ಕನ್ನಡಪ್ರಭಕ್ಕೆ ಗೋಯೆಂಕಾ ಪ್ರಶಸ್ತಿ: ಯಾದಗಿರಿ ವರದಿಗಾರ ಆನಂದ ಸೌದಿಗೆ ಕೇಂದ್ರ ಸಚಿವ ಗಡ್ಕರಿ ಪ್ರದಾನ

By Kannadaprabha News  |  First Published Mar 20, 2024, 6:00 AM IST

ಕನ್ನಡಪ್ರಭ’ ಬಯಲಿಗೆಳೆದ 545 ಪಿಎಸ್‌ಐ ಹುದ್ದೆಗಳ ನೇಮಕ ಹಗರಣ ರಾಷ್ಟ್ರವ್ಯಾಪಿ ಸದ್ದು ಮಾಡಿತ್ತು. ದೇಶದ ವಿವಿಧೆಡೆಯಿಂದ ಬಂದಿದ್ದ ಅನೇಕ ವರದಿಗಳ ಪೈಕಿ ತೀರ್ಪುಗಾರರು ಕನ್ನಡಪ್ರಭದಲ್ಲಿ ಪ್ರಕಟವಾದ ‘ಪಿಎಸ್‌ಐ ಅಕ್ರಮ’ ಕುರಿತ ವರದಿಗಳನ್ನು ಪ್ರಾದೇಶಿಕ ಭಾಷಾ ವಿಭಾಗದ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ. ಪ್ರಶಸ್ತಿಯು 1 ಲಕ್ಷ ರು. ಹಾಗೂ ಸ್ಮರಣಿಕೆಯನ್ನೊಳಗೊಂಡಿದೆ. 


ಬೆಂಗಳೂರು(ಮಾ.20):  ಭಾರತೀಯ ಪತ್ರಿಕಾರಂಗದ ಭೀಷ್ಮ, ಪ್ರತಿಷ್ಠಿತ ಇಂಡಿಯನ್ ಎಕ್ಸ್‌ಪ್ರೆಸ್‌ ಪತ್ರಿಕೆಯ ಸಂಸ್ಥಾಪಕ ದಿ.ರಾಮನಾಥ ಗೋಯೆಂಕಾ ಅವರ ಸ್ಮರಣಾರ್ಥ ನೀಡಲಾಗುವ ‘ರಾಮನಾಥ ಗೋಯೆಂಕಾ ಎಕ್ಸಲೆನ್ಸ್ ಇನ್ ಜರ್ನಲಿಸಂ-2022’ನೇ ಸಾಲಿನ ಪ್ರಶಸ್ತಿಗೆ ‘ಕನ್ನಡಪ್ರಭ’ ಪತ್ರಿಕೆಯ ಯಾದಗಿರಿ ಜಿಲ್ಲೆಯ ಪ್ರಧಾನ ವರದಿಗಾರ ಆನಂದ ಮಧುಸೂದನ ಸೌದಿ ಆಯ್ಕೆಯಾಗಿದ್ದಾರೆ.

‘ಕನ್ನಡಪ್ರಭ’ ಬಯಲಿಗೆಳೆದ 545 ಪಿಎಸ್‌ಐ ಹುದ್ದೆಗಳ ನೇಮಕ ಹಗರಣ ರಾಷ್ಟ್ರವ್ಯಾಪಿ ಸದ್ದು ಮಾಡಿತ್ತು. ದೇಶದ ವಿವಿಧೆಡೆಯಿಂದ ಬಂದಿದ್ದ ಅನೇಕ ವರದಿಗಳ ಪೈಕಿ ತೀರ್ಪುಗಾರರು ಕನ್ನಡಪ್ರಭದಲ್ಲಿ ಪ್ರಕಟವಾದ ‘ಪಿಎಸ್‌ಐ ಅಕ್ರಮ’ ಕುರಿತ ವರದಿಗಳನ್ನು ಪ್ರಾದೇಶಿಕ ಭಾಷಾ ವಿಭಾಗದ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ. ಪ್ರಶಸ್ತಿಯು 1 ಲಕ್ಷ ರು. ಹಾಗೂ ಸ್ಮರಣಿಕೆಯನ್ನೊಳಗೊಂಡಿದೆ.

Latest Videos

undefined

ಪಿಎಸ್ಐ ನೇಮಕಾತಿ ಹಗರಣ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟದ ನಿರ್ಧಾರ

ದೆಹಲಿಯ ಐಟಿಸಿ ಮೌರ್ಯ ಹೋಟೆಲ್‌ನ ಕಮಲ ಮಹಲ್‌ ಸಭಾಂಗಣದಲ್ಲಿ ಮಂಗಳವಾರ ಸಂಜೆ ನಡೆದ ಸಮಾರಂಭದಲ್ಲಿ ಕೇಂದ್ರ ರಸ್ತೆ, ಸಾರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಖಾತೆ ಸಚಿವ ನಿತಿನ್‌ ಗಡ್ಕರಿ ಅವರು ಈ ಪ್ರಶಸ್ತಿ ಪ್ರದಾನ ಮಾಡಿದರು.

click me!