International Yoga Day ಪ್ರಧಾನಿ ಮೋದಿ ಯೋಗಕ್ಕೆ ಮೈಸೂರಿನಲ್ಲಿ ಸ್ಥಳ ನಿಗದಿ

Published : May 30, 2022, 07:07 PM IST
International Yoga Day ಪ್ರಧಾನಿ ಮೋದಿ ಯೋಗಕ್ಕೆ ಮೈಸೂರಿನಲ್ಲಿ ಸ್ಥಳ ನಿಗದಿ

ಸಾರಾಂಶ

* ಅಂತಾರಾಷ್ಟ್ರೀಯ ಯೋಗಾ ದಿನ * ಮೋದಿ ಯೋಗಕ್ಕೆ ಮೈಸೂರಿನಲ್ಲಿ ಸ್ಥಳ ನಿಗದಿ * ಮೋದಿ ಆಗಮನಕ್ಕೆ ಮೈಸೂರಿನಲ್ಲಿ ಭರ್ಜರಿ ಸಿದ್ಧತೆ

ಮೈಸೂರು, (ಮೇ.30) : ಕಡೆಗೂ ಅರಮನೆ ನಗರಿ ಮೈಸೂರಿನಲ್ಲಿ ನಡೆಯುವ 8ನೇ ಅಂತಾರಾಷ್ಟ್ರೀಯ ಯೋಗಾ ದಿನಕ್ಕೆ‌ ಸ್ಥಳ ನಿಗದಿಯಾಗಿದೆ. ಈ ಬಾರಿ ಯೋಗಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುತ್ತಿರುವುದರಿಂದ ಸ್ಥಳ ಆಯ್ಕೆ ಬಹಳ ಮಹತ್ವ ಪಡೆದುಕೊಂಡಿತ್ತು. ಎಲ್ಲಾ ಆಯಾಮಗಳಲ್ಲೂ ಅಳೆದು ತೂಗಿ ಪ್ರಧಾನಿ ಕಾರ್ಯಾಲಯ ಅರಮನೆ ಅಂಗಳವನ್ನ ಫೈನಲ್ ಮಾಡಿದೆ.

ಯೋಗಕ್ಕೆ ಕೂಡಿ ಬಂದ ರಾಜಯೋಗ
ಅರಮನೆಗಳ ನಗರಿ, ಸಾಂಸ್ಕೃತಿಕ ನಗರಿ ಎಂಬ ಖ್ಯಾತಿ ಪಡೆದಿರುವ‌ ಮೈಸೂರು ಯೋಗ ನಗರಿಯೂ ಕೂಡ ಹೌದು.  ಈ ಬಾರಿಯ 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಅರಮನೆ ಆವರಣದಲ್ಲಿ ಸ್ಥಳ ನಿಗದಿಯಾಗಿದ್ದು, ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮೈಸೂರಿನಲ್ಲಿ ಖಚಿತ ಪಡಿಸಿದ್ದಾರೆ.

International Yoga Dayಗೆ ಮೋದಿ ಆಗಮನ, ಮೈಸೂರಿನಲ್ಲಿ ಭರ್ಜರಿ ಸಿದ್ಧತೆ

 ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದ ಸಿಎಂ, ಅರಮನೆ ಅಂಗಳವು ಭದ್ರತೆ ವಿಚಾರದಲ್ಲಿ ಸೂಕ್ತ ಎಂದಿದ್ದಾರೆ. ಈಗಾಗಲೇ ರಾಜ್ಯ ಸರ್ಕಾರ ಸಕಲ‌ ಸಿದ್ಧತೆಗಳನ್ನ ಸಹ ಕೈಗೊಂಡಿದೆ. ಅರಮನೆ ಆವರಣ ಮತ್ತು ರೇಸ್ ಕೋರ್ಸ್ ಆವರಣದ ಸಂಪೂರ್ಣ ಮಾಹಿತಿಯನ್ನ ಕೇಂದ್ರಕ್ಕೆ ಕಳುಹಿಸಿಕೊಡಲಾಗಿತ್ತು. ಇಂದು(ಸೋಮವಾರ) ಪ್ರಧಾನ‌ಮಂತ್ರಿ ಕಾರ್ಯಾಲಯದಿಂದ ಅರಮನೆ ಆವರಣದಲ್ಲಿ ಮೋದಿ ಅವರು ಯೋಗಾಭ್ಯಾಸ ಮಾಡುವುದನ್ನ ಖಚಿತ ಪಡಿಸಿದೆ. ಈ ಬಗ್ಗೆ ಸಂಸದ ಪ್ರತಾಪ್ ಸಿಂಹ ಕೂಡ ತಮ್ಮ ಟ್ವೀಟರ್ ನಲ್ಲಿ ಖಚಿತಪಡಿಸಿದ್ದಾರೆ. 

ಸಕಲ ಸಿದ್ಧತೆ
ಇದೆ ವಿಚಾರವಾಗಿ ಬೆಂಗಳೂರಿನ ಗೃಹ ಕಚೇರಿ ಕೃಷ್ಣದಲ್ಲಿ ಸಿಎಂ ಬೊಮ್ಮಾಯಿ ಪ್ರಧಾನಿ ನರೇಂದ್ರ ಮೋದಿ ಜೊತೆಗೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ಮಾತುಕತೆ ನಡೆಸಿದರು. ಮೈಸೂರಿನಲ್ಲಿ ನಡೆಯುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಕಾರ್ಯಕ್ರಮದ ಪೂರ್ವ ಸಿದ್ಧತೆಯ ಕುರಿತು ಚರ್ಚೆ ನಡೆಸಿ ಮಾಹಿತಿ ನೀಡಿದರು. ಇತ್ತ ಮೈಸೂರಿಗೆ ಆಗಮಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಖಾಸಗಿ ಹೋಟೆಲ್ ನಲ್ಲಿ ಯೋಗ ದಿನಾಚರಣೆಯ ಪೂರ್ವ ಸಿದ್ಧತೆಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಜಿಲ್ಲಾಡಳಿತ ಹಾಗೂ ಸ್ಥಳೀಯ ಶಾಸಕರುಗಳ ಜೊತೆ ಸಭೆ ನಡೆಸಿದರು.

ಕೇಂದ್ರ ಸಚಿವರು ನಡೆಸಿದ ಸಭೆಯಲ್ಲಿ ಈ ಭಾರಿಯ 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನ ಯಾವ ರೀತಿ ನಡೆಸಬೇಕೆಂದು‌ ಹೆಚ್ಚಿನ ಚೆರ್ಚೆ ನಡೆಯಿತು. ಖುದ್ದು ಪ್ರಧಾನಿ ಮೋದಿ ಅವರು ಆಗಮಿಸುತ್ತಿರುವ ಹಿನ್ನೆಯಲ್ಲಿ ಇಡೀ ವಿಶ್ವದ ಚಿತ್ತ ಮೈಸೂರಿನತ್ತ ನಟ್ಟಿದೆ. ಈ ಕಾರಣಕ್ಕೆ ಅಚ್ಚುಕಟ್ಟಾಗಿ ಯೋಗ ದಿನಾಚರಣೆಯನ್ನ ಆಚರಿಸಲು ಜಿಲ್ಲಾಡಳಿತ ಉತ್ಸುಕತೆಯನ್ನ ತೋರಿದೆ. ಅರಮನೆ ಆವರಣದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಯೋಗ ಪಟುಗಳೊಂದಿಗೆ ಯೋಗಾಭ್ಯಾಸ ಮಾಡುವುದರಿಂದ ಪಾರಂಪರಿಕವಾಗಿ ಯೋಗವನ್ನ ಮಾಡಲಿಕೆ ಎಲ್ಲಾ ರೀತಿಯ ಅನುಕೂಲತೆಗಳಿದೆ. ಸುಮಾರು 75 ಎಕರೆಯಷ್ಟು ವಿಶಾಲವಾದ ವಿಸ್ತೀರ್ಣ ಹೊಂದಿರುವ ಮೈಸೂರು ಅರಮನೆಯಲ್ಲಿ ಸಂಪ್ರದಾಯಕವಾಗಿ ಯೋಗವನ್ನ ಮಾಡಲಾಗುತ್ತದೆ. 

ಒಟ್ಟಾರೆ ಪ್ರಧಾನಿಗಳ ಭದ್ರತೆ ವಿಚಾರಕ್ಕೂ ಕೂಡ ಅರಮನೆ ಆವರಣ ಸೂಕ್ತವಾಗಿದೆ. ಮೈಸೂರಿಗೆ ಮೋದಿ ಆಗಮನದಿಂದ ಯೋಗ ಇನ್ನಷ್ಟು ಮೆರುಗನ್ನ ಪಡೆಯಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್