ಬೆಂಗಳೂರು ಮೆಟ್ರೋ ರೈಲು ಯೋಜನೆ 2ಎ ಮತ್ತು 2 ಬಿ ಹಂತಕ್ಕೆ ಕೇಂದ್ರ ಸಂಪುಟ ಸಭೆ ಗ್ರೀನ್ ಸಿಗ್ನಲ್ ನೀಡಿದೆ. ಇದಕ್ಕೆ ಸಿಎಂ ಧನ್ಯವಾದ ತಿಳಿಸಿದ್ದಾರೆ.
ನವದೆಹಲಿ, (ಏ.20): ಬೆಂಗಳೂರು ಮೆಟ್ರೋ ರೈಲು ಯೋಜನೆ 2ಎ ಮತ್ತು 2 ಬಿ ಹಂತಕ್ಕೆ ಕೇಂದ್ರ ಸಂಪುಟ ಮಂಗಳವಾರ ಅನುಮೋದನೆ ನೀಡಿದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.
2ಎ ಹಂತದಲ್ಲಿ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ನಿಂದ ಕೆಆರ್ ಪುರಂವರೆಗೆ ಹಾಗೂ 2ಬಿ ಹಂತದಲ್ಲಿ ಕೆಆರ್ ಪುರಂನಿಂದ ಹೆಬ್ಬಾಳ ಜಂಕ್ಷನ್ ಮಾರ್ಗವಾಗಿ ವಿಮಾನ ನಿಲ್ದಾಣದವರೆಗೂ ಮೆಟ್ರೋ ರೈಲು ಯೋಜನೆಯನ್ನು ವಿಸ್ತರಿಸಲಾಗುತ್ತಿದೆ.
undefined
ಇನ್ಮುಂದೆ ಬೆಂಗಳೂರು ಮೆಟ್ರೋದಲ್ಲಿ ಕನ್ನಡ ಕಡ್ಡಾಯ
ಒಟ್ಟಾರೇ, 58.19 ಕಿಲೋ ಮೀಟರ್ ಉದ್ದದ ಈ ಯೋಜನೆಗೆ ಒಟ್ಟಾರೇ. 14,788,101 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ ಎಂದು ಪಿಯೂಷ್ ಗೋಯಲ್ ಮಾಹಿತಿ ನೀಡಿದ್ದಾರೆ.
The Govt has approved Bangalore Metro Rail Project Phase 2A from Central Silk Board Junction to K.R. Puram and Phase 2B from K.R. Puram to Airport via Hebbal Junction of total length 58 km. The total completion cost of the project is ₹14,788 Crore:
— Piyush Goyal Office (@PiyushGoyalOffc)ಇನ್ನು ಇದಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ತುಂಬ ಟ್ರಾಫಿಕ್ ಏರಿಯಾವಾಗಿದೆ. ಇದರಿಂದ ಇಲ್ಲಿ ಮೆಟ್ರೋ ಅತ್ಯವಶ್ಯಕವಾಗಿತ್ತು. ಇದೀಗ ಕೇಂದ್ರ ಒಪ್ಪಿಗೆ ಸೂಚಿಸಿದ್ದರಿಂದ ಬೆಂಗಳೂರಿಗರು ಸಂತಸಪಡುವಂತಾಗಿದೆ.
'Union Cabinet approves two crucial Metro Rail routes in Phase 2A & 2B - from Silk Board to K.R. Puram & K.R. Puram to Intl Airport, of total length 58 km. This will boost public transport infra in Bengaluru. Thank you Hon'ble PM Ji' : CM .
— CM of Karnataka (@CMofKarnataka)