ಸರ್ಕಾರ ಕಚೇರಿಗಳಲ್ಲಿ ಬರ್ತಡೇ ಆಚರಣೆ ನಿಷೇಧವಿದ್ರೂ ಕೇಕ್ ಕತ್ತರಿಸಿ ಭರ್ಜರಿ ಕೇಕ್ ಕತ್ತರಿಸಿ ಪಾರ್ಟಿ ಮಾಡಿದ ಘಟನೆ ಬೆಳಗಾವಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ನಡೆದಿದೆ.
ಬೆಳಗಾವಿ (ಸೆ.26): ಸರ್ಕಾರ ಕಚೇರಿಗಳಲ್ಲಿ ಬರ್ತಡೇ ಆಚರಣೆ ನಿಷೇಧವಿದ್ರೂ ಕೇಕ್ ಕತ್ತರಿಸಿ ಭರ್ಜರಿ ಕೇಕ್ ಕತ್ತರಿಸಿ ಪಾರ್ಟಿ ಮಾಡಿದ ಘಟನೆ ಬೆಳಗಾವಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ನಡೆದಿದೆ.
ಸರ್ಕಾರಿ ಕಚೇರಿಗಳಲ್ಲಿ ಬರ್ತಡೇ, ಖಾಸಗಿ ಕಾರ್ಯಕ್ರಮ ಮಾಡದಂತೆ ಸರ್ಕಾರದ ಆದೇಶವಿದೆ. ಆದರೆ ಇಲಾಖೆ ಸಿಬ್ಬಂದಿ ಪ್ರವೀಣ ಮೇತ್ರಿ ಕೇಕ್ ತರಿಸಿ ಕಚೇರಿಯಲ್ಲೇ ಎಲ್ಲರ ಸಮ್ಮುಖದಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಆ ಮೂಲಕ ಸರ್ಕಾರದ ಆದೇಶವನ್ನೇ ಧಿಕ್ಕರಿಸಿದ್ದಾರೆ.
undefined
ಊಟ-ತಿಂಡಿಗೆ ಮಗು ಕಿರಿಕಿರಿ, ಹೊಯ್ಸಳಗೆ ಕರೆಮಾಡಿದ ಅಪ್ಪ ಮಹಾಶಯ!
ಕಚೇರಿಯಲ್ಲಿ ಕೇಕ್ ಕತ್ತರಿಸುವ ವೇಳೆ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಾಮನಗೌಡ ಕನ್ನೊಳಿ , ಸಿಬ್ಬಂದಿ, ದಲಿತ ಮುಖಂಡ ಮಲ್ಲೇಶ ಚೌಗಲೆ ಸೇರಿದಂತೆ ಹಲವರು ಬರ್ತಡೆ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಬರ್ತಡೇ ಕಾರ್ಯಕ್ರಮದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸರ್ಕಾರಿ ಕಚೇರಿಗಳಲ್ಲಿ ನಿಷೇಧವಿದ್ದರೂ ಬರ್ತಡೇ ಆಚರಿಸಿಕೊಂಡಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ.