ಹಲಾಲ್‌, ಝಟ್ಕಾ ಕಟ್‌ ವಿವಾದ: ಈಗಿನ ಬೆಳವಣಿಗೆಗೂ ಬಿಜೆಪಿಗೂ ಸಂಬಂಧವಿಲ್ಲ: ಕಟೀಲ್‌

Published : Apr 05, 2022, 06:10 AM ISTUpdated : Apr 05, 2022, 06:19 AM IST
ಹಲಾಲ್‌, ಝಟ್ಕಾ ಕಟ್‌ ವಿವಾದ: ಈಗಿನ ಬೆಳವಣಿಗೆಗೂ ಬಿಜೆಪಿಗೂ ಸಂಬಂಧವಿಲ್ಲ: ಕಟೀಲ್‌

ಸಾರಾಂಶ

*  ‘ಹಲಾಲ್‌, ಝಟ್ಕಾ ಕಟ್‌ ವಿಚಾರದಲ್ಲಿ ಜನರೇ ನಿರ್ಧಾರ ಕೈಗೊಂಡಿದ್ದಾರೆ’ *  ದೇಶಾದ್ಯಂತ ಕಾಂಗ್ರೆಸ್‌ ಈಗಾಗಲೇ ಕಣ್ಮರೆ * ಡಿಕೆಶಿ-ಸಿದ್ದರಾಮಯ್ಯ ನಡುವಿನ ಶೀತಲ ಸಮರದಿಂದ ನೆಲಕಚ್ಚಲಿದೆ ಕಾಂಗ್ರೆಸ್‌

ಬೆಂಗಳೂರು(ಏ.05): ಹಲಾಲ್‌(Halal) ಕಟ್‌ ಮತ್ತು ಝಟ್ಕಾ(Jhatka) ಕಟ್‌ ವಿಚಾರದಲ್ಲಿ ಜನರು ತಮ್ಮದೇ ಆದ ನಿಲುವು ತೆಗೆದುಕೊಂಡಿದ್ದಾರೆ. ವಿರೋಧ ಪಕ್ಷಗಳ ಮುಖಂಡರು ಮಾತ್ರ ಈ ವಿಚಾರಗಳನ್ನು ರಾಜಕೀಯ ಲಾಭಕ್ಕಾಗಿ ಬಳಕೆ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಟೀಕಿಸಿದ್ದಾರೆ.

ಸಮಾಜದಲ್ಲಿ ಆಗುತ್ತಿರುವ ಈಗಿನ ಬೆಳವಣಿಗೆಗಳಿಗೂ ಬಿಜೆಪಿಗೂ(BJP) ಯಾವುದೇ ಸಂಬಂಧವಿಲ್ಲ. ಬಿಜೆಪಿ ಈ ವಿಚಾರದಲ್ಲಿ ಯಾರನ್ನೂ ಬೆಂಬಲಿಸಿಲ್ಲ. ಜನರೇ ಈ ಬಗ್ಗೆ ನಿಲುವು ತೆಗೆದುಕೊಂಡಿದ್ದು ನಮ್ಮ ಪಕ್ಷ ಪ್ರಧಾನಿ ನರೇಂದ್ರ ಮೋದಿಯವರ(Narendra Modi) ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌, ಸಬ್‌ ಕಾ ವಿಶ್ವಾಸ್‌ ಚಿಂತನೆಯೊಂದಿಗೆ ಮುನ್ನಡೆಯುತ್ತಿದೆ ಎಂದು ಹೇಳಿದ್ದಾರೆ.

ರಾಜಕೀಯ ಹೇಗೆ ಗುಲಾಮಗಿರಿಗೆ ಒಳಗಾಗಿತ್ತು ಅನ್ನೋದನ್ನ 'ದಿ ಕಾಶ್ಮೀರ್ ಫೈಲ್ಸ್' ತೋರಿಸಿದೆ: ನಳಿನ್ ಕಟೀಲ್

ದೇಶಾದ್ಯಂತ(India) ಕಾಂಗ್ರೆಸ್‌(Congres) ಈಗಾಗಲೇ ಕಣ್ಮರೆಯಾಗುತ್ತಿದೆ. ಸುಳ್ಳಿನ ಸರದಾರರಾದ ಡಿ.ಕೆ.ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಅವರ ನಡುವಿನ ಶೀತಲ ಸಮರದಿಂದ ಕಾಂಗ್ರೆಸ್‌ ಪಕ್ಷ ನೆಲಕಚ್ಚಲಿದೆ. ಇನ್ನು ಕುಟುಂಬ ರಾಜಕಾರಣವನ್ನೇ ನೆಚ್ಚಿಕೊಂಡಿರುವ ಹಾಗೂ ಕೆಲವೇ ಜಿಲ್ಲೆಗಳಲ್ಲಿ ತನ್ನ ಅಸ್ತಿತ್ವ ಉಳಿಸಿಕೊಂಡಿರುವ ಜೆಡಿಎಸ್‌ ಕೂಡ ರಾಜ್ಯದಲ್ಲಿ ನಿರ್ನಾಮವಾಗಲಿದೆ. ಇದೇ ಆತಂಕದಿಂದ ಜೆಡಿಎಸ್‌ ನಾಯಕ ಎಚ್‌.ಡಿ ಕುಮಾರಸ್ವಾಮಿ ಅವರು ಬಿಜೆಪಿ ವಿರುದ್ಧ ಟೀಕೆ ಮಾಡುತ್ತಿದ್ದಾರೆ ಎಂದು ಪ್ರಕಟಣೆ ಮೂಲಕ ವ್ಯಂಗ್ಯವಾಡಿದ್ದಾರೆ.

ಹಲಾಲ್‌, ಹಿಜಾಬ್‌, ಮಸೀದಿಯ ಮೇಲಿನ ಧ್ವನಿವರ್ಧಕ ಕುರಿತು ಸಿದ್ದರಾಮಯ್ಯ, ಶಿವಕುಮಾರ್‌ ಮತ್ತು ಕುಮಾರಸ್ವಾಮಿ ಅವರು ಸ್ಪಷ್ಟನಿಲುವನ್ನೇ ಹೊಂದಿಲ್ಲ. ಕೇವಲ ಓಲೈಕೆ ರಾಜಕಾರಣದಲ್ಲಿ ಅವರು ನಿರತರಾಗಿರುವ ಬದಲು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಅವರು ತಿಳಿಸಿದ್ದಾರೆ.

ಸತ್ಪ್ರ​ಜೆಗಳ ನಿರ್ಮಾ​ಣ​ಕ್ಕಾ​ಗಿ ಭಗ​ವ​ದ್ಗೀತೆ ಅಗ​ತ್ಯ: 

ಬೆಂಗಳೂರು: ಶಿಕ್ಷಣ(Education) ಎಂದರೆ ಅದು ಮನುಷ್ಯನ ಸುಪ್ತ ಸಾಮರ್ಥ್ಯ ಅಭಿವ್ಯಕ್ತಿಗೊಳಿಸುವ ಪ್ರಕ್ರಿಯೆ. ಆದ್ದರಿಂದ ಗುಜರಾತ್‌ ಮಾದರಿಯಲ್ಲಿ ಕರ್ನಾಟಕದಲ್ಲೂ(Karnataka) ಶಾಲಾ ತರಗತಿಗಳಲ್ಲಿ ಭಗವದ್ಗೀತೆಯ ಶಿಕ್ಷಣ ನೀಡಬೇಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌(Nalin Kumar Kateel) ಪ್ರತಿಪಾದಿಸಿದ್ದರು. 

ಇಂದಿನ ಶಿಕ್ಷಣದಲ್ಲಿ ಕೇವಲ ಮೆದುಳಿಗೆ ಮಾಹಿತಿ ಕೊಡಲಾಗುತ್ತಿದೆ. ಶಿಕ್ಷಣವು ಮನುಷ್ಯನೊಳಗಿನ ವ್ಯಕ್ತಿತ್ವಕ್ಕೆ ಹೊಳಪು ಮತ್ತು ಬೆಳಕು ಕೊಡುವ ಮಾದರಿಯಲ್ಲಿರಬೇಕು. ಅಂಥ ಬೆಳಕಿನಿಂದ ಸತ್ಪ್ರಜೆಯ ನಿರ್ಮಾಣ ಸಾಧ್ಯ. ಅಂಥ ವ್ಯಕ್ತಿ ರಾಷ್ಟ್ರಕ್ಕೆ ಆಸ್ತಿ ಆಗುತ್ತಾನೆ. ವಿದ್ಯಾರ್ಥಿಯ(Students) ಸರ್ವತೋಮುಖ ವಿಕಾಸದ ಬದಲಾಗಿ ಇಂದು ಆತನ ತಲೆಗೆ ಏನೇನೋ ತುರುಕುವ ಕೆಲಸ ನಡೆದಿದೆ. ಮನುಷ್ಯನ ನೈತಿಕ ಮೌಲ್ಯಗಳನ್ನು ಗಟ್ಟಿಗೊಳಿಸುವ ನಮ್ಮ ಪ್ರಾಚೀನ ಚಿಂತನೆ, ವಿಚಾರಧಾರೆಯನ್ನು ತಿಳಿಸುವ ಕೆಲಸ ಆಗಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದರು. 

Elections 2022 Result ಸಂಪುಟ ಬದಲಾವಣೆ ಖಚಿತ, ಪಂಚ ರಾಜ್ಯ ಫಲಿತಾಂಶ ಬೆನ್ನಲ್ಲೇ ಕಟೀಲ್ ಸ್ಪಷ್ಟನೆ!

ವಿದ್ಯಾರ್ಜನೆ ನಹಿ ಜ್ಞಾನೇನ ಸದೃಶಂ ಎಂಬಂತೆ ದೇಶ ಮತ್ತು ಜಗತ್ತಿನ ಒಳಿತಿಗೆ ಬಳಕೆ ಆಗಬೇಕೆಂಬುದನ್ನು ಹೇಳಿಕೊಡಬೇಕು. ಸ್ವಂತ ಬೆಳವಣಿಗೆ ಮಾತ್ರವಲ್ಲದೆ ಸಮಾಜದ ಒಳಿತಿಗಾಗಿ ಕಲಿತ ವಿದ್ಯೆ ಬಳಕೆ ಆಗಬೇಕು. ಭಗವದ್ಗೀತೆಯು ಭಾರತ(India) ದೇಶದ ಅಂತಃಸತ್ವ. ಭಗವದ್ಗೀತೆಯನ್ನು(Bhagavad Gita) ವಿದೇಶಗಳಲ್ಲೂ ಇಷ್ಟಪಟ್ಟು ಕಲಿಸುತ್ತಿದ್ದಾರೆ. ಮನುಷ್ಯ ಮನುಷ್ಯತ್ವದೊಂದಿಗೆ ಬದುಕಬೇಕು ಎಂಬುದನ್ನು ತಿಳಿಸುವ ಕಾರ್ಯವನ್ನು ಭಗವದ್ಗೀತೆ ಮಾಡುತ್ತದೆ. ಇವತ್ತಿನ ಕ್ರೌರ್ಯ, ಹಿಂಸೆ, ಅಪರಾಧ ಪ್ರವೃತ್ತಿ ಹೆಚ್ಚಳದ ಈ ಕಾಲಘಟ್ಟದಲ್ಲಿ ಭಗವದ್ಗೀತೆಯ ಅಗತ್ಯ ಹೆಚ್ಚಾಗಿದೆ. ಭಗವದ್ಗೀತೆ ಓದುವವರು ದೇಶದ ಆಸ್ತಿಯಾಗುತ್ತಾರೆ. ಅವರು ದೇಶಕ್ಕೆಂದೂ ಹೊರೆ ಎನಿಸಲು ಸಾಧ್ಯವಿಲ್ಲ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದರು. 

ಪಠ್ಯದಲ್ಲಿ ಭಗವದ್ಗೀತೆ ಸೇರಿಸುವುದರಲ್ಲಿ ತಪ್ಪೇನಿದೆ?: ಜೋಶಿ

ಹುಬ್ಬಳ್ಳಿ: ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆ ವಿಷಯ ಸೇರ್ಪಡೆ ಮಾಡುವುದರಲ್ಲಿ ತಪ್ಪೇನಿದೆ? ಈ ವಿಷಯದಲ್ಲಿ ಜಾತಿವಾದ ಮಾಡದೇ ಎಲ್ಲರೂ ಸ್ವಾಗತಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ(Pralhad Joshi) ಹೇಳಿದರು. ಮಾಧ್ಯಮದೊಂದಿಗೆ ಮಾತನಾಡಿದ ಅವರು, ಶಾಲಾ ಹಂತದಲ್ಲೇ ಮಕ್ಕಳು(Children) ನೈತಿಕ ಶಿಕ್ಷಣ, ಧರ್ಮ, ಸಂಸ್ಕೃತಿ ಕಲಿಯಬೇಕು. ಈ ಹಿನ್ನೆಲೆಯಲ್ಲಿ ಪಠ್ಯದಲ್ಲಿ ಭಗವದ್ಗೀತೆ ಸೇರಿಸುವುದರಿಂದ ಶಾಲಾ ಮಕ್ಕಳಿಗೆ ಪುರಾಣೇತಿಹಾಸದಂತಹ ಸಾಕಷ್ಟು ವಿಷಯಗಳ ತಿಳಿವಳಿಕೆ ಮೂಡುತ್ತದೆ. ಹಾಗಾಗಿ ಭಗವದ್ಗೀತೆ ಸೇರ್ಪಡೆ ಅವಶ್ಯ ಎಂದು ಪ್ರತಿಪಾದಿಸಿದ್ದರು. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್