ಪ್ರಧಾನಿ ನರೇಂದ್ರ ಮೋದಿ ಧಾರವಾಡ ಭೇಟಿಯಲ್ಲಿ ಯುವತಿಯೊಬ್ಬಳು ಉಡುಗೊರೆ ನೀಡಲು ಮುಂದಾಗಿದ್ದಳು. ಆದರೆ ಸತತ 2ನೇ ಬಾರಿ ಯುವತಿ ಮೋದಿಗೆ ಗಿಫ್ಟ್ ನೀಡುವಲ್ಲಿ ವಿಫಲವಾಗಿದ್ದಾಳೆ. ಅಷ್ಟಕ್ಕೂ ಯುವತಿಯ ಮೋದಿಗೆ ಕೊಡಬೇಕು ಎಂದಿರುವ ಉಡುಗೊರೆ ಏನು? ಇಲ್ಲಿದೆ ವಿವರ.
ಧಾರವಾಡ(ಮಾ.12): ಪ್ರಧಾನಿ ನರೇಂದ್ರ ಮೋದಿ ಇಂದು ಕರ್ನಾಟಕಕ್ಕೆ ಭೇಟಿ ನೀಡಲು ಯೋಜನೆಗಳನ್ನು ಉದ್ಘಾಟಿಸಿದ್ದಾರೆ. ಮೊದಲು ಮದ್ದೂರಿನ ಗಜ್ಜಲಗೆರೆಯಲ್ಲಿ ಬೆಂಗಳೂರು ಮೈಸೂರು ದಶಪಥ ಹೆದ್ದಾರಿ ಉದ್ಘಾಟಿಸಿದ್ದಾರೆ.ಬಳಿಕ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಬಳಿಕ ಧಾರವಾಡಕ್ಕೆ ತೆರಳಿ ಐಐಟಿ ಉದ್ಘಾಟನೆ, ರೈಲು ಪ್ಲಾಟ್‌ಫಾರ್ಮ್ ಉದ್ಘಾಟನೆ ಸೇರಿದಂತೆ ಹಲವು ಯೋಜನೆ ಉದ್ಘಾಟಿಸಿದ್ದಾರೆ. ಮೋದಿ ಧಾರವಾಡ ಭೇಟಿ ವೇಳೆ ಅಮೂಲ್ಯ ಉಡುಗೊರೆ ನೀಡುವ ಯುವತಿ ಪ್ಲಾನ್ ಮತ್ತೆ ವಿಫಲವಾಗಿದೆ. ಪ್ರಧಾನಿ ಮೋದಿ ತಾಯಿ ಹೀರಾ ಬೆನ್ ಮೋದಿ ಅವರ ಚಿತ್ರ ಬಿಡಿಸಿರುವ ಯುವತಿ, ಪ್ರಧಾನಿಗೆ ಉಡುಗೊರೆ ನೀಡಲು ಪ್ರಯತ್ನಿಸುತ್ತಿದ್ದಾಳೆ. ಆದರೆ ಪದೇ ಪದೇ ಈ ಕನಸು ಸಾಕಾರಗೊಳ್ಳುತ್ತಿಲ್ಲ.
ಹುಬ್ಬಳ್ಳಿ ಮೂಲದ ಯುವತಿ ಶ್ರೇಯಾ ರಟಗಲ್ ಚಾರ್ ಕೋಲ್ ಆರ್ಟ್ ಮೂಲಕ ಮೋದಿ ತಾಯಿ ಹೀರೆ ಬೆನ್ ಮೋದಿ ಅವರ ಚಿತ್ರ ಬಿಡಿಸಿದ್ದಾರೆ.ಇದನ್ನು ಪ್ರಧಾನಿ ಮೋದಿಗೆ ಉಡುಗೊರೆಯಾಗಿ ನೀಡಲು ಬಯಸ್ಸಿದ್ದಾಳೆ. ಹೀಗಾಗಿ ಹುಬ್ಬಳ್ಳಿಯಿಂದ ಧಾರವಾಡಕ್ಕೆ ಆಗಮಿಸಿದ ಶ್ರೇಯ ರಟಗಲ್, ಧಾರವಾಡ ಐಐಟಿ ಉದ್ಘಾಟನೆ ವೇಳೆ ಉಡುಗೊರೆ ನೀಡಲು ಮುಂದಾಗಿದ್ದಾಳೆ.
ಲಂಡನ್‌ನಲ್ಲಿ ಭಾರತ ಪ್ರಜಾಪ್ರಭುತ್ವ ಪ್ರಶ್ನಿಸಿ ಬಸವೇಶ್ವರರಿಗೆ ಅವಮಾನ, ರಾಹುಲ್ ಗಾಂಧಿ ವಿರುದ್ಧ ಮೋದಿ ವಾಗ್ದಾಳಿ!
ಸಣ್ಣ ಅವಕಾಶ ಸಾಕು ಮೋದಿಗೆ ಈ ಉಡುಗೊರೆ ನೀಡಬೇಕು ಎಂದು ಮಹದಾಸೆಯಿಂದ ಧಾರವಾಡದ ಐಐಟಿ ಕ್ಯಾಂಪಸ್ ಬಳಿ ಬಂದಿದ್ದಾಳೆ. ಆದರೆ ಭದ್ರತಾ ಸಿಬ್ಬಂದಿಗಳು ಯುವತಿಯನ್ನು ಒಳ ಪ್ರವೇಶಿಸಲು ಅನುಮತಿ ನೀಡಿಲ್ಲ. ಈ ಗಿಫ್ಟ್ ಮೋದಿಗೆ ನೀಡಬೇಕು ಅಷ್ಟೇ ಎಂದು ಪರಿಪರಿಯಾಗಿ ಬೇಡಿಕೊಂಡಿದ್ದಾಳೆ. ಆದರ ಸುರಕ್ಷತಾ ಕಾರಣ, ಹಾಗೂ ಪ್ರೊಟೋಕಾಲ್ ಪ್ರಕಾರ ಶ್ರೇಯಾ ರಟಗಲ್‌ಗೆ ಅವಕಾಶ ಸಿಕ್ಕಿಲ್ಲ.
ಸತತ ಎರಡನೇ ಬಾರಿ ಶ್ರೇಯಾ ರಟಗಲ್ ಪ್ರಯತ್ನ ವಿಫಲವಾಗಿದೆ. ಇದಕ್ಕೂ ಮೊದಲು ಪ್ರಧಾನಿ ಮೋದಿ ಹುಬ್ಬಳ್ಳಿಗೆ ಆಗಮಿಸಿದ ವೇಳೆ ಇದೇ ಚಿತ್ರ ಉಡುಗೊರೆ ನೀಡುವ ಪ್ರಯತ್ನ ಮಾಡಿದ್ದರು. ಹುಬ್ಬಳ್ಳಿಯಲ್ಲಿ ಮೋದಿ ಆಯೋಜಿಸಿದ ರೋಡ್ ಶೋ ವೇಳೆ ಈ ಉಡುಗೊರೆ ನೀಡಲು ಮುಂದಾಗಿದ್ದಳು. ಮೋದಿ ಸಾಗುವ ರಸ್ತೆ ಬದಿಯಲ್ಲಿ ನಿಂತು ಉಡುಗೊರೆ ನೀಡುವ ಪ್ರಯತ್ನ ಮಾಡಿದ್ದಳು. ಅಂದು ಕೂಡ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿಗಳು ಯುವತಿಗೆ ಅವಕಾಶ ನೀಡಲಿಲ್ಲ. ಇಷ್ಟೇ ಅಲ್ಲ ಯುವತಿ ಮೋದಿ ಮೋದಿ ಎಂದು ಕಿರುಚಾಡಿದರೂ ಮೋದಿ ಗಮನಸೆಳೆಯಲು ಸಾಧ್ಯವಾಗಲಿಲ್ಲ.
ಈ ಕಾರಣದಿಂದ ಈ ಬಾರಿ ಮೋದಿ ರೋಡ್‌ಶೋ ವೇಳೆ ಗಿಫ್ಟ್ ನೀಡುವ ಪ್ರಯತ್ನಕ್ಕ ಯವತಿ ಕೈ ಹಾಕಿಲ್ಲ. ಇಷ್ಟೇ ಅಲ್ಲ ಈ ಬಾರಿ ಮೋದಿ ರೋಡ್ ಶೋ ಮಂಡ್ಯದಲ್ಲಿ ಮಾಡಿದ್ದರು. ಹುಬ್ಬಳ್ಳಿಯಿಂದ ಮಂಡ್ಯ ಪ್ರಯಾಣ ಬಲು ದೂರವಾಗಿತ್ತು. ಈ ಎಲ್ಲಾ ಲೆಕ್ಕಾಚಾರ ಹಾಕಿ ಐಐಟಿ ಉದ್ಘಾಟನೆ ವೇಳೆ ಮೋದಿಗೆ ಉಡುಗೊರೆ ನೀಡಲು ಮುಂದಾಗಿದ್ದಳು. ಆದರೆ ಈ ಬಾರಿಯೂ ಕೈಗೂಡಲಿಲ್ಲ.
ಐಐಟಿ, ಮೂಲಭೂತ ಸೌಕರ್ಯದ ಮೂಲಕ ಮುಂದಿನ ಜನಾಂಗದ ಭವಿಷ್ಯ ರೂಪಿಸಿದ ಮೋದಿ, ಸಿಎಂ ಶ್ಲಾಘನೆ!
ಬಿವಿಬಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಾಂಗ ಮಾಡಿತ್ತಿರುವ ಯುವತಿ, ಗಿಫ್ಟ್ ನೀಡಲು ಸಾಧ್ಯವಾಗ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾಳೆ. ಇಷ್ಟೇ ಅಲ್ಲ ಪ್ರಧಾನಿ ಮೋದಿ ಗಮನಸೆಳೆದು ಈ ಉಡುಗೊರೆ ನೀಡುತ್ತೇನೆ ಎಂದು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.