ನಗರದಲ್ಲಿ ಕಳ್ಳತನ, ದೌರ್ಜನ್ಯ, ಅಪಘಾತಗಳು ಸಂಭವಿಸಿದಾಗ ಹೊಯ್ಸಳ ವಾಃನಕ್ಕೆ ಕರೆ ಮಾಡುವುದು ನೋಡಿದ್ದೀರಿ, ಇಲ್ಲೊಬ್ಬ ತಂದೆ ತನ್ನ ಮಗು ಊಟ ತಿಂಡಿಗೆ ಕಿರಿಕಿರಿ ಮಾಡುತ್ತದೆಂದು ಮನೆಗೆ ಮಗುವನ್ನು ಸಮಾಧಾನ ಪಡಿಸುವಂತೆ ಹೊಯ್ಸಳ ವಾಹನಕ್ಕೆ ಕರೆ ಮಾಡಿರುವ ಮಹಾಶಯ! ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬೆಂಗಳೂರು (ಸೆ.26): ಮಹಾನಗರದಲ್ಲಿ ಪ್ರತಿನಿತ್ಯ ಜಗಳ, ಕಳ್ಳತನ, ದೌರ್ಜನ್ಯ, ಅಪಘಾತ ಸೇರಿದಂತೆ ನಾನಾ ರೀತಿಯ ಅವಘಡಗಳು ಸಂಭವಿಸುತ್ತಲೇ ಇರುತ್ತವೆ. ಇಂತಹ ಸಮಯದಲ್ಲಿ ತಕ್ಷಣಕ್ಕೆ ಸಾರ್ವಜನಿಕರಿಗೆ ನೆರವಾಗಲೆಂದೇ ಪೊಲೀಸ್ ಇಲಾಖೆ ಹೊಯ್ಸಳ ಹೆಸರಿನಲ್ಲಿ ವಿಶೇಷವಾಗಿ ಗಸ್ತು ಪಡೆ ರಚಿಸಲಾಗಿದೆ. ಆದರೆ ಸಾರ್ವಜನಿಕರು ಒಮ್ಮೊಮ್ಮೆ ಕ್ಷುಲ್ಲಕ ಕಾರಣಕ್ಕೆ ಕರೆ ಮಾಡಿ ಪೊಲೀಸರ ಸಮಯ ಹಾಳು ಮಾಡುವುದಿದೆ. ಅಂತಹದ್ದೊಂದು ಘಟನೆ ಕನಕಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹೌದು, ಇಂತಹದ್ದೊಂದು ವಿಚಿತ್ರ ಘಟನೆ ಕನಕಪುರ ಠಾಣಾ ವ್ಯಾಪ್ತಿಯ ಮಳಗಾಳು ಗ್ರಾಮದಲ್ಲಿ ನಡೆದಿದೆ. ಮನೆಯಲ್ಲಿ ಮಗುವೊಂದು ಊಟ, ತಿಂಡಿ ವಿಚಾರಕ್ಕೆ ಕಿರಿಕಿರಿ ಮಾಡುತ್ತಿದೆ ಎಂದು ಮಗುವಿನ ತಂದೆ ಹೊಯ್ಸಳ ವಾಹನಕ್ಕೆ ಕರೆ ಮಾಡಿ 'ನಮ್ಮ ಮಗು ಊಟ ತಿಂಡಿ ತಿನ್ನಲು ರಗಳೆ ತೆಗೆಯುತ್ತಿದೆ ದಯವಿಟ್ಟು ನಮ್ಮ ಮನೆಗೆ ಬಂದು ಮಗುವನ್ನು ಸಮಾಧಾನ ಮಾಡಿ' ಎಂದು ಕೇಳಿಕೊಂಡಿರುವ ಮಹಾಶಯ!
ವೀಲಿಂಗ್ ಮಾಡುವ ವೇಳೆ ಅಡ್ಡ ಬಂದಿದ್ದಕ್ಕೆ ಯುವತಿಗೆ ನಿಂದನೆ; ರಕ್ಷಣೆಗೆ ಬಂದವನ ಮೇಲೆ ಮಾರಣಾಂತಿಕ ಹಲ್ಲೆ!
ಇತ್ತ ಮಗುವಿನ ತಂದೆ ಕರೆ ಮಾಡಿದ ವಿಷಯ ಕೇಳಿ ಶಾಕ್ ಆದ ಪೊಲೀಸರು. ಹೊಯ್ಸಳ ವಾಹನ ಇರುವುದು ಮನೆಯೊಳಗಿನ ಮಕ್ಕಳನ್ನ ಸಮಾಧಾನ ಪಡಿಸಿ ಊಟ ಮಾಡಿಸಲಿಕ್ಕ? ಎಂದು ಹಣೆ ಚಚ್ಚಿಕೊಂಡು ಹೊಯ್ಸಳ ವಾಹನ ಹತ್ತಿದ್ದಾರೆ. ಮಾರ್ಗ ಮಧ್ಯೆ ದೂರುದಾರರಿಗೆ ಕರೆ ಮಾಡಿರುವ ಪೊಲೀಸರು. ಈ ವೇಳೆ, 11 ವರ್ಷದ ಮಗು ಊಟ ತಿಂಡಿ ಮಾಡುವ ವಿಚಾರದಲ್ಲಿ ಪದೇ ಪದೇ ಕಿರಿಕಿರಿ ಮಾಡಿ ಅಳುತ್ತಿರುತ್ತಾನೆ. ಆದ್ದರಿಂದ ತಾವುಗಳು ಬಂದು ಸಮಾಧಾನಪಡಿಸಬೇಕು ಎಂದು ತಿಳಿಸಿದ್ದ ಭೂಪ. ಬಳಿಕ ಪುನಃ ಕರೆ ಮಾಡಿ ಸದ್ಯ ಮಗು ಅಳುವುದು ನಿಲ್ಲಿಸಿದೆ, ನೀವು ಬರುವುದು ಬೇಡ, ಮತ್ತೆ ಅತ್ತರೆ ಕರೆ ಮಾಡುವುದಾಗಿ ತಿಳಿಸಿರುವ ಮಗುವಿನ ತಂದೆ! ಮಗು ಅಳೋದನ್ನ ನಿಲ್ಲಿಸೋದಕ್ಕೆ ಪೊಲೀಸರ ಬೇಕಾ? ಹೊಯ್ಸಳ ವಾಹನಕ್ಕೆ ಕರೆ ಮಾಡಬೇಕಾ? ಈ ಬಗ್ಗೆ ಹೊಯ್ಸಳ ಪೊಲೀಸರ ವರದಿ ಕಾಪಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದು ವೈರಲ್ ಆಗಿದೆ.