Weekend Curfew: ಬದಲಾದ ನಿಯಮ, ಎಣ್ಣೆ ಪ್ರಿಯರಿಗೆ ಶಾಕ್

Published : Jan 07, 2022, 06:57 PM IST
Weekend Curfew: ಬದಲಾದ ನಿಯಮ, ಎಣ್ಣೆ ಪ್ರಿಯರಿಗೆ ಶಾಕ್

ಸಾರಾಂಶ

* ಅಬಕಾರಿ ಇಲಾಖೆ ಆದೇಶದಲ್ಲಿ ಬದಲಾವಣೆ * ಎಣ್ಣೆ ಪ್ರಿಯರಿಗೆ ಶಾಕ್ ಕೊfಟ್ಟ ಅಬಕಾರಿ ಸಚಿವ ​​​​​​​* ವೀಕೆಂಡ್ ಕರ್ಫ್ಯೂ ವೇಳೆ ಎಣ್ಣೆ ಸಿಗಲ್ಲ  

ಬೆಂಗಳೂರು, (ಜ.07): ಕರ್ನಾಟಕದಲ್ಲಿ ಕೊರೋನಾ ವೈರಸ್ (Coronavirus) ನಿಯಂತ್ರಿಸುವ ಹಿನ್ನೆಲೆ ವಾರಾಂತ್ಯದ ಕರ್ಫ್ಯೂ(Weekend Curfew) ಜಾರಿಗೊಳಿಸಲಾಗಿದೆ. ಈ ವೀಕೆಂಡ್ ಕರ್ಫ್ಯೂ ಸಂದರ್ಭದಲ್ಲಿ ಮದ್ಯದಂಗಡಿ ಇರುತ್ತಾ? ಪಾರ್ಸಲ್ ಇರುತ್ತಾ ಎನ್ನುವ ಗೊಂದಲಗಳು ಇದ್ದವು. ಇದಕ್ಕೆ ಇದೀಗ ಸ್ವತಃ ಅಬಕಾರಿ ಸಚಿವ ಕೆ ಗೋಲಾಪಯ್ಯ(K Gopalaiah) ಸ್ಪಷ್ಟಪಡಿಸಿದ್ದಾರೆ.

ಇಂದು(ಶುಕ್ರವಾರ) ಬೆಂಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಹೆಚ್ಚುತ್ತಿರುವ ಕಾರಣ ಸರ್ಕಾರ ಘೋಷಿಸಿರುವ ವಾರಾಂತ್ಯದ ಲಾಕ್ ಡೌನ್ ಹಿನ್ನೆಲೆ ಇಂದು(ಶುಕ್ರವಾರ) ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಗಿನವರೆಗೆ ರಾಜ್ಯಾದ್ಯಂತ ಮದ್ಯ(Liquor ಮಾರಾಟ ಸಂಪೂರ್ಣ ನಿಷೇಧಿಸಲಾಗಿದೆ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಸ್ಪಷ್ಟಪಡಿಸಿದರು.

Weekend Curfew ವೀಕೆಂಡ್ ಕರ್ಫ್ಯೂ ವೇಳೆ ಮದ್ಯ ಇರುತ್ತಾ? ಡಿಸಿ ವಿವೇಚನೆಗೆ ಬಿಟ್ಟ ಅಬಕಾರಿ ಇಲಾಖೆ

ರಾಜ್ಯದ ಜನರ ಹಿತದೃಷ್ಟಿಯಿಂದ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದ್ದು, ಎಲ್ಲ ಬಾರ್ ಅಂಡ್ ರೆಸ್ಟೊಂರೆಂಟ್ ಮಾಲೀಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

ರಾಜ್ಯದಲ್ಲಿ ಕೊರೋನಾ ಹಾಗೂ ಓಮಿಕ್ರಾನ್ ಸೋಂಕು ಹಾವಳಿ ಹೆಚ್ಚಾಗುತ್ತಿದ್ದು, ಇಂದು(ಶುಕ್ರವಾರ) ರಾತ್ರಿ 10 ಗಂಟೆಯಿಂದ ವಾರಾಂತ್ಯ ಕರ್ಫ್ಯೂ ಜಾರಿಯಾಗಲಿದೆ. ರಾತ್ರಿ 8ರಿಂದ ಸೋಮವಾರ ಬೆಳಗ್ಗೆ 5 ಗಂಟೆವರೆಗೆ ಕರ್ಫ್ಯೂ ಇರಲಿದೆ.

ಡಿಸಿ ವಿವೇಚೆನೆಗೆ ಬಿಟ್ಟಿದ್ದ ಅಬಕಾರಿ ಇಲಾಖೆ
ವೀಕೆಂಡ್ ಕರ್ಫ್ಯೂ (Weekend Curfew) ಸಂದರ್ಭದಲ್ಲಿ ಮದ್ಯ ಮಾರಾಟ ಮಾಡುವ ಬ್ಗಗೆ ಅಬಕಾರಿ ಇಲಾಖೆ ಆಯಾ ಜಿಲ್ಲಾಧಿಕಾರಿಗಳ ವಿವೇಚನೆಗೆ ಬಿಟ್ಟಿತ್ತು.

ಮದ್ಯ ಮಾರಾಟ ಜಿಲ್ಲಾಧಿಕಾರಿಗಳ ವಿವೇಚನೆಗೆ ಬಿಟ್ಟಿದ್ದು,ಪ್ರಾದೇಶಿಕ ಅವಶ್ಯಕತೆಗಳಿಗೆ ಆನುಗುಣವಾಗಿ ಅಯಾ ಜಿಲ್ಲಾಧಿಕಾರಿಗಳು ಮದ್ಯ ಮಾರಾಟ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಬಹುದು ಎಂದು ಅಬಕಾರಿ ಇಲಾಖೆ ಆದೇಶಿಸಿತ್ತು.

ಸಚಿವ ಸಂಪುಟದಲ್ಲಿ ಪ್ರಸ್ತಾಪಿಸಿದ್ದ ಗೋಪಾಲಯ್ಯ
ವೀಕೆಂಡ್ ಕರ್ಫ್ಯೂ (Weekend Curfew) ವೇಳೆ ಮದ್ಯ ಮಾರಾಟಕ್ಕೆ ಅವಕಾಶ ನೀಡುವ ವಿಚಾರವಾಗಿ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಅಬಕಾರಿ ಸಚಿವ ಗೋಪಾಲಯ್ಯ (Minister Gopalaiah) ಪ್ರಸ್ತಾಪ ಮಾಡಿದ್ದರು.

ಮದ್ಯ ಮಾರಾಟಕ್ಕೆ ಅವಕಾಶ ಕೊಡುವಂತೆ ಸಚಿವರು ಪ್ರಸ್ತಾಪಿಸಿದ್ದಾರೆ. ಮದ್ಯ ಮಾರಾಟಕ್ಕೆ ಅವಕಾಶ ಕೊಡದಿದ್ದರೆ ದಿನಕ್ಕೆ 75 ಕೋಟಿ ರೂ. ನಷ್ಟವಾಗುತ್ತದೆ. ಹೀಗಾಗಿ, ವೀಕೆಂಡ್​ ಕರ್ಫ್ಯೂ ವೇಳೆಯಲ್ಲೂ ಮದ್ಯ ಮಾರಾಟಕ್ಕೆ ಅವಕಾಶ ನೀಡಬೇಕು ಎಂದು ಸಚಿವ ಗೋಪಾಲಯ್ಯ ಹೇಳಿದ್ದಾರೆ. ಅವರ ಮಾತಿಗೆ ಸಚಿವ ಜೆ.ಸಿ. ಮಾಧುಸ್ವಾಮಿ (JC Madhuswamy) ಬೆಂಬಲ ಸೂಚಿಸಿದ್ದರು.

ಬೆಳಗಿನ ಅವಧಿಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕೊಡಬಹುದು ಎಂದು ಮಾಧುಸ್ವಾಮಿ ಹೇಳಿದ್ದಾರೆ. ಆದ್ರೆ, ಆ ವೇಳೆ ಯಾವುದೇ ಅಂತಿಮ ತೀರ್ಮಾನವಾಗಲಿಲ್ಲ.

ರಾಜ್ಯದಲ್ಲಿ 2 ವಾರ ವೀಕೆಂಡ್ ಕರ್ಫ್ಯೂ 
ರಾಜ್ಯದಲ್ಲಿ ಕೊರೋನಾ ವೈರಸ್(Coronavrius) ಪ್ರಮಾಣ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವೀಕೆಂಡ್ ಕರ್ಪ್ಯೂ ಜಾರಿ ಮಾಡಲಾಗಿದೆ. ಅಲ್ಲದೇ ಬೆಂಗಳೂರಲ್ಲಿ ಮಾತ್ರ ಶಾಲೆಗಳನ್ನ ಎರಡು ವಾರ ಬಂದ್ ಮಾಡಲು ಸರ್ಕಾರ ತೀರ್ಮಾನಿಸಿದೆ.

ಇಂದು(ಮಂಗಳವಾರ) ತಜ್ಞರ ಜೊತೆಗಿನ ಸಭೆ ಬಳಿಕ ಸಚಿವರಾದ ಅಶೋಕ್, ಸುಧಾಕರ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು,  ಇದೇ ಶುಕ್ರವಾರ ಸಂಜೆಯಿಂದ ಸೋಮವಾರ ಬೆಳಗ್ಗೆ 5ರ ವರೆಗೆ ವೀಕೆಂಡ್ ಕರ್ಫ್ಯೂ (weekend Curfew)  ಇರಲಿದೆ ಎಂದು  ಸ್ಪಷ್ಟಪಡಿಸಿದರು

ಕರ್ನಾಟಕದಾದ್ಯಂತ ಎರಡು ವಾರ ವೀಕೆಂಡ್ ಜಾರಿಯಲ್ಲಿರಲಿದೆ. ಇನ್ನು ಬೆಂಗಳೂರಲ್ಲಿ ಮಾತ್ರ ಎರಡು ವಾರ ಶಾಲೆ ಬಂದ್ ಮಾಡಲು ತೀರ್ಮಾನಿಸಲಾಗಿದೆ ಎಂದರು. 

ಬೆಂಗಳೂರಿನಲ್ಲಿ ಮುಂದಿನ ಎರಡು ವಾರಗಳು (ಜನವರಿ 6ರಿಂದ) 10 ಮತ್ತು 12ನೇ ತರಗತಿ ಹೊರತು ಪಡಿಸಿ ಉಳಿದ ಎಲ್ಲ ತರಗತಿಗಳನ್ನೂ ಬಂದ್ ಮಾಡಿ ಆನ್‌ಲೈನ್‌ ಮೂಲಕ ನಡೆಸಲು ನಿರ್ಧರಿಸಲಾಗಿದೆ.

ಈಗಾಗಲೇ ವೀಕೆಂಡ್​ನಲ್ಲಿ ಹೋಟೆಲ್​​, ಬಾರ್​, ರೆಸ್ಟೋರೆಂಟ್​ ಬಂದ್​ ಮಾಡಿಸಲು ಸುತ್ತೋಲೆ ಹೊರಡಿಸಲಾಗಿದೆ.  ಪಿಎಸ್​ಐಗಳು ತಾವೇ ಮುಂದೆ ನಿಂತು ಹೋಟೆಲ್, ಬಾರ್ , ರೆಸ್ಟೋರೆಂಟ್​ ಅನ್ನು ಶುಕ್ರವಾರ ರಾತ್ರಿ ಬಂದ್​ ಮಾಡಿಸುವಂತೆ ಸೂಚನೆ ನೀಡಲಾಗಿದೆ. ಸರ್ಕಾರದ ಆದೇಶ ಹಿನ್ನೆಲೆ ಎಲ್ಲ ಪಿಎಸ್​ಐಗಳಿಗೂ ಸೂಚನೆ ನೀಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಉಡುಪಿ: ಧರ್ಮ-ಸಂವಿಧಾನ ಬೇರೆಯಲ್ಲ:-ಪವನ್ ಕಲ್ಯಾಣ ಬಣ್ಣನೆ
ಪಬ್ಬಲ್ಲಿ ಮೊಬೈಲ್‌ ತರಲುಹೋದ ಕನ್ನಡಿಗ ಬಲಿ, ಗೋವಾ ಪಬ್ ದುರಂತಕ್ಕೆ ಕಾರಣವೇನು?