ಕರ್ನಾಟಕದಲ್ಲಿ ಕೊರೋನಾ ಮಿತಿ ಮೀರುತ್ತಿದ್ದು ಇದನ್ನು ತಡೆಗಟ್ಟಲು ಸರ್ವಪಕ್ಷಗಳ ನಾಯಕರು ಸಭೆ ನಡೆಸುತ್ತಿದ್ದಾರೆ. ಈ ವೇಳೆ ಎಚ್‌ಡಿ ಕುಮಾರಸ್ವಾಮಿ ಅವರು ಸರ್ಪೈಸ್ ಸಲಹೆ ಕೊಟ್ಟಿದ್ದಾರೆ.
ಬೆಂಗಳೂರು, (ಏ.20): ರಾಜ್ಯದಲ್ಲಿ ಕೊರೋನಾ 2ನೇ ಅಲೆ ನಿಯಂತ್ರಣ ಹಿನ್ನೆಲೆ ರಾಜ್ಯಪಾಲ ವಜೂಭಾಯ್ ವಾಲಾ ನೇತೃತ್ವದಲ್ಲಿ ವರ್ಚುವಲ್ ಸಭೆ ನಡೆಯುತ್ತಿದ್ದು, ಸಭೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ಹಲವು ನಾಯಕರು ಭಾಗಿಯಾಗಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ವರ್ಚುವಲ್ ಸಭೆಯ ನಡೆಯುತ್ತಿದ್ದು, ಸಭೆಯಲ್ಲಿ ಹಲವರು ತಮ್ಮ-ತಮ್ಮ ಅಭಿಪ್ರಾಯಗಳನ್ನು ಹೇಳಿದರು. ಕೆಲ ಕಾಂಗ್ರೆಸ್ ನಾಯಕರು ಲಾಕ್‌ಡೌನ್ ಬೇಡ ಅದರ ಬದಲಿಗೆ ಬೇರೆ ಮಾರ್ಗ ನೋಡಿ ಎಂದು ಸಲಹೆ ಕೊಟ್ಟಿದ್ದಾರೆ. ಆದ್ರೆ, ಎಚ್‌ಡಿ ಕುಮಾರಸ್ವಾಮಿ ಮಾತ್ರ ಅಚ್ಚರಿ ಸಲಹೆ ಕೊಟ್ಟಿದ್ದಾರೆ.
undefined
ಬೆಂಗ್ಳೂರಲ್ಲಿ ಕೈಮೀರಿದ ಕೊರೋನಾ, ರಸ್ತೆಯಲ್ಲೇ ವ್ಯಕ್ತಿಯ ನರಳಾಟ
ಹೌದು....ಕೊರೋನಾ ಸೋಂಕಿನಿಂದ ಅಪೋಲೋ ಆಸ್ಪತ್ರೆಯಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಭಾಗಿಯಾಗಿರುವ ಎಚ್‌ಡಿ ಕುಮಾರಸ್ವಾಮಿ, ಲಾಕ್‌ಡೌನ್ ಮಾಡುವುದು ಸದ್ಯದ ಪರಿಸ್ಥಿತಿಯಲ್ಲಿ ಅಗತ್ಯವಾಗಿದ್ದು, ನೈಟ್ ನೈಟ್ ಕರ್ಫ್ಯೂ ಜಾರಿ ಮಾಡಿರುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಜೀವ ಉಳಿಸೋದು ರಾಜ್ಯ ಸರ್ಕಾರದ ಕರ್ತವ್ಯ. ನಾನು ಯಾರ ಬಗ್ಗೆಯೂ ಸಹ ಆಕ್ಷೇಪ ಮಾಡಲ್ಲ. ಈ ಹಿಂದೆ ಲಾಕ್ ಡೌನ್ ಮಾಡಿದ್ದರಿಂದ ಸ್ವಲ್ಪ ಪ್ರಕರಣ ಕಡಿಮೆ ಆಯ್ತು. ಆರ್ಥಿಕ ಸಂಕಷ್ಟದ ಪರಿಸ್ಥಿತಿ ಕಷ್ಟ ಆಯ್ತು. ಈಗ ಲಾಕ್ ಡೌನ್ ಮಾಡುವ ಅಗತ್ಯ ಇದೆ. ಬೆಂಗಳೂರು, ಮೈಸೂರು, ದಾವಣಗೆರೆ, ಬೀದರ್, ಕಲಬುರಗಿ ಸೇರಿದಂತೆ ದೊಡ್ಡ ನಗರಗಳಲ್ಲಿ ಲಾಕ್ ಡೌನ್ ತಕ್ಷಣ ಮಾಡಿ ಎಂದು ಕುಮಾರಸ್ವಾಮಿ ಅವರು ತಮ್ಮ ವೈಯಕ್ತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಜ್ಯಾದ್ಯಂತ ಏನೆಲ್ಲ ಟಫ್ ರೂಲ್ಸ್ ಜಾರಿಯಾಗುತ್ತೆ?
ಎಲ್ಲರೂ ಲಾಕ್‌ಡೌನ್ ಬೇಡ ಅಂದ್ರೆ ಕುಮಾರಸ್ವಾಮಿ ಅವರು ಮಾತ್ರ ಲಾಕ್‌ಡೌನ್ ಬಗ್ಗೆ ಒಲವು ತೋರಿರುವುದು ಅಚ್ಚರಿಗೆ ಕಾರಣವಾಗಿದೆ.
ಒಟ್ಟಿನಲ್ಲಿ ಕಳೆದ ಎರಡು ಗಂಟೆಗಳಿಂದ ಸಭೆ ನಡೆಯುತ್ತಿದ್ದು, ಕೊನೆಯಲ್ಲಿ ಸರ್ಕಾರ ಏನು ಅಂತಿಮ ನಿರ್ಧಾರ ಕೈಗೊಳ್ಳುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.