
ಬೆಂಗಳೂರು (ಮೇ.30): ಮೈಸೂರು ಜಿಲ್ಲೆಯ ಟಿ. ನರಸೀಪುರ- ಕೊಳ್ಳೆಗಾಲ ಮುಖ್ಯರಸ್ತೆಯಲ್ಲಿ ಸೋಮವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ 10 ಜನರ ಕುಟುಂಬಗಳಿಗೆ ಕೇಂದ್ರ ಸರಕಾರ ತಲಾ 2 ಲಕ್ಷ ಪರಿಹಾರ ಘೋಷಿಸಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಈ ಬಗ್ಗೆ ಟ್ವೀಟ್ ಮಾಡಿ ವಿಷಾದ ವ್ಯಕ್ತಪಡಿಸಿದ್ದಾರೆ. 2 ಲಕ್ಷ ಪರಿಹಾರ ಜೊತೆಗೆ ಗಾಯಾಳುಗಳಿಗೆ ತಲಾ 50 ಸಾವಿರ ಘೋಷಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ (siddaramaiah) ಕೂಡ ವಿಷಾದ ವ್ಯಕ್ತಪಡಿಸಿ ದುರ್ಘಟನೆಯಲ್ಲಿ ಸಾವಿಗೀಡಾದವರ ಕುಟುಂಬಕ್ಕೆ (Family) ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ ರೂ. 2 ಲಕ್ಷ ಪರಿಹಾರ ಮತ್ತು ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆಯ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದರು.
ಖಾಸಗಿ ಬಸ್ ಮತ್ತು ಇನೋವಾ ಕಾರು ನಡುವೆ ಸಂಭವವಿಸಿದ ಅಪಘಾತದಲ್ಲಿ ಬಳ್ಳಾರಿಯ (Ballari) ಸಂಗನಕಲ್ಲು (sanganakallu ) ಗ್ರಾಮದ ಒಂದೇ ಕುಟುಂಬದ ನಾಲ್ವರು, ಮತ್ತೊಂದು ಕುಟುಂಬದ ಮೂವರು, ಇನ್ನೊಂದು ಕುಟುಂಬದ ಇಬ್ಬರು ಸೇರಿದಂತೆ 10 ಮಂದಿ ಮೃತಪಟ್ಟಿದ್ದರು. ಓರ್ವ ಕಾರು ಚಾಲಕ ಆದಿತ್ಯ (26) ಉಳಿದಂತೆ ರೊಟ್ಟಿ ತಯಾರಿಸಿ ಜೀವನ ನಿರ್ವಹಣೆ ಮಾಡುತ್ತಿದ್ದ ಮಂಜುನಾಥ್ (35) ಪತ್ನಿ ಪೂರ್ಣಿಮಾ (30) ಪುತ್ರ ಕಾರ್ತೀಕ್ (9) ಹಾಗೂ ಮತ್ತೊಬ್ಬ ಪುತ್ರ ಪವನವಕುಮಾರ್ (8) ಘಟನೆಯಲ್ಲಿ ಸಾವಿಗೀಡಾಗಿದ್ದರೆ, ಚಕ್ಕುಲಿ, ಸಿಹಿತಿಂಡಿಗಳನ್ನು ತಯಾರಿಸಿ ಜೀವನ ನಡೆಸುತ್ತಿದ್ದ ಗಾಯತ್ರಿ(38) ಹಾಗೂ ಶ್ರಾವ್ಯ(5) ಮೃತಪಟ್ಟಿದ್ದಾರೆ. ಗಾಯತ್ರಿ ಪತಿ ಜನಾರ್ದನ ಹಾಗೂ ಪುತ್ರ ಪುನೀತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮ ಒನ್ ಕೇಂದ್ರ ಹಾಗೂ ಕಿರಾಣಿ ಅಂಗಡಿ ನಡೆಸುತ್ತಿದ್ದ ವಿಜಯನಗರ ಜಿಲ್ಲೆಯ ಹಗರಿ ಗಜಾಪುರ ಗ್ರಾಮದವರಾದ ಕೊಟ್ರೇಶ್ (45), ಪತ್ನಿ ಸುಜಾತಾ (40) ಹಾಗೂ ಪುತ್ರ ಸಂದೀಪ್ (23) ಈ ಮೂವರು ಮೃತಪಟ್ಟಿದ್ದಾರೆ.
ಗಾಯಾಳುಗಳ ಮಾಹಿತಿ
1. ಶಶಿಕುಮಾರ್ (ಗಂಭೀರ ಗಾಯ)
2. ಜನಾರ್ಧನ್ (40)
3. ಪುನೀತ್ (5)
ಶ್ರೀರಾಮುಲು ಸಂಗನಕಲ್ಲು ಗ್ರಾಮಕ್ಕೆ ಭೇಟಿ:
ಮೈಸೂರು (Mysuru) ಅಪಘಾತದಲ್ಲಿ (Accident) ಮೃತಪಟ್ಟ ಕುಟುಂಬಗಳ ಮನೆಗೆ ಶ್ರೀರಾಮುಲು (Sri ramulu) ಭೇಟಿ ನೀಡಿದ್ದಾರೆ. ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ. ಇನ್ನೂ ಮೃತದೇಹಗಳು ಸಂಗನಕಲ್ಲು ತಲುಪಿಲ್ಲ. ಮೃತ ದೇಹ ಬರೋವರೆಗೂ ಇದ್ದು ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.
Mysuru Accident: ಸಾವಿನ ದವಡೆಯಲ್ಲಿದ್ದರೂ ಅಪ್ಪನನ್ನು ಕೇಳುತ್ತಿರುವ ಮಗು, ಅನಾಥನಾದ
ಆಸ್ಪತ್ರೆಗೆ ಭೇಟಿ:
ಜಿಲ್ಲೆಯ ಟಿ. ನರಸೀಪುರ ತಾಲೂಕಿನ ಕುರುಬೂರು ಬಳಿ ಭೀಕರ ರಸ್ತೆ ಅಪಘಾತದಲ್ಲಿ ಗಾಯಗೊಂಡು ಮೈಸೂರಿನ ಕೆ.ಆರ್. ಆಸ್ಪತ್ರೆ ಮತ್ತು ಚೆಲುವಾಂಬ ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳುಗಳನ್ನು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ (HC Mahadevappa) ಅವರು ಸೋಮವಾರ ರಾತ್ರಿ ಭೇಟಿ ಮಾಡಿ ಯೋಗ ಕ್ಷೇಮ ವಿಚಾರಿಸಿದರು.
Mysuru Road Accident: ಟಿ.ನರಸೀಪುರದಲ್ಲಿ ಭೀಕರ ರಸ್ತೆ ಅಪಘಾತ, ಬಳ್ಳಾರಿಯ 10 ಮಂ
ಈ ವೇಳೆ ಸಚಿವರು ಮಾತನಾಡಿ, ಈ ಘಟನೆ ದುರದೃಷ್ಟಕರವಾದದ್ದು, 10 ಮಂದಿ ಮೃತಪಟ್ಟಿರುವುದು ಮನಸ್ಸಿಗೆ ನೋವಾಗಿದೆ. ಈಗಾಗಲೇ ಸರ್ಕಾರ ಮೃತರಿಗೆ ತಲಾ 2 ಲಕ್ಷ ಪರಿಹಾರ (compensation) ಘೋಷಣೆ ಮಾಡಿದೆ. ಗಾಯಾಳುಗಳಿಗೆ . 50 ಸಾವಿರ ಪರಿಹಾರ ಘೋಷಣೆ ಮಾಡಲಾಗಿದೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ