ಹಳೆ ವಾಹನಗಳಿದ್ರೆ ಈಗಲೇ ಹೊಸ ನಂಬರ್ ಪ್ಲೇಟ್ ಅಳವಡಿಸಿ; ಅಲಕ್ಷ್ಯ ಮಾಡಿದ್ರೆ ಬೀಳುತ್ತೆ ದಂಡ!

Published : Sep 07, 2023, 05:34 AM IST
ಹಳೆ ವಾಹನಗಳಿದ್ರೆ ಈಗಲೇ ಹೊಸ ನಂಬರ್ ಪ್ಲೇಟ್ ಅಳವಡಿಸಿ; ಅಲಕ್ಷ್ಯ ಮಾಡಿದ್ರೆ ಬೀಳುತ್ತೆ ದಂಡ!

ಸಾರಾಂಶ

ಅಪರಾಧ ಕೃತ್ಯಗಳಲ್ಲಿ ನಕಲಿ ನೋಂದಣಿ ಸಂಖ್ಯೆಯ ವಾಹನಗಳ ಬಳಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ದೇಶದಲ್ಲಿ ಏಕರೂಪ ನೋಂದಣಿ ಸಂಖ್ಯೆ ಫಲಕ ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ

ಬೆಂಗಳೂರು (ಸೆ.7) :  ಅಪರಾಧ ಕೃತ್ಯಗಳಲ್ಲಿ ನಕಲಿ ನೋಂದಣಿ ಸಂಖ್ಯೆಯ ವಾಹನಗಳ ಬಳಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ದೇಶದಲ್ಲಿ ಏಕರೂಪ ನೋಂದಣಿ ಸಂಖ್ಯೆ ಫಲಕ ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಕರ್ನಾಟಕದ ಎಲ್ಲ ಹಳೆಯ ವಾಹನಗಳ ನಂಬರ್‌ಪ್ಲೇಟ್‌ ಬದಲಾಯಿಸಿ ಅತಿ ಸುರಕ್ಷಿತ ನೋಂದಣಿ ಫಲಕ(ಎಚ್‌ಎಸ್‌ಆರ್‌ಪಿ) ಅಳವಡಿಸಿಕೊಳ್ಳುವಂತೆ ರಾಷ್ಟ್ರೀಯ ರಸ್ತೆ ಸುರಕ್ಷತೆ ಸಮಿತಿ ಸದಸ್ಯ ಡಾ ಕಮಲಜಿತ್‌ ಸೋಯಿ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಚ್‌ಎಸ್‌ಆರ್‌ಪಿ(ಹೈ ಸೆಕ್ಯುರಿಟಿ ರಿಜಿಸ್ಪ್ರೇಷನ್‌ ಪ್ಲೇಟ್ಸ್‌) ಯೋಜನೆಯು ವಾಹನದ ಸುರಕ್ಷತೆ ಮತ್ತು ಭದ್ರತೆಯನ್ನು ನೀಡುವ ಮೂಲಕ ನೇರವಾಗಿ ರಾಷ್ಟ್ರೀಯ ಭದ್ರತೆಗೆ ಕೊಡುಗೆ ನೀಡುತ್ತದೆ. ಅಲ್ಲದೇ ವಾಹನ ಸಂಬಂಧಿತ ಅಪರಾಧ ಚಟುವಟಿಕೆಗಳನ್ನು ನಿರ್ಬಂಧಿಸುತ್ತದೆ. 2019 ಏಪ್ರಿಲ್‌ 1ಕ್ಕಿಂತ ಮುಂಚೆ ನೋಂದಣಿಯಾದ ವಾಹನಗಳು ಎಚ್‌ಎಸ್‌ಆರ್‌ಪಿಗಳನ್ನು ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ ಎಂದು ಹೇಳಿದರು.

ವಾಹನ ನಂಬರ್ ಪ್ಲೇಟಿಗೆ ಸಂಬಂಧಿಸಿದ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ!

ಈಗಾಗಲೇ ದೇಶದ ದೆಹಲಿ, ಉತ್ತರ ಪ್ರದೇಶ, ಬಿಹಾರ, ಒಡಿಶಾ, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ, ಸಿಕ್ಕಿಂ ಸೇರಿದಂತೆ 18 ರಾಜ್ಯಗಳು ಎಚ್‌ಎಸ್‌ಆರ್‌ಪಿ ಕಡ್ಡಾಯಗೊಳಿಸಿವೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಈ ಹಿಂದೆಯೇ ಇದು ಕಡ್ಡಾಯವಾಗಿತ್ತು. ಆದರೆ, ಕರ್ನಾಟಕದ ಸಾರಿಗೆ ಇಲಾಖೆ 2023 ಆಗಸ್ಟ್‌ 18ರಂದು ಆದೇಶ ಹೊರಡಿಸಿದೆ. ಹೊಸ ನಂಬರ್‌ ಪ್ಲೇಟ್‌ ಅಳವಡಿಕೆಗೆ ನ.17ರವರೆಗೆ ಕಾಲಾವಕಾಶ ನೀಡಿದೆ. ತಪ್ಪಿದರೆ 500ರಿಂದ 1 ಸಾವಿರ ರು.ಗಳವರೆಗೆ ದಂಡ ವಿಧಿಸಬಹುದಾಗಿದೆ ಎಂದರು.

ವಾಹನಗಳ ಮಾಲೀಕರು ಶೋ ರೂಂ ಅಥವಾ ಡೀಲರ್‌ಗಳಲ್ಲಿ ನಂಬರ್‌ ಪ್ಲೇಟ್‌ ಬದಲಾವಣೆಗೆ ಕೋರಿಕೆ ಸಲ್ಲಿಸಬಹುದು. ನಾಲ್ಕುಚಕ್ರದ ವಾಹನಗಳಿಗೆ 400ರಿಂದ 500 ರು.ಗಳವರೆಗೆ ಶುಲ್ಕ ಇರುತ್ತದೆ. ಒರಿಜಿನಲ್‌ ಇಕ್ಯುಪ್‌ಮೆಂಟ್‌ ಮ್ಯಾನುಫ್ಯಾಕ್ಚರರ್‌ರಿಂದ(ಒಇಎಂ) ಅಧಿಕೃತ ಫೋರ್ಟಲ್‌ನಲ್ಲಿ ನಮೂದಿಸಿದ ಮೇಲೆ ಎಚ್‌ಎಸ್‌ಆರ್‌ಪಿ ಅಳವಡಿಸಲಾಗುತ್ತದೆ. ರಾಜ್ಯಾದ್ಯಂತ ಸುಮಾರು ನಾಲ್ಕು ಸಾವಿರ ಡೀಲರ್‌ ಪಾಯಿಂಟ್‌ಗಳಲ್ಲಿ ಎಚ್‌ಎಸ್‌ಆರ್‌ಪಿಗಳನ್ನು ಅಳವಡಿಸಲಾಗುತ್ತದೆ. ಏಕೀಕೃತ ಪೋರ್ಟಲ್‌ ಡಿಡಿಡಿ.sಜಿaಞ.ಜ್ಞಿ ವಾಹನಗಳ ಮಾಲೀಕರಿಗೆ ಎಚ್‌ಎಸ್‌ಆರ್‌ಪಿಗಳನ್ನು ಆರ್ಡರ್‌ ಮಾಡಲು, ಡೀಲರ್‌ ತಾಣಗಳನ್ನು ಕಂಡುಕೊಳ್ಳಲು ಮತ್ತು ನಂಬರ್‌ ಪ್ಲೇಟ್‌ ಅಳವಡಿಕೆ ದಿನಾಂಕ, ಸಮಯ ಆಯ್ಕೆ ಮಾಡಲು ಅವಕಾಶ ನೀಡುತ್ತದೆ ಎಂದು ತಿಳಿಸಿದರು.

 

ಅದೃಷ್ಟ ಅಂದ್ರೆ ಇದಪ್ಪಾ..! ಹಳೆ ಗಾಡಿ ಲೈಸನ್ಸ್‌ ನಂಬರ್‌ಗೆ ಹೊಡೀತು 40 ಲಕ್ಷ Lottery

ಎಚ್‌ಎಸ್‌ಆರ್‌ಪಿ ಅಳವಡಿಸದಿದ್ದರೆ ಮಾಲೀಕತ್ವದ ಬದಲಾವಣೆ, ವಿಳಾಸ ಬದಲಾವಣೆ, ನಕಲಿ ಆರ್‌ಸಿ, ವಿಮೆ ಅಪ್ಡೇಟ್‌, ಸಾಮರ್ಥ್ಯ ಅನುಮೋದನೆ ಇತ್ಯಾದಿ ಸಾಧ್ಯವಿಲ್ಲ. ಎಚ್‌ಎಸ್‌ಆರ್‌ಪಿ ನಂಬರ್‌ ಅಳವಡಿಕೆ ಮಾಡಿಕೊಂಡ ಮಾಹಿತಿಯನ್ನು ವಾಹನ್‌ ತಂತ್ರಾಂಶದಲ್ಲಿ ಮಾಲೀಕರ ಮಾಹಿತಿ ಲಭ್ಯವಾಗುತ್ತದೆ. ಅಧಿಕೃತವಾಗಿಲ್ಲದ ವಾಹನಗಳು ರಸ್ತೆಯಲ್ಲಿ ಓಡಾಡುವುದನ್ನು ಸುಲಭವಾಗಿ ಪತ್ತೆ ಹಚ್ಚಲು ಇದು ಸಹಾಯಕವಾಗಲಿದೆ ಎಂದು ಅವರು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹೊಸದಾಗಿ 545 ಪಿಎಸ್‌ಐ ಶೀಘ್ರ ಸೇವೆಗೆ ನಿಯೋಜನೆ: ಗೃಹ ಸಚಿವ ಪರಮೇಶ್ವರ್‌
Karnataka News Live: ಮಾಟಗಾತಿಯ ಮಾತು ಕೇಳಿ ಗಂಡು ಮಗುವಿಗಾಗಿ ಪತ್ನಿಯ ತಲೆ ಕೂದಲು ಕತ್ತರಿಸಿದ ಪತಿ