ಸಿದ್ದರಾಮಯ್ಯ ಕಡೆಯವರಿಂದ ಮೈಸೂರು ಲೋಕಾಯುಕ್ತ ಎಸ್‌ಪಿ ಉದೇಶ್ ಕಿಡ್ನಾಪ್: ಸ್ನೇಹಮಯಿ ಕೃಷ್ಣ ಗಂಭೀರ ಆರೋಪ

By Gowthami KFirst Published Sep 26, 2024, 2:32 PM IST
Highlights

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣದ ತನಿಖೆ ನಡೆಸುತ್ತಿರುವ ಮೈಸೂರು ಲೋಕಾಯುಕ್ತ ಎಸ್ ಪಿ ಟಿ.ಜೆ.ಉದೇಶ್ ನಾಪತ್ತೆಯಾಗಿದ್ದಾರೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ. ಲೋಕಾಯುಕ್ತ ಎಸ್ ಪಿ ಯಾವುದೇ ಪ್ರತಿಕ್ರಿಯೆ ನೀಡದ ಹಿನ್ನಲೆಯಲ್ಲಿ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಚಿಂತನೆ ನಡೆಸಿದ್ದಾರೆ.

ಬೆಂಗಳೂರು (ಸೆ.26): ಲೋಕಾಯುಕ್ತ ಎಸ್ ಪಿ ಟಿ.ಜೆ.ಉದೇಶ್ ಅವರನ್ನ ಸಿಎಂ ಸಿದ್ದರಾಮಯ್ಯ ಕಡೆಯವರು ಅಪಹರಣ ಮಾಡಿರುವ ಸಾಧ್ಯತೆ ಇದೆ ಎಂದು ಮಾಧ್ಯಮಗಳಿಗೆ ದೂರುದಾರ ಸ್ನೇಹಮಯಿ ಕೃಷ್ಣ ಹೇಳಿಕೆ ನೀಡದ್ದಾರೆ. ನಾನು ಕರೆ ಮಾಡಿದರೂ ಅವರು ಸ್ವೀಕರಿಸುತ್ತಿಲ್ಲ. ಕಚೇರಿ ಸಿಬ್ಬಂದಿಗೂ ಅವರು ಎಲ್ಲಿ ಹೋಗಿದ್ದಾರೆ ಎಂಬ ಮಾಹಿತಿ‌ ಇಲ್ಲ. ಇದೆಲ್ಲವನ್ನ ಗಮನಿಸಿದರೆ ಅವರನ್ನ ಸಿದ್ದರಾಮಯ್ಯ ಕಡೆಯವರು ಬಚ್ಚಿಟ್ಟಿದ್ದಾರೆ ಎಂಬ ಅನುಮಾನ ಇದೆ ಎಂದು ಸ್ನೇಹಮಯಿ ಕೃಷ್ಣ ಗಂಭೀರ ಆರೋಪ ಮಾಡಿದ್ದಾರೆ.

ಲೋಕಾಯುಕ್ತ ಎಸ್ ಪಿ ಟಿ.ಜೆ.ಉದೇಶ್ ಯಾವುದೇ ಪ್ರತಿಕ್ರಿಯೆ ನೀಡಿದ ಹಿನ್ನಲೆಯಲ್ಲಿ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಚಿಂತನೆ ನಡೆಸಿದ್ದಾರೆ  ಸ್ನೇಹಮಯಿ ಕೃಷ್ಣ. ಮಧ್ಯಾಹ್ನ ಮೂರು ಗಂಟೆಯವರೆಗೆ ಲೋಕಾಯುಕ್ತ ಕಚೇರಿಯಲ್ಲಿ ಕಾಯುತ್ತೇನೆ. ಮೂರು ಗಂಟೆಯವರೆಗೆ ನನಗೆ ಪ್ರತಿಕ್ರಿಯೆ ನೀಡದಿದ್ದರೇ ಪೊಲೀಸರಿಗೆ ದೂರು ನೀಡುತ್ತೇನೆ. ಲೋಕಾಯುಕ್ತ ಎಡಿಜಿಪಿ ಐಜಿ‌ ಅವರಿಗೂ ಕರೆ ಮಾಡಿದೆ. ಅವರು ಕರೆ ಸ್ವೀಕರಿಸಿ ಸಭೆಯಲ್ಲಿರುವುದಾಗಿ ಮಾಹಿತಿ ನೀಡಿದರು.

Latest Videos

ಮೈಸೂರು ಲೋಕಾಯುಕ್ತ ಎಸ್ಪಿ ಮಾತ್ರ ಸಭೆಯಲ್ಲಿಲ್ಲ ಇಲ್ಲ ಎಂಬ ಮಾಹಿತಿಯನ್ನ ಅವರೇ ನೀಡಿದರು. ಈ ಕಾರಣಕ್ಕಾಗಿ ಅವರು ನಾಪತ್ತೆಯಾಗಿರುವ ಬಗ್ಗೆ ಅನುಮಾನ ಇದೆ. ಮೈಸೂರು ಲೋಕಾಯುಕ್ತ ಎಸ್ಪಿ ಬಳಸುತ್ತಿರುವ ಸಾರ್ವಜನಿಕ ದೂರವಾಣಿ ಅದನ್ನು ಸ್ವೀಕರಿಸದ ಮೇಲೆ ಅವರಿಗೆ ಮೊಬೈಲ್ ಯಾಕೆ. ಡಿವೈಎಸ್ಪಿ ನನ್ನ ಮುಂದೆ ಎಸ್ಪಿಗೆ ಕರೆ ಮಾಡಿದರು. ನಾನು ಹೇಳಿದಾಗ ಬರುವಂತೆ ಸೂಚಿಸಿದರು. ಅವರು ಎಸ್ಪಿ ಜೊತೆ ಮಾತನಾಡಿದರು ಎಂಬುದಕ್ಕೆ ಏನು ಗ್ಯಾರೆಂಟಿ. ಹೀಗಾಗಿ ನಾನು ದೂರು ದಾಖಲಿಸುವುದು ನಿಶ್ಚಿತ ಎಂದಿದ್ದಾರೆ.

ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ನೀಡಲು ಲೋಕಾಯುಕ್ತ ಕಚೇರಿಗೆ  ಸ್ನೇಹಮಯಿ ಕೃಷ್ಣ ಆಗಮಿಸಿದ್ದು, ಲಿಖಿತ ದೂರು, ಹೈಕೋರ್ಟ್ ತೀರ್ಪು, ಜನಪ್ರತಿನಿಧಿ ನ್ಯಾಯಾಲಯ ಆದೇಶದ  ಆನ್‌ಲೈನ್‌ ಪ್ರತಿ, ದಾಖಲೆಗಳ ಸಮೇತ ಎಂಟ್ರಿ ಆಗಿದ್ದಾರೆ. ಲೋಕಾಯುಕ್ತ ಎಸ್ಪಿ ಬೆಂಗಳೂರಿಗೆ ತೆರಳಿರುವ ಹಿನ್ನೆಲೆ ಕಚೇರಿ ಅಧಿಕಾರಿಗಳೇ ದೂರು ಸ್ವೀಕರಿಸುವ ಸಾಧ್ಯತೆ‌ ಇದೆ. ಆದರೆ ಈಗ ಲೋಕಾಯುಕ್ತ ಎಸ್ಪಿ ಕರೆಗೆ ಪ್ರತಿಕ್ರಿಯೆ ನೀಡುತ್ತಿಲ್ಲ. ಹೀಗಾಗಿ ಸಿದ್ದರಾಮಯ್ಯ ಕಡೆಯವರು ಕಿಡ್ನಾಪ್ ಮಾಡಿಸಿದ್ದಾರೆಂದು ಆರೋಪಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣದ ತನಿಕೆಯನ್ನು ಮೂರು ತಿಂಗಳೊಳಗೆ‌ ವಿಚಾರಣೆ ನಡೆಸಿ ವರದಿ ನೀಡುವಂತೆ ಮೈಸೂರು ಲೋಕಾಯುಕ್ತಕ್ಕೆ ಕೋರ್ಟ್ ಸೂಚಿಸಿದೆ. ಮೈಸೂರು ಲೋಕಾಯುಕ್ತ ಎಸ್ ಪಿ ಟಿ.ಜೆ ಉದೇಶ್ ನೇತೃತ್ವದಲ್ಲಿ ಈ ತನಿಖೆ ನಡೆಯಬೇಕಿದೆ.

ಯಾರು ಲೋಕಾಯುಕ್ತ ಎಸ್ ಪಿ ಟಿ.ಜೆ.ಉದೇಶ್?
ಕಳೆದ ಆಗಸ್ಟ್ 20ರಂದು ಮೈಸೂರು ಜಿಲ್ಲಾ ಲೋಕಾಯುಕ್ತ ಎಸ್ಪಿಯಾಗಿ  ಉದೇಶ್ ಅಧಿಕಾರ ವಹಿಸಿಕೊಂಡಿದ್ದರು. ಈ ಮೊದಲು ಚಾಮರಾಜನಗರದ ಅಡಿಷನಲ್‌ ಸೂಪರಿಂಡೆಂಟ್‌ ಆಫ್‌ ಪೊಲೀಸ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. 

ಇನ್ನೊಂದು ಕಡೆ ಲೋಕಾಯುಕ್ತ ತನಿಖೆಗೆ ದೂರುದಾರ ಸ್ನೇಹಮಯಿ ಕೃಷ್ಣ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮೈಸೂರಿಗೆ ತೆರಳಿ ದೂರು ಕೊಡುವುದಕ್ಕೂ ಮುನ್ನ ಮಾತನಾಡಿದ ಅವರು ಸಿಬಿಐ ತನಿಖೆಗೆ ಒತ್ತಾಯಿಸಿ ಕಾನೂನು ಹೋರಾಟ ಮಾಡುತ್ತೇನೆಂದು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಮಾಹಿತಿ ನೀಡಿದ ಸ್ನೇಹಮಯಿ ಕೃಷ್ಣ. ಹೈಕೋರ್ಟ್ ತೀರ್ಪಿನಂತೆ ಇಂದು ಲೋಕಾಯುಕ್ತ ಎಸ್ಪಿಗೆ ದೂರು ನೀಡುತ್ತೇನೆ. ಆದ್ರೆ ಲೋಕಾಯುಕ್ತ ರಾಜ್ಯ ಸರ್ಕಾರದ ಅಧೀನ ಸಂಸ್ಥೆ. ಮುಖ್ಯಮಂತ್ರಿಯೇ ಆರೋಪಿ ಆಗಿರುವುದರಿಂದ ಪಾರದರ್ಶಕ ತನಿಖೆ ನಡೆಸಲು ಸಾಧ್ಯವಿಲ್ಲ. ಆದ್ದರಿಂದ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದೇನೆ. ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಮೇಲ್ಮನವಿ ಸಲ್ಲಿಸುತ್ತೇನೆ.  ದೂರುದಾರ ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.

click me!