
ವರದಿ: ಸುರೇಶ್ ಎ ಎಲ್, ಏಷ್ಯಾ ನೆಟ್ ಸುವರ್ಣ ನ್ಯೂಸ್.
ಬೆಂಗಳೂರು (ಮೇ.09): ಅಮಿತ್ ಶಾ (Amit Shah) ರಾಜ್ಯ (Karnataka) ಭೇಟಿ ಬೆನ್ನಲ್ಲೇ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಫುಲ್ ಅಲರ್ಟ್ ಆಗಿದ್ದಾರೆ. ಆಡಳಿತಕ್ಕೆ ಚುರುಕು ಮುಟ್ಟಿಸಲು ಮುಂದಾಗಿರುವ ಸಿಎಂ ಅಧಿಕಾರಿಗಳ ಸಭೆ ಕರೆದು ಖಡಕ್ ವಾರ್ನಿಂಗ್ (Warning) ನೀಡಲಾರಂಭಿಸಿದ್ದಾರೆ. ಬೆಂಗಳೂರಿನಲ್ಲಿ ಅಷ್ಟೇ ಅಲ್ಲದೇ ಹೊರ ಜಿಲ್ಲೆಗಳಿಗೂ ಪ್ರವಾಸ ಮಾಡಿ ಸರ್ಕಾರಿ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಆಕ್ಟಿವ್ ಆಗಿದ್ದಾರೆ. ನಾಯಕತ್ವ ಬದಲಾವಣೆ, ಸಂಪುಟ ಪುನರ್ರಚನೆ ವಿಚಾರಗಳಲ್ಲಿ ಸ್ವಲ್ಪ ಡಲ್ಲು ಹೋಡೆದಿದ್ದ ಆಡಳಿತ ಯಂತ್ರಕ್ಕೆ ಧಿಡೀರನೆ ಚುರುಕು ಮುಟ್ಟಿದೆ.
ಕಳೆದ ವಾರ ರಾಜ್ಯಕ್ಕೆ ಭೇಟಿ ಕೊಟ್ಟಿದ್ದ ಅಮಿತ್ ಶಾ, ಸಿಎಂ ಬೊಮ್ಮಾಯಿಗೆ ಖಡಕ್ ಸೂಚನೆ ಕೊಟ್ಟು ಹೋಗಿದ್ದಾರೆ. ಭಾನುವಾರ ಅಥವಾ ಸರ್ಕಾರಿ ರಜಾದಿನಗಳನ್ನೂ ಲೆಕ್ಕಿಸದೇ ಸಿಎಂ ಸರಣಿ ಸಭೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಭಾನುವಾರ ಜಿಲ್ಲಾಧಿಕಾರಿಗಳ (District Commissioners) ಜೊತೆ ಸಭೆ ನಡೆಸಿದ ಸಿಎಂ ಎಲ್ಲಾ ಡಿಸಿಗಳಿಗೆ ಖಡಕ್ ಸಂದೇಶ ರವಾನಿಸಿದ್ದಾರೆ. ನೀವು ಸರ್ಕಾರಿ ನೌಕರರ ರೀತಿ ಬೆಳಿಗ್ಗೆ ಹತ್ತರಿಂದ ಸಂಜೆ ಐದರವರೆಗೆ ಕೆಲಸ ಮಾಡುವುದು ಬಿಡಿ. ಟೈಮ್ ಲಿಮಿಟ್ ಇಟ್ಕೋಬೇಡಿ, ಜನರ ಬಳಿಗೆ ಹೋಗಿ ಕೆಲಸ ಮಾಡಿ, ಆಗ ಜನರ ಕಷ್ಟ ಗೊತ್ತಾಗುತ್ತದೆ.
‘2050ರ ಆಹಾರ ಸವಾಲು ಎದುರಿಸಲು ಸಿದ್ಧರಾಗಿ’: ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಸಲಹೆ
ಭ್ರಷ್ಟಾಚಾರ ರಹಿತ ಆಡಳಿತ ಮಾಡಿ, ಭ್ರಷ್ಟಾಚಾರವನ್ನು ನಾನು ಸಹಿಸಲ್ಲ, ಬಜೆಟ್‌ನಲ್ಲಿ ಘೋಷಣೆಯಾದ ಕಾರ್ಯಕ್ರಮಗಳು ಅನುಷ್ಠಾನಕ್ಕೆ ಬರಲು ನೀವು ಕಾರಣರಾಗಬೇಕು ಆ ನಿಟ್ಟಿನಲ್ಲಿ ಕೆಲಸ ಮಾಡಿ ಎಂದು ಸೂಚಿಸಿದ್ದಾರೆ .ಇನ್ನು ವ್ಯಾಕ್ಸಿನೇಷನ್ ವಿಚಾರ ಸರ್ಕಾರದ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಸವಲತ್ತುಗಳನ್ನು ದೊರಕಿಸುವುದು, ಇತ್ಯಾದಿ ವಿಚಾರಗಳಲ್ಲೂ ಕೆಲಸ ಮಾಡಿ ಯಾವುದೇ ಕಾರಣಕ್ಕೂ ಸರ್ಕಾರಕ್ಕೆ ಕೆಟ್ಟ ಹೆಸರು ಬರಬಾರದು ಎಂದು ಸೂಚಿಸಿದ್ದಾರೆ
ಸತತ ಎರಡನೇ ದಿನವೂ ಸರಣಿ ಸಭೆ: ಇಂದೂ ಕೂಡ ಸಭೆ ಮುಂದುವರೆಸಿದ ಸಿಎಂ ಸಿಇಓಗಳಿಗೆ ಆಡಳಿದಲ್ಲಿ ದಕ್ಷತೆ ಕಾಯ್ದುಕೊಳ್ಳಲು ಹೇಳಿದ್ದಾರೆ. ಇದರ ನಡುವೆಯೇ ಆಜಾನ್, ಪ್ರಾರ್ಥನೆ ವಿಚಾರವಾಗಿ ರಾಜ್ಯದಲ್ಲಿ ಎದ್ದಿರುವ ವಿವಾದವನ್ನು ಪರಿಹರಿಸುವ ಬಗ್ಗೆಯೂ ಸಭೆ ನಡೆಸಿದ ಸಿಎಂ ಯಾವುದೇ ವಿವಾದಗಳು ಬೆಳೆಯದಂತೆ ನೋಡಿಕೊಳ್ತಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ ಆಡಳಿತ ದ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಪಕ್ಷ ಹೆಸರು ಕೆಡಿಸಿಕೊಳ್ಳದಂತೆ ನೋಡಿಕೊಳ್ಳಲು ಅಮಿತ್ ಶಾ ನೀಡಿದ ಆದೇಶ ಪಾಲನೆ ಆಗ್ತಿದೆ. ಆಡಳಿತ ನೀವು ನೋಡಿಕೊಳ್ಳಿ ಸಂಘಟನೆ ನನಗೆ ಬಿಡಿ ಎಂಬ ಅಮಿತ್ ಶಾ ಸಂದೇಶ ಸ್ವಲ್ಪ ಸ್ಟ್ರಾಂಗಾಗಿಯೇ ಕೆಲಸ ಮಾಡ್ತಿದೆ.
ಭ್ರಷ್ಟಾಚಾರ ಸಹಿಸುವುದಿಲ್ಲ. ವಿಳಂಬ ಧೋರಣೆಯನ್ನೂ ಒಪ್ಪುವುದಿಲ್ಲ: ‘ಸಮಯದ ಪರಿಮಿತಿ ಬಿಟ್ಟು ಕೆಲಸ ಮಾಡಿ. ಯಾವುದೇ ಕಾರಣಕ್ಕೂ ಭ್ರಷ್ಟಾಚಾರ ಸಹಿಸುವುದಿಲ್ಲ. ವಿಳಂಬ ಧೋರಣೆಯನ್ನೂ ಒಪ್ಪುವುದಿಲ್ಲ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಚಾಟಿ ಬೀಸಿದ್ದಾರೆ. ಜನಸಾಮಾನ್ಯರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ. ಬಡವರಿಗೆ ನೆರವಾಗಲು, ಅಭಿವೃದ್ಧಿ ಉದ್ದೇಶದಿಂದ ಯಾವುದೇ ನಿರ್ಧಾರ ತೆಗೆದುಕೊಂಡರೂ ಸರ್ಕಾರ ನಿಮ್ಮ ರಕ್ಷಣೆಗೆ ನಿಲ್ಲುತ್ತದೆ. ಬಜೆಟ್ ಕಾರ್ಯಕ್ರಮ ಅನುಷ್ಠಾನಕ್ಕೆ ಒತ್ತು ನೀಡಿ ಆಡಳಿತದಲ್ಲಿ ಸಂಪೂರ್ಣ ಬದಲಾವಣೆ ತರುವ ಸಂಕಲ್ಪ ಮಾಡಿ ಎಂದೂ ಅವರು ಸೂಚನೆ ನೀಡಿದ್ದಾರೆ.
ಖಾಸಗಿ ಶಾಲೆಗಳ ದುಬಾರಿ ಶುಲ್ಕದಿಂದಾಗಿ ಬಡ ಮಕ್ಕಳಿಗೆ ಶಿಕ್ಷಣವೇ ಸವಾಲು: ಸಿಎಂ ಬೊಮ್ಮಾಯಿ
ಕೆಲ ದಿನಗಳಿಂದೀಚೆಗೆ ಆಡಳಿತಕ್ಕೆ ಚುರುಕು ನೀಡುವ ಕಾರ್ಯದಲ್ಲಿ ನಿರತರಾಗಿರುವ ಮುಖ್ಯಮಂತ್ರಿಗಳು ಸರ್ಕಾರಿ ರಜಾ ದಿನವಾದ ಭಾನುವಾರ ಕೂಡ ವಿಧಾನಸೌಧದಲ್ಲಿ ಜಿಲ್ಲಾಧಿಕಾರಿಗಳ ಸಭೆ ನಡೆಸಿ ಬಜೆಟ್ ಅನುಷ್ಠಾನ ಕುರಿತು ಪರಿಶೀಲನೆ ನಡೆಸಿದರು. ನನ್ನದೇ ಕಲ್ಪನೆಯ ನವ ಕರ್ನಾಟಕದ ಸಾಕಾರಕ್ಕೆ ಡೀಸಿಗಳ ಸಹಕಾರ ಅತ್ಯಗತ್ಯ. ಎಲ್ಲರೂ ಒಂದು ತಂಡವಾಗಿ ಕೆಲಸ ಮಾಡಿ. ಸಾರ್ವಜನಿಕರ ಸಮಸ್ಯೆ, ಅಹವಾಲುಗಳಿಗೆ ತ್ವರಿತವಾಗಿ ಸ್ಪಂದಿಸಬೇಕು. ರೈತರು, ದೀನ ದಲಿತರ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಸಿಗಬೇಕು. ಇದರಲ್ಲಿ ರಾಜಿ ಆಗುವುದಿಲ್ಲ. ಜಿಲ್ಲಾಧಿಕಾರಿ ಕಚೇರಿಯಲ್ಲೇ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಪರಿಹರಿಸಲು ಪ್ರತ್ಯೇಕ ಘಟಕ ಆರಂಭಿಸಿ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ