ಶಾಸಕರ ಭವನದಲ್ಲೇ ಇಡ್ಲಿ, ದೋಸೆ ಸಿಗುತ್ತಿಲ್ಲ! ವಿಧಾನ ಪರಿಷತ್‌ನಲ್ಲಿ ಉಪಹಾರದ ಸಮಸ್ಯೆ ಪ್ರಸ್ತಾಪಿಸಿದ ಐವನ್ ಡಿಸೋಜಾ

Kannadaprabha News   | Kannada Prabha
Published : Mar 19, 2026, 11:34 AM IST
Ivan D'Souza

ಸಾರಾಂಶ

ವಿಧಾನ ಪರಿಷತ್ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಐವನ್ ಡಿಸೋಜಾ ಅವರು, ಶಾಸಕರ ಭವನದಲ್ಲೂ ಇಡ್ಲಿ, ದೋಸೆ ಸಿಗುತ್ತಿಲ್ಲ ಎಂದು ಉಪಹಾರದ ಸಮಸ್ಯೆಯನ್ನು ಪ್ರಸ್ತಾಪಿಸಿದರು. ಗ್ಯಾಸ್ ಕೊರತೆಯಿಂದ ಈ ಸಮಸ್ಯೆ ಉಂಟಾಗಿದೆ ಎಂದು ಚರ್ಚೆಯಾದಾಗ, ಸಭಾಪತಿಗಳು ಹಾಸ್ಯಮಯವಾಗಿ ತಿಂಡಿ ತಿಂದು ಬರಲು ಸಮಯಾವಕಾಶ ನೀಡಿದರು.

ವಿಧಾನ ಪರಿಷತ್ (ಮಾ.19): ಉಪಹಾರ ಸೇವಿಸಲು ಇಡ್ಲಿ, ದೋಸೆ ಸಿಗುತ್ತಿಲ್ಲ. ಶಾಸಕರ ಭವನದಲ್ಲೇ ಸಿಕ್ಕಿಲ್ಲ. ಶಾಸಕರ ಪರಿಸ್ಥಿತಿಯೇ ಹೀಗಾದರೆ ಜನರ ಪರಿಸ್ಥಿತಿ ಹೇಗೆ ಎಂದು ಕಾಂಗ್ರೆಸ್‌ ಸದಸ್ಯ ಐವನ್ ಡಿಸೋಜಾ ಪ್ರಶ್ನಿಸಿದರು.

ಕಲಾಪ ಆರಂಭವಾಗುತ್ತಿದ್ದಂತೆ ಡಿಸೋಜಾ ಅವರು, ಹೋಟೆಲ್​​ಗಳಲ್ಲಿ ಇಂದು ತಿಂಡಿ ಸಿಗುತ್ತಿಲ್ಲ. ಶಾಸಕರ ಭವನದಲ್ಲಿಯೇ ಇಡ್ಲಿ, ದೋಸೆ ಸಿಗುತ್ತಿಲ್ಲ. ಸಮಸ್ಯೆ ಎಲ್ಲಿವರೆಗೂ ಇರಲಿದೆ, ಈ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ: Ugadi Festival 2026: ಯುಗಾದಿ ಎಂದರೆ ಕೇವಲ ಹಬ್ಬವಲ್ಲ, ಹೊಸ ವರ್ಷದ ಶುಭಾರಂಭ, ಬೇವು-ಬೆಲ್ಲದ ಆರೋಗ್ಯ ಮಹತ್ವ ತಿಳಿಯಿರಿ

ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಇಡ್ಲಿ, ವಡಾ ಸಿಗುತ್ತಿಲ್ಲವೆಂದು ಸದಸ್ಯರು ದೂರುತ್ತಿದ್ದಾರೆ. ಹೀಗಾಗಿ ಇಡ್ಲಿ ತರಿಸಿಕೊಳ್ಳುವ ವ್ಯವಸ್ಥೆ ಮಾಡಿಸಿ ಎಂದು ಹೇಳಿದಾಗ ಸಚಿವ ಜಮೀರ್ ಅಹಮದ್ ಪ್ರತಿಕ್ರಿಯಿಸಿ, ಇಡ್ಲಿ ಸಿಗುತ್ತಿಲ್ಲ ಎಂದು ಹೇಳಿಲ್ಲ. ಅಡುಗೆ ಮಾಡಲು ಗ್ಯಾಸ್ ಸಿಗುತ್ತಿಲ್ಲ ಇಂದು ಹೇಳುತ್ತಿದ್ದಾರೆ ಎಂದರು. ಈ ವೇಳೆ ಸಭಾಪತಿ ಬಸವರಾಜ ಹೊರಟ್ಟಿ, 10 ನಿಮಿಷ ಕಾಲಾವಕಾಶ ಕೊಡ್ತೇನೆ, ತಿಂಡಿ ತಿಂದು ಬನ್ನಿ ಎಂದು ನಗುತ್ತಾ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಾವಣಗೆರೆ ದಕ್ಷಿಣ ಬಿಜೆಪಿ ಟಿಕೆಟ್ ಸಿಗ್ತಿದ್ದಂತೆ ಹಮಾಲಿಯಾಗಿದ್ದ ತಂದೆಯ ನೆನೆದು ಭಾವುಕರಾದ ಶ್ರೀನಿವಾಸ್ ದಾಸಕರಿಯಪ್ಪ
ಡಿಜೆ ಹಳ್ಳಿ ಅಪ್ರಾಪ್ತೆ ಕೊಲೆ ಕೇಸ್ ಸ್ಫೋಟಕ ಮಾಹಿತಿ, ಆರೋಪಿ ಶಬೀಲ್ ಕೌರ್ಯಕ್ಕೆ ಬೆಚ್ಚಿ ಬಿದ್ದ ಬೆಂಗಳೂರು