PSI Recruitment Scam: ಪಿಎಸ್‌ಐ ಕೇಸಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ: ಸಿಎಂ ಬೊಮ್ಮಾಯಿ

By Govindaraj S  |  First Published Apr 22, 2022, 3:00 AM IST

ಪಿಎಸ್‌ಐ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಪ್ಪಿತಸ್ಥರು ಯಾರೇ ಆಗಿರಲಿ, ಅವರಾರ‍ಯರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ, ನೇಮಕಾತಿಯಂತಹ ಸೂಕ್ಷ್ಮ ವಿಚಾ​ರಗಳಲ್ಲಿ ನಿ​ಷ್ಪಕ್ಷಪಾತವಾಗಿ ಸರ್ಕಾರ ತನಿಖೆ ನಡೆಸುವ ಉದ್ದೇಶದೊಂದಿಗೆ ಇದನ್ನು ಸಿಐಡಿಗೆ ಒಪ್ಪಿಸಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.


ಕಲಬುರಗಿ (ಏ.22): ಪಿಎಸ್‌ಐ ಪರೀಕ್ಷೆ ಅಕ್ರಮ ಪ್ರಕರಣಕ್ಕೆ (PSI Recruitment Scam) ಸಂಬಂಧಪಟ್ಟಂತೆ ತಪ್ಪಿತಸ್ಥರು ಯಾರೇ ಆಗಿರಲಿ, ಅವರಾರ‍ಯರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ, ನೇಮಕಾತಿಯಂತಹ ಸೂಕ್ಷ್ಮ ವಿಚಾ​ರಗಳಲ್ಲಿ ನಿ​ಷ್ಪಕ್ಷಪಾತವಾಗಿ ಸರ್ಕಾರ ತನಿಖೆ ನಡೆಸುವ ಉದ್ದೇಶದೊಂದಿಗೆ ಇದನ್ನು ಸಿಐಡಿಗೆ ಒಪ್ಪಿಸಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ. ಪ್ರಕರಣದಲ್ಲಿ ಪ್ರಶ್ನೆ, ಉತ್ತರಗಳಲ್ಲಿ ವ್ಯತ್ಯಾಸ ಕಂಡ ತಕ್ಷಣವೇ ಸಿಐಡಿ (CID) ತನಿಖೆಗೆ ಒಪ್ಪಿಸಿದ್ದೇವೆ. ತನಿಖೆ ಸಾಗಿದೆ, ಪ್ರಕರಣದಲ್ಲಿ ಕಾಂಗ್ರೆಸ್‌ ಶಾಸಕ ಎಂ.ವೈ.ಪಾಟೀಲ್‌ ಗನ್‌ಮ್ಯಾನ್‌ ಸೇರಿದಂತೆ ಹಲವರ ಬಂಧನವಾಗಿದೆ. 

ಹಗರಣದಲ್ಲಿ ಹೆಸರು ಕೇಳಿ ಬಂದಿರುವ ದಿವ್ಯಾ ಹಾಗರಗಿ ಪಕ್ಷದ ನಾಯಕಿಯಲ್ಲ, ಅವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ, ಮೊದಲಿಗೇ ಅವರ ಶಿಕ್ಷಣ ಸಂಸ್ಥೆ ಮೇಲೆಯೇ ದಾಳಿ ನಡೆದಿದೆ ಎಂದರು. ಪಿಎಸ್‌ಐ ಹುದ್ದೆಗಳ ಮರು ಪರೀಕ್ಷೆ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ತನಿಖೆ ಸಾಗಿದೆ. ವರದಿ ಬರಲಿ, ಅದನ್ನಾಧರಿಸಿ ಮುಂದಿನ ನಿರ್ಧಾರ ಸರ್ಕಾರ ಕೈಗೊಳ್ಳಲಿದೆ ಎಂದರು.

Tap to resize

Latest Videos

ಮಹಾರಾಷ್ಟ್ರದಲ್ಲಿ ದಿವ್ಯಾ?: ಜ್ಞಾನ ಜ್ಯೋತಿ ಪರೀಕ್ಷಾ ಕೇಂದ್ರದಲ್ಲಿ ನಡೆದ ಈ ಅಕ್ರಮದಲ್ಲಿ ಆ ಶಾಲೆಯ ಕಾರ್ಯದರ್ಶಿ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಸಿಐಡಿ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದಾರೆ. ಕಳೆದ 6 ದಿನಗಳಿಂದ ತಲೆಮರೆಸಿಕೊಂಡಿರುವ  ದಿವ್ಯಾ ಮತ್ತು ಅವರ ಶಾಲೆಯ ಟೀಂನ್ನು ಬಂಧಿಸಲು ಸಿಐಡಿ ಅಧಿಕಾರಿಗಳಿಂದ ಸಾಧ್ಯವಾಗಿಲ್ಲ. ಅವರು ಕರ್ನಾಟಕ ಬಿಟ್ಟು ಮಹಾರಾಷ್ಟ್ರದಲ್ಲಿ ಅವಿತಿದ್ದಾರೆ ಎನ್ನುವ ಮಾಹಿತಿ ಆಧರಿಸಿ ಸಿಐಡಿಯ ಒಂದು ಮಹಾರಾಷ್ಟ್ರಕ್ಕೂ ಹೋಗಿದೆ. ಆದ್ರೂ ಇನ್ನೂ ಸಿಐಡಿ ಕೈಗೆ ಸಿಕ್ಕಿಲ್ಲ. 

ಪಿಎಸ್‌ಐ ಅಕ್ರಮದ ಬಿಸಿ: ಬಿಜೆಪಿಯಲ್ಲಿ ಹೆಚ್ಚಿದ ಕಸಿವಿಸಿ

ಸಿಎಂಗೂ ತಟ್ಟಿದ ಬಿಸಿ: ಎರಡು ದಿನಗಳ ಪ್ರವಾಸಕ್ಕಾಗಿ ಕಲಬುರಗಿಗೆ ಆಗಮಿಸಿದ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೂ ಈ ಪ್ರಕರಣದ ಬಿಸಿ ತಟ್ಟಿದೆ. ಸಿಎಂ ಹೆಲಿಕಾಪ್ಟರ್ ಇಳಿದು ಬಿಜೆಪಿ ವಿಭಾಗೀಯ ಸಭೆಗೆ ತೆರಳುತ್ತಿದ್ದ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಅವರ ಕಾರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ದಿವ್ಯಾ ಹಾಗರಗಿ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಯುವ ಘಟಕದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.

ಕಾಂಗ್ರೆಸ್‌ಗೂ ಉರುಳು: ಪಿ.ಎಸ್.ಐ ನೇಮಕಾತಿ ಅಕ್ರಮ ಪ್ರಕರಣವನ್ನು ಕಾಂಗ್ರೆಸ್ ರಾಜಕೀಯವಾಗಿ ಬಳಸಿಕೊಳ್ಳಲು ಯತ್ನಿಸಿರುವ ಬೆನ್ನಲ್ಲೇ, ಇದೀಗ ಅದರ ಉರುಳು ಸ್ವತಃ ಕಾಂಗ್ರೆಸ್‌ಗೂ ಸುತ್ತಿಕೊಂಡಿದೆ. ಅಫಜಲಪುರದ ಕಾಂಗ್ರೆಸ್ ಶಾಸಕ ಎಂ.ವೈ. ಪಾಟೀಲ್ (MY Patil) ಅವರ ಗನ್‌ಮ್ಯಾನ್‌ನನ್ನು ಸಿಐಡಿ (CID) ಬಂಧಿಸಿದೆ. ಈ ಮೂಲಕ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಎಂ.ವೈ ಪಾಟೀಲ್ ಅವರ ಗನ್ ನ್ಯಾನ್ ಆಗಿದ್ದ DAR ಪೇದೆ, ಹಯ್ಯಾಳ ದೇಸಾಯಿ ಸಹ ಮೊನ್ನೆ ನಡೆದ ಪಿಎಸ್‌ಐ ನೇಮಕಾತಿಯಲ್ಲಿ ಆಯ್ಕೆಯಾಗಿದ್ದು, ಇದೂ ಸಹ ಅಕ್ರಮ ನೇಮಕಾತಿ ಎನ್ನುವುದು ಪತ್ತೆ ಹಚ್ಚಿರುವ ಸಿಐಡಿ, ಶಾಸಕರ ಗನ್ ಮ್ಯಾನ್ ಹಯ್ಯಾಳಿ ದೇಸಾಯಿ ಮತ್ತು ಆತನ ಆಪ್ತ ರುದ್ರಗೌಡ ಎನ್ನುವಾತನನ್ನು ಬಂಧಿಸಿದ್ದಾರೆ. ಇನ್ನೂ ಈ ಅಕ್ರಮದ ಜಾಲ ಎಲ್ಲೆಲ್ಲಿ ವ್ಯಾಪಿಸಿದೆ. ಇದರ ಆಳ ಅಗಲ ಎಷ್ಟಿದೆ ಎನ್ನುವುದನ್ನು ಸಿಐಡಿ ಪ್ರಾಮಾಣಿಕ ತನಿಖೆ ಮೂಲಕ ಬಯಲಿಗೆಳೆಯಬೇಕಾಗಿದೆ.

ಅಭ್ಯರ್ಥಿಗಳಿಗೆ ಸಿಐಡಿ ಡ್ರಿಲ್‌, ಪ್ರತಿದಿನ 50 ಮಂದಿ ವಿಚಾರಣೆ: PSI ಅಕ್ರಮ ನೇಮಕಾತಿ ಪ್ರಕರಣ (PSI Recruitment Scam) ಸಂಬಂಧ ಈಗ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಿಐಡಿ (CID) ತನಿಖೆ ಬಿಸಿ ತಟ್ಟಿದ್ದು ಮೊದಲ ಹಂತದಲ್ಲಿ 50 ಮಂದಿ ಅಭ್ಯರ್ಥಿಗಳನ್ನು ವಿಚಾರಣೆಗೊಳಪಡಿಸಿ ಅಧಿಕಾರಿಗಳು ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಈ ವಿಚಾರಣೆ ಮುಂದುವರೆಯಲಿದ್ದು, ಗುರುವಾರ ಮತ್ತೆ 50ಕ್ಕೂ ಹೆಚ್ಚಿನ ಅಭ್ಯರ್ಥಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ಬುಲಾವ್‌ ನೀಡಿದೆ. ಸಿಐಡಿ ಕೇಂದ್ರ ಕಚೇರಿಯಲ್ಲಿ ತನಿಖಾಧಿಕಾರಿ ಮುಂದೆ ಒಬ್ಬೊಬ್ಬರಾಗಿ ಅಭ್ಯರ್ಥಿಗಳು ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ. 

ಪಿಎಸ್‌ಐ ನೇಮಕಾತಿ ಅಕ್ರಮ: 545 ಅಭ್ಯರ್ಥಿಗಳಿಗೆ ಸಿಐಡಿ ನೋಟಿಸ್‌

ಈ ವೇಳೆ ಅಭ್ಯರ್ಥಿಗಳ ಒಎಂಆರ್‌ ಶೀಟ್‌ ಸೇರಿದಂತೆ ಕೆಲ ದಾಖಲೆಗಳನ್ನು ಪರಾಂಬರಿಸಿರುವ ಸಿಐಡಿ ಅಧಿಕಾರಿಗಳು, ಮುಂದಿನ ಹಂತದಲ್ಲಿ ತನಿಖೆ ವೇಳೆ ಅನುಮಾನ ಬಂದರೆ ವಿಚಾರಣೆಗೆ ಬರಬೇಕು ಎಂದು ಸೂಚಿಸಿ ಅಭ್ಯರ್ಥಿಗಳನ್ನು ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ. ನೇಮಕಾತಿಯಲ್ಲಿ ಅಕ್ರಮ ಆರೋಪದ ಹಿನ್ನೆಲೆಯಲ್ಲಿ ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗೆ ಆಯ್ಕೆಯಾಗಿದ್ದ 545 ಅಭ್ಯರ್ಥಿಗಳಿಗೆ ಒಎಂಆರ್‌ ಪ್ರತಿ ಸಮೇತ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ನೋಟಿಸ್‌ ಜಾರಿಗೊಳಿಸಿದೆ. 

click me!