ಲಂಚ ಪಡೆಯುವಾಗ ದಾವಣಗೆರೆ ಅಬಕಾರಿ ಡಿಸಿ ಸ್ವಪ್ನ ಲೋಕಾಯುಕ್ತ ಬಲೆಗೆ!

By Ravi Janekal  |  First Published Oct 14, 2023, 6:18 PM IST

ಮದ್ಯದಂಗಡಿ ಪರವಾನಿಗೆ ನೀಡಲು ಲಂಚ ಪಡೆಯುತ್ತಿದ್ದ ವೇಳೆ ದಾವಣಗೆರೆ ಅಬಕಾರಿ ಡಿಸಿ ಸ್ವಪ್ನಾ, ಎಸ್ಪಿ ಸೇರಿ ಅಬಕಾರಿ ಇನ್ಸಪೆಕ್ಟರ್ ಶೀಲಾ, ಎಫ್‌ಡಿಎ ಶೈಲಾ ಮೂವರು ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.


ದಾವಣಗೆರೆ (ಅ.14): ಮದ್ಯದಂಗಡಿ ಪರವಾನಿಗೆ ನೀಡಲು ಲಂಚ ಪಡೆಯುತ್ತಿದ್ದ ವೇಳೆ ದಾವಣಗೆರೆ ಅಬಕಾರಿ ಡಿಸಿ ಸ್ವಪ್ನಾ, ಎಸ್ಪಿ ಸೇರಿ ಅಬಕಾರಿ ಇನ್ಸಪೆಕ್ಟರ್ ಶೀಲಾ, ಎಫ್‌ಡಿಎ ಶೈಲಾ ಮೂವರು ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.

ಸಿಎಲ್ 7 ಲೈಸನ್ಸ್ ಮಾಡಿಕೊಡಲು 3 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದ ಅಧಿಕಾರಿಗಳು. ಹರಿಹರ ಅಮರಾವತಿಯ ಕಾಲೋನಿಯ ಡಿಜಿಆರ್ ಅಮ್ಯೂಸ್ ಮೆಂಟ್ ಪಾರ್ಕ್ ಮಾಲೀಕ ಈ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಿದ್ದರು. ಅದರಂತೆ ಲಂಚ ಪಡೆಯುವಾಗ ರೆಡ್‌ಹ್ಯಾಂಡ್‌ಆಗಿ ಸಿಕ್ಕಿಬಿದ್ದ ಅಧಿಕಾರಿಗಳು.

Tap to resize

Latest Videos

ಚಿಕ್ಕಮಗಳೂರು: ಆರ್‌ಟಿಒ ಅಟೆಂಡರ್ ಲೋಕಾಯುಕ್ತ ಬಲೆಗೆ 

ಸ್ಮಶಾನದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ

ಶಿವಮೊಗ್ಗ: ಸ್ಮಶಾನದಲ್ಲಿ ಕಾಮಗಾರಿಗೆ ಹಣ ಬಿಡುಗಡೆಗೆ ₹15 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಶಿವಮೊಗ್ಗದ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಗೋಪಿನಾಥ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಬುಕ್ಲಾಪುರ ಸಶ್ಮಾನ ಕಾಮಗಾರಿ ಹಣ ಬಿಡುಗಡೆ ಮತ್ತು ಸ್ಥಳ ಪರಿಶೀಲನೆ ಮಾಡಿ, ರಿಪೋರ್ಟ್​ ಕೊಡಲು ₹15 ಸಾವಿರ ಹಣಕ್ಕೆ ಗೋಪಿನಾಥ್​ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಶಿವಮೊಗ್ಗ ಲೋಕಾಯುಕ್ತರಿಗೆ ದೂರು ದಾಖಲಾಗಿತ್ತು. ಸ್ಮಶಾನದಲ್ಲಿ ₹15 ಸಾವಿರ ಲಂಚ ಪಡೆಯುವಾಗಲೇ ಲೋಕಾಯುಕ್ತ ಪೊಲೀಸರು ಅಧಿಕಾರಿಯನ್ನು ಬಲೆಗೆ ಕೆಡವಿದ್ದಾರೆ. ದೂರಿನ ಅನ್ವಯ ಲೋಕಾಯುಕ್ತ ಡಿವೈಎಸ್​ಪಿ ಉಮೇಶ್ ಈಶ್ವರ್ ನಾಯ್ಕ್​ ನೇತೃತ್ವದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದು, ಗೋಪಿನಾಥ್ ಅವರನ್ನು ವಶಕ್ಕೆ ಪಡೆಯಲಾಗಿದೆ.
 

click me!