ಹಾಲುಂಡು ಹೋಗೆ ನಾಗಮ್ಮ.. ಮಹಿಳೆಯರ ಮೇಲೆ ಪ್ರತ್ಯಕ್ಷವಾಯ್ತಾ ನಾಗದೇವತೆ, ವಿಡಿಯೋ ವೈರಲ್‌?

By Santosh Naik  |  First Published Sep 30, 2022, 8:44 PM IST

ಹಾಲುಂಡು ಹೋಗೆ ನಾಗಮ್ಮ.. ಹಾಲು ಖೀರುಂಡು ಹೋಗೆ ನಾಗಮ್ಮ ಎಂದು ಅಲ್ಲಿನವರು ಹಾಡೋದೊಂದೆ ಬಾಕಿ. ಅಂಥದ್ದೊಂದು ಕ್ಷಣ ಅಲ್ಲಿ ನಿರ್ಮಾಣವಾಗಿತ್ತು. ನಾಗರಹಾವು ಹಿಡಿಯಲು ಹೋದ ಉರಗತಜ್ಞ ಅಲ್ಲಿನ ಮಹಿಳೆಯರ ವರ್ತನೆ ಕಂಡು ಹಿಡಿದ ಹಾವನ್ನು ಅಲ್ಲಿಯೇ ಬಿಟ್ಟು ಪೇರಿ ಕಿತ್ತ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.


ಶಿವಮೊಗ್ಗ (ಸೆ.30): ಇದು ನಂಬಿಕೆಯೋ.. ಮೂಢ ನಂಬಿಕೆಯೋ.. ಭಕ್ತಿಯೋ.. ಅದೆಲ್ಲವನ್ನೂ ಇದನ್ನು ಓದಿದ ಬಳಿಕವೇ ತೀರ್ಮಾನಿಸಬೇಕು. ನಾಗದೇವತೆ ಚಿತ್ರದ ರಿಯಲಿಸ್ಟಿಕ್‌ ಪಾತ್ರಗಳು ಅಲ್ಲಿದ್ದಂತಿದ್ದವು. ಈ ವಿಚಿತ್ರ ಘಟನೆ ನಡೆದಿದ್ದು ಶಿವಮೊಗ್ಗದಲ್ಲಿ. ನಾಗರ ಹಾವು ಹಿಡಿಯಲು ಹೋದ ಉರಗತಜ್ಞನಿಗೆ ಅಚ್ಚರಿ ಎನ್ನುವಂತೆ ಇಡೀ ಊರಿನ ಮಹಿಳೆಯರ ಮೇಲೆ ನಾಗದೇವತೆ ಪ್ರತ್ಯಕ್ಷವಾಗಿದ್ದಾಳೆ..! ಒಬ್ಬರಲ್ಲ ಇಬ್ಬರಲ್ಲ ಅಲ್ಲಿದ್ದ ಬಹುತೇಕ ಮಹಿಳೆಯರ ಮೇಲೆ ನಾಗ ದೇವತೆ ಪ್ರತ್ಯಕ್ಷ..! ಹಾಗಾಗಿ ನಾಗದೇವತೆ ಸಿನಿಮಾ ದೃಶ್ಯಕ್ಕಿಂತ ಕಮ್ಮಿಯಾದ ಸಂಗತಿಯೇನು ಅಲ್ಲಿ ನಡೆದಿರಲಿಲ್ಲ. ಮಹಿಳೆಯರ ವಿಚಿತ್ರ ವರ್ತನೆ ಕಂಡು ಉರಗತಜ್ಞ ಸೆರೆ ಹಿಡಿದ ನಾಗರವನ್ನು ಅಲ್ಲಿಯೇ ಬಿಟ್ಟು ಬರಬೇಕಾದ ಘಟನೆ ನಡೆದಿದೆ. ಹೌದು, ನಾಗರ ಹಾವು ಹಿಡಿಯಲು ಬಂದವನೇ ಪೇಚಿಗೆ ಸಿಲುಕಿದ ವಿಚಿತ್ರ ಪ್ರಸಂಗ ಶಿವಮೊಗ್ಗದಲ್ಲಿ ನಡೆದಿದೆ. ನಾಗರ ಹಾವು ಹಿಡಿಯಲು ಹೋದಾಗ ಇಬ್ಬರು ಮಹಿಳೆಯರ ಮೈಮೇಲೆ ದೇವರು ಬಂದಿದೆ ಎಂದು ಊರಿನವರು ಹೇಳಿದ್ದಾರೆ. ನಾಗರ ಹಾವನ್ನು ಹಿಡಿಯಬೇಡ, ಅದನ್ನು ಅಲ್ಲಿಯೆ ಬಿಡು ಎಂದು ಈ ವೇಳೆ ಉರಗತಜ್ಞನಿ ಎದುರು ಘರ್ಜನೆ ಮಾಡಿದ್ದಾರೆ. ಇದನ್ನು ಕೇಳಿದವನೆ ಉರಗತಜ್ಞ ಪತರುಗುಟ್ಟಿ ಹೋಗಿದ್ದಾರೆ. ಉರಗ ರಕ್ಷಕ ಸ್ನೇಕ್ ಕಿರಣ್‌ಗೆ ಮೈಮೇಲೆ ದೇವರು ಬಂದು ಸೂಚನೆ ನೀಡಿದೆ ಎಂದು ಹೇಳಲಾಗಿದೆ.

Tap to resize

Latest Videos

ಶಿವಮೊಗ್ಗದ ಹೊನ್ನಾಳಿ ರಸ್ತೆಯ ಚೌಡೇಶ್ವರಿ ಕಾಲೋನಿಯಲ್ಲಿರುವ ಶಂಕರ ರೇಂಜ್ ನರ್ಸರಿಯಲ್ಲಿ ಈ ಘಟನೆ ನಡೆದಿದೆ. ನರ್ಸರಿಯಲ್ಲಿ ಹಾವು ಕಾಣಿಸಿಕೊಂಡಿದೆ ಎಂದು ನಾಗರಾಜ್ಎನ್ನುವ ವ್ಯಕ್ತಿ ಸ್ನೇಕ್ ಕಿರಣ್ ಗೆ ಕರೆ ಮಾಡಿದ್ದರು. ಈ ವೇಳೆ ನರ್ಸರಿಯಲ್ಲಿ  ಸುಮಾರು ಒಂದು ಅಡಿ ಉದ್ದದ ನಾಗರ ಹಾವು ಸಿಕ್ಕಿದೆ.  ಸ್ನೇಕ್ ಕಿರಣ್ ಹಾವನ್ನು ರಕ್ಷಣೆ ಮಾಡಿ, ಕಾಡಿಗೆ ಕೊಂಡೊಯ್ದು ಬಿಡಲು ಸನ್ನದ್ಧರಾಗಿದ್ದರು. ಸ್ನೇಕ್ ಕಿರಣ್ ನಾಗರ ಹಾವನ್ನು ರಕ್ಷಣೆ ಮಾಡುತ್ತಿದ್ದ ವೇಳೆ ನರ್ಸರಿಯಲ್ಲಿದ್ದ ಕಾರ್ಮಿಕ ಮಹಿಳೆಯರು ಸುತ್ತುವರೆದು ವೀಕ್ಷಣೆ ಮಾಡುತ್ತಿದ್ದರು.

ಓದಿ ಓದಿಯೇ ಅಜ್ಜ ಆಗ್ಬಿಡ್ತೀನಿ ಎಂದು ಪುಟ್ಟ ಬಾಲಕನ ಅಳು: ವಿಡಿಯೋ ವೈರಲ್

ಇದೇ ವೇಳೆ ಮಹಿಳೆಯರ ಗುಂಪಿನಲ್ಲಿದ್ದ ವಾಸುಕಿ ಮತ್ತು ನೇತ್ರ ಎಂಬ ಮಹಿಳೆಯರ ವರ್ತನೆ ದಿಢೀರ್‌ ಆಗಿ ಬದಲಾಗಿದೆ. ಇಬ್ಬರು ಜೋರಾಗಿ ಕೂಗುತ್ತಾ ಹಾವಿನಂತೆ ಬುಸುಗುಡುತ್ತಾ ವಿಚಿತ್ರ ವರ್ತನೆ ಮಾಡಲು ಆರಂಭ ಮಾಡಿದ್ದಾರೆ. ನೆಲದ ಬಿದ್ದು ಹೊರಳಾಡುತ್ತಿದ್ದಂತೆ ಅಕ್ಕಪಕ್ಕದಲ್ಲಿದ್ದ ಉಳಿದ ಮಹಿಳೆಯರು ಹೆದರಿ  ಓಡಲಾರಂಭಿಸಿದ್ದಾರೆ.  ಮೈ ಮೇಲೆ ದೇವರು ಬಂದಿದ್ದನ್ನು ಕಂಡು ಸ್ನೇಕ್ ಕಿರಣ್ ಸಹಿತ ಸೇರಿದ್ದವರಲ್ಲಿ ಆತಂಕ ಗಾಬರಿಯಾಗಿದೆ. 

Ian Cyclone ಅಬ್ಬರ: ನೀರಿನಲ್ಲಿ ಕೊಚ್ಚಿ ಹೋದ 8 ಕೋಟಿ ಮೊತ್ತದ ಕಾರು

ಸ್ನೇಕ್ ಕಿರಣ್ ಹಿಡಿದಿರುವ ಹಾವನ್ನು ಎಲ್ಲೂ ಕೊಂಡೊಯ್ಯಬಾರದು. ಇಲ್ಲಿಯೇ ಸಮೀಪದಲ್ಲಿ  ಬಿಡಬೇಕು ಎಂದು ಇಬ್ಬರು ಬುಸುಗುಟ್ಟುತ್ತಲೇ ಮಾತನಾಡಿದ್ದಾರೆ. ಬಳಿಕ  ದೇವರು ಬಂದ ಮಹಿಳೆಯರ ಒತ್ತಾಯಕ್ಕೆ ಮಣಿದು ಅವರು ಹೇಳಿದ ಜಾಗದಲ್ಲೇ ಸ್ನೇಕ್ ಕಿರಣ್  ನಾಗರ ಹಾವನ್ನು ಬಿಟ್ಟಿದ್ದಾರೆ  ಅಲ್ಲದೆ ಮಹಿಳೆಯರಿಗೆ ಪೂಜೆ ಮಾಡಿದ್ದಾರೆ. ಇಷ್ಟಾಗುತ್ತಿದ್ದಂತೆ ದೇವರು ಬಂದ ಮಹಿಳೆಯರು ಶಾಂತವಾಗಿದ್ದಾರೆ.
 

click me!