Gadag: ಸಗಣಿಯಿಂದ ರಾಖಿ ತಯಾರಿಸಿದ ನರಗುಂದದ ರೈತ!

By Kannadaprabha News  |  First Published Aug 28, 2023, 12:24 PM IST

ನೂಲ ಹುಣ್ಣಿಮೆ ದಿನ ಆಚರಿಸುವ ರಕ್ಷಾ ಬಂಧನದ ಹಿನ್ನೆಲೆ ಮಾರುಕಟ್ಟೆಯಲ್ಲಿ ಈಗಾಗಲೇ ವಿವಿಧ ಬಗೆಯ ರಾಖಿಗಳು ರಾರಾಜಿಸುತ್ತಿವೆ. ಇದರ ಮಧ್ಯೆ ತಾಲೂಕಿನ ರೈತನೊಬ್ಬ ಗೋವಿನ ಸಗಣಿಗೆ ಹಲವು ದ್ರಾವಣ ಸೇರಿಸಿ ಅದರಲ್ಲಿ ರಾಖಿ ತಯಾರಿಸಿ ವಿಶೇಷತೆ ಮೆರೆದಿದ್ದಾರೆ. 


ನರಗುಂದ (ಆ.28): ನೂಲ ಹುಣ್ಣಿಮೆ ದಿನ ಆಚರಿಸುವ ರಕ್ಷಾ ಬಂಧನದ ಹಿನ್ನೆಲೆ ಮಾರುಕಟ್ಟೆಯಲ್ಲಿ ಈಗಾಗಲೇ ವಿವಿಧ ಬಗೆಯ ರಾಖಿಗಳು ರಾರಾಜಿಸುತ್ತಿವೆ. ಇದರ ಮಧ್ಯೆ ತಾಲೂಕಿನ ರೈತನೊಬ್ಬ ಗೋವಿನ ಸಗಣಿಗೆ ಹಲವು ದ್ರಾವಣ ಸೇರಿಸಿ ಅದರಲ್ಲಿ ರಾಖಿ ತಯಾರಿಸಿ ವಿಶೇಷತೆ ಮೆರೆದಿದ್ದಾರೆ. ತಾಲೂಕಿನ ಸಂಕದಾಳ ಗ್ರಾಮದ ರುದ್ರಗೌಡ ಲಿಂಗನಗೌಡ ಎಂಬಾತನೇ ತಾನು ಸಾಕಿದ ಗೋವಿನ ಸಗಣಿಯಲ್ಲಿ ರಾಖಿ ತಯಾರಿಸಿದ ರೈತ.

ರಾಖಿ ಹಬ್ಬದ ಹಿನ್ನೆಲೆ ಅಂಗಡಿಗಳಲ್ಲಿ ವಿವಿಧ ಬಗೆಯ ಅಲಂಕಾರಪೂರ್ಣ ಪ್ಲಾಸ್ಟಿಕ್‌ ರಾಖಿಗಳನ್ನು ಹಣ ಕೊಟ್ಟು ಖರೀದಿಸಿ ಕಟ್ಟಿಕೊಂಡು, ಈ ರಕ್ಷಾ ಬಂಧನ ದಿನ ಮುಗಿಯುತ್ತಿದ್ದಂತೆ ಕಸದ ಬುಟ್ಟಿಗೆ ಹಾಕಿ ಬಿಡುತ್ತವೆ. ಮುಂದೆ ಅಂದು ಭೂಮಿಯ ಪಾಲಾದರೂ ಕರಗುವುದಿಲ್ಲ. ಆದರೆ ಈ ರಾಖಿಯು ಬಳಕೆಯ ಬಳಿಕ ಭೂಮಿ ಸೇರಿದರೂ ಮಣ್ಣಿನಲ್ಲಿ ಕರಗಿ ಗೊಬ್ಬರವಾಗುತ್ತದೆ ಎನ್ನುತ್ತಾರೆ ರೈತ ರುದ್ರಗೌಡ.

Latest Videos

undefined

ಪಿಎಸ್‌ಐ ಮರು ಪರೀಕ್ಷೆ: ಸಿದ್ದರಾಮಯ್ಯ ಸರ್ಕಾರಕ್ಕೆ ಅಗ್ನಿಪರೀಕ್ಷೆ

ಕಡಿಮೆ ಬೆಲೆ: ವಿವಿಧ ರೀತಿಯ ಸಾವಯವ ರಾಖಿಗಳು . 10ದಿಂದ 200ರವರೆಗೆ ಕಡಿಮೆ ಬೆಲೆಯಲ್ಲಿ ರೈತನ ಬಳಿಯೂ ಸಿಗಲಿದ್ದು, ಸದ್ಯ ನರಗುಂದದ ಎಲ್ಲ ಅಂಗಡಿಗಳಲ್ಲೂ ಲಭ್ಯವಿದೆ.ಈ ಸಗಣಿ ರಾಖಿ ಬೇಕೆಂದರೆ ರುದ್ರಗೌಡ ಲಿಂಗನಗೌಡ ಮೊ. ನಂ. 9972856591 ಸಂಪರ್ಕಿಸಲು ಕೋರಿದ್ದಾರೆ.

ಮಾರುಕಟ್ಟೆಗೆ ರಾಖಿ ಲಗ್ಗೆ: ಅಣ್ಣ-ತಂಗಿಯರ ಪ್ರೀತಿಯದ್ಯೋತಕವಾದ ರಕ್ಷಾ ಬಂಧನಕ್ಕೆ ದಿನದ ಗಣನೆ ಆರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ವಿವಿಧ ನಮೂನೆಯ ರಾಖಿಗಳು ಎಲ್ಲರ ಗಮನ ಸೆಳೆಯುತ್ತಿವೆ. ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ರಕ್ಷಾ ಬಂಧನ (ರಾಖಿ) ಖರೀದಿ ಭರಾಟೆ ಜೋರಾಗಿತ್ತು. ಶಾಲಾ-ಕಾಲೇಜು ವಿದ್ಯಾರ್ಥಿನಿಯರು, ಯುವತಿಯರು, ಗೃಹಿಣಿಯರು ಸಹೋದರರಿಗೆ ಕಟ್ಟಲು ನಾನಾ ಬಗೆಯ ರಾಖಿ ಖರೀದಿಸುವಲ್ಲಿ ಮಗ್ನರಾಗಿದ್ದರು. ಮಾರುಕಟ್ಟೆಯಲ್ಲಿ ಈಗಾಗಲೇ ತರಹೇವಾರಿ ರಾಖಿಗಳ ಮಾರಾಟ ಜೋರಾಗಿದೆ. ಯುವತಿಯರು ತಮ್ಮ ಇಷದ ರಾಖಿಗಳನ್ನು ಖರೀದಿಸುತ್ತಿದ್ದಾರೆ.

ನಗರದ ಪ್ರಮುಖ ಮಾರುಕಟ್ಟೆಯಾದ ಶಾಸ್ತ್ರಿ ಮಾರುಕಟ್ಟೆ ಬಳಿ ಅನೇಕ ನೂರಾರು ಅಂಗಡಿಗಳು ನಿರ್ಮಾಣ ಆಗಿದ್ದು, ಅಲ್ಲದೇ ನಗರದ ಪ್ರಮುಖ ಬಡಾವಣೆ, ಮಾರುಕಟ್ಟೆ, ಅಂಗಡಿಗಳಲ್ಲಿ ರಾಖಿಗಳ ಮಾರಾಟ ಜೋರಾಗಿದೆ. ಒಂದಕ್ಕಿಂತ ಒಂದು ಆಕರ್ಷಕವಾದ ರಾಖಿಗಳು ಗಮನ ಸೆಳೆಯುತ್ತಿವೆ. ಶಾಲಾ-ಕಾಲೇಜು ವಿದ್ಯಾರ್ಥಿನಿಯರು ಗುಂಪು-ಗುಂಪಾಗಿ ರಾಖಿ ಖರೀದಿಯಲ್ಲಿ ನಿರತರಾಗಿದ್ದಾರೆ. ಇನ್ನೂ ನಾಲ್ಕು ದಿನ ಮುನ್ನವೇ ರಾಖಿಗಳ ಮಾರಾಟ ಜೋರಾಗಿದೆ. ಇನ್ನೂ ಹಬ್ಬದ ಮುನ್ನಾದಿನವಾದ ಬುಧವಾರ ಖರೀದಿ ಭರಾಟೆ ಜೋರಾಗಲಿದೆ.

40% ಕಮಿಷನ್‌ ತನಿಖೆ ಹಿಂದೆ ರಾಜಕೀಯ ಸೇಡು: ಬೊಮ್ಮಾಯಿ ಕಿಡಿ

ಪ್ರಸಕ್ತ ವರ್ಷವೂ ಮಾರುಕಟ್ಟೆಗೆ ನಾನಾ ಬಗೆಯ ರಾಖಿಗಳು ಲಗ್ಗೆ ಇಟ್ಟಿವೆ. ಸ್ಟೋನ್, ಶ್ರಿರಕ್ಷಾ, ಶುಭ, ಕ್ರೇಜಿ, ತಾರಾ ಹಾಗೂ ಡೈಮಂಡ್ ಹೆಸರಿನ ರಾಖಿಗಳು ಎಲ್ಲರನ್ನು ಆಕರ್ಷಿಸುತ್ತಿವೆ. ದಾರ, ಕುಂದನ್ ಗೊಂಡೆ, ಬಳೆ ಮಾದರಿಯ ರಾಖಿಗಳಿಗೆ ಬೇಡಿಕೆ ಹೆಚ್ಚಿದೆ. ಸ್ವಸ್ತಿಕ್, ಗಣೇಶ, ಸಾಯಿಬಾಬಾ, ಓಂ ರಾಖಿಗಳೂ ಇವೆ. ಕಡಿಮೆ ಎಂದರೂ ಒಂದು ಸಾವಿರ ಬಗೆಯ ರಾಖಿಗಳು ಕಂಡು ಬಂದಿವೆ. ₹೧೦-೮೦೦ಗಳವರೆಗೆ ಮಾರುಕಟ್ಟೆಯಲ್ಲಿ ದರ ಕಂಡುಬರುತ್ತಿದೆ.

click me!