India
ರಸ್ತೆಯಲ್ಲಿ ಚಲಿಸುವ ಯಾವುದೇ ವಾಹನದ ನಂಬರ್ ಪ್ಲೇಟ್ ಅನ್ನು ನೀವು ನೋಡಿದರೆ, ಅದರ ಮೇಲೆ ವಿಭಿನ್ನ ಮಾಹಿತಿಯನ್ನು ಬರೆಯುವುದನ್ನು ನೀವು ನೋಡುತ್ತೀರಿ.
ಕೆಲವು ವಾಹನಗಳ ನಂಬರ್ ಪ್ಲೇಟ್ ನ ಬಣ್ಣವೂ ವಿಭಿನ್ನವಾಗಿರುತ್ತದೆ. ಇಲ್ಲಿ ನಾವು ನಂಬರ್ ಪ್ಲೇಟ್ ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ಮಾಹಿತಿ ತಿಳಿಯೋಣ.
ಕೆಲವು ವಾಹನಗಳ ನಂಬರ್ ಪ್ಲೇಟ್ ಮೇಲೆ A/F ಎಂದು ಇರುತ್ತೆ. ಇದರರ್ಥ ವಾಹನ ಮಾಲೀಕರು ನಂಬರ್ ಪ್ಲೇಟ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಪರ್ಮನೆಂಟ್ ನಂಬರ್ ಪ್ಲೇಟ್ ಸಿದೋವರೆಗೂ ಅಪ್ಲೈಡ್ ಫಾರ್ A/F ಎಂದು ಬರೆಯಬಹುದು.
ಆಟೋ ರಿಕ್ಷಾ, ಟ್ಯಾಕ್ಸಿ, ಟ್ರಕ್ ಮತ್ತು ಬಸ್‌ಗಳಲ್ಲಿ ಮಾತ್ರ ಹಳದಿ ನಂಬರ್ ಪ್ಲೇಟ್ ಅನ್ನು ಅಳವಡಿಸಲಾಗಿದೆ. ಹಳದಿ ನಂಬರ್ ಪ್ಲೇಟ್ ಅನ್ನು ವಾಣಿಜ್ಯ ಬಳಕೆಗೆ ಮಾತ್ರ ಬಳಸಲಾಗುತ್ತದೆ.
ವಾಣಿಜ್ಯ ಬಳಕೆಯನ್ನು ಹೊರತುಪಡಿಸಿ ಬೇರೆ ಯಾವುದೇ ಉದ್ದೇಶಕ್ಕಾಗಿ ಖರೀದಿಸಿದ ವಾಹನಗಳಿಗೆ ಹಳದಿ ನಂಬರ್ ಪ್ಲೇಟ್ ಅಳವಡಿಸಲಾಗಿರೋದಿಲ್ಲ.
ಕೆಲವು ನಂಬರ್ ಪ್ಲೇಟ್ ಮೇಲೆ ಬಾಣದ ಗುರುತುಗಳಿವೆ. ಇವು ಸೈನಿಕರ ವಾಹನಗಳಲ್ಲಿ ಮಾತ್ರ ಇರುತ್ತೆ. ಸೈನಿಕರ ವಾಹನಗಳನ್ನು ಪ್ರತ್ಯೇಕವಾಗಿ ಗುರುತಿಸಲು ಈ ಚಿಹ್ನೆ ನೀಡಲಾಗುತ್ತೆ.
ನಂಬರ್ ಪ್ಲೇಟ್ ನಲ್ಲಿ BH ಎಂದರೆ ಭಾರತ ಎಂದರ್ಥ. ಈ ನೋಂದಣಿಯ ವಿಶೇಷವೆಂದರೆ ಇದರಿಂದಾಗಿ ಯಾವುದೇ ರಾಜ್ಯಕ್ಕೆ ಅನುಗುಣವಾಗಿ ಸಂಖ್ಯೆಯ ವರ್ಗಾವಣೆಯ ಅಗತ್ಯವಿರೋದಿಲ್ಲ.
ಇನ್ನು ನಂಬರ್ ಪ್ಲೇಟ್ ಮೇಲೆ BH 21 ಮತ್ತು 22 ಎಂದರೆ ವಾಹನವನ್ನು ಯಾವ ವರ್ಷದಲ್ಲಿ ನೋಂದಾಯಿಸಲಾಗಿದೆ ಎಂದರ್ಥ. 21 ಅಂದ್ರೆ 2021, 22 ಅಂದ್ರೆ 2022 ಎಂದರ್ಥ.