Karnataka Politics: ಹಿಜಾಬ್‌ ಬಗ್ಗೆ ನನ್ನ ಹೇಳಿಕೆ ತಿರುಚಲಾಗ್ತಿದೆ: HDK

By Girish Goudar  |  First Published Mar 19, 2022, 7:01 AM IST

*   ಹಿಜಾಬ್‌ ಬಗ್ಗೆ ಕೆಲವರಿಂದ ರಾಜಕಾರಣ ಯತ್ನ
*  ಮಾಜಿ ಸಿಎಂ ಕುಮಾರಸ್ವಾಮಿ ಬೇಸರ
*  ಕಾಶ್ಮೀರ್‌ ಫೈಲ್ಸ್‌ ಬಗ್ಗೆ ಮಾತನಾಡಲ್ಲ 
 


ಹಾಸನ(ಮಾ.19): ಹಿಜಾಬ್‌(Hijab) ವಿಷಯ ಇಟ್ಟುಕೊಂಡು ಕೆಲವರು ರಾಜಕಾರಣ(Politics) ಮಾಡಲು ಪ್ರಯತ್ನ ಪಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಾನು ಏನೇ ಹೇಳಿದರೂ ನನ್ನ ಹೇಳಿಕೆಯನ್ನು ತಿರುಚಲಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ(HD Kumaraswamy) ಆರೋಪಿಸಿದ್ದಾರೆ.

ಹೊಳೆನರಸೀಪುರ ತಾಲೂಕಿನ ಟಿ.ಮಾಯಿಗೌಡನ ಹಳ್ಳಿಯಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ದೇವಾಲಯ ಉದ್ಘಾಟನಾ ಕಾರ್ಯಕ್ರಮದ ನಂತರ ಮಾತನಾಡಿದ ಅವರು, ನನ್ನ ಹೇಳಿಕೆಯನ್ನು ಈಗಾಗಲೇ ವಾಟ್ಸಾಪ್‌ನಲ್ಲಿ ತಿರುಚಿದ್ದಾರೆ. ನಾನು ಎಲ್ಲೂ ವೈಯಕ್ತಿಕವಾಗಿ ಹಿಜಾಬ್‌ ಬಗ್ಗೆ ಚರ್ಚೆ ಮಾಡಿಲ್ಲ. ಹೈಕೋರ್ಟ್‌(High Court) ತೀರ್ಪನ್ನು ನಾವೆಲ್ಲರೂ ತಲೆಬಾಗಿ ಸ್ವೀಕರಿಸಬೇಕು ಎಂದಿದ್ದೇನೆ ಅಷ್ಟೇ ಎಂದರು.

Latest Videos

undefined

Hijab Row: ಹೆಣ್ಣುಮಕ್ಕಳು ಹಿಜಾಬ್‌ ಹಾಕಿದ್ರೆ ತಪ್ಪೇನು?: HDK ಪ್ರಶ್ನೆ

ಕಾಶ್ಮೀರ್‌ ಫೈಲ್ಸ್‌ ಬಗ್ಗೆ ಮಾತನಾಡಲ್ಲ:

‘ದಿ ಕಾಶ್ಮೀರ್‌ ಫೈಲ್ಸ್‌’ (The Kashmir Files) ಚಿತ್ರದಲ್ಲಿ ನೋವನ್ನು ಹೇಳಿಕೊಂಡಿದ್ದಾರೆ. ಘಟನೆ ನಡೆದಿದೆ, ಆದರೆ, ಎಷ್ಟರಮಟ್ಟಿಗೆ ನಡೆದಿದೆ ಎಂದು ನಾನೇನು ನೋಡಿಲ್ಲ. ಹಲವಾರು ರೀತಿ ಚಿತ್ರ ಮಾಡುತ್ತೇವೆ. ಭಾವನಾತ್ಮಕವಾಗಿ, ಕಾಲ್ಪನಿಕವಾದಂತಹ ಚಿತ್ರ ಮಾಡಿ ಜನರ ಹೃದಯದ ಹತ್ತಿರಕ್ಕೆ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡುತ್ತೇವೆ. ಅದೇ ರೀತಿ ಈ ಸಿನಿಮಾವನ್ನು ತೆಗೆದಿದ್ದಾರೆ. ಅದರ ಬಗ್ಗೆ ಚರ್ಚೆ ಮಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ದೇಶದಲ್ಲಿ(India) ಹಲವು ಬಗೆಯ ಅನಾಹುತಗಳಾಗಿವೆ. ದೇಶ ವಿಭಜನೆಯಾಗಬೇಕಾದರೆ ಬ್ರಿಟಿಷರು(British) ನಮಗೆ ಒಳ್ಳೆಯ ವಾತಾವರಣ ಕೊಡಲಿಲ್ಲ. ಈ ಮಣ್ಣಲ್ಲಿ ಇಪ್ಪತ್ತು ಲಕ್ಷ ಕುಟುಂಬದ ಅಮಾಯಕರ ಬಲಿದಾನವಾಗಿದೆ. ಗೋದ್ರಾದಲ್ಲಿ ಗರ್ಭಿಣಿ ಹೆಣ್ಣುಮಕ್ಕಳ ಹೊಟ್ಟೆಗೆ ತ್ರಿಶೂಲ ಚುಚ್ಚಿದ ಘಟನೆಗಳು ನಡೆದು ಹೋಗಿದೆ. ಹಳೆಯದನ್ನೆ ನೆನಪಿಸಿಕೊಂಡು ಈಗಲೂ ಅದನ್ನೇ ಮುಂದುವರಿಸಿಕೊಂಡು ಹೋಗಬೇಕಾ ಎಂದು ಪ್ರಶ್ನಿಸಿದರು.

ಸದನದಲ್ಲಿ HDK ಹಿಜಾಬ್‌ ಪ್ರಸ್ತಾಪಕ್ಕೆ ಜಮೀರ್‌ ಗರಂ

ಬೆಂಗಳೂರು: ಹಿಜಾಬ್ ವಿವಾದ ಸದನದಲ್ಲಿ ಮತ್ತೆ ಪ್ರತಿಧ್ವನಿಸಿದ್ದು, ಸಮವಸ್ತ್ರ ವಿವಾದದಿಂದ ವಿದ್ಯಾರ್ಥಿಗಳ ಶಿಕ್ಷಣ ಗುಣಮಟ್ಟದ ಮೇಲಾಗಿರುವ ದುಷ್ಪರಿಣಾಮದ ಬಗ್ಗೆ ಚರ್ಚಿಸಲು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರು ಮಾ.15 ರಂದು ನಿಲುವಳಿ ಸೂಚನೆ ಮಂಡಿಸಿದ ಪರಿಣಾಮ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆದಿತ್ತು.

ಕುಮಾರಸ್ವಾಮಿ ಅವರು ನಿಲುವಳಿ ಸೂಚನೆ ಕುರಿತು ಪ್ರಾಥಮಿಕ ವಿಚಾರ ಮಂಡಿಸುವ ವೇಳೆ ಮಧ್ಯಪ್ರವೇಶಿಸಿದ ಕಾಂಗ್ರೆಸ್‌ ಸದಸ್ಯ ಜಮೀರ್‌ ಅಹಮದ್‌ ಖಾನ್‌(Zameer Ahmed Khan), ಇಷ್ಟು ದಿನ ಕುಮಾರಸ್ವಾಮಿ ಏಕೆ ಸುಮ್ಮನಿದ್ದರು ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಕಾಂಗ್ರೆಸ್‌(Congress) ಹಾಗೂ ಜೆಡಿಎಸ್‌(JDS) ನಡುವೆ ಕೆಲ ಕಾಲ ವಾದ-ಪ್ರತಿವಾದ ನಡೆದಿತ್ತು. 

CP Yogeshwar VS HDK: 14 ತಿಂಗಳು ಚನ್ನಪಟ್ಟಣಕ್ಕೆ ಕಾಲಿಟ್ಟಿಲ್ಲ ಎಚ್‌ಡಿಕೆ: ಯೋಗೇಶ್ವರ್

ಎಚ್‌.ಡಿ. ಕುಮಾರಸ್ವಾಮಿ ಮಾತನಾಡಿ, ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ(Uniform) ವಿವಾದದಿಂದ ಸಮಸ್ಯೆ ಉಂಟಾಗಿದೆ. ಕೆಲವೆಡೆ ಅಹಿತಕರ ಘಟನೆಯೂ ನಡೆದು ಸಾಮರಸ್ಯಕ್ಕೆ ಭಂಗ ತಂದಿವೆ. ರಾಷ್ಟ್ರಕವಿ ಕುವೆಂಪು ಅವರು ನಮ್ಮ ರಾಜ್ಯವನ್ನು ಸರ್ವ ಜನಾಂಗದ ಶಾಂತಿಯ ತೋಟ ಎಂದು ಕರೆದಿದ್ದರು. ಆದರೆ ಅವರ ಜಿಲ್ಲೆಯಲ್ಲೇ ಹಿಂಸಾಚಾರ ನಡೆದಿದೆ. ಮಕ್ಕಳ ಮನಸ್ಸಿನ ಮೇಲೆ ಇದರಿಂದ ತೀವ್ರ ದುಷ್ಪರಿಣಾಮ ಬೀರಿದ್ದು, ಈ ಸೂಕ್ಷ್ಮ ವಿಚಾರ ಚರ್ಚೆಗೆ ಅವಕಾಶ ನೀಡಬೇಕು ಎಂದು ಕೋರಿದ್ದರು. 

ಜೆಡಿಎಸ್‌-ಕಾಂಗ್ರೆಸ್‌ ವಾಗ್ವಾದ:

ಈ ವೇಳೆ ಮಧ್ಯಪ್ರವೇಶಿಸಿದ ಜಮೀರ್‌ ಅಹ್ಮದ್‌ ಖಾನ್‌, ‘ಕುಮಾರಸ್ವಾಮಿ ಅವರು ಹಿಜಾಬ್‌, ಗಿಜಾಬ್‌ ಏನೂ ಬೇಡ ಎನ್ನುತ್ತಿದ್ದರು. ಒಂದೂವರೆ ತಿಂಗಳ ನಂತರ ಈಗ ದಿಢೀರನೇ ಪ್ರಸ್ತಾಪ ಮಾಡುತ್ತಿದ್ದಾರೆ. ಇಷ್ಟುದಿನ ಸುಮ್ಮನಿದ್ದವರಿಗೆ ದಿಢೀರ್‌ ಪ್ರೀತಿ ಏಕೆ?’ ಎಂದು ಪ್ರಶ್ನಿಸಿದರು. ಇದಕ್ಕೆ ಆಕ್ಷೇಪಿಸಿದ ಕೆಲ ಜೆಡಿಎಸ್‌ ಸದಸ್ಯರು, ‘ನಿಮಗೆ ಕಾಳಜಿ ಇದ್ದಿದ್ದರೆ ನೀವೂ ನಿಲುವಳಿ ಸೂಚನೆ ಮಂಡಿಸಬೇಕಿತ್ತು. ಈಗ ಕುಮಾರಸ್ವಾಮಿ ಅವರು ಮಂಡಿಸಿದರೆ ನಿಮಗೇನು?’ ಎಂದು ಕಿಡಿ ಕಾರಿದರು. ಇದರಿಂದ ಕೆಲ ಕಾಲ ವಾಗ್ವಾದ ನಡೆಯಿತು.
 


 

click me!