ಬೀಳುವ ಸಾಧ್ಯತೆ ಹೆಚ್ಚಿದೆ.
ಕರ್ನಾಟಕದಲ್ಲಿ ಮಳೆಯಬ್ಬರಕ್ಕೆ 11 ಬಲಿ: ಕೆಲವು ದಿನಗಳ ಬಿಡುವು ಬಳಿಕ ವರುಣನ ಆರ್ಭಟ
ಮಳೆ ಬಂದರಂತೂ ಈ ಚರಂಡಿಯು ತುಂಬಿ ಹರಿದು ರಸ್ತೆಗೆ ನೀರು ನುಗ್ಗುತ್ತಿದ್ದು ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯುಂಟಾಗುತ್ತಿದೆ. ಈ ನಡುವೆ ಶಿವಾನಂದ ವೃತ್ತದ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಿ ಆ.15ಕ್ಕೆ ವಾಹನ ಸಂಚಾರಕ್ಕೆ ಮುಕ್ತಗೊಳಿಸುವುದಾಗಿ ಬಿಬಿಎಂಪಿ ಹೇಳಿದೆ. ಆದರೆ, ಇನ್ನು ಸಾಕಷ್ಟುಕಾಮಗಾರಿ ಬಾಕಿ ಇದ್ದು ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳ್ಳುತ್ತದೆಯೇ ಎಂಬ ಅನುಮಾನ ಮೂಡಿದೆ.
ನಿರಂತರ ವರ್ಷಧಾರೆಗೆ ನಲುಗಿದ ಬೆಂಗಳೂರು: ಬೀದಿ ವ್ಯಾಪಾರಿಗಳು, ವಾಹನ ಸವಾರ
ಆರ್‌ಆರ್ ನಗರದಲ್ಲಿ ಅತ್ಯಧಿಕ ಮಳೆ: ರಾತ್ರಿ 10ರ ಹೊತ್ತಿಗೆ ರಾಜರಾಜೇಶ್ವರಿ ನಗರ (1) 7.2 ಸೆಂ.ಮೀ, ವಿದ್ಯಾಪೀಠ 6.15, ರಾಜರಾಜೇಶ್ವರಿ ನಗರ (2), ವಿಶ್ವನಾಥನಾಗೇನಹಳ್ಳಿಯಲ್ಲಿ ತಲಾ 6.3, ಸಂಪಂಗಿರಾಮ ನಗರ 5.7, ರಾಜಮಹಲ್ ಗುಟ್ಟಹಳ್ಳಿ, ಬಾಣಸವಾಡಿ, ವನ್ನಾರ್‌ಪೇಟ್ 5.3, ದೊಡ್ಡನೆಕ್ಕುಂದಿ 5.2, ಉತ್ತರಹಳ್ಳಿ, ಕೆಂಗೇರಿ 4.5, ಕೋನೆನ ಅಗ್ರಹಾರ, ಎಚ್‌ಎಎಲ್ ವಿಮಾನ ನಿಲ್ದಾಣ 4.5, ಪುಲಕೇಶಿ ನಗರ, ದೊಮ್ಮಲೂರು, ಕೆಂಗೇರಿ (2) 4.2, ರಾಮಮೂರ್ತಿನಗರ 4.1, ನಾಗರಬಾವಿ, ಎಚ್‌ಎಂಟಿ ವಾರ್ಡ್ 4 ಸೆಂ.ಮೀ ಮಳೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ