ವಂದೇ ಭಾರತ್‌ ರೈಲಲ್ಲೂ ನಂದಿನಿ ಉತ್ಪನ್ನ

By Kannadaprabha NewsFirst Published Aug 3, 2023, 3:00 AM IST
Highlights

ಬೆಂಗಳೂರು ವಿಮಾನ ನಿಲ್ದಾಣದಿಂದ ಹಾರಾಟ ನಡೆಸುವ ವಿಸ್ತಾರ ಸಂಸ್ಥೆಯ ವಿಮಾನಗಳ ಫ್ಲೈಟ್‌ ಕೇಟರಿಂಗ್‌ನಲ್ಲಿ ನಂದಿನಿಯ ಪೆಟ್‌ ಬಾಟಲ್‌ ಹಾಲಿನ ಉತ್ಪನ್ನಗಳು, ಐಸ್‌ಕ್ರೀಂ ಸೇರಿದಂತೆ ಹಾಲಿನ ಉತ್ಪನ್ನಗಳು ಈಗಾಗಲೇ ಲಭ್ಯವಿದೆ. ಭಾರತೀಯ ರೈಲ್ವೆಯಲ್ಲೂ ನಂದಿನಿ ಹಾಲಿನ ಉತ್ಪನ್ನಗಳು ಮಾರಾಟವಾಗುತ್ತಿದ್ದು, ಪ್ರತಿ ತಿಂಗಳು 4ರಿಂದ 5 ಲಕ್ಷ ಪೆಟ್‌ ಬಾಟಲ್‌ಗಳು ಮಾರಾಟವಾಗುತ್ತಿವೆ.

ಬೆಂಗಳೂರು(ಆ.03):  ಕೆಎಂಎಫ್‌ ನಂದಿನಿ ಬ್ರ್ಯಾಂಡ್‌ ಹಾಲು, ಲಸ್ಸಿ, ಮಿಲ್ಕ್‌ಶೇಕ್‌ ಪೆಟ್‌ ಬಾಟಲ್‌ ಸೇರಿದಂತೆ ನಂದಿನಿ ಹಾಲಿನ ಉತ್ಪನ್ನಗಳು ವಿಮಾನ, ರೈಲುಗಳಲ್ಲೂ ಲಭ್ಯವಾದಂತೆ ‘ವಂದೇ ಭಾರತ್‌’ ರೈಲಿನಲ್ಲೂ ಸಿಗಲಿದೆ. ಕಳೆದ 15 ದಿನಗಳಿಂದ ಬೆಂಗಳೂರಿನಿಂದ ಹೊರಡುವ ವಂದೇ ಭಾರತ್‌ ರೈಲಿನಲ್ಲಿ ಪ್ರತಿ ದಿನ 7ರಿಂದ 10 ಸಾವಿರದಷ್ಟು ಮಿಲ್ಕ್‌ಶೇಕ್‌ ಪೆಟ್‌ ಬಾಟಲ್‌ಗಳು ಮಾರಾಟವಾಗುತ್ತಿವೆ. ವಿಶೇಷವೆಂದರೆ ವಂದೇ ಭಾರತ್‌ ರೈಲಿನ ಬೆಳಗ್ಗಿನ ಉಪಾಹಾರದಲ್ಲಿ ನಂದಿನಿ ಬೆಣ್ಣೆ, ಲಸ್ಸಿ 200 ಎಂಎಲ್‌ ವಿತರಿಸಲಾಗುತ್ತಿದೆ. ಇದರೊಂದಿಗೆ ಮಿಲ್ಕ್‌ಶೇಕ್‌ ಪೆಟ್‌ಬಾಟಲ್‌, ಚಾಕೋಲೆಟ್‌, ಗುಡ್‌ಲೈಫ್‌ ಸುವಾಸಿತ ಹಾಲುಗಳು ಮಾರಾಟ ಮಾಡಲಾಗುತ್ತಿದೆ.

ಬೆಂಗಳೂರು ವಿಮಾನ ನಿಲ್ದಾಣದಿಂದ ಹಾರಾಟ ನಡೆಸುವ ವಿಸ್ತಾರ ಸಂಸ್ಥೆಯ ವಿಮಾನಗಳ ಫ್ಲೈಟ್‌ ಕೇಟರಿಂಗ್‌ನಲ್ಲಿ ನಂದಿನಿಯ ಪೆಟ್‌ ಬಾಟಲ್‌ ಹಾಲಿನ ಉತ್ಪನ್ನಗಳು, ಐಸ್‌ಕ್ರೀಂ ಸೇರಿದಂತೆ ಹಾಲಿನ ಉತ್ಪನ್ನಗಳು ಈಗಾಗಲೇ ಲಭ್ಯವಿದೆ. ಭಾರತೀಯ ರೈಲ್ವೆಯಲ್ಲೂ ನಂದಿನಿ ಹಾಲಿನ ಉತ್ಪನ್ನಗಳು ಮಾರಾಟವಾಗುತ್ತಿದ್ದು, ಪ್ರತಿ ತಿಂಗಳು 4ರಿಂದ 5 ಲಕ್ಷ ಪೆಟ್‌ ಬಾಟಲ್‌ಗಳು ಮಾರಾಟವಾಗುತ್ತಿವೆ. ಬೇಸಿಗೆ ಸಂದರ್ಭದಲ್ಲಿ 5ರಿಂದ 6 ಲಕ್ಷ ಬಾಟಲ್‌ಗಳಿಗೂ ಅಧಿಕ ಮಾರಾಟವಾಗುತ್ತಿವೆ ಎಂದು ಕೆಎಂಎಫ್‌ ಮೂಲಗಳು ತಿಳಿಸಿವೆ.

Latest Videos

ಕೆಎಂಎಫ್‌ನ ನಂದಿನಿ ಬ್ರ್ಯಾಂಡ್‌ಗೆ ಪುನೀತ್‌ ಬಳಿಕ ಶಿವ ರಾಜ್‌ಕುಮಾರ್‌ ರಾಯಭಾರಿ

ಮುಂದಿನ ದಿನಗಳಲ್ಲಿ ದೇಶಾದ್ಯಂತ ಸಂಚರಿಸುವ ರೈಲು, ವಿಮಾನಗಳಲ್ಲಿ ನಂದಿನಿ ಬ್ರ್ಯಾಂಡ್‌ ಉತ್ಪನ್ನಗಳನ್ನು ಮಾರಾಟ ಮಾಡಲು ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಕಳೆದ ವರ್ಷವೇ ಭಾರತೀಯ ರೈಲ್ವೆ ಮತ್ತು ವಿಸ್ತಾರ ಹಾಗೂ ಏರ್‌ ಇಂಡಿಯಾ ವಿಮಾನಗಳಲ್ಲಿ ನಂದಿನಿ ಉತ್ಪನ್ನಗಳ ಮಾರಾಟ ಆರಂಭಿಸಿದ್ದು ಅದನ್ನು ಇನ್ನು ಹೆಚ್ಚಿನ ವಾಯುಯಾನ ಸಂಸ್ಥೆಗಳಿಗೆ ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದು ಕೆಎಂಎಫ್‌ ಅಧಿಕಾರಿಗಳು ತಿಳಿಸಿದ್ದಾರೆ.

click me!