ಆತ ಮಹಾರಾಷ್ಟ್ರದ ಬ್ಯಾಂಕ್‌ವೊಂದರ ನಿವೃತ್ತ ಮ್ಯಾನೇಜರ್. ಉದ್ಯೋಗದಲ್ಲಿದ್ದಾಗ ಹೆತ್ತ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಜೀವನ ರೂಪಿಸಿದಾತ. ಇಬ್ಬರೂ ಮಕ್ಕಳು ವಿದೇಶದಲ್ಲಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬದುಕು ರೂಪಿಸಿಕೊಳ್ಳಲು ನೆರವಾದ ತಂದೆಯ ಆರೈಕೆ ಹೋಗಲಿ, ಅಂತ್ಯಕ್ರಿಯೆಯಿಂದಲೂ ಈ ಮಕ್ಕಳು ದೂರ ಉಳಿದಿದ್ದಾರೆ.
ಮುಸ್ತಾಕ್ ಪಿರಜಾದೆ, ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕೋಡಿ (ಆ.28): ಆತ ಮಹಾರಾಷ್ಟ್ರದ ಬ್ಯಾಂಕ್‌ವೊಂದರ ನಿವೃತ್ತ ಮ್ಯಾನೇಜರ್. ಉದ್ಯೋಗದಲ್ಲಿದ್ದಾಗ ಹೆತ್ತ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಜೀವನ ರೂಪಿಸಿದಾತ. ಇಬ್ಬರೂ ಮಕ್ಕಳು ವಿದೇಶದಲ್ಲಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬದುಕು ರೂಪಿಸಿಕೊಳ್ಳಲು ನೆರವಾದ ತಂದೆಯ ಆರೈಕೆ ಹೋಗಲಿ, ಅಂತ್ಯಕ್ರಿಯೆಯಿಂದಲೂ ಈ ಮಕ್ಕಳು ದೂರ ಉಳಿದಿದ್ದಾರೆ. ಈ ಅಮಾನವೀಯ ಘಟನೆ ನಡೆದಿದ್ದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಾಗರಮುನವಳ್ಳಿ ಗ್ರಾಮದಲ್ಲಿ. ಮಕ್ಕಳು- ಸಂಬಂಧಿಕರ ಅನುಪಸ್ಥಿತಿಯಲ್ಲಿ ಪೊಲೀಸರೇ ಅನಾಥ ಶವಕ್ಕೆ ಬಂಧುವಾಗಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಪೊಲೀಸರ ಮಾನವೀಯ ಕಾರ್ಯ ಮೆಚ್ಚುಗೆ ಪಾತ್ರವಾಗಿದ್ದರೆ, ತಂದೆಯ ಅಂತ್ಯಕ್ರಿಯೆಯಿಂದ ದೂರ ಉಳಿದ ಮಕ್ಕಳ ವರ್ತನೆ ವಿರುದ್ಧ ಆಕ್ರೋಶವೂ ವ್ಯಕ್ತವಾಗುತ್ತಿವೆ. ಮಹಾರಾಷ್ಟ್ರದ ಪುಣೆ ಮೂಲದ ಬ್ಯಾಂಕ್‌ವೊಂದರ ನಿವೃತ್ತ ಮ್ಯಾನೇಜರ್ ಮೂಲಚಂದ್ರ ಶರ್ಮಾ (72) ಪಾರ್ಶ್ವವಾಯುಗೆ ತುತ್ತಾಗಿದ್ದರು. ಪುತ್ರಿ ಕೆನಡಾದಲ್ಲಿದ್ದರೆ, ಪುತ್ರ ಸೌಥ್ ಆಫ್ರಿಕಾದಲ್ಲಿ ಸೆಟಲ್ ಆಗಿದ್ದಾರೆ. ಮೂಲಚಂದ್ರ ಶರ್ಮಾ ಒಬ್ಬರೇ ಪುಣೆಯಲ್ಲಿ ವಾಸವಾಗಿದ್ದರು. ಪರಿಚಯಸ್ಥರ ನೆರವಿನಿಂದ ಒಂದೂವರೆ ತಿಂಗಳ ಹಿಂದೆ ಮೂಲಚಂದ್ರ ಚಿಕಿತ್ಸೆಗಾಗಿ ಪುಣೆಯಿಂದ ನಾಗರಮುನವಳ್ಳಿಗೆ ಬಂದಿದ್ದರು.
ಪಿಎಸ್‌ಐ ಮರು ಪರೀಕ್ಷೆ: ಸಿದ್ದರಾಮಯ್ಯ ಸರ್ಕಾರಕ್ಕೆ ಅಗ್ನಿಪರೀಕ್ಷೆ
ನಾಗರಮುನವಳ್ಳಿಯ ಲಾಡ್ಜ್‌ನಲ್ಲಿ ಮೂಲಚಂದ್ರರನ್ನು ಬಿಟ್ಟು ಆ ವ್ಯಕ್ತಿ ಪರಾರಿಯಾಗಿದ್ದ. ಈ ವಿಷಯವನ್ನು ಸ್ಥಳೀಯರು ಚಿಕ್ಕೋಡಿ ಪಿಎಸ್ಐ ಬಸಗೌಡ ನೇರ್ಲಿ ಗಮನಕ್ಕೆ ತಂದಿದ್ದಾರೆ. ಅವರು ಅಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ವೃದ್ಧ ಮೃತಪಟ್ಟರು. ಚಿಕಿತ್ಸೆ ಫಲಿಸದೇ ಮೂಲಚಂದ್ರ ಮೃತರಾಗಿದ್ದರು. ವಿದೇಶಗಳಲ್ಲಿ ನೆಲೆಸಿರುವ ಅವರ ಮಕ್ಕಳು ಅಂತ್ಯಕ್ರಿಯೆಗೆ ಬರಲು ನಿರಾಕರಿಸಿದ್ದರಿಂದ ಸ್ಥಳೀಯ ಪೊಲೀಸರು, ಅಧಿಕಾರಿಗಳೇ ಸೇರಿ ಅಂತ್ಯಕ್ರಿಯೆ ನೆರವೇರಿಸಿದರು.
ಕರುಣೆ ತೋರದ ಗುತ್ತಿಗೆ ನೌಕರ!: ಮೂಲಚಂದ್ರ ಶರ್ಮಾ ಅವರನ್ನು ನಾಗರಮುನ್ನೋಳಿಗೆ ಕರೆತಂದವನು ಸಂಬಂಧಿಯಲ್ಲ. ಬದಲಿಗೆ ವೃದ್ಧರ ಆರೈಕೆಗಾಗಿ ಕುಟುಂಬಸ್ಥರೇ ನೇಮಿಸಿದ್ದ ಗುತ್ತಿಗೆ ನೌಕರನಾಗಿದ್ದ. ತನ್ನ ಗುತ್ತಿಗೆ ಅವಧಿ ಮುಗಿಯುತ್ತಿದ್ದಂತೆ, ಲಾಡ್ಜ್‌ನಲ್ಲಿಯೇ ಬಿಟ್ಟು ಪರಾರಿಯಾಗಿದ್ದ. ಸ್ಥಳೀಯರು ಇದನ್ನು ನಮ್ಮ ಗಮನಕ್ಕೆ ತಂದ ಬಳಿಕ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಿ ಹೆಚ್ಚಿನ ಚಿಕಿತ್ಸೆ ಕೊಡಿಸಿದ್ದೆವು ಎಂದು ಪಿಎಸ್ಐ ಬಸಗೌಡ ನೇರ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ತಿಳಿಸಿದರು.
ಉತ್ತರ ಭಾರತಕ್ಕೀಗ ಹೊಸ ಅಡಕೆಯೇ ಬೇಕು!: ಮಾರುಕಟ್ಟೆಯಲ್ಲೀಗ ಹೊಸ ಟ್ರೆಂಡ್ ಶುರು
ಶವ ಬಿಸಾಕಿ ಎಂದು ಪಿಎಸ್ಐಗೆ ಪುತ್ರಿ ಅವಾಜ್!: ನಾನು ಅನಾಥನಲ್ಲ. ಬ್ಯಾಂಕ್‌ವೊಂದರ ನಿವೃತ್ತ ವ್ಯವಸ್ಥಾಪಕ. ನನ್ನ ಮಗಳು ಕೆನಡಾದಲ್ಲಿದ್ದಾಳೆ. ಮಗ ದಕ್ಷಿಣ ಆಫ್ರಿಕಾದಲ್ಲಿ ಉತ್ತಮ ಹುದ್ದೆಯಲ್ಲಿದ್ದಾನೆ. ನನ್ನನ್ನು ಇಲ್ಲಿನ ಆಸ್ಪತ್ರೆಗೇಕೆ ಕರೆದುಕೊಂಡು ಹೋಗುತ್ತೀದ್ದೀರಿ ಎಂದು ವೃದ್ಧ ಪ್ರಶ್ನಿಸಿದ್ದರು. ಬಳಿಕ ನಾವು ವೃದ್ಧರ ಮಗ ಮತ್ತು ಮಗಳನ್ನು ಸಂಪರ್ಕಿಸಲು ಪ್ರಯತ್ನಿಸಿದೆವು. ಮಗಳಿಗೆ ವಾಟ್ಸ್‌ಆ್ಯಪ್ ಕರೆ ಮಾಡಿದೆವು. ಅದಕ್ಕೆ ಅವರು, ನಮ್ಮ ತಂದೆ ಮೊದಲು ಇದ್ದರು. ಈಗ ಇಲ್ಲ. ಅವರಿಗೆ ನನಗೆ ಯಾವುದೇ ಸಂಬಂಧವಿಲ್ಲ. ಅವರಿಗೆ ಚಿಕಿತ್ಸೆ ಕೊಡಿಸುವಂತೆ ನಾವೇನು ನಿಮಗೆ ಹೇಳಿಲ್ಲ. ನಾವು ನೆಮ್ಮದಿಯಿಂದ ಇದ್ದೇವೆ. ವಿನಾಕಾರಣ ತೊಂದರೆ ಕೊಡಬೇಡಿ. ಬೇಕಾದರೆ ಅಂತ್ಯಕ್ರಿಯೆ ನೆರವೇರಿಸಿ ಅಥವಾ ಶವ ಬಿಸಾಕಿ ಎಂದರು ಎಂದು ಪಿಎಸ್‌ಐ ನೇರ್ಲಿ ಬೇಸರ ವ್ಯಕ್ತಪಡಿಸಿದರು.