
ವರದಿ : ನರಸಿಂಹ ಮೂರ್ತಿ ಕುಲಕರ್ಣಿ
ಬಳ್ಳಾರಿ (ಅ.14): ಆ ಯುವತಿ ಎಂದಿನಂತೆ ಕಾಲೇಜಿಗೆ ತೆರಳಿದ್ದಳು. ಆದ್ರೇ, ಪರೀಕ್ಷೆ ಬರೆಯೋ ವೇಳೆಯೇ ಅವರಣ್ಣ ಬಂದು ಕರೆದಿದ್ದಾನೆ ಎಂದು ಹೇಳೋ ಮೂಲಕ ಹೊರಗೆ ಕರೆದುಕೊಂಡು ಹೋದ ಕೆಲ ಯುವಕರು ನಂತರ ಆಕೆಯನ್ನು ಅಪಹರಣ ಮಾಡಿ ಅತ್ಯಾಚಾರ ಮಾಡಿದ್ದಾರೆ. ಅತ್ಯಾಚಾರ ಮಾಡಿದ್ದು, ಒಬ್ಬನಾದ್ರೇ ಅವನಿಗೆ ನಾಲ್ವರು ಸ್ನೇಹಿತರು ಬೆಂಬಲಿಸಿದ್ದಾರೆಂದು ಬಳ್ಳಾರಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದ್ರೇ ನಿಜಕ್ಕೂ ಅಲ್ಲಿ ನಡೆದಿದ್ದಾದ್ರೂ ಏನು ಅತ್ಯಾಚಾರ ನಡೆಯಿತೇ ಅಥವಾ ಅದರ ಹೆಸರಲ್ಲಿ ಬೇರೆಯೇನಾದ್ರು ನಡೆಯಿತೇ ಅನ್ನೋ ಕೂತೂಹಲಕಾರಿ ವರದಿ ಇಲ್ಲಿದೆ ನೋಡಿ.
ಸಿನಿಮಿಯ ರೀತಿಯಲ್ಲಿ ಅಪರಹರಣ ನಂತ್ರ ಅತ್ಯಾಚಾರ ಮಾಡಲಾಯ್ತಂತೆ
ಸಿನಿಮೀಯ ರೀತಿಯಲ್ಲಿ ಯುವತಿಯೊಬ್ಬಳ ಅಪಹರಣ ಮಾಡಿ ಅತ್ಯಾಚಾರ ಮಾಡಲಾಗಿದೆಯೆಂದು ದೂರು ದಾಖಲು. ಬಳ್ಳಾರಿಯ ಕಾಲೇಜಿನಲ್ಲಿ ಅಪಹರಣಕ್ಕೊಳಗಾದ ಯುವತಿ ಕೊಪ್ಪಳದ ಸಾಣಾಪುರದಲ್ಲಿ ಅತ್ಯಚಾರವಾ ಯ್ತಂತೆ. ಹೌದು, ಇದೊಂದು ರೀತಿಯ ವಿಚಿತ್ರ ಕೇಸ್ ಅಂದ್ರೂ ತಪ್ಪಿಲ್ಲ ಯಾಕಂದ್ರೇ, ಸಿನಿಮಾದಲ್ಲಿ ನಡೆಯೋ ಕಥೆಯ ಮಾದರಿಯಲ್ಲಿದೆ ಈ ಯುವತಿಯ ದೂರಿನ ಸಾರಾಂಶ.
ಇತ್ತೀಚೆಗೆ ಬಳ್ಳಾರಿಯ ಕಾಲೇಜೊಂದರಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯ ಅಪಹರಣ ಕೇಸ್ ಗೆ ಸಾಕಷ್ಟು ಅನುಮಾನ ಮತ್ತು ಟ್ವಿಸ್ಟ್ ಇದೆ. ಪರೀಕ್ಷೆ ಬರೆಯೋ ವೇಳೆ ಸ್ನೇಹಿತರು ಬಂದು ಆಕೆಯ ಅಣ್ಣ ಕರೆಯುತ್ತಿದ್ದಾನೆಂದು ಹೊರಗೆ ಕರೆದುಕೊಂಡು ಹೋಗಿದ್ದಾರಂತೆ. ಬಳಿಕ ಆಟೋದಲ್ಲಿ ಆಕೆಗೆ ಬಿಯರ್ ಕುಡಿಸೋ ಮೂಲಕ ಅಪಹರಣ ಮಾಡಿ ಗಂಗಾವತಿ ತಾಲೂಕಿನ ಸಾಣಾಪುರದ ಬಳಿ ಖಾಸಗಿ ರೆಸಾರ್ಟ್ ಒಂದಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾರೆ ಎಂದು ಯುವತಿ ದೂರು ದಾಖಲಿಸಿದ್ದಾಳೆ.
ದೂರಿನನ್ವಯ ಕೌಲ್ ಬಜಾರ್ ನ ನವೀನ್, ಸಾಕೀಬ್, ತನು ಸೇರಿದಂತೆ ಒಟ್ಟು ನಾಲ್ವರ ವಿರುದ್ದ ದೂರು ದಾಖಲಾಗಿದೆ. ಇದರಲ್ಲಿ ಮೊದಲ ಆರೋಪಿ ನವೀನ್ ನನ್ನು ಬಂಧಿಸಿರೋ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಅಲ್ಲದೇ ಇನ್ನುಳಿದ ಮೂವರು ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆಂದು ಎಸ್ಪಿ ರಂಜಿತ್ ಕುಮಾರ ಬಂಡಾರು ತಿಳಿಸಿದ್ದಾರೆ.
ಕಾಲೇಜಿಗೆ ಸ್ನೇಹಿತರು ಬಂದು ಅವರಣ್ಣನ ಹೆಸರಲ್ಲಿ ಕರೆದುಕೊಂಡು ಹೋಗಿರೋದು. ಆಟೋದಲ್ಲಿ ಅಪಹರಣ ಮಾಡಿರೋದು.. ಆಟೋದಲ್ಲಿಯೇ ಗಂಗಾವತಿಯ ಸಾಣಾಪುರದವರೆಗೂ ಹೋಗಿದ್ದಾರೆ ಎನ್ನುವ ಎಲ್ಲಾ ಹೇಳಿಕೆಯೂ ಮೇಲ್ನೋಟಕ್ಕೆ ನಾಟಕೀಯವಾಗಿಯೇ ಇದೆ ಎನ್ನಲಾಗುತ್ತಿದೆಯಾದ್ರೂ, ಯುವತಿಯ ಹೇಳಿಕೆಯ ಮೇರೆಗೆ ಸದ್ಯ ದೂರನ್ನು ದಾಖಲಿಸಿಕೊಂಡಿರೋ ಪೊಲೀಸರು ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಅಲ್ಲದೇ ದೂರು ನೀಡಲು ಮುಂದೆ ಬಂದಿರೋ ಸಂತ್ರಸ್ತೆ ಮತ್ತವರ ಕುಟುಂಬ ಮಾದ್ಯಮದವರಿಗೆ ಮಾತ್ರ ಯಾವುದೇ ಹೇಳಿಕೆ ನೀಡುತ್ತಿಲ್ಲ. ಸದ್ಯ ನವೀನ್ ಮಾತ್ರ ಬಂಧನವಾಗಿದ್ದು, ಉಳಿದ ಮೂವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಬಳ್ಳಾರಿ: ಅಂಧ ಯುವತಿಗೆ ಮೋಸ ಮಾಡಿದ ದುರುಳರು, ನಾಟಿ ಔಷಧಿ ಹೆಸರಲ್ಲಿ ವಂಚನೆ..!
ತನಿಖೆಯಿಂದಾದ್ರೂ ಸತ್ಯಾಸತ್ಯತೆ ಹೊರಗೆ ಬರುತ್ತದೆಯೇ
ಮೂಲಗಳ ಪ್ರಕಾರ ಅಪಹರಣಕ್ಕೊಳಗಾದ ಯುವತಿ ಮತ್ತು ಅಪಹರಣ ಮಾಡಿರೋ ನವೀನ್ ಮೊದಲಿನಿಂದಲೂ ಸ್ನೇಹಿರು ಕಾರಣಾಂತರಗಳಿಂದ ದೂರವಾಗಿದ್ರು ಎನ್ನಲಾಗುತ್ತಿದೆ. ಆದ್ರೇ ದಿಡೀರನೇ. ಈ ಅಪಹರಣ ಅತ್ಯಾಚಾರದ ದೂರು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಹೀಗಾಗಿ ಪೊಲೀಸರ ತನಿಖೆ ಬಳಿಕಷ್ಟೇ ಪ್ರಕರಣದ ಸತ್ಯಾಸತ್ಯತೆ ಬಯಲಿಗೆ ಬರಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ