ರಾಜ್ಯಲ್ಲಿ ಈಗ ಸರ್ಕಾರ ನೀಡಿದ ಶಕ್ತಿ ಯೋಜನೆಯದೇ ಸುದ್ದಿ. ಆದರೆ ಉಡುಪಿ ಜಿಲ್ಲೆಯಲ್ಲಿ ಮಾತ್ರ ಖಾಸಗಿ ಬಸ್ ಗಳ ಭರಾಟೆ ನಡುವೆ ಕೆ .ಎಸ್ ಆರ್ ಟಿ ಸಿ ಬಸ್ ಗಳು ಮಂಕಾಗಿವೆ.
ಉಡುಪಿ (ಜು.4): ರಾಜ್ಯಲ್ಲಿ ಈಗ ಸರ್ಕಾರ ನೀಡಿದ ಶಕ್ತಿ ಯೋಜನೆಯದೇ ಸುದ್ದಿ. ಆದರೆ ಉಡುಪಿ ಜಿಲ್ಲೆಯಲ್ಲಿ ಮಾತ್ರ ಖಾಸಗಿ ಬಸ್ ಗಳ ಭರಾಟೆ ನಡುವೆ ಕೆ .ಎಸ್ ಆರ್ ಟಿ ಸಿ ಬಸ್ ಗಳು ಮಂಕಾಗಿವೆ. ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ಶಕ್ತಿ ಪೀಠ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳಕ್ಕೆ ತೆರಳಲು ಸೂಕ್ತ ಸರಕಾರಿ ಬಸ್ ಗಳ ವ್ಯವಸ್ಥೆ ಇನ್ನೂ ಆಗಿಲ್ಲ. ಕ್ಷೇತ್ರದ ಅತ್ಯಂತ ಹತ್ತಿರವಿರುವ ಕೆಎಸ್ಆರ್ಟಿಸಿ ಬಸ್ ನಿಲ್ದಾಣವು ಕೂಡ ಅಪೂರ್ಣವಾಗಿದ್ದು ಪ್ರಯಾಣಿಕರು ಸಮಸ್ಯೆ ಎದುರಿಸುತ್ತಿದ್ದಾರೆ.
ರಾಜ್ಯ ಕಾಂಗ್ರೆಸ್ ಸರಕಾರ ಮಹಿಳೆಯರಿಗೆ ಕೆಎಸ್ಆರ್ಟಿಸಿ ಬಸ್ ಗಳಲ್ಲಿ ಉಚಿತ ಪ್ರಯಾಣ ನೀಡುವ ಶಕ್ತಿ ಯೋಜನೆ ಚಾಲನೆ ನೀಡಿದ ದಿನದಿಂದ ಮಹಿಳೆಯರು ಅದರ ಬರಪೂರ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ. ಅದರಲ್ಲೂ ವಾರಾಂತ್ಯದಲ್ಲಿ ಮಹಿಳೆಯರು ತೀರ್ಥಕ್ಷೇತ್ರಗಳನ್ನ ದರ್ಶನ ಮಾಡಲು ಕೆಎಸ್ಆರ್ಟಿಸಿ ಬಸ್ಸಿನ ಈ ಯೋಜನೆಯನ್ನು ಬಳಸಿಕೊಳ್ಳುತ್ತಿರುವುದು ಗಮನಾರ್ಹ ವಿಚಾರವಾಗಿದೆ. ಆದರೆ ಉಡುಪಿ ಜಿಲ್ಲೆಯಲ್ಲಿ ಸಾಕಷ್ಟು ತೀರ್ಥಕ್ಷೇತ್ರಗಳಿದ್ದರೂ ಕೂಡ ಖಾಸಗಿ ಬಸ್‌ಗಳ ಭರಾಟೆ ನಡುವೆ ಕೆ ಎಸ್ ಆರ್ ಟಿ ಸಿ ಬಸ್ ಗಳು ಮಂಕಾಗಿವೆ. ಜಿಲ್ಲೆಯಲ್ಲಿ ಬಸ್ ಗಳಿದ್ದೇ ಒಂದು ಕಥೆಯಾದರೆ ಬಸ್ ನಿಲ್ದಾಣದ್ದು ಇನ್ನೊಂದು ಕಥೆ. ಇನ್ನು ಜಿಲ್ಲೆಯ ಅತ್ಯಂತ ಪ್ರಸಿದ್ಧ ತೀರ್ಥಕ್ಷೇತ್ರಗಳಲ್ಲಿ ಒಂದಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳಕ್ಕೆ ಅತ್ಯಂತ ಹತ್ತಿರವಿರುವ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಅಪೂರ್ಣ ಕಾಮಗಾರಿಯ ಮೂಲಕ ಜನರಿಗೆ ಸಮಸ್ಯೆ ನೀಡುತ್ತಿದೆ.
undefined
ಮಳೆಗಾಗಿ ತಾಮ್ರದ ಬಿಂದಿಗೆ ಬಳಿ ಭವಿಷ್ಯ ಕೇಳಿದ ವಿಜಯಪುರ ಜನ! ಬಿಂದಿಗೆ ನುಡಿದ ಭವಿಷ್ಯ ನಿಜವಾಗುತ್ತಾ?
ದಕ್ಷಿಣ ಭಾರತದಲ್ಲಿ ಅತ್ಯಂತ ಪ್ರಸಿದ್ಧವಾದ ಶಕ್ತಿ ಕ್ಷೇತ್ರಗಳಲ್ಲಿ ಒಂದಾಗಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವರ ಗುರ್ತಿಸಿಕೊಂಡಿದೆ. ಇಲ್ಲಿಗೆ ರಾಜ್ಯದ ನಾನಾ ಮೂಲೆಗಳಿಂದ ಭಕ್ತರು ದೇವಿಯ ದರ್ಶನಕ್ಕಾಗಿ ಬರುತ್ತಿರುತ್ತಾರೆ. ಆದರೆ ದೂರದ ಊರಿನಿಂದ ಬರುವ ಭಕ್ತರಿಗೆ ಸೂಕ್ತ ಸರಕಾರಿ ಬಸ್ ನ ಸೇವೆ ಇಲ್ಲದೆ ಇರುವುದು ಭಕ್ತರಿಗೆ ಒಂದು ಸಮಸ್ಯೆ ಆಗಿದೆ ಎಂದರೆ ತಪ್ಪಾಗಲಾರದು.
ಬಹುತೇಕ ಭಕ್ತರು ಖಾಸಗಿ ಬಸ್ ಗಳನ್ನೇ ಬಳಸಿಕೊಂಡು ಕೊಲ್ಲೂರು ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡುತ್ತಿದ್ದಾರೆ. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಳಕ್ಕೆ ಅತ್ಯಂತ ಹತ್ತಿರವಿರುವ ಬೈಂದೂರಿನ ತಗರ್ಸೆ ಭಾಗದಲ್ಲಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ನಿರ್ಮಾಣ ಪ್ರಾರಂಭಿಸಲಾಗಿತ್ತು. ಶ್ರೀ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರಿಗೆ ಅನುಕೂಲವಾಗುವಂತೆ ಈ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿತ್ತು.ಬಸ್ ನಿಲ್ದಾಣದ ಕಟ್ಟಡ ಕಾಮಗಾರಿ ಸಂಪೂರ್ಣವಾಗಿ ಮುಗಿದಿದೆ ಆದರೆ ನಿಲ್ದಾಣದ ಒಳಗಿನ ನೆಲಹಾಸು ನಿರ್ಮಾಣ ಕಾಮಗಾರಿಗೆ ಅನುದಾನದ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಬಸ್ ನಿಲ್ದಾಣ ಉದ್ಘಾಟನೆಗೊಳ್ಳುವುದು ಕೊಳ್ಳದೆ ಅಪೂರ್ಣವಾಗಿಯೇ ಉಳಿದೆ.
ವೇಗವಾಗಿ ಚಲಿಸುತ್ತಿದ್ದ ಬಸ್ ಮಧ್ಯೆ ಸಿಲುಕಿದ ಬೈಕ್ ಸವಾರರನ್ನು ರಕ್ಷಿಸಲು ಬಸ್ ಪಲ್ಟಿ ಮಾಡಿದ
ಇದು ದೇವಳಕ್ಕೆ ಭೇಟಿ ನೀಡುವ ಭಕ್ತರಿಗೆ ಒಂದು ರೀತಿಯಲ್ಲಿ ಸಮಸ್ಯೆ ನೀಡುತ್ತಿದೆ.ಸರಕಾರ ಮಹಿಳೆಯರಿಗಾಗಿ ಉತ್ತಮ ಯೋಜನೆ ನೀಡಿದೆ. ಆದರೆ ಉಡುಪಿ ಜಿಲ್ಲೆಯಲ್ಲಿ ಮಾತ್ರ ಸರಕಾರಿ ಬಸ್ ಸೇವೆ ಮತ್ತು ನಿಲ್ದಾಣದ ಸಮಸ್ಯೆಗೆ ಮಾತ್ರ ಮುಕ್ತಿ ಸಿಕ್ಕಿಲ್ಲ. ಇನ್ನಾದರೂ ಸರಕಾರ ಈ ನಿಟ್ಟಿನಲ್ಲಿ ಗಮನ ಹರಿಸಿ ಉಡುಪಿ ಜಿಲ್ಲೆಗೆ ಬೇಕಾದ ಸರಕಾರಿ ಬಸ್‌ಗಳ ವ್ಯವಸ್ಥೆಯ ಜೊತೆಗೆ ಅಪೂರ್ಣಗೊಂಡ ಬಸ್ ನಿಲ್ದಾಣದ ಕಾಮಗಾರಿ ಪೂರ್ಣಗೊಳಿಸಿದಲ್ಲಿ ಕ್ಷೇತ್ರದ ಭಕ್ತರಿಗೆ ಅನುಕೂಲವಾಗಲಿದೆ.