
ಬೆಂಗಳೂರು (ಡಿ.30) : ಹೊಸ ವರ್ಷಾಚರಣೆ ಪ್ರಯುಕ್ತ ಜನವರಿ 1ರಂದು ಬೆಂಗಳೂರು ಮೆಟ್ರೋ ತನ್ನ ಸಂಚಾರ ಅವಧಿಯನ್ನು ತಡ ರಾತ್ರಿ 2ರ ವರೆಗೆ ವಿಸ್ತರಿಸಿದೆ. ಪ್ರತಿ ನಿತ್ಯ ದಿನದ ಕೊನೆಯ ಮೆಟ್ರೋ ತನ್ನ ಆರಂಭದ ನಿಲ್ದಾಣದಿಂದ ರಾತ್ರಿ 11ಕ್ಕೆ ಹೊರಟರೆ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವವರ ಅನುಕೂಲಕ್ಕಾಗಿ ಜನವರಿ 1ರಂದು ತಡರಾತ್ರಿಯೂ ಮೆಟ್ರೋ ಸಂಚರಿಸಲಿದೆ. ರಾತ್ರಿ 11ರ ಬಳಿಕ ಪ್ರತಿ ಹದಿನೈದು ನಿಮಿಷಕ್ಕೆ ಒಂದರಂತೆ ಕೆಂಗೇರಿ-ಬೈಯ್ಯಪ್ಪನಹಳ್ಳಿ (ನೇರಳೆ ಮಾರ್ಗ) ಮತ್ತು ಸಿಲ್‌್ಕ ಸಂಸ್ಥೆ - ನಾಗಸಂದ್ರ (ಹಸಿರು ಮಾರ್ಗ)ದಲ್ಲಿ ಮೆಟ್ರೋ ಸಂಚರಿಸಲಿದೆ.
ಬೈಯ್ಯಪ್ಪನಹಳ್ಳಿ(Baiyyappanahalli)ಯಿಂದ ತಡರಾತ್ರಿ 1.35ಕ್ಕೆ, ಕೆಂಗೇರಿ(Kengeri)ಯಿಂದ ತಡ ರಾತ್ರಿ 1.25ಕ್ಕೆ, ನಾಗಸಂದ್ರ(Nagasandra)ದಿಂದ ತಡರಾತ್ರಿ 1.30ಕ್ಕೆ ಮತ್ತು ರೇಷ್ಮೆ ಸಂಸ್ಥೆಯಿಂದ ತಡರಾತ್ರಿ 1.25ಕ್ಕೆ ಅಂದಿನ ಕೊನೆಯ ಮೆಟ್ರೋ ಹೊರಡಲಿದೆ. ತಡರಾತ್ರಿ 2ಕ್ಕೆ ಮೆಜೆಸ್ಟಿಕ್(Mejestic)ನಿಂದ ದಿನದ ಕೊನೆಯ ರೈಲುಗಳು ನಾಲ್ಕೂ ದಿಕ್ಕಿಗೂ ಹೊರಡಲಿದೆ ಎಂದು ಮೆಟ್ರೋ ನಿಗಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಮುಂದಿನ ವರ್ಷದಲ್ಲಿ ವೈಟ್‌ಫೀಲ್ಡ್, ಏರ್‌ಪೋರ್ಟ್‌ಗೆ ಮೆಟ್ರೋ: ಸಿಎಂ ಬೊಮ್ಮಾಯಿ
₹50 ಟಿಕೆಟ್ ದರ
ವಿಸ್ತರಿಸಿದ ಅವಧಿಯಲ್ಲಿ ಅಂದರೆ ರಾತ್ರಿ 11.30ರ ನಂತರ ಮಹಾತ್ಮ ಗಾಂಧಿ ರಸ್ತೆ(MG Road), ಟ್ರಿನಿಟಿ(Trinity) ಮತ್ತು ಕಬ್ಬನ್ ಪಾರ್ಕ್(Cubbon park) ನಿಲ್ದಾಣಗಳಿಂದ ಇತರ ಯಾವುದೇ ನಿಲ್ದಾಣಗಳಿಗೆ ಪ್ರಯಾಣಿಸುವ ಸಾರ್ವಜನಿಕರಿಗೆ .50 ಟಿಕೆಟ್‌ಗಳನ್ನು ವಿತರಿಸಲಾಗುತ್ತದೆ. ಈ ಅವಧಿಯಲ್ಲಿ ಈ ನಿಲ್ದಾಣಗಳಲ್ಲಿ ಟೋಕನ್ ವಿತರಣೆ ಇರುವುದಿಲ್ಲ ಎಂದು ಮೆಟ್ರೋ ನಿಗಮ ತಿಳಿಸಿದೆ.
ವಿಸ್ತರಿಸಿದ ಅವಧಿಯಲ್ಲಿ ಮಹಾತ್ಮ ಗಾಂಧಿ ರಸ್ತೆ, ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್ ನಿಲ್ದಾಣಗಳಿಂದ ಮಾತ್ರ ಪ್ರಯಾಣಿಸಲು ಅನುಕೂಲವಾಗುವಂತೆ ಕಾಗದ ಟಿಕೆಟ್‌ಗಳನ್ನು ಡಿ.31ರ ರಾತ್ರಿ 8ರಿಂದ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಮುಂಚಿತವಾಗಿ ಖರೀದಿಗೆ ಲಭ್ಯ ಇರುತ್ತದೆ. ಸ್ಮಾರ್ಚ್ ಕಾರ್ಡ್ ಮತ್ತು ಕ್ಯೂಆರ್ ಕೋಡ್ ಟಿಕೆಟ್ ಹೊಂದಿರುವವರು ವಿಸ್ತರಿಸಿದ ಅವಧಿಯಲ್ಲಿಯೂ ಎಂದಿನ ರಿಯಾಯಿತಿ ದರದಲ್ಲಿಯೇ ಪ್ರಯಾಣಿಸಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ