Karnataka Rajyotsava Award : ಮುಂದಿನ ವರ್ಷ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಸ್ವೀಕಾರ ಬಂದ್‌

Kannadaprabha News   | Asianet News
Published : Dec 13, 2021, 08:11 AM IST
Karnataka Rajyotsava Award : ಮುಂದಿನ ವರ್ಷ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಸ್ವೀಕಾರ ಬಂದ್‌

ಸಾರಾಂಶ

 ಮುಂದಿನ ವರ್ಷ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಸ್ವೀಕಾರ ಬಂದ್‌  ರಾಜ್ಯಾದ್ಯಂತ ಸಂಚರಿಸಿ ಅರ್ಹರ ಆಯ್ಕೆ: ಸುನಿಲ್‌  

 ಕಾರ್ಕಳ (ಡಿ.13) :  ಮುಂದಿನ ವರ್ಷದಿಂದ ರಾಜ್ಯೋತ್ಸವ ಪ್ರಶಸ್ತಿಗೆ (Rajyotsava Award) ಅರ್ಜಿ ಸ್ವೀಕರಿಸದೆ ಅರ್ಹರನ್ನು ಆಯ್ಕೆ ನಡೆಸಲು ಮುಖ್ಯ ಮಂತ್ರಿಗಳು (CM ) ಒಪ್ಪಿಗೆ ನೀಡಿದ್ದಾರೆ. ಪ್ರಶಸ್ತಿ ಆಯ್ಕೆ ಪ್ರಕ್ರಿಯಾ ಸಮಿತಿಯೇ ರಾಜ್ಯಾದ್ಯಂತ ಸಂಚರಿಸಿ ಎಲೆಮರೆಯ ಕಾಯಿಯಂತಿರುವ ಅರ್ಹ ಪ್ರತಿಭೆಗಳನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್‌ ಕುಮಾರ್‌ (V Sunil Kumar) ಹೇಳಿದರು. ರಾಜ್ಯೋತ್ಸವ ಪ್ರಶಸ್ತಿ (Rajyotsava award) ಪುರಸ್ಕೃತ ಪತ್ರಕರ್ತೆ ಡಾ.ಯು.ಬಿ.ರಾಜಲಕ್ಷ್ಮೇ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಪಟು ರೋಹಿತ್‌ ಕುಮಾರ್‌ ಕಟೀಲ್‌ ಅವರಿಗೆ ಕಾರ್ಕಳದ ಹೊಟೇಲ್‌ ಕಟೀಲ್‌ ಇಂಟರ್‌ ನ್ಯಾಶನಲ್‌ ಶಾಂಭವಿ ಫಾಮ್‌ರ್‍ಹೌಸ್‌ನಲ್ಲಿ ಶನಿವಾರ ನಡೆದ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವೇದಿಕೆಯಲ್ಲೇ ನಟಿ ಭಾವನಾ ಅವರ ಮನವಿಗೆ ಸ್ಪಂದಿಸಿದ ಸಚಿವರು, ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆನ್‌ಲೈನ್‌ ಬುಕ್ಕಿಂಗ್‌ ವ್ಯವಸ್ಥೆ ಜಾರಿ ಮಾಡುತಿದ್ದು ಅದಕ್ಕಾಗಿ ಸಮಿತಿ ನೇಮಿಸಲಾಗಿದೆ. ಹಾಗೆಯೇ ಬೆಂಗಳೂರಿನ ಇತರ ನಾಲ್ಕು ಭಾಗಗಳಲ್ಲಿ ರಂಗಮಂದಿಗಳನ್ನು ನಿರ್ಮಾಣ ಮಾಡುವ ಹಾಗೂ ಅದಕ್ಕೆ ಕಾಯಕಲ್ಪ ನೀಡುವ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ ಎಂದು ತಿಳಿಸಿದರು.

ವಯೋಮಿತಿ ರದ್ದು : 

ಇನ್ನು ಮುಂದೆ ಕರ್ನಾಟಕ ರಾಜ್ಯೋತ್ಸವ (Karnataka rajyotsava) ಪ್ರಶಸ್ತಿಗೆ ಅರ್ಜಿ ಆಹ್ವಾನ ಇರುವುದಿಲ್ಲ. ವಿವಿಧ ಕ್ಷೇತ್ರಗಳ ತಜ್ಞರೇ ಸಾಧಕರನ್ನು ಶೋಧಿಸಲಿದ್ದಾರೆ! 

ಹೌದು, ಈ ವಿಚಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರೇ ತಿಳಿಸಿದ್ದು, ಸರ್ಕಾರ 2022ನೇ ಸಾಲಿನಿಂದ ಅರ್ಜಿ ಪಡೆದು ಪ್ರಶಸ್ತಿ ನೀಡದಿರಲು ನಿರ್ಧರಿಸಿದೆ. ಎಲೆಮರೆಯ ಕಾಯಿಯಂತಿರುವ ಸಾಧಕರನ್ನು ತಜ್ಞರ ಮೂಲಕ ಶೋಧಿಸಿ ಸರ್ಕಾರ ಪ್ರಶಸ್ತಿ ನೀಡಲಿದೆ ಎಂದು ತಿಳಿಸಿದ್ದಾರೆ. ಮುಂದಿನ ವರ್ಷದಿಂದ ರಾಜ್ಯೋತ್ಸವ ಪ್ರಶಸ್ತಿ ಮೊತ್ತವನ್ನು ಒಂದು ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಳ ಮಾಡಲಾಗುವುದು ಎಂದಿದ್ದಾರೆ.

ಬೆಂಗಳೂರಿನ (Bengaluru) ರವೀಂದ್ರ ಕಲಾಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಹಾಕುವ ಸಂಪ್ರದಾಯ ಸರಿಯಲ್ಲ. ಅದಕ್ಕಾಗಿ ಸಾಧಕರು ಕಿಲೋಗಟ್ಟಲೆ ಪುಸ್ತಕಗಳನ್ನು ಹೊತ್ತು ತರಬೇಕಿಲ್ಲ. ಸಾಧಕರ ಮಾಹಿತಿಯನ್ನು ಸರ್ಕಾರ ಮತ್ತು ಆಯ್ಕೆ ಸಮಿತಿ ತಜ್ಞರು ಎರಡು ತಿಂಗಳ ಶೋಧನೆ ಮಾಡಿ ಗುರುತಿಸಲಿದ್ದಾರೆ ಎಂದು ಹೇಳಿದರು.

ಸಮುದ್ರದಾಳದಲ್ಲಿ ಮೊದಲ ಸಲ ಕನ್ನಡ ಧ್ವಜಾರೋಹಣ!

ಮುಂದಿನ ವರ್ಷದಿಂದ ಪ್ರಶಸ್ತಿ ಆಯ್ಕೆಗಾಗಿ ಇರುವ ವಯೋಮಿತಿಯನ್ನು (Age Limit) (60 ವರ್ಷ) ಕಡಿಮೆ ಮಾಡಲು ನ್ಯಾಯಾಲಯಕ್ಕೆ ಪ್ರಮಾಣಪತ್ರ (ಅಫಿಡವಿಟ್‌) ಸಲ್ಲಿಸಲು ಸರ್ಕಾರ ನಿರ್ಧಾರ ಕೈಗೊಂಡಿದೆ. ಪ್ರತಿಭೆಗೂ ವಯಸ್ಸಿಗೂ ಸಂಬಂಧವಿಲ್ಲ. ಈಗಿನ ತಂತ್ರಜ್ಞಾನದ ಕಾಲದಲ್ಲಿ ಸಾಕಷ್ಟುಮಕ್ಕಳು ಪ್ರತಿಭಾವಂತರಾಗಿದ್ದಾರೆ. ಆ ಮಕ್ಕಳಿಗೆ ಅವಕಾಶ ಕೊಟ್ಟಾಗ ಇತರರು ಸಾಧನೆಗೈಯಲು ಪ್ರೇರಕ ಶಕ್ತಿಯಾಗುತ್ತದೆ ಎಂದರು.

ಗಂಗಾವತಿಯ ಪ್ರಾಣೇಶ್‌ ಅವರಿಗೆ ಪ್ರಶಸ್ತಿ ನೀಡುವಂತೆ ಎರಡ್ಮೂರು ಬಾರಿ ಶಿಫಾರಸು ಮಾಡಿದ್ದೆ. ಆದರೆ, ಅವರಿಗೆ 60 ವರ್ಷ ವಯಸಾಗಿಲ್ಲ ಎಂದು ತಡೆ ಹಿಡಿಯಲಾಗಿತ್ತು. ಇಂತಹ ಅನೇಕ ಪ್ರತಿಭೆಗಳಿಗೆ ವಯೋಮಿತಿ ಅಡ್ಡಿಯಾಗಬಾರದೆಂದು ಸರ್ಕಾರ ಈ ತೀರ್ಮಾನ ಕೈಗೊಂಡಿದೆ ಎಂದು ತಿಳಿಸಿದರು.

ಪ್ರಶಸ್ತಿ ಮೊತ್ತ ಹೆಚ್ಚಳ: 

  2020-21ನೇ ಸಾಲಿನ ಕನ್ನಡ ರಾಜ್ಯೋತ್ಸವ (Kannada Rajyotsava) ಪ್ರಶಸ್ತಿಯನ್ನು 66 ಸಾಧಕರಿಗೆ ನೀಡಿ ಗೌರವಿಸಲಾಯ್ತು.  ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ( Basavaraj Bommai) ಅವರು ಕನ್ನಡ ರಾಜ್ಯೋತ್ಸವ ಪ್ರಶಸ್ತಿ (Kannada Rajyotsava Award) ಪ್ರದಾನ ಮಾಡಿದರು.

ಪ್ರಶಸ್ತಿ ನೀಡಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಈ ಸಲ ಪ್ರಶಸ್ತಿಯೊಂದಿಗೆ ಹಣವನ್ನು 1 ಲಕ್ಷದಿಂದ 5 ಲಕ್ಷ ರೂ.ಗೆ ಏರಿಕೆ ಮಾಡುವುದಾಗಿ ಘೋಷಿಸಿದರು. ಜೊತೆಗೆ ಮುಂದಿನ ಬಾರಿ ಅರ್ಜಿ ತೆಗೆದುಕೊಂಡು ಪ್ರಶಸ್ತಿ ಕೊಡುವುದಿಲ್ಲ. ಯಾರು ಬಯೋಡೇಟವನ್ನು ತೆಗೆದುಕೊಳ್ಳುವುದಿಲ್ಲ. ಸರ್ಕಾರ ಮತ್ತು ಆಯ್ಕೆ ಸಮಿತಿ ಎರಡು ತಿಂಗಳ ‌ಮುಂಚೆ ಆಯ್ಕೆ ಮಾಡುತ್ತೆ. ಪ್ರಶಸ್ತಿಗೆ ಸಾಧಕರ ಆಯ್ಕೆ ಶೋಧನೆಯಿಂದ ಮಾಡುತ್ತೇವೆ ಎಂದು ತಿಳಿಸಿದರು.

ರಾಜ್ಯೋತ್ಸವ ಪ್ರಶಸ್ತಿ ಮೊತ್ತ ಹೆಚ್ಚಿಸಿದ ಸಿಎಂ, ಹಾಸ್ಯ ಚಟಾಕಿ ಹಾರಿಸಿದ ಪ್ರಾಣೇಶ್

ಇಂದು ಬಹಳ ಸಂತೋಷವಾಗ್ತಿದೆ. ಕನ್ನಡದಲ್ಲಿ ಇಷ್ಟೊಂದು ದೊಡ್ಡ ಸಾಧಕರ ಪಟ್ಟಿ ಇದೆ. ಇವರ ಬದುಕಲ್ಲಿ ಹಲವಾರು ಆಯ್ಕೆ ಇತ್ತು, ಆದರೆ ಸಮಾಜಮುಖಿ ಕೆಲಸಕ್ಕೆ ಮಾನ್ಯತೆ ನೀಡಿದ್ರು. ಸಾಹಿತ್ಯ ಕಲಾ ಸಂಗೀತ ಸಂಸ್ಕೃತಿ ಹಾಡುಗಾರಿಕೆ‌ ಎಲ್ಲಾ ರಂಗವನ್ನು ಶ್ರೀಮಂತ ಗೊಳಿಸಿದ್ದಾರೆ ಎಂದು ಸಾಧಕರನ್ನು ಹಾಡಿ ಹೊಗಳಿದರು. ಆಯ್ಕೆ ಸಮಿತಿ ಸಮುದ್ರ ಆಳದಲ್ಲಿ ಇರುವ ಮುತ್ತು, ಭೂಮಿ ಆಳದಲ್ಲಿರುವ ರತ್ನವನ್ನು ಆಯ್ಕೆ ಮಾಡಿದ್ದಾರೆ. ಇವರೆಲ್ಲರಿಗೂ ನನ್ನ ಧನ್ಯವಾದ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್