ಪ್ರಾದೇಶಿಕ ಪಕ್ಷವನ್ನು ಉಳಿಸಿ ಅಧಿಕಾರಕ್ಕೆ ತರಬೇಕು ಎನ್ನುವುದೇ ನನ್ನ ಕೊನೆಯ ಆಸೆ: ಹೆಚ್.ಡಿ.ದೇವೇಗೌಡ

By Govindaraj S  |  First Published May 9, 2022, 10:11 PM IST

ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತಂದು ಕೊನೆ ಉಸಿರು ಬಿಡಬೇಕೆಂಬುದೇ ನನ್ನ ಹಠ ಇದು‌ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಆಶಯವಾಗಿದೆ. ದೇವೇಗೌಡರಿಗೆ 90 ಆಗಿದೆ ಅಂತ ಯಾರೋ ಹೇಳ್ತಾರೆ ಆದರೆ ನಾನು ಇನ್ನೂ 90ರ ಹತ್ತಿರ ತಲುಪಿಲ್ಲ ಎಂದು ಚಿಕ್ಕಮಗಳೂರಿನಲ್ಲಿ ವಯಸ್ಸಿನ ಬಗ್ಗೆ ಮಾತನಾಡುವವರಿಗೆ ಟಾಂಗ್ ಕೊಟ್ಟಿದ್ದಾರೆ.


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು

‌ಚಿಕ್ಕಮಗಳೂರು (ಮೇ.09): ಜೆಡಿಎಸ್ ಪಕ್ಷವನ್ನು (JDS) ಅಧಿಕಾರಕ್ಕೆ ತಂದು ಕೊನೆ ಉಸಿರು ಬಿಡಬೇಕೆಂಬುದೇ ನನ್ನ ಹಠ ಇದು‌ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ (HD Devegowda) ಆಶಯವಾಗಿದೆ. ದೇವೇಗೌಡರಿಗೆ 90 ಆಗಿದೆ ಅಂತ ಯಾರೋ ಹೇಳ್ತಾರೆ ಆದರೆ ನಾನು ಇನ್ನೂ 90ರ ಹತ್ತಿರ ತಲುಪಿಲ್ಲ ಎಂದು ಚಿಕ್ಕಮಗಳೂರಿನಲ್ಲಿ (Chikkamagaluru) ವಯಸ್ಸಿನ ಬಗ್ಗೆ ಮಾತನಾಡುವವರಿಗೆ ಟಾಂಗ್ ಕೊಟ್ಟಿದ್ದಾರೆ.

Latest Videos

undefined

ನನ್ನ ಜೀವನದ ಕೊನೆ ಆಸೆ ಏನು ಗೊತ್ತಾ: ಒಂದು ಪ್ರಾದೇಶಿಕ ಪಕ್ಷವನ್ನ ಉಳಿಸಿ, ಅಧಿಕಾರಕ್ಕೆ ತರಬೇಕು. ಅಧಿಕಾರಕ್ಕೆ ತಂದು ಕೊನೆ ಉಸಿರು ಬೀಡಬೇಕೆಂಬುದೇ ನನ್ನ ಕೊನೆ ಹಠವಾಗಿದೆ ಎಂದು ಹೆಚ್.ಡಿ.ದೇವೇಗೌಡ ಹೇಳಿದರು. ಚಿಕ್ಕಮಗಳೂರಿನಲ್ಲಿ ನಡೆದ ಪಕ್ಷದ ಜನತಾ ಜಲಧಾರೆ (Janata Jaladhare) ಹಾಗೂ ಪಕ್ಷದ ಕಾರ್ಯಕರ್ತರ ಸಭೆಗೆ ಆಗಮಿಸಿದ್ದರು. ನಗರದ ಎ.ಐ.ಟಿ. ವೃತ್ತದ ಬಳಿಯ ಒಕ್ಕಲಿಗರ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, ಯಾರೋ ನನಗೆ 90 ವರ್ಷವಾಗಿದೆ ಎಂದು ಹೇಳಿದರು. ನನಗೆ 90 ಇನ್ನು ಮುಟ್ಟೇ ಇಲ್ಲ ಎಂದು ದೇವೇಗೌಡರ ವಯಸ್ಸಿನ ಬಗ್ಗೆ ಕಾಮೆಂಟ್ ಮಾಡಿದವರಿಗೆ ಟಾಂಗ್ ಕೊಟ್ಟಿದ್ದಾರೆ. 

ದೇಶದ ಐಕ್ಯತೆಗೆ ಧಕ್ಕೆ ತರಲು ಮತಾಂಧ ಶಕ್ತಿಗಳ ಪ್ರಯತ್ನ: ಎಚ್‌.ಡಿ. ದೇವೇಗೌಡ

ಒಂದು ಪ್ರಾದೇಶಿಕ ಪಕ್ಷವನ್ನ ಉಳಿಸಿ ಅಧಿಕಾರಕ್ಕೆ ತರಬೇಕು. ಅದೇ ನನ್ನ ಕೊನೆ ಆಸೆ. ಪ್ರಾದೇಶಿಕ ಪಕ್ಷವನ್ನ ಅಧಿಕಾರಕ್ಕೆ ತಂದು ನನ್ನ ಕೊನೆ ಉಸಿರು ಬಿಡಬೇಕೆಂಬುದು ನನ್ನ ಹಠ ಎಂದು ಪಕ್ಷವನ್ನ ಮತ್ತೊಮ್ಮೆ ಅಧಿಕಾರಕ್ಕೆ ತರಲು ಪಣ ತೊಟ್ಟಿದ್ದಾರೆ. ಓರ್ವ ರಾಜಕೀಯ ಪಕ್ಷದ ಮುಖಂಡನಾಗಿ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಎಲ್ಲಿ ತಪ್ಪುತ್ತಿದ್ದೇವೆ, ಪಕ್ಷವನ್ನ ಉಳಿಸಿಕೊಳ್ಳಲು ಹೇಗೆ ನಡೆದುಕೊಳ್ಳಬೇಕು ಎಂಬುದರ ಬಗ್ಗೆ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ ನನ್ನ ಮನದಲ್ಲಿ ತುಂಬಾ ಆತಂಕ ಇದೆ ಎಂದರು. ನನ್ನ ಜೀವನದಲ್ಲಿ ಕೇವಲ ನೀರಾವರಿ ಯೋಜನೆಗಳಿಗಾಗಿ ಹೋರಾಟ ಮಾಡಿಲ್ಲ. ನನ್ನ ಜೀವನವೇ ಹೋರಾಟ ಎಂದರು. ಈ ದೇಶವನ್ನ ಹಿಂದೂ ರಾಷ್ಟ್ರ ಮಾಡಬೇಕು ಅಂತಾರೆ. ನಾನೇನು ಹಿಂದೂ ಅಲ್ವಾ. ನಾನು ನನ್ನ ಮನೆಯಲ್ಲಿ ದಿನಕ್ಕೆ ಎರಡು ಗಂಟೆ ಪ್ರಾರ್ಥನೆ ಮಾಡುತ್ತೇನೆ ಎಂದರು. 

ಕರುಣಾನಿಧಿ ಉದಾಹರಣೆ ಕೊಟ್ಟ ದೇವೇಗೌಡ: ಕಾರ್ಯಕರ್ತರು ಸಭೆಯಲ್ಲಿ ನಾನು ನಿಂತುಕೊಂಡೆ ಮಾತನಾಡುತ್ತೇನೆ ಎಂದು ಹೇಳಿದೆ. ಆದರೆ ಎಸ್.ಎಲ್. ಭೋಜೇಗೌಡರು ಕೂತು ಮಾತನಾಡಿ ಎಂದರು. ಅದಕ್ಕೆ ಕೂತು ಮಾತನಾಡುತ್ತಿದ್ದೇನೆ. ಕೂತು-ನಿಂತು ಹೇಗೆ ಮಾತನಾಡಿದರು ಒಂದೇ ಎಂದು ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಕರುಣಾನಿಧಿಯವರ ಉದಾಹರಣೆ ಕೊಟ್ಟರು. ಕರುಣಾನಿಧಿಯವರು ಮೂರು ಚುನಾವಣೆಯನ್ನ ವೀಲ್‌ಚೇರ್ ಮೇಲೆ ಕೂತು ಮಾಡಿದ್ದರು. ಸಿಎಂ ಕೂಡ ಆಗಿದ್ದರು. ಸೋತರು. ಒಂದು ಪ್ರಾದೇಶಿಕ ಪಕ್ಷವನ್ನ ಬಲವಾಗಿ ಕಟ್ಟಿ ಬೆಳೆಸಿದರು. 

Janata Jaladhare: ಮೇ 13ರಂದು ನೆಲಮಂಗಲ ಬಳಿ ಜೆಡಿಎಸ್‌ ಬೃಹತ್ ಜಲಧಾರೆ ಸಮಾವೇಶ

ಬಳಿಕ ಲಕ್ಷಾಂತರ ಕಾರ್ಯಕರ್ತರು ಅವರ ಪಾರ್ಥೀವ ಶರೀರವನ್ನ ಕಳಿಸಿಕೊಟ್ಟರು. ಕಾರ್ಯಕರ್ತರು ಮೂರು ದಿನ ಕ್ಯೂ ನಿಂತಿದ್ದರು. ಈ ಪಕ್ಷವನ್ನ ಬಲವಾಗಿ ಕಟ್ಟಿ ಬೆಳೆಸಿದವರು ಇಂದು ತೀರಿಹೋಗಿದ್ದಾರೆ. ಚಿಕ್ಕಮಗಳೂರಿನಲ್ಲಿ ದೇವೇಗೌಡ ಮುಖ್ಯಮಂತ್ರಿ ಆಗಲು ನಾಲ್ಕು ಶಾಸಕರನ್ನ ಗೆದ್ದು ಕೊಟ್ಟಿತ್ತು. ಭೋಜೇಗೌಡ, ನಾರಾಯಣ ಗೌಡ, ಲಕ್ಷ್ಮಯ್ಯ, ತಿಪ್ಪಯ್ಯ ಸೇರಿದಂತೆ ನಾಲ್ವರು ಗೆದ್ದಿದ್ದರು. ಅಂತಹಾ ದಿನವನ್ನ ನಾನು ನೋಡಲಿಲ್ಲ. ಜೆಡಿಎಸ್ ಭದ್ರಕೋಟೆಯಾಗಿ ಪಕ್ಷವನ್ನ ಬೆಳೆಸಿಕೊಂಡು ಬಂದು ಇಂದು ಸ್ವಲ್ಪ ಮಟ್ಟಿಗೆ ನನ್ನ ಮನದಲ್ಲಿ ನೋವಿದೆ ಎಂದರು. ಕಾರ್ಯಕರ್ತರ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಮಾಜಿ ಸಚಿವ ನಿಂಗಯ್ಯ ,ಮಾಜಿ ಶಾಸಕ ವೈ.ಎಸ್.ವಿ.ದತ್ತಾ ಪಾಲ್ಗೊಂಡಿದ್ದರು.

click me!