ಸಿಎಂ ತವರಿನಲ್ಲಿ ಸರ್ಕಾರಿ ವೈದ್ಯೆಯ ಲಂಚಾವತಾರ, ಸೂಜಿ ಚುಚ್ಚಿದ್ರು ಕಾಸು, ಬ್ಯಾಂಡೆಂಜ್ ಹಾಕಿದ್ರು ಕಾಸು!

By Gowthami K  |  First Published Jul 4, 2023, 2:53 PM IST

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರಿನಲ್ಲಿ ಸರ್ಕಾರಿ ವೈದ್ಯೆಯ ಲಂಚಾವತಾರ ಬೆಳಕಿಗೆ ಬಂದಿದೆ.  ಸೂಜಿ ಚುಚ್ಚಿದ್ರು ಕಾಸು, ಬ್ಯಾಂಡೆಂಜ್ ಹಾಕಿದ್ರು ಕಾಸು. ಹಣ ಇಲ್ಲದೆ ವೈದ್ಯೆ ರೋಗಿಗಳನ್ನು ಮುಟ್ಟುವುದೇ ಇಲ್ಲ.


ಮೈಸೂರು (ಜು.4): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರಿನಲ್ಲಿ ಸರ್ಕಾರಿ ವೈದ್ಯೆಯ ಲಂಚಾವತಾರ ಬೆಳಕಿಗೆ ಬಂದಿದೆ.  ಸೂಜಿ ಚುಚ್ಚಿದ್ರು ಕಾಸು, ಬ್ಯಾಂಡೆಂಜ್ ಹಾಕಿದ್ರು ಕಾಸು. ಹಣ ಇಲ್ಲದೆ ವೈದ್ಯೆ ರೋಗಿಗಳನ್ನು ಮುಟ್ಟುವುದೇ ಇಲ್ಲ. ಖಾಸಗಿ ಆಸ್ಪತ್ರೆಯಂತೆ ಇಂತಿಷ್ಟು ಹಣ ಫಿಕ್ಸ್ ಮಾಡಿ ಪ್ರತಿದಿನ ಸುಲಿಗೆ ನಡೆಯುತ್ತಿದ್ದರೂ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದರು. ಮೈಸೂರು ಶಾಂತಿನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡಾ. ಕೋಮಲ ಲಂಚಾವತಾರ ವಿಡಿಯೋ ವೈರಲ್ ಆಗಿದೆ. ಸಿಬ್ಬಂದಿ, ನರ್ಸ್ ಗಳ ಮೂಲಕ ವೈದ್ಯೆ ರೋಗಿಗಳಿಂದ ಸುಲಿಗೆ ನಡೆಸುತ್ತಿದ್ದರು. ಉದಯಗಿರಿ ಪೊಲೀಸ್ ಠಾಣೆ ಪಕ್ಕದಲ್ಲೇ  ಪ್ರಾಥಮಿಕ ಆರೋಗ್ಯ ಕೇಂದ್ರ ಇದ್ದು, ಬಾಣಂತಿ, ಮಕ್ಕಳು ವೃದ್ದರಿಂದಲೂ ಲಂಚ ತೆಗೆದುಕೊಳ್ಳಲಾಗುತ್ತಿತ್ತು. ಲಂಚ ಕೊಟ್ಟರೆ ಮಾತ್ರ ಇಲ್ಲಿ ಸರ್ಕಾರಿ ಟ್ರೀಟ್ ಮೆಂಟ್ ನೀಡಲಾಗುತ್ತಿತ್ತು. ಡಾ. ಕೋಮಲ ಲಂಚ ಸುಲಿಗೆಗೆ ಕಡಿವಾಣ ಹಾಕುವವರೇ ಇರಲಿಲ್ಲ.

ಸಿದ್ದು 2.0 ಸರ್ಕಾರದ ಮೊದಲ ಅಧಿವೇಶನ ಆರಂಭ: ಹಸಿವು, ಭ್ರಷ್ಟಾಚಾರ ಮುಕ್ತ ಕರ್ನಾಟಕಕ್ಕೆ

Tap to resize

Latest Videos

ವಿಷಯ ತಿಳಿದು ಇದೀಗ ರೋಗಿಗಳಿಂದ ಹಣ ಪಡೆಯುತ್ತಿದ್ದ ವೈದ್ಯಾಧಿಕಾರಿ ಡಾ ಕೋಮಲ ಕೆಪಿ ಅವರನ್ನು ಅಮಾನತುಗೊಳಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.  ಮೈಸೂರು ಶಾಂತಿನಗರ ಪ್ರಾಥಮಿಕ ಆರೋಗ್ಯ ಕೇಂದ್ರದ  ಪ್ರಾಥಮಿಕ ಕೇಂದ್ರದಲ್ಲಿ ಉಚಿತ ಔಷಧಿ ಹಾಗೂ ಚಿಕಿತ್ಸೆ ಸೌಲಭ್ಯವಿದ್ರೂ ಹಣ ಪಡೆಯಲಾಗುತ್ತಿದೆ ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆದ ಬೆನ್ನಲ್ಲೇ  ವೈದ್ಯಾಧಿಕಾರಿಯನ್ನು ಅಮಾನತುಗೊಳಿಸಿದ ಆರೋಗ್ಯ ಇಲಾಖೆ ಆಯುಕ್ತ ರಂದೀಪ್  ಆದೇಶ ಹೊರಡಿಸಿದೆ.

ಬರಿದಾಗುತ್ತಿದೆ ಕೆಆರ್‌ಎಸ್‌ ಜಲಾಶಯ: ಕುಡಿಯುವ ನೀರಿಗೂ ಸಮಸ್ಯೆಯಾಗುವ ಸಂಕಷ್ಟ

ಕರ್ತವ್ಯಲೋಪ ಹಾಗೂ ದುರ್ನಡತೆ ಆರೋಪದಡಿ ಶಿಸ್ತುಕ್ರಮ ಬಾಕಿಯಿರಿಸಿ ಅಮಾನತು ಮಾಡಲಾಗಿದೆ. ಅಮಾನತು ಅವಧಿಯಲ್ಲಿ ಜೀವನಾಂಶ ಭತ್ಯೆಗಾಗಿ ನಾಗಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ.

 

click me!