ಕೃಷ್ಣ ಶಿಲೆ ಎಂದು ಖ್ಯಾತಿ ಪಡೆದ ಕಾರ್ಕಳ ತಾಲೂಕಿನ ಈದು ಸಮೀಪದ ನೆಲ್ಲಿಕಾರು ಶಿಲೆ ರಾಮಲಲ್ಲಾ ವಿಗ್ರಹ ನಿರ್ಮಾಣಕ್ಕೆ ಹಿಂದೂಗಳ ಪವಿತ್ರ ಸ್ಥಳ ಅಯೋದ್ಯೆ ತಲುಪಿದೆ.
ರಾಂ ಅಜೆಕಾರು
ಕಾರ್ಕಳ (ಮಾ.22): ಕೃಷ್ಣ ಶಿಲೆ ಎಂದು ಖ್ಯಾತಿ ಪಡೆದ ಕಾರ್ಕಳ ತಾಲೂಕಿನ ಈದು ಸಮೀಪದ ನೆಲ್ಲಿಕಾರು ಶಿಲೆ ರಾಮಲಲ್ಲಾ ವಿಗ್ರಹ ನಿರ್ಮಾಣಕ್ಕೆ ಹಿಂದೂಗಳ ಪವಿತ್ರ ಸ್ಥಳ ಅಯೋದ್ಯೆ ತಲುಪಿದೆ. ಕಾರ್ಕಳದ ನೆಲ್ಲಿಕಾರು ಶಿಲೆ ಹೇರಿಕೊಂಡು ಮಾ.16ರಂದು ಗುರುವಾರ ರಾತ್ರಿ ಕಾರ್ಕಳ ಬೈಪಾಸ್, ಪಡುಬಿದ್ರಿ, ಉಡುಪಿ, ಮುಂಬೈ ಮಾರ್ಗವಾಗಿ ಹೊರಟ ಲಾರಿ 2107 ಕಿ.ಮೀ. ಕ್ರಮಿಸಿ ಮಾ.19ರಂದು ರಾತ್ರಿ ಭಾನುವಾರ ರಾತ್ರಿ ಅಯೋಧ್ಯೆ ತಲುಪಿತು. ಕಾರ್ಕಳ ತಾಲೂಕಿನ ಈದು ಗ್ರಾಮದ ತುಂಗಾ ಪೂಜಾರಿ ಮನೆಯ ಪರಿಸರದಲ್ಲಿ ಈ ವಿಶಿಷ್ಟ ಕೃಷ್ಣ ಶಿಲೆಯನ್ನು ಆರಿಸಿ ಕೊಂಡೊಯ್ಯಲಾಗಿದೆ.
undefined
9 ಟನ್ ತೂಕ, 10 ಅಡಿ ಉದ್ದ, 6 ಅಡಿ ಅಗಲ ಮತ್ತು 4 ಅಡಿ ದಪ್ಪವಿರುವ ಕೃಷ್ಣ ಶಿಲೆಯನ್ನು ಮಾ.20ರಂದು ಬೆಳಗ್ಗೆ 9.10ಕ್ಕೆ ಅಯೋಧ್ಯೆಯ ಶ್ರೀ ರಾಮ ಮಂದಿರ ನಿರ್ಮಾಣದ ಉಸ್ತುವಾರಿಯಲ್ಲೊಬ್ಬರಾದ ವಿಶ್ವ ಹಿಂದೂ ಪರಿಷತ್ತಿನ ಹಿರಿಯರಾದ ಗೋಪಾಲ್ ಜಿ. ನೇತೃತ್ವದಲ್ಲಿ ಲಾರಿಯಿಂದ ಕ್ರೇನ್ ಮೂಲಕ ಇಳಿಸಲಾಯಿತು. ಕರ್ನಾಟಕದ ಮಾಜಿ ಮುಜರಾಯಿ ಸಚಿವ ಹಾಗೂ ಗಣೇಶ್ ಶಿಪ್ಪಿಂಗ್ ಮಾಲೀಕ ಮಾಲಕ ನಾಗರಾಜ ಶೆಟ್ಟಿ, ಪಾಂಡುರಂಗ ನಾಯಕ್ ಕಡ್ತಲ , ಚೆನ್ನಕೇಶವ ಮೆಂಡನ್ ಕಾಪು, ಯತೀಶ್ ಶೆಟ್ಟಿನಲ್ಲೂರು, ತುಂಗಪ್ಪ ಪೂಜಾರಿ, ರೂಪಾ ಆರ್.ಶೆಟ್ಟಿ, ಶ್ರೇಯಾಂಕ ಆರ್.ಶೆಟ್ಟಿ, ಅಖಿಲಾ ಪಾಂಡುರಂಗ ನಾಯಕ್, ಈ ಶಿಲೆ ಕಲ್ಲು ಸಾಗಟದ ಉಸ್ತುವಾರಿ ವಹಿಸಿದ್ದ ಕರ್ನಾಟಕ ರಾಜ್ಯ ಫೆಡರೇಶನ್ ಆಫ್ ಕರ್ನಾಟಕ ಕ್ವಾರಿ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ರವೀಂದ್ರ ಶೆಟ್ಟಿಬಜಗೋಳಿ ಹಾಜರಿದ್ದರು.
ಬಿಜೆಪಿ, ಕಾಂಗ್ರೆಸ್‌ಗೆ ಬೆಂಗಳೂರು ದುಡ್ಡು ಮಾಡುವ ಎಟಿಎಂ: ಎಚ್.ಡಿ.ಕುಮಾರಸ್ವಾಮಿ ಕಿಡಿ
ಭಕ್ತರ ಮೆಚ್ಚಿನ ತಾಣವಾದ ಶಿಲೆ ದೊರೆತ ಜಾಗ: ಕಾರ್ಕಳ ತಾಲೂಕು ನೆಲ್ಲಿಕಾರಿನ ಈದು ಗ್ರಾಮದ ತುಂಗಪ್ಪ ಪೂಜಾರಿ ಅವರ ಜಾಗದಲ್ಲಿ ದೊರೆತ ರಾಮನ ಮೂರ್ತಿ ಕೆತ್ತನೆಗೆ ಕಳುಹಿಸಲಾದ ಕೃಷ್ಣ ಶಿಲೆ ದೊರೆತ ಜಾಗವನ್ನು ನೋಡಲು ಜನರು ತಂಡೋಪತಂಡವಾಗಿ ಅಗಮಿಸುತ್ತಿದ್ದಾರೆ. ಈ ಜಾಗ ಈಗ ಆಸ್ತಿಕರ ಪಾಲಿನ ಕೌತುಕದ ತಾಣವಾಗಿದ್ದು, ನಿತ್ಯ 100ಕ್ಕೂ ಹೆಚ್ಚು ಮಂದಿ ಭೇಟಿ ನೀಡುತ್ತಿದ್ದಾರೆ.
ರಾಮನ ವಿಗ್ರಹಕ್ಕೆ ದೇಶದ 5 ಕಡೆಗಳಿಂದ ಶಿಲೆಗಳು ಅಯೋಧ್ಯೆಗೆ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮಮಂದಿರದಲ್ಲಿ ಪ್ರತಿಷ್ಠಾಪಿಸುವ ಬಾಲರಾಮನ ವಿಗ್ರಹ ನಿರ್ಮಾಣಕ್ಕೆ ಈಗಾಗಲೇ 4 ಕಡೆಗಳಿಂದ 12 ಶಿಲೆಗಳನ್ನು ತರಿಸಲಾಗಿದೆ, ಇನ್ನೂ 2 ಶಿಲೆಗಳು ಬರಲಿವೆ. ಅವುಗಳಲ್ಲಿ ಸೂಕ್ತವಾದುದನ್ನು ಆರಿಸಿ ವಿಗ್ರಹ ನಿರ್ಮಾಣ ಮಾಡಲಾಗುತ್ತದೆ ಎಂದು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ವ್‌ನ ವಿಶ್ವಸ್ಥರಾಗಿರುವ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಮಂಗಳವಾರ ಅಯೋಧ್ಯೆಗೆ ತೆರಳಿ, ರಾಮಮಂದಿರ ನಿರ್ಮಾಣದ ಪ್ರಗತಿ ಕಾರ್ಯವನ್ನು ವೀಕ್ಷಿಸಿದ ಶ್ರೀಗಳು, ಅಲ್ಲಿಂದಲೇ ವೀಡಿಯೋ ಮೂಲಕ ಸುದ್ದಿಗಾರರಿಗೆ ಈ ಮಾಹಿತಿ ನೀಡಿದ್ದಾರೆ. ಈಗಾಗಲೇ ನೇಪಾಳದ ಕಾಳಿಗಂಡಕಿ ನದಿ ತೀರದಿಂದ 2 ಶಿಲೆಗಳು, ರಾಜಾಸ್ಥಾನದಿಂದ 5 ಶಿಲೆಗಳು, ಕರ್ನಾಟಕದ ಹೆಗ್ಗಡೆದೇವನ ಕೋಟೆಯಿಂದ 2 ಮತ್ತು ಕಾರ್ಕಳದಿಂದ 1 ಶಿಲೆ ಅಯೋಧ್ಯೆ ತಲುಪಿವೆ. ತಮಿಳುನಾಡಿನ ಮಹಾಬಲಿಪುರಂನಿಂದ 2 ಶಿಲೆಗಳು ಇನ್ನಷ್ಟೇ ತಲುಪಬೇಕಾಗಿವೆ. ಶಿಲ್ಪಿತಜ್ಞರು ಈ ಕಲ್ಲುಗಳಲ್ಲಿ ರಾಮನ ವಿಗ್ರಹ ನಿರ್ಮಾಣಕ್ಕೆ ಯಾವುದು ಸೂಕ್ತ ಎಂದು ನಿರ್ಧರಿಸಲಿದ್ದಾರೆ ಎಂದು ಸ್ವಾಮೀಜಿ ಹೇಳಿದ್ದಾರೆ.
25,000 ಯಾತ್ರಿಗಳಿಗೆ ಭವನ: ದಿರ ನಿರ್ಮಾಣ ಕಾರ್ಯವು ವೇಗದಿಂದ ನಡೆಯುತ್ತಿದ್ದು, ಪ್ರಸ್ತುತ ಗರ್ಭಗುಡಿಯ ಪೀಠದ ಮೇಲೆ ಕಲ್ಲಿನ ಸ್ತಂಭಗಳನ್ನು ಜೋಡಣೆ ಮತ್ತು ಗೋಡೆ ನಿರ್ಮಾಣ ನಡೆಯುತ್ತಿದೆ. ಇನ್ನು 10 ದಿನಗಳಲ್ಲಿ ಗರ್ಭಗುಡಿಯ ಮೇಲ್ಛಾವಣಿಯ ಶಿಲಾ ಹೊದಿಗೆಗಳನ್ನು ಅಳವಡಿಸುವ ಕಾರ್ಯ ಆರಂಭವಾಗಲಿದೆ. ಮುಂದಿನ ಮಕರಸಂಕ್ರಾಂತಿಯ ನಂತರ ರಾಮಮಂದಿರದಲ್ಲಿ ರಾಮ ದೇವರ ಪ್ರತಿಷ್ಠಾ ಉತ್ಸವವು ವೈಭವದಿಂದ ನಡೆಯಲಿದ್ದು, ಈ ವೇಳೆಗೆ ದೇಶಾದ್ಯಂತದಿಂದ ಆಗಮಿಸುವ ಭಕ್ತರ ಅನುಕೂಲಕ್ಕಾಗಿ 3 ಮಹಡಿಗಳ ಬೃಹತ್ ಯಾತ್ರಿಭವನವನ್ನು ಮಂದಿರದ ಪಕ್ಕದಲ್ಲಿಯೇ ನಿರ್ಮಿಸಲಾಗುತ್ತಿದೆ.
ಇದರಲ್ಲಿ ಸುಮಾರು 25000 ಮಂದಿ ಭಕ್ತರಿಗೆ ಏಕಕಾಲದಲ್ಲಿ ತಂಗುವುದಕ್ಕೆ ಬೇಕಾದ ಸ್ನಾನ, ಶೌಚಾಲಯಗಳ ಸಹಿತ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಶ್ರೀಗಳು ಹೇಳಿದ್ದಾರೆ. ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ವ್ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ನಿರ್ಮಾಣ ಸ್ಥಳದಲ್ಲಿದಲ್ಲಿ ಉಸ್ತುವಾರಿಯಾಗಿ ವಿಹಿಂಪ ಮುಖಂಡ ಗೋಪಾಲ್ ಜೀ, ಶ್ರೀಗಳ ಆಪ್ತ ಕಾರ್ಯದರ್ಶಿ ಕೃಷ್ಣ ಭಟ್, ಅಯೋಧ್ಯೆ ಪೇಜಾವರ ಮಠದ ವ್ಯವಸ್ಥಾಪಕ ಮಹೇಂದ್ರ ದುಬೆ ಶ್ರೀಗಳೊಂದಿಗಿದ್ದರು.
ಅಯೋಧ್ಯೆ ಶ್ರೀ ರಾಮನ ನಿರ್ಮಿಸಲು ಕಾರ್ಕಳದ ಈದುವಿನ ಕೃಷ್ಣ ಶಿಲೆ ಬಳಕೆ ಎಂದರೆ ನಾವು ಧನ್ಯರು. ಕಲ್ಲು ದೊರೆತ ಸ್ಥಳವೇ ಪುಣ್ಯಭೂಮಿ ಅದನ್ನು ನೋಡಿ ಸಂಭ್ರಮಿಸಬೇಕು.
-ಹರಿಪ್ರಸಾದ್ ಉಡುಪಿ, ಭಕ್ತ.
ಬೆಂಗಳೂರಿನಲ್ಲಿ ಯುಗಾದಿ ಹಬ್ಬದ ಖರೀದಿ ಬಲುಜೋರು: ಕೊಂಚ ಏರಿದ ಬೆಲೆ
ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮಚಂದ್ರನ ಮೂರ್ತಿಗೆ ನಮ್ಮ ಕಾರ್ಕಳ ತಾಲೂಕಿನ ಈದು ಗ್ರಾಮದಿಂದ ಕಲ್ಲನ್ನು ಅಯೋಧ್ಯೆಗೆ ತಲುಪಿಸಲಾಯಿತು. ಈ ಪುಣ್ಯ ಸೇವೆಯಲ್ಲಿ ಭಾಗವಹಿಸಿದ ನನ್ನ ಜನ್ಮ ಪಾವನವಾಯಿತು. ಈ ಪುಣ್ಯ ಸೇವೆಗೆ ಸಹಕರಿಸಿದ ಅಯೋಧ್ಯ ಜೀರ್ಣೋದ್ಧಾರದ ಉಸ್ತುವಾರಿ ವಹಿಸಿದ ಹಿರಿಯರು ಮಾರ್ಗದರ್ಶಕ ಗೋಪಾಲ್ ಜೀ, ಬಜರಂಗದಳದ ರಾಜ್ಯ ಸಂಚಾಲಕ ಸುನಿಲ್ ಕೆ.ಆರ್., ಮಾಜಿ ಸಚಿವ ನಾಗರಾಜ್ ಶೆಟ್ಟಿ, ತುಂಗಪ್ಪ ಪೂಜಾರಿ ಇವರಿಗೆ ಅನಂತ ಅನಂತ ಧನ್ಯವಾದಗಳು.
-ರವೀಂದ್ರ ಶೆಟ್ಟಿಬಜಗೋಳಿ, ಕರ್ನಾಟಕ ರಾಜ್ಯ ಫೆಡರೇಶನ್ ಆಫ್ ಕರ್ನಾಟಕ ಕ್ವಾರಿ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ.