ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ: ಬಾಂಬೆಯ ತಾಜ್ ಹೋಟೆಲ್‌ನಲ್ಲಿ ಆದಂತಹ ಭಯ ನನಗೆ ಆಗ್ತಿದೆ: ಆರ್ ಅಶೋಕ್

By Ravi Janekal  |  First Published Feb 27, 2024, 10:33 PM IST

ವಿಧಾನಸೌಧದ ಮೇಲೆ ಇವರು ಪಾಕಿಸ್ತಾನ ಬಾವುಟ ಹಾರಿಸುವ ಸನ್ನಿವೇಶ ಕ್ರಿಯೇಟ್ ಆಗ್ತಿದೆ. ಶಕ್ತಿಸೌಧದ ಒಳಗೆ ಈ ತರಹದವರು ಎಷ್ಟು ಜನ ಅಡಗಿದ್ದಾರೋ ಏನೋ ಬಾಂಬೆಯ ತಾಜ್ ಹೋಟೆಲ್ ನಲ್ಲಿ ಆದಂತಹ ಭಯ ನನಗೆ ಆಗ್ತಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ತಿಳಿಸಿದ್ದಾರೆ. 



ಬೆಂಗಳೂರು (ಫೆ.27): ವಿಧಾನಸೌಧದ ಮೇಲೆ ಇವರು ಪಾಕಿಸ್ತಾನ ಬಾವುಟ ಹಾರಿಸುವ ಸನ್ನಿವೇಶ ಕ್ರಿಯೇಟ್ ಆಗ್ತಿದೆ. ಶಕ್ತಿಸೌಧದ ಒಳಗೆ ಈ ತರಹದವರು ಎಷ್ಟು ಜನ ಅಡಗಿದ್ದಾರೋ ಏನೋ ಬಾಂಬೆಯ ತಾಜ್ ಹೋಟೆಲ್ ನಲ್ಲಿ ಆದಂತಹ ಭಯ ನನಗೆ ಆಗ್ತಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ತಿಳಿಸಿದ್ದಾರೆ. 

ರಾಜ್ಯಸಭೆ ಚುನಾವಣೆಯಲ್ಲಿ ಗೆಲುವು ಪಡೆಯುತ್ತಿದ್ದಂತೆ ನಾಸಿರ್ ಹುಸೇನ್ ಬೆಂಬಲಿಗರಿಂದ ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿರುವ ಸಂಬಂಧ ಆತಂಕ ವ್ಯಕ್ತಪಡಿಸಿದ ವಿಪಕ್ಷ ನಾಯಕ ಆರ್‌ ಅಶೋಕ್, ಇತ್ತೀಚೆಗೆ ಸಂಸದ ಡಿಕೆ ಸುರೇಶ್ ದೇಶ ಒಡೆಯುವ ಹೇಳಿಕೆ ನೀಡಿದ್ರು. ಈಗ ಪಾಕಿಸ್ತಾನಕ್ಕೆ ಜಿಂದಾಬಾದ್ ಎನ್ನುವ ಮೂಲಕ ದೇಶ ವಿರೋಧ ಹೇಳಿಕೆ ನೀಡಲಾಗಿದೆ ಇವೆರಡಕ್ಕೂ ಸಿಂಕ್ ಆಗ್ತಿದೆ. ರಾಜ್ಯದ ಶಕ್ತಿ ಸೌಧದ ಒಳಗೆ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ರೂ ಪೊಲೀಸರು ಕೈಕಟ್ಟಿ ನಿಂತುಕೊಂಡಿದ್ದಾರೆ. ಪ್ರಶ್ನೆ ಮಾಡಿದ್ರೆ ಟ್ರಾನ್ಸ್‌ಫರ್ ಮಾಡ್ತಾರೆ ಅನ್ನೋ ಆತಂಕದಲ್ಲಿ ಪೊಲೀಸ್ರು ಇದ್ದಾರೆ. ಎಳೂವರೆ ಕೋಟಿ ಜನರ ಪವಿತ್ರ ಕ್ಷೇತ್ರದಲ್ಲಿ ದೇಶ ವಿರೋಧಿ ಘೋಷಣೆ ಕೂಗಿದ್ದಾರೆ ಅಂದರೆ ನಾಳೆ ವಿಧಾನಸೌಧದ ಮೇಲೂ ಪಾಕಿಸ್ತಾನ ಬಾವುಟ ಹಾರಿಸಿದ್ರೂ ಅಚ್ಚರಿಯಿಲ್ಲ ಎಂದರು. 

Tap to resize

Latest Videos

ಶಿವರಾಮ್ ಹೆಬ್ಬಾರ್ ಕಾಣೆಯಾಗಿದ್ದಾರೆ ಹುಡುಕಿಕೊಡುವಂತೆ ಪಂಚಾಯ್ತಿ ಸದಸ್ಯನಿಂದ ಯಲ್ಲಾಪುರ ಠಾಣೆಗೆ ದೂರು!

ಈ ಕಾಂಗ್ರೆಸ್ ಸರ್ಕಾರ ದೇಶ ವಿರೋಧಿಗಳೊಂದಿಗೆ ಕೈಜೋಡಿಸಿದೆ. ಅಧಿಕಾರಕ್ಕೆ ಬಂದು ಪಿಎಫ್‌ಐ ಸೇರಿದಂತೆ 1200 ದೇಶದ್ರೋಹಿಗಳ ಕೇಸ್ ವಾಪಸ್ ಪಡೆದುಕೊಂಡಿದೆ. ವೋಟ್ ಬ್ಯಾಂಕ್‌ಗಾಗಿ ದೇಶದ್ರೋಹಿಗಳೊಂದಿಗೆ ಕೈಜೋಡಿಸುವ ಇಂಥ ಹೇಡಿ, ದೇಶವಿರೋಧಿ ನಾಲಾಯಕ್ ಸರ್ಕಾರ ಯಾವುದೂ ಇಲ್ಲ. ಪಾಕಿಸ್ತಾನ್ ಜಿಂದಾಬಾದ್ ಅನ್ನೋರ ಕೈಗೆ ಸಂವಿಧಾನ ಕೊಡಬೇಕಾ? ಕಾಂಗ್ರೆಸ್ ಸರ್ಕಾರದ ಧೋರಣೆಯನ್ನು ಕಟುವಾಗಿ ಟೀಕಿಸಿದರು.


ಬಿಜೆಪಿ ನಿಯೋಗದಿಂದ ವಿಧಾನಸೌಧ ಪೊಲೀಸ್ ಠಾಣೆಗೆ ದೂರು:

ವಿಧಾನಸೌಧದಲ್ಲೇ 'ಪಾಕಿಸ್ತಾನ ಜಿಂದಾಬಾದ್' ದೇಶವಿರೋಧಿ ಘೋಷಣೆ ಕೂಗಿದ್ರೂ ಪೊಲೀಸರು ಆರೋಪಿಯನ್ನ ಬಂಧಿಸಿದೆ ಕೈಕಟ್ಟಿ ನಿಂತ ಬಗ್ಗೆ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಬಿಜೆಪಿ ನಿಯೋಗದಿಂದ ವಿಧಾನಸೌಧ ಪೊಲೀಸ್ ಠಾಣೆಗೆ ಭೇಟಿ ನೀಡಿ, ದೇಶದ್ರೋಹಿಗಳ ಬಂಧನಕ್ಕೆ ಆಗ್ರಹಿಸಿ ಪೊಲೀಸ್ ಠಾಣೆ ಮುಂದೆಯೇ ಪ್ರತಿಭಟನೆ ನಡೆಸಿದರು.

ಎಂ ಎಲ್ ಸಿ ರವಿಕುಮಾರ್ , ಹರೀಶ್ ಪೂಂಜಾ, ಭರತ್ ಶೆಟ್ಟಿ, ಸಪ್ತಗಿರಿಗೌಡ , ಮಾಜಿ ಡೆಪ್ಯುಟಿ ಮೇಯರ್ ಹರೀಶ್ ಸೇರಿದಂತೆ ಕಾರ್ಯಕರ್ತರಿಂದ ವಿಧಾನಸೌಧ ಪೊಲೀಸ್ ಠಾಣೆ ಮುಂದೆಯೇ ಪ್ರತಿಭಟನೆ ನಡೆಸಿದರು.

ದೇಶದ್ರೋಹಿಗಳನ್ನು ಅರೆಸ್ಟ್ ಮಾಡಿ:

ಪಾಕಿಸ್ತಾನ ಪರ ಘೋಷಣೆ ಕೂಗಿದ ದೇಶದ್ರೋಹಿಗಳನ್ನು ಬಂಧಿಸುವಂತೆ ಘೋಷಣೆ ಕೂಗಿದರು. ಈ ವೇಳೆ ಭಾರತ್ ಮಾತಾ ಕೀ ಜೈ ಘೋಷಣೆ ಕೂಗಿದರ ಕಾರ್ಯಕರ್ತರು. 

ದೇಶದ್ರೋಹಿಗಳನ್ನು ಬಂಧಿಸುವಂತೆ ನಾವು ಪ್ರತಿಭಟನೆ ಮಾಡ್ತೇವೆ ನಮ್ಮನ್ನು ಅರೆಸ್ಟ್ ಮಾಡುವುದಾದರೆ ಮಾಡಿ. ನಿಮ್ಮಿಂದ ದೇಶ ವಿರೋಧಿಗಳನ್ನ ಬಂಧನ ಮಾಡೊದಿಕ್ಕೆ ಆಗಲ್ಲ. ನಿಮ್ಮ ಸರ್ಕಾರ ನಮ್ಮಂಥವರನ್ನು ಬಂಧನ ಮಾಡುತ್ತೆ ಅಷ್ಟೇ ಎಂದು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು.

click me!