Covid Crisis: ಕರ್ನಾಟಕದಲ್ಲಿ ಕೇವಲ 106 ಕೋವಿಡ್‌ ಕೇಸ್‌ ಪತ್ತೆ

By Girish Goudar  |  First Published Mar 19, 2022, 5:54 AM IST

*  ಶೇ.0.29ರ ಪಾಸಿಟಿವಿಟಿ ದರ ದಾಖಲು 
*  ಬೆಂಗಳೂರಲ್ಲಿ ಸತತ 3ನೇ ದಿನ 100ಕ್ಕಿಂತ ಕಡಿಮೆ ಕೇಸ್‌
*  ದೇಶದಲ್ಲಿ ಕೋವಿಡ್‌ ಮತ್ತಷ್ಟು ಇಳಿಕೆ: 2528 ಹೊಸ ಕೇಸು, 149 ಸಾವು


ಬೆಂಗಳೂರು(ಮಾ.19): ರಾಜ್ಯದಲ್ಲಿ(Karnataka) ಕೋವಿಡ್‌ ಪ್ರಕರಣಗಳ ಸಂಖ್ಯೆ 106ಕ್ಕೆ ಕುಸಿದಿದೆ. ಐವರು ಮೃತರಾಗಿದ್ದಾರೆ. 154 ಮಂದಿ ಚೇತರಿಸಿಕೊಂಡಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 2013ಕ್ಕೆ ಇಳಿದಿದೆ. 36,326 ಕೋವಿಡ್‌ ಪರೀಕ್ಷೆ ನಡೆದಿದ್ದು, ಶೇ.0.29ರ ಪಾಸಿಟಿವಿಟಿ ದರ ದಾಖಲಾಗಿದೆ. 

ಬೆಂಗಳೂರು ನಗರದಲ್ಲಿ 84 ಹೊಸ ಪ್ರಕರಣ ಪತ್ತೆಯಾಗಿದೆ. ಉಳಿದಂತೆ ದಕ್ಷಿಣ ಕನ್ನಡ 6, ಚಿತ್ರದುರ್ಗ 3, ಮೈಸೂರು, ಧಾರವಾಡ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ತಲಾ 2, ಚಿಕ್ಕಬಳ್ಳಾಪುರ, ಕಲಬುರಗಿ, ರಾಮನಗರ, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ. ಉಳಿದ 18 ಜಿಲ್ಲೆಗಳಲ್ಲಿ ಹೊಸ ಪ್ರಕರಣ ವರದಿಯಾಗಿಲ್ಲ. ಬೆಂಗಳೂರು ನಗರದಲ್ಲಿ ಇಬ್ಬರು, ಧಾರವಾಡ, ಬಳ್ಳಾರಿ ಮತ್ತು ವಿಜಯಪುರದಲ್ಲಿ ತಲಾ ಒಬ್ಬರು ಮೃತರಾಗಿದ್ದಾರೆ(Death). ರಾಜ್ಯದಲ್ಲಿ ಈವರೆಗೆ ಒಟ್ಟು 39.44 ಲಕ್ಷ ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು 39.02 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. 40,033 ಮಂದಿ ಮರಣವನ್ನಪ್ಪಿದ್ದಾರೆ. ರಾಜ್ಯದಲ್ಲಿ ಶುಕ್ರವಾರ 62,739 ಮಂದಿ ಕೋವಿಡ್‌ ಲಸಿಕೆ(Covid Vaccine) ಪಡೆದಿದ್ದಾರೆ.

Tap to resize

Latest Videos

undefined

Coroanavirus: ಯುರೋಪ್‌ನಲ್ಲಿ ಒಮಿಕ್ರೋನ್‌ 2ನೇ ಅಲೆ, ರಾಜ್ಯಗಳಿಗೆ ಕೇಂದ್ರದಿಂದ ಮಹತ್ವದ ಸೂಚನೆ

ನಗರದಲ್ಲಿ ಸತತ 3ನೇ ದಿನ 100ಕ್ಕಿಂತ ಕಡಿಮೆ ಕೇಸ್‌

ಬೆಂಗಳೂರು: ರಾಜಧಾನಿಯಲ್ಲಿ ಸತತವಾಗಿ ಮೂರನೇ ದಿನ ಕೊರೋನಾ(Coronavirus) ಸೋಂಕು ಹೊಸ ಪ್ರಕರಣಗಳು 100ಕ್ಕಿಂತ ಕಡಿಮೆ ವರದಿಯಾಗಿದೆ. ನಗರದಲ್ಲಿ ಶುಕ್ರವಾರ 84 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, 87 ಮಂದಿ ಗುಣಮುಖರಾಗಿದ್ದಾರೆ. ಇಬ್ಬರು ಸೋಂಕಿತರು ಸಾವಿಗೀಡಾಗಿದ್ದಾರೆ. ಸದ್ಯ 1717 ಸಕ್ರಿಯ ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. 11 ಸಾವಿರ ಪರೀಕ್ಷೆ ನಡೆದಿದ್ದು, ಶೇ.0.7 ರಷ್ಟುಪಾಸಿಟಿವಿಟಿ ದರ ದಾಖಲಾಗಿದೆ.

ಶುಕ್ರವಾರ 85 ಮತ್ತು 65 ವರ್ಷದ ಇಬ್ಬರು ವೃದ್ಧರು ಸಾವಿಗೀಡಾಗಿದ್ದಾರೆ. ಸದ್ಯ ಸಕ್ರಿಯ ಸೋಂಕಿತರ ಪೈಕಿ 45 ಮಂದಿ ಆಸ್ಪತ್ರೆಯಲ್ಲಿದ್ದಾರೆ. ಇದರಲ್ಲಿ ಆರು ಮಂದಿ ವೆಂಟಿಲೇಟರ್‌ನಲ್ಲಿ, 12 ಮಂದಿ ಐಸಿಯುನಲ್ಲಿ(ICU), ಐದು ಮಂದಿ ಆಕ್ಸಿಜನ್‌, ಸಾಮಾನ್ಯ ಹಾಸಿಗೆಗಳಲ್ಲಿ 22 ಮಂದಿ ಚಿಕಿತ್ಸೆ(Treatment) ಪಡೆಯುತ್ತಿದ್ದಾರೆ.

Coronavirus: ಚೀನಾದಲ್ಲಿ ಕಂಟ್ರೋಲ್.. ಕೊರಿಯಾದಲ್ಲಿ ಕೊರೋನಾ ಹುಚ್ಚಾಟ

ಈವರೆಗೆ ಸೋಂಕಿಗೆ ಒಳಗಾದವರ ಸಂಖ್ಯೆ 17.8 ಲಕ್ಷಕ್ಕೆ, ಗುಣಮುಖರ ಸಂಖ್ಯೆ 17.62 ಲಕ್ಷಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ 16,950 ಇದೆ. ನಗರದಲ್ಲಿ ಐದಕ್ಕಿಂತ ಕಡಿಮೆ ಕೊರೋನಾ ಪ್ರಕರಣವಿರುವ 1 ಸಕ್ರಿಯ ಕಂಟೈನ್ಮೆಂಟ್‌ ವಲಯ, ಐದಕ್ಕೂ ಹೆಚ್ಚು ಕೊರೋನಾ ಪ್ರಕರಣವಿರುವ 2 ಕ್ಲಸ್ಟರ್‌ ವಲಯವಿದೆ ಎಂದು ಬಿಬಿಎಂಪಿ ಕೊರೋನಾ ವರದಿಯಲ್ಲಿ ತಿಳಿಸಲಾಗಿದೆ.

ಕೋವಿಡ್‌ ಮತ್ತಷ್ಟು ಇಳಿಕೆ: 2528 ಹೊಸ ಕೇಸು, 149 ಸಾವು

ನವದೆಹಲಿ: ದೇಶದಲ್ಲಿ(India) ಕೋವಿಡ್‌(Covid-19) ಪ್ರಕರಣಗಳ ಸಂಖ್ಯೆ ಮತ್ತಷ್ಟು ಇಳಿಕೆಯಾಗಿದ್ದು, ಶುಕ್ರವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ಕೇವಲ 2,528 ಹೊಸ ಕೋವಿಡ್‌ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಸುಮಾರು 22 ತಿಂಗಳುಗಳ ನಂತರ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 30,000ಕ್ಕಿಂತ ಕೆಳಗೆ (29,181ಕ್ಕೆ) ಕುಸಿದಿದೆ. 

ಸಕ್ರಿಯ ಪ್ರಕರಣಗಳ ಸಂಖ್ಯೆ 3​​0 ಸಾವಿರಕ್ಕಿಂತ ಕೆಳಗೆ ಇಳಿದಿದ್ದು ಕಳೆದ 685 ದಿನಗಳಲ್ಲಿ ಇದೇ ಮೊದಲ ಬಾರಿ. ಇದೇ ವೇಳೆ 149 ಸೋಂಕಿತರು ಸಾವಿಗೀಡಾಗಿದ್ದಾರೆ. ದೇಶದಲ್ಲಿ ಕೋವಿಡ್‌ ಚೇತರಿಕೆ ದರವು ಶೇ. 98.73ಕ್ಕೆ ಏರಿಕೆಯಾಗಿದೆ. ದೈನಂದಿನ ಹಾಗೂ ವಾರದ ಪಾಸಿಟಿವಿಟಿ ದರವು(Positivity Rate) ಶೇ. 0.40ಕ್ಕೆ ಇಳಿಕೆಯಾಗಿದೆ. ದೇಶದಲ್ಲಿ ಈವರೆಗೆ 180.97 ಕೋಟಿ ಡೋಸು ಕೋವಿಡ್‌ ಲಸಿಕೆಯನ್ನು ವಿತರಿಸಲಾಗಿದೆ.
 

click me!