* ಕರ್ನಾಟಕದಲ್ಲಿ ದಿನೇ ದಿನೇ ಕೊರೋನಾ ಸೋಂಕು ಹೆಚ್ಚಳ
* ಸಂಪೂರ್ಣ ಲಾಕ್‌ಡೌನ್ ಆತಂಕದಲ್ಲಿ ಸಾರ್ವಜನಿಕರು
* ಲಾಕ್‌ಡೌನ್ ಆಗುತ್ತಾ ಎನ್ನುವ ಬಗ್ಗೆ ಸ್ಪಷ್ಟನೆ ಕೊಟ್ಟ ಆರೋಗ್ಯ ಸಚಿವ
ಬೆಂಗಳೂರು, (ಜ.07): ಕರ್ನಾಟಕದಲ್ಲಿ ಕೊರೋನಾ ಸೋಂಕು (Coronavirus) ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಸೋಂಕ ನಿಯಂತ್ರಣಕ್ಕೆ ವೀಕೆಂಡ್ ಕರ್ಫ್ಯೂ (Weekend Curfew) ಸೇರಿದಂತೆ ಹಲವು ಟಫ್ ರೂಲ್ಸ್ ಜಾರಿ ಮಾಡಿದೆ. ಇನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಕೊರೋನಾ ಕೇಸ್ ಹೆಚ್ಚಳವಾಗುವ ಸಾಧ್ಯತೆಗಳಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ಹಿನ್ನೆಲೆಯಲ್ಲಿ ಇಡೀ ರಾಜ್ಯ ಸಂಪೂರ್ಣ ಲಾಕ್‌ಡೌನ್(Lockdown) ಆಗುತ್ತೆ ಎನ್ನುವ ಭೀತಿ ಸಾರ್ವಜನಕರಲ್ಲಿ ಮೂಡಿದೆ. ಅಲ್ಲದೇ ಬೀದಿ ವ್ಯಾಪಾರಿಗಳು ಆತಂಕಗೊಂಡಿದ್ದಾರೆ. ಇನ್ನು ಈ ಲಾಕ್‌ಡೌನ್ ಆಗುತ್ತೋ ಇಲ್ಲವೋ ಎನ್ನುವ ಬಗ್ಗೆ ಸ್ವತಃ ಆರೋಗ್ಯ ಸಚಿವ ಡಾ ಕೆ ಸುಧಾಕರ್(dr K Sudhakar) ಸ್ಪಷ್ಟನೆ ಕೊಟ್ಟಿದ್ದು, ಅದು ಈ ಕೆಳಗಿನಂತಿದೆ.
Corona Update ಕರ್ನಾಟಕದಲ್ಲಿ ಕೊರೋನಾ ಕೇಸ್ ದ್ವಿಗುಣ, ಹೆಚ್ಚಾಯ್ತು ಆತಂಕ
ಇಂದು(ಶುಕ್ರವಾರ) ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ಸೋಂಕು ತಡೆಗೆ ಲಾಕ್‍ಡೌನ್ ಪರಿಹಾರ ಅಲ್ಲ. ಹೀಗಾಗಿ ಮತ್ತೆ ಸಂಪೂರ್ಣ ಲಾಕ್‍ಡೌನ್ ಇಲ್ಲ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ಜನರಲ್ಲಿನ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಸಂಪೂರ್ಣ ಲಾಕ್‍ಡೌನ್ ಸ್ಪಷ್ಟತೆಯೇ ಇಲ್ಲ. ಮುಖ್ಯಮಂತ್ರಿಗಳಿಗೆ ಅಷ್ಟು ಸ್ಪಷ್ಟತೆ ಇದೆ. ಸೋಂಕು ಹಬ್ಬಿಯೇ ಹಬ್ಬುತ್ತೆ, ತಡೆಯಲು ಆಗಲ್ಲ. ಸೋಂಕು ಹೆಚ್ಚು ಆಗಿಯೇ ಆಗುತ್ತೆ. ಯಾರೂ ಕೂಡಾ ಪಾಸಿಟಿವಿಟಿ ಬಗ್ಗೆ ಚಿಂತೆ ಬೇಡ ಎಂದರು.
ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಮಾಡುವ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಕೊರೋನಾ ಕೇಸ್ ಜಾಸ್ತಿ ಆಗುತ್ತಿದೆ. ಇನ್ನೂ ಕೇಸ್ ಜಾಸ್ತಿ ಆಗುತ್ತೆ. ಇದು ವಿಶ್ವವ್ಯಾಪಿ ಹರಡಿರುವ ರೋಗ ಆಗಿದೆ. ನಮ್ಮಲ್ಲಿ ಅಂತಾರಾಷ್ಟ್ರೀಯ ವಿಮಾನ ಬಂದ್ ಆಗಿಲ್ಲ. ಹೀಗಾಗಿ ಹೊರಗಿನವರ ಓಡಾಟ ಹೆಚ್ಚಾಗಿ ಇರುತ್ತೆ. ಹೀಗಿದ್ದರೂ ನಾವು ಕೊರೋನಾ ನಿಯಂತ್ರಣ ಮಾಡಲು ಅವಕಾಶ ಇದೆ. ಇದಕ್ಕೆ ಜನರ ಸಹಕಾರ ಪಡೆದು ಮುಂದೆವರಿಯುತ್ತೇವೆ ಎಂದು ಹೇಳಿದರು.
ಜನರ ಬದುಕಿಗೆ ತೊಂದರೆ ಆಗದಂತೆ ಕ್ರಮ ತಗೋತೀವಿ. ನಮಗೆ ಎರಡು ವರ್ಷಗಳ ಅನುಭವ ಇದೆ. ಹೇಗೆ ನಿಯಂತ್ರಣ ಮಾಡಬೇಕು ಎಂದು ಅನುಭವ ಇದೆ. ಹೀಗಾಗಿ ಜನರಿಗೆ ಸಮಸ್ಯೆ ಆಗದಂತೆ ಆರ್ಥಿಕ ಚಟುವಟಿಕೆಗಳಿಗೆ ತೊಂದರೆ ಆಗದಂತೆ ಕ್ರಮ ತೆಗೆದುಕೊಳ್ಳುತ್ತೇವೆ ಅನ್ನೋ ಮೂಲಕ ಸಂಪೂರ್ಣ ಲಾಕ್ ಡೌನ್ ಇಲ್ಲ ಎಂದು ಸ್ಪಷ್ಟಪಡಿಸಿದರು.
15-18 ವರ್ಷದವರಿಗೆ ಕರ್ನಾಟಕದಲ್ಲಿ ಶೇ.42 ಲಸಿಕೆ ನೀಡಲಾಗಿದೆ. 13.35 ಲಕ್ಷ ಮಕ್ಕಳಿಗೆ ಲಸಿಕೆ ನೀಡಲಾಗಿದೆ. ಚಿಕ್ಕಬಳ್ಳಾಪುರ, ಕೊಡಗಿನಲ್ಲಿ ಶೇ.59, ಬೆಳಗಾವಿ, ಬಾಗಲಕೋಟೆ, ಹಾವೇರಿ ಶೇ.58 ಹಾಗೂ ಉತ್ತರ ಕನ್ನಡ ಶೇ.57 ಯಲ್ಲಿ ವ್ಯಾಕ್ಸಿನ್ ನೀಡಲಾಗಿದೆ. ದೊಡ್ಡವರಲ್ಲಿ ಶೇ.99 ಮೊದಲ ಡೋಸ್, 2ನೇ ಡೋಸ್ ಶೇ.80 ಲಸಿಕೆ ನೀಡಲಾಗಿದೆ. ಇಡೀ ದೇಶದಲ್ಲಿ 3ನೇ ಸ್ಥಾನದಲ್ಲಿ ದೊಡ್ಡವರ ಲಸಿಕೆಯಲ್ಲಿ ಇದ್ದೇವೆ ಎಂದು ಮಾಹಿತಿ ನೀಡಿದರು.
ಒಮಿಕ್ರಾನ್, ಮೂರನೇ ಅಲೆ ವೇಗವಾಗಿ ಹರಡುತ್ತಿದೆ. ಶೇ. 3.95 ಪಾಸಿಟಿವಿಟಿ ದರ ಇದೆ. ಬೆಂಗಳೂರು ನಗರ, ಗ್ರಾಮಾಂತರ, ಮಂಡ್ಯ ಮೈಸೂರು, ಉಡುಪಿ ಹಾಗೂ ಕೋಲಾರದಲ್ಲಿ ಹೆಚ್ಚು ಕೇಸ್‍ಗಳು ಕಂಡುಬರುತ್ತಿವೆ. ಈ ಸಂಬಂಧ ಡಿಸಿಗಳ ಜೊತೆ ಮತನಾಡಿ ಅಗತ್ಯ ಕ್ರಮ ಕೈಗೊಳ್ಳುತ್ತೇವ ಎಂದರು ತಿಳಿಸಿದರು.