ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್‌ ಕಚೇರಿ ಮೇಲೆ NIA ರೇಡ್‌: ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ವಿಚಾರಣೆ

By BK AshwinFirst Published Jan 11, 2023, 1:15 PM IST
Highlights

ಶಂಕಿತ ಉಗ್ರ ಶಾರೀಖ್ ಕುಟುಂಬದ ಆಸ್ತಿಗೆ ಸಂಬಂಧಿಸಿದಂತೆ NIA ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಸೊಪ್ಪು ಗುಡ್ಡೆಯಲ್ಲಿರುವ ಶಾರೀಖ್ ಕುಟುಂಬಕ್ಕೆ ಸೇರಿದ ಕಾಂಪ್ಲೆಕ್ಸ್‌ನಲ್ಲಿ ತಪಾಸಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ತೀರ್ಥಹಳ್ಳಿ (ಜನವರಿ 11, 2023): ಮಂಗಳೂರು ಕುಕ್ಕರ್‌ ಬ್ಲಾಸ್‌ ಕೇಸ್‌ಗೆ ಸಂಬಂಧಪಟ್ಟಂತೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಕಾಂಗ್ರೆಸ್‌ ಕಚೇರಿ ಮೇಲೆ ಎನ್‌ಐಎ ಅಧಿಕಾರಿಗಳು ದಾಳಿ ಮಾಡಿದ್ದು, ಅಲ್ಲದೆ, ಕಾಂಗ್ರೆಸ್ ಮಾಜಿ ಶಾಸಕ ಹಾಗೂ ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್‌ ಅವರನ್ನು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಮಂಗಳೂರು ಕುಕ್ಕರ್‌ ಬ್ಲಾಸ್ಟ್‌ ಪ್ರಕರಣದ ಆರೋಪಿ ಶಾರೀಖ್‌ ಕುಟುಂಬದ ಆಸ್ತಿಯನ್ನು ಕಾಂಗ್ರೆಸ್‌ ಪಕ್ಷ, ಕಚೇರಿಯನ್ನಾಗಿ 10 ಲಕ್ಷ ರೂ. ಲೀಸ್‌ಗೆ ಪಡೆದಿತ್ತು. ಈ ವರ್ಷ ಜೂನ್‌ ತಿಂಗಳಿಗೆ ಈ ಲೀಸ್‌ ಮುಕ್ತಾಯವಾಗುತ್ತದೆ. ಈ ಹಿನ್ನೆಲೆ ಕಾಂಗ್ರೆಸ್‌ ಕಚೇರಿ ಮೇಲೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ಪ್ರತಿಕ್ರಿಯೆ ನೀಡಿದ ಕಿಮ್ಮನೆ ರತ್ನಾಕರ್‌, ಕಾಂಗ್ರೆಸ್‌ ಕಚೇರಿಗೆ ಎನ್‌ಐಎ ಅಧಿಕಾರಿಗಳು ಭೇಟಿ ನೀಡಿದ್ದರು. ಅಲ್ಲದೆ, ದಾಖಲೆಗಳನ್ನು ಪಡೆಯಲು ಇಡಿ ಅಧಿಕಾರಿಗಳು ಸಹ ಆಗಮಿಸಿದ್ದರು ಎಂದೂ ಕಿಮ್ಮನೆ ರತ್ನಾಕರ್‌ ಹೇಳಿದ್ದಾರೆ. ಅಲ್ಲದೆ, ಶಾರೀಖ್‌ ಕುಟುಂಬಕ್ಕೂ ಕಾಂಗ್ರೆಸ್‌ಗೂ ಯಾವುದೇ ಸಂಬಂಧವಿಲ್ಲ ಎಂದೂ ಹೇಳಿಕೊಂಡಿದ್ದಾರೆ.

ಶಂಕಿತ ಉಗ್ರ ಶಾರೀಖ್ ಕುಟುಂಬದ ಆಸ್ತಿಗೆ ಸಂಬಂಧಿಸಿದಂತೆ NIA ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಸೊಪ್ಪು ಗುಡ್ಡೆಯಲ್ಲಿರುವ ಶಾರೀಖ್ ಕುಟುಂಬಕ್ಕೆ ಸೇರಿದ ಕಾಂಪ್ಲೆಕ್ಸ್‌ನಲ್ಲಿ ತಪಾಸಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಈ ಕಾಂಪ್ಲೆಕ್ಸ್‌ನಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿಗೆ 8 ವರ್ಷಗಳ ಕಾಲ ಬಾಡಿಗೆ ನೀಡಿದ್ದ ಶಾರೀಖ್‌ ತಂದೆ. ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಸಹೋದರನ ಪುತ್ರ ನವೀನ್ ಹೆಸರಿನಲ್ಲಿ 10 ಲಕ್ಷ ರೂ. ನೀಡಿ ಕಾಂಗ್ರೆಸ್ ಕಚೇರಿಗೆ ಬಾಡಿಗೆ ಪಡೆಯಲಾಗಿತ್ತು ಎಂದು ತಿಳಿದುಬಂದಿದೆ. 

ಇದನ್ನು ಓದಿ: ಕುಕ್ಕರ್‌ ಬಾಂಬ್‌ ಅಂದ್ರೆ ಏನು..? ಇದು ಎಷ್ಟು ಅಪಾಯಕಾರಿ ನೋಡಿ..

ಪ್ರತಿ ತಿಂಗಳು 10, 000 ಬಾಡಿಗೆಯಂತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈ ಒಪ್ಪಂದದಂತೆ ಪ್ರತಿ ತಿಂಗಳು ಶಾರೀಖ್‌ ಕುಟುಂಬದ ಬ್ಯಾಂಕ್ ಖಾತೆಗೆ 10,000 ಜಮಾ ಮಾಡಲಾಗುತ್ತಿತ್ತು. 2023ರ ಜೂನ್ ತಿಂಗಳಿನಲ್ಲಿ ಈ ಒಪ್ಪಂದ ಅಂತ್ಯವಾಗಲಿದ್ದು 10 ಲಕ್ಷ ರೂ. ಅಡ್ವಾನ್ಸ್ ನೀಡಲು ಕೋರಲಾಗಿತ್ತು. ಅಡ್ವಾನ್ಸ್ ಹಣವನ್ನು ವಾಪಸ್ ನೀಡಿದರೆ ಕಚೇರಿ ಖಾಲಿ ಮಾಡುವುದಾಗಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದು, ಈ ಸಂಬಂಧ ಎನ್ಐಎ ಅಧಿಕಾರಿಗಳು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ವಿಚಾರಣೆ ನಡೆಸಿ ತೆರಳಿದ್ದಾರೆ ಎಂದು ತೀರ್ಥಹಳ್ಳಿಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿಕೆ ನೀಡಿದ್ದಾರೆ. 

ಶಾರೀಖ್‌ ಕುಟುಂಬಕ್ಕೂ ನಮಗೂ ಸಂಬಂಧ ಇಲ್ಲ: ಕಿಮ್ಮನೆ ರತ್ನಾಕರ್..!
ಇನ್ನು, ಕಾಂಗ್ರೆಸ್ ಕಚೇರಿಯ ಮೇಲಿನ ಎನ್ಎ ತನಿಖೆ ತಂಡದ ದಾಳಿ ಮತ್ತು ವಿಚಾರಣೆ ಕುರಿತು ಹೇಳಿಕೆ ನೀಡಿದ ಸಿದ್ದರಾಮಯ್ಯ ಅವಧಿಯಲ್ಲಿ ಶಿಕ್ಷಣ ಸಚಿವರಾಗಿದ್ದ ಕಿಮ್ಮನೆ ರತ್ನಾಕರ್‌, ಕಾಂಗ್ರೆಸ್ ಕಚೇರಿ ಇರುವ ಜಾಗವನ್ನ ಮಳಿಗೆಯನ್ನು ಯಾವಾಗ ಬಾಡಿಗೆಗೆ ಪಡೆದಿದ್ದೀರಿ ಎಂಬ ಮಾಹಿತಿ ಕೇಳಿದರು. 2015ರಲ್ಲಿ 10 ಲಕ್ಷ ರೂ. ಹಣ ನೀಡಿ ಎಂಟು ವರ್ಷಗಳ ಕಾಲ ಈ ಮಳಿಗೆಯನ್ನು ಹಾಸಿಮ್ ಎಂಬುವವರಿಂದ ಬಾಡಿಗೆಗೆ ಪಡೆದಿದ್ದವು. ಹಾಸಿಮ್ ಕುಟುಂಬಕ್ಕೂ ನಮಗೂ ಬಾಡಿಗೆದಾರರು ಮತ್ತು ಮಾಲೀಕರ ಸಂಬಂಧ ಮಾತ್ರ ಇದೆ. ಅದಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಕಿಮ್ಮನೆ ರತ್ನಾಕರ್‌ ಹೇಳಿದ್ದಾರೆ. 

ಇದನ್ನೂ ಓದಿ: ಮಂಗಳೂರು ಸ್ಫೋಟ ಪ್ರಕರಣ: ಮೈಸೂರಿನಲ್ಲಿ ಹೇಗಿದ್ದ ಗೊತ್ತಾ ಉಗ್ರ ಶಾರೀಕ್?

ಅಲ್ಲದೆ, ಹಾಸಿಮ್‌ಗೂ ನಮಗೂ ಸಂಬಂಧ ಇಲ್ಲದಿದ್ದರೂ, ಬಿಜೆಪಿಯವರು ನಮಗೆ ಸಂಬಂಧ ಕಲ್ಪಿಸಿ ಮಾತನಾಡುತ್ತಿದ್ದಾರೆ. ಗೃಹ ಸಚಿವ ಆರಗ ಜ್ಞಾನೇಂದ್ರರಿಗೂ ಹಾಸಿಮ್‌ಗೂ ಸಂಬಂಧ ಇರಬಹುದು ಅವರನ್ನೇ ಕೇಳಿ. ತೀರ್ಥಹಳ್ಳಿಯಲ್ಲಿ ನಡೆದ ಕೋಮುಗಲಭೆಯಲ್ಲಿ ಆರಗ ಜ್ಞಾನೇಂದ್ರ ಕೂಡ ಆರೋಪಿಯಾಗಿದ್ದರು. ಹಾಗಾಗಿ ಮತ್ತೊಂದು ಕೋಮುಗಲಭೆ ಸೃಷ್ಟಿ ಮಾಡಲು ಪ್ರಯತ್ನ ಮಾಡುತ್ತಿದ್ದಾರೋ ಏನೋ. ಕೆಲವು ಮಾಧ್ಯಮಗಳಲ್ಲಿ ಕಿಮ್ಮನೆ ಮನೆಯ ಮೇಲೆ ದಾಳಿ ನಡೆದಿದೆ ಎಂದು ವರದಿಯಾಗಿರುವುದು ಸರಿಯಲ್ಲ. ನಮ್ಮ ಮನೆ ಮೇಲೆ ದಾಳಿ ನಡೆದರೆ 10,000 ರೂ.ಸಿಗಬಹುದಷ್ಟೇ . ಇಡಿಯವರು ಬಂದರೆ ನಮಗೆ ಕೊಟ್ಟು ಹೋಗಬೇಕು, ತೆಗೆದುಕೊಂಡು ಹೋಗಲು ಏನೂ ಇಲ್ಲ. ಫ್ರಿಡ್ಜ್ ,ಸೋಫಾ ತೆಗೆದುಕೊಂಡು ಹೋಗಬೇಕಷ್ಟೇ ಬೇರೇನು ಸಿಗಲ್ಲ. ಬಿಜೆಪಿಯವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದೂ ಕಾಂಗ್ರೆಸ್‌ ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಹೇಳಿದ್ದಾರೆ. 

click me!